Repository navigation
Expand file tree
/
Copy pathKannada_Thirukkural.txt
More file actions
1330 lines (1330 loc) · 379 KB
/
Copy pathKannada_Thirukkural.txt
File metadata and controls
1330 lines (1330 loc) · 379 KB
1
2
3
4
5
6
7
8
9
10
11
12
13
14
15
16
17
18
19
20
21
22
23
24
25
26
27
28
29
30
31
32
33
34
35
36
37
38
39
40
41
42
43
44
45
46
47
48
49
50
51
52
53
54
55
56
57
58
59
60
61
62
63
64
65
66
67
68
69
70
71
72
73
74
75
76
77
78
79
80
81
82
83
84
85
86
87
88
89
90
91
92
93
94
95
96
97
98
99
100
101
102
103
104
105
106
107
108
109
110
111
112
113
114
115
116
117
118
119
120
121
122
123
124
125
126
127
128
129
130
131
132
133
134
135
136
137
138
139
140
141
142
143
144
145
146
147
148
149
150
151
152
153
154
155
156
157
158
159
160
161
162
163
164
165
166
167
168
169
170
171
172
173
174
175
176
177
178
179
180
181
182
183
184
185
186
187
188
189
190
191
192
193
194
195
196
197
198
199
200
201
202
203
204
205
206
207
208
209
210
211
212
213
214
215
216
217
218
219
220
221
222
223
224
225
226
227
228
229
230
231
232
233
234
235
236
237
238
239
240
241
242
243
244
245
246
247
248
249
250
251
252
253
254
255
256
257
258
259
260
261
262
263
264
265
266
267
268
269
270
271
272
273
274
275
276
277
278
279
280
281
282
283
284
285
286
287
288
289
290
291
292
293
294
295
296
297
298
299
300
301
302
303
304
305
306
307
308
309
310
311
312
313
314
315
316
317
318
319
320
321
322
323
324
325
326
327
328
329
330
331
332
333
334
335
336
337
338
339
340
341
342
343
344
345
346
347
348
349
350
351
352
353
354
355
356
357
358
359
360
361
362
363
364
365
366
367
368
369
370
371
372
373
374
375
376
377
378
379
380
381
382
383
384
385
386
387
388
389
390
391
392
393
394
395
396
397
398
399
400
401
402
403
404
405
406
407
408
409
410
411
412
413
414
415
416
417
418
419
420
421
422
423
424
425
426
427
428
429
430
431
432
433
434
435
436
437
438
439
440
441
442
443
444
445
446
447
448
449
450
451
452
453
454
455
456
457
458
459
460
461
462
463
464
465
466
467
468
469
470
471
472
473
474
475
476
477
478
479
480
481
482
483
484
485
486
487
488
489
490
491
492
493
494
495
496
497
498
499
500
501
502
503
504
505
506
507
508
509
510
511
512
513
514
515
516
517
518
519
520
521
522
523
524
525
526
527
528
529
530
531
532
533
534
535
536
537
538
539
540
541
542
543
544
545
546
547
548
549
550
551
552
553
554
555
556
557
558
559
560
561
562
563
564
565
566
567
568
569
570
571
572
573
574
575
576
577
578
579
580
581
582
583
584
585
586
587
588
589
590
591
592
593
594
595
596
597
598
599
600
601
602
603
604
605
606
607
608
609
610
611
612
613
614
615
616
617
618
619
620
621
622
623
624
625
626
627
628
629
630
631
632
633
634
635
636
637
638
639
640
641
642
643
644
645
646
647
648
649
650
651
652
653
654
655
656
657
658
659
660
661
662
663
664
665
666
667
668
669
670
671
672
673
674
675
676
677
678
679
680
681
682
683
684
685
686
687
688
689
690
691
692
693
694
695
696
697
698
699
700
701
702
703
704
705
706
707
708
709
710
711
712
713
714
715
716
717
718
719
720
721
722
723
724
725
726
727
728
729
730
731
732
733
734
735
736
737
738
739
740
741
742
743
744
745
746
747
748
749
750
751
752
753
754
755
756
757
758
759
760
761
762
763
764
765
766
767
768
769
770
771
772
773
774
775
776
777
778
779
780
781
782
783
784
785
786
787
788
789
790
791
792
793
794
795
796
797
798
799
800
801
802
803
804
805
806
807
808
809
810
811
812
813
814
815
816
817
818
819
820
821
822
823
824
825
826
827
828
829
830
831
832
833
834
835
836
837
838
839
840
841
842
843
844
845
846
847
848
849
850
851
852
853
854
855
856
857
858
859
860
861
862
863
864
865
866
867
868
869
870
871
872
873
874
875
876
877
878
879
880
881
882
883
884
885
886
887
888
889
890
891
892
893
894
895
896
897
898
899
900
901
902
903
904
905
906
907
908
909
910
911
912
913
914
915
916
917
918
919
920
921
922
923
924
925
926
927
928
929
930
931
932
933
934
935
936
937
938
939
940
941
942
943
944
945
946
947
948
949
950
951
952
953
954
955
956
957
958
959
960
961
962
963
964
965
966
967
968
969
970
971
972
973
974
975
976
977
978
979
980
981
982
983
984
985
986
987
988
989
990
991
992
993
994
995
996
997
998
999
1000
ಅಕ್ಷರಗಳಿಗೆಲ್ಲಾ ಅಕಾರವೇ ಮೊದಲು, ಲೋಕಕ್ಕೆಲ್ಲಾ ಮೊದಲು ಆದಿ ಭಗವನ್
ಪರಮ ಶುದ್ದಜ್ಞಾನ ಸ್ವರೂಪದ ಭಗವಂತನ ಸತ್ ಪಾದಗಳಿಗೆ ನಮಿಸದಿದ್ದರೆ ಕಲಿತಂದರಿಂದಾದ ಫಲವೇನು ?
ಮಲರೊಳುಜ್ಜೀವಿಸುವವನ ಪರಮ ಪಾದಗಳನ್ನು ಸೇರಿದವರು ಭೂಮಿಯ ಮೇಲೆ ನಿಡುಗಾಲ ಬಾಳುವರು
ಬೇಕು ಬೇಡಗಳೊಂದೂ ಇಲ್ಲದವನ (ಭಗವಂತನ) ಅಡಿಗಳನ್ನು ಸೇರಿದವರು ದುಗುಡದಿಂದ ದೂರವಾಗುವರು
ಮನದ ಇರುಳಿಂದುಂಟಾಗುವ ಒಳಿತು, ಕೆಡಕುಗಳೆಂಬ ಎರಡು ವಿಧವಾದ ಕರ್ಮಗಳೂ ಭಗವಂತನ ಮಹಿಮೆಯನ್ನು ಹೊಗಳುವವರಿಗೆ ಸೇರುವುದಿಲ್ಲ
ಐದು ಇಂದ್ರಿಯಗಳ ಬಾಗಿಲನ್ನು ಮುಚ್ಚಿದವನು ಭಗವಂತ. ಅವನ ಕಳಂಕವಿಲ್ಲದ ನೇರವಾದ ಋಜುಮಾರ್ಗದಲ್ಲಿ ನಿಂತವರು ನಿಡುಬಾಳನ್ನು ನಡೆಸುವರು.
ತನಗೆ ಉಪಮೆಯಿಲ್ಲದವನು ಭಗವಂತ. ಅವನ ಪಾದಗಳನ್ನು ನಂಬಿದವರಿಗೆ ಅಲ್ಲದೆ, ಉಳಿದವರಿಗೆ ಮನಸ್ಸಿನ ಕಳವಳ ಕಳೆದು ಕೊಳ್ಳುವುದು ಅಸಾಧ್ಯ.
ಸಜ್ಜಾರಿತ್ರ್ಯದ ಕಡಲಾದ ಭಗವಂತನ ಅಡಿಗಳನ್ನು ಸೇರಿದವರಿಗಲ್ಲದೆ (ಮಿಕ್ಕವರಿಗೆ) ಸಂಸಾರ ಸಾಗರಗಳನ್ನು ಈಸಿ ದಾಟಲು ಸುಲಭವಲ್ಲ.
ಎಂಟು ಗುಣವುಳ್ಳವನ (ಭಗವಂತನ) ಪಾದಗಳಿಗೆ ಎರಗದ ತಲೆಯು, ಗ್ರಹಣ ಶಕ್ತಿಯನ್ನು ಕಳೆದುಕೊಂಡ ಇಂದ್ರಿಯಗಳಂತೆ ನಿಷ್ಪಲವಾಗುತ್ತದೆ.
ಎರೆಯುನಡಿ (ದೇವರಪಾದ) ಸೇರಿದವರು ಹುಟ್ಟೆಂಬ ಹೆಗ್ಗಡಲನ್ನು ದಾಟುವರು ; ಎರೆಯನಡಿ ಸೇರದವರು ಅದನ್ನು ದಾಟಲಾರರು.
ಮಳಯಿಂದಲೇ ಲೋಕವು ವರ್ಧಿಸುತ್ತದೆ; ಅದುದರಿಂದ ಅದು ಅಮೃತಕ್ಕೆ ಸಮ
ಉಣ್ಣುವವರಿಗೆ ತಕ್ಕ ಉಣಿಸನ್ನು ಬೆಳೆಯೆಲು ನೆರವಾಗುವುದು ಮಳೆ ; ನೀರಡಿಕೆಯಿಂದ ಬಳಲಿದವರಿಗೆ ತಾನೇ ಉಣಿಸಾಗುವುದು ಮಳೆ.
ಮಳೆ ಬಾರದೆ ಹೋದರೆ ಸುತ್ತಲೂ ನೀರಿನಿಂದ ವ್ಯಾಪಿಸಿದ ಈ ಲೋಕವನ್ನು ಹಸಿವು ಕಾಡುತ್ತದೆ.
ಮೋಡದಿಂದ ಸುರಿಯುವ ಮಳೆಯ ನೀರಿನಾಶ್ರಯವು ಬಲಗುಂದಿತಾದರೆ ರೈತರ ವ್ಯವಸಾಯವೂ ನಿಂತಂತೆಯೇ
ಸಕಾಲಕ್ಕೆ ಸುರಿಯದೆ, ಮಳೆ ಮನುಷ್ಯನ ಬಾಳನ್ನು ಕೆಡಿಸುತ್ತದೆ. ಅದೇ ರೀತಿ ಸಕಾಲಕ್ಕೆ ಸುರಿದು, ಕೆಟ್ಟ ಮನುಷ್ಯನನ್ನು ಮೇಲೆತ್ತುವುದೂ ಮಳೆಯೇ.
ಆಕಾಶದಿಂದ ಮಳೆಹನಿ ಬೇಳದೆ, ಹಸಿರು ಹುಲ್ಲು ಕೂಡ ತಲೆಯೆತ್ತದು.
ಮೋಡವು ಮಳೆಯನ್ನು ಸುರಿಸುವ ಕೃಪೆತೋರದೆ ಹೋದಲ್ಲಿ, ಕಡಲಿನ ಅಪಾರ ಜಲಸಂಪತ್ತು ಕೂಡ ಕುಗ್ಗಿಹೋಗುವುದು.
ಈ ಲೋಕದಲ್ಲಿ ಮಳೆ ಸುರಿಯದಿದ್ದರೆ, ಮೇಲು ಲೋಕದಲ್ಲಿರುವ ದೇವತೆಗಳಿಗೂ ಜನರು ಪೂಜೆ, ಉತ್ಸವಗಳನ್ನು ವೈಭವದಿಂದ ನಡೆಸುವುದಿಲ್ಲ.
ಮಳೆಯಾಗದೇ ಹೋದರೆ ಈ ಲೋಕದಲ್ಲಿ ದಾನ, ತಪಸ್ಸು ಎರಡೂ ನೆಲೆಸಿ ಇರುವುದಿಲ್ಲ.
ನೀರಿನಿಂದಲೇ ಲೋಕಾಚಾರ ಎಲ್ಲ; ಮಳೆ ಬಾರದಿದ್ದರೆ, ಒಳ್ಳೆಯ ಆಚಾರ ನಡವಳಿಕೆಗಳೂ ನೆಲೆಯಾಗಿ ನಿಲ್ಲುವುದಿಲ್ಲ.
ಒಳ್ಳೆಯ ನಡತೆಯಲ್ಲಿ ನಡೆದುಕೊಂಡು, ಎಲ್ಲವನ್ನು ತೊರೆದು ಸನ್ಯಾಸಧರ್ಮದಲ್ಲಿ ಬಾಳಿದವರ ಹಿರಿಮೆಯನ್ನು ಮೇಲಾಗಿ ವರ್ಣಿಸಿ ಹೇಳುವುದು ಎಲ್ಲ ಶಾಸ್ತ್ರ ಗ್ರಂಥಗಳ ಗುರಿಯೂ ಆಗಿದೆ
ತೊರೆದವರ ಮಹಿಮೆಯನ್ನು ಅಳೆಯಲು ಹೋಗುವುದು, ಲೋಕದಲ್ಲಿ ಸತ್ತವರ ಸಂಖ್ಯಯನ್ನು ಎಣಿಸುವಂತೆ
ಎರಡು ಬಗೆಯನ್ನು (ಜನನ ಮತ್ತು ಮುಕ್ತಿ) ಅರಿತುಕೊಂಡು ಧರ್ಮಮಾರ್ಗದಲ್ಲಿ ನಡೆಯುವರ ಹಿರಿಮೆಯು ಲೋಕವನ್ನು ಬೆಳಗುತ್ತದೆ.
ದೃಢನಿಶ್ಚಯದಿಂದ ಐದಿಂದ್ರಿಯಗಳನ್ನು ಕಡಿವಾಣ ಹಾಕಿ ಕಾಪಾಡುವವನು, ವರನಿಧಿಯಾದ ಮೋಕ್ಷಕ್ಕ್ ಬೀಜದಂತೆ
ಐದು ಇಂದ್ರಿಯಗಳನ್ನು ನಿಗ್ರಹಿಸಿದವನ ತಪೋಬಲಕ್ಕೆ ವಿಶಾಲವಾದ ಆಕಾಶದಲ್ಲಿ ನೆಲೆಸಿರುವ ದೇವತೆಗಳ ದೊರೆಯಾದ ಇಂದ್ರನೇ ಸಾಕ್ಷಿ.
ಮಾಡಲು ಅಸಾಧ್ಯವೆನಿಸಿದುದನ್ನು ದೊಡ್ಡವರು ಮಾಡಿತೋರುತ್ತಾರೆ ; ಅಲ್ಪರಿಗೆ ಅದು ಅಸಾಧ್ಯ.
ರೂಪ, ರಸ, ಸ್ಪರ್ಶ, ಶಬ್ದ, ಗಂಧಗಳೆಂಬ ಐದು ಇಂದ್ರಿಯಗಳ ಬಗೆಗಳನ್ನು ಬಲ್ಲವನ ಬಳಿಯಲ್ಲಿಯೇ ಲೋಕವೆಲ್ಲ ನೆಲಸಿರುತ್ತದೆ.
ಅರ್ಥವತ್ತಾದ ಮಾತುಗಳನ್ನು ಆಡುವ ಜ್ಞಾನಿಗಳ ಹಿರಿಮೆಯನ್ನು ಈ ಲೋಕದಲ್ಲಿ ಅವರ ವೇದರೂಪದ ಬೋಧೆಯ ಮಾತುಗಳಲ್ಲೇ ಕಾಣಬಹುದು.
ಗುಣವೆಂಬ ಶಿಖರವನ್ನೇರಿ ನಿಂತವರ ಕೋಪವು, ಕ್ಷಣಮಾತ್ರವಾದರೂ ತಾಳಿ ಕೊಳ್ಳಲು ಅಸಾಧ್ಯ.
ಧರ್ಮ ಮಾರ್ಗದಲ್ಲಿ ನಡೆಯುವವರೇ ಅಂದಣರು (ಬ್ರಾಹ್ಮಣರು) ; ಏಕೆಂದರೆ ಅವರು ಮತ್ತೆಲ್ಲ ಪ್ರಾಣಿಗಳನ್ನು ನಿಜವಾದ ಕರುಣೆಯಿಂದ ಕಾಣಲು ಪ್ರತಿಜ್ಞೆ ಮಾಡುತ್ತಾ
ಶ್ರೇಯಸ್ಸು ಮತ್ತು ಐಶ್ವರ್ಯವನ್ನು ತರುವ ಧರ್ಮಕ್ಕಿಂತ ಮಿಗಿಲಾದ ಭಾಗ್ಯ ಏನುಂಟು ಈ ಬಾಳಿನಲ್ಲಿ?
ಧರ್ಮಕ್ಕಿಂತ ಮಿಗಿಲಾದ ಸಂಪತ್ತು ಇಲ್ಲ ; ಅದನ್ನು ಮರೆಯುವುದರಿಂದ ಮಿಗಿಲಾದ ಕೇಡೂ ಇಲ್ಲ.
ಉಚಿತವಾದ ಮಾರ್ಗಗಳಿಂದ, ಸಲ್ಲತಕ್ಕ ಎಡಗಳಲ್ಲೆಲ್ಲ ಧರ್ಮಕಾರ್ಯವನ್ನು ಬಿಡದೆ ಆಚರಿಸಿಕೊಂಡು ಬರಬೇಕು.
ಮನದಲ್ಲಿ ನಿರ್ಮಲನಾದರೆ ಅದೇ ಧರ್ಮ ; ಮತ್ತೆಲ್ಲವೂ ಬರಿಯ ಆಡಂಬರ.
ಅಸೂಯೆ, ಅಳಿಯಾಸೆ, ಕೋಪ, ಮನಸ್ಸು ನೋಯುವ ಮಾತು ಈ ನಾಲ್ಕನ್ನು ತೊರೆದು ಬಿಡುವುದೇ ಧರ್ಮ.
ಧರ್ಮವನ್ನು ಮುಂದೆ ಎಂದಾದರೂ ಆಚರಿಸಿದರಾಯಿತು ಎಂದು ಉಪೇಕ್ಷಿಸದೆ, ಇಂದೇ ಕೈಗೊಳ್ಳಬೇಕು ; ಅದೇ ಮರಣ ಕಾಲಕ್ಕೆ ನೆಲೆಯಾದ ಆಧಾರ.
ಧರ್ಮದ ಫಲ ಇದೆಂದು ವ್ಯರ್ಥವಾಗಿ ವರ್ಣಿಸಬೇಡ. ಪಲ್ಲಕ್ಕಿ ಹೊರುವವನಲ್ಲಿ ಮತ್ತು ಪಲ್ಲಕ್ಕಿಯಲ್ಲಿ ಕುಳಿತಿರುವವನಲ್ಲಿ ನೋಡು.
ದಿನವೊಂದೂ ವ್ಯರ್ಥಮಾಡದಂತೆ ಸದ್ದರ್ಮವನ್ನು ಕೈಗೊಂಡರೆ ಅದು ಒಬ್ಬನ ಮರು ಹುಟ್ಟು ಇಲ್ಲದಂತೆ ಮಾಡುತ್ತದೆ. ಅವನ ಮರುಹುಟ್ಟಿನ ಹಾದಿಯಲ್ಲಿ ಅದು ಅಡ್ಡವಾಗಿಟ್ಟ ಕಲ್ಲಿನಂತೆ ನೆರವಾಗುತ್ತದೆ.
ಧರ್ಮ ಮಾರ್ಗದಿಂದ ಬರುವುದೇ ಸುಖ ; ಉಳಿದೆಲ್ಲವೂ ಅಸುಖಕ್ಕೆ ನೆಲೆ ; ಅವುಗಳಲ್ಲಿ ಕೀರ್ತಿಯೂ ಇಲ್ಲ.
ಮಾಡಬೇಕಾದುದು ಧರ್ಮವೊಂದೇ ; ಬಿಡಬೇಕಾದುದು ನಿಂ
ಮನೆವಾರ್ತೆಯುಳ್ಳವನು ಧರ್ಮಗುಣ ಶೀಲರಾದ ಬ್ರಹ್ಮಚಾರಿ, ವಾನಪ್ರಸ್ಥ, ಸಂನ್ಯಾಸಿ ಎಂಬ ಮೂವರಿಗೆ ಅವರವರ ಧರ್ಮದಲ್ಲಿ ಸಾಗಲು ಬೆಂಬಲವಾಗುತ್ತಾನೆ.
ಆಶ್ರಯವಿಲ್ಲದವರು, ದರಿದ್ರರು, ಸತ್ತವರು ಎಲ್ಲರಿಗೂ ಗೃಹಸ್ಥನೇ ಆಧಾರ.
ಪಿತೃಗಳು, ದೇವತೆಗಳು, ಅತಿಥಿಗಳು, ನೆಂಟರಿಷ್ಟರು ಮತ್ತು ತಾನು- ಈ ಐವರ ಋಣಗಳನ್ನು ಸಲ್ಲಿಸುವುದೇ ಗೃಹಸ್ಥ ಧರ್ಮದ ಮಹೋನ್ನತ ಕರ್ತವ್ಯ.
ಅಪನಿಂದೆಗಂಜಿ, ಇತರರೊಂದಿಗೆ ತನ್ನ ಸ್ವತ್ತನ್ನು ಹಂಚಿಕೊಂಡು ಉಣ್ಣುವವನ ವಂಶವು ನಾಶವಿಲ್ಲದೆ ಚಿರಕಾಲ ಉಳಿಯುತ್ತದೆ.
ಪ್ರೀತಿ, ಸಚ್ಚಾರಿತ್ರ್ಯಗಳನ್ನು ಪಡದರೆ, ಅದೇ ಗೃಹಸ್ಥ ಧರ್ಮದ ಕೀರ್ತಿ ಮತ್ತು ಫಲಗಳು.
ಧರ್ಮಮಾರ್ಗದಲ್ಲಿ (ಸಸ್ಮಾರ್ಗದಲ್ಲಿ) ಕುಟುಂಬ ಜೀವನ ನಡಸಿದರೆ, ಬೇರೆ ಮಾರ್ಗಗಳಿಂದ ಹೋಗಿ ಪಡೆಯುವುದಾದರೂ ಏನು?
(ಎಲ್ಲರೂ ಮೆಚ್ಚುವ ಹಾಗೆ) ಧರ್ಮಗುಣದಿಂದ ಕುಟುಂಬ ಜೀವನವನ್ನು ನಡೆಸುವವನು, (ಬಾಳಿನ ಶ್ರೇಯಸ್ಸಿಗಾಗಿ) ತಪಸ್ಸು ಮೊದಲಾದ ಹಲವು ತೆರದ ಪ್ರಯತ್ನಗಳನ್ನು ನಡಸುವವರೊಳಗೆಲ್ಲಾ ಮಿಗಿಲಾದವನು.
ಇತರರನ್ನು ಸಸ್ಮಾರ್ಗದಲ್ಲಿ ಹಚ್ಚಿ, ತಾನೂ ಧರ್ಮಮಾರ್ಗದಿಂದ ವಿಮುಖನಾಗದೆ ಇರುವವನ ಕುಟುಂಬ ಜೀವನವು, ತಪಸ್ವಿಗಳಿಗಿಂತ ಹೆಚ್ಚು ತಪೋಬಲವುಳ್ಳದ್ದು.
ಧರ್ಮವೆಂದೆನಿಸಿಕೊಳ್ಳುವುದೇ ಗೃಹಧರ್ಮ ; ಅದೂ ಪರರ ಅಷಕೀರ್ತಿ, ನಿಂದೆಗಳಿಗೆ ಗುರಿಯಾಗದಿದ್ದರೆ ಮತ್ತಷ್ಟು ಶೋಭಿಸುತ್ತದೆ.
ಈ ಲೋಕದಲ್ಲಿ ಬಾಳಬೇಕಾದ ರೀತಿಯಲ್ಲಿ ಧರ್ಮದಿಂದ ನಡೆಯುವವನು ಸ್ವರ್ಗವಾಸಿಗಳಾದ ದೇವತೆಗಳ ನಡುವೆ ಶೋಭಿಸಲ್ಪಡುವನು. (ಬಸವೇಶ್ವರ ವಚನ : ಇಲ್ಲಿ ಸಲ್ಲುವರು ಅಲ್ಲಿಯೂ ಸಲ್ಲುವರಯ್ಯಾ
ಮನೆಗೆ ತಕ್ಕ ಮಡದಿಯಾಗಿ, ಪತಿಯ ವರಮಾನದ ಮಿತಿಯರಿತು ಸಂಸಾರವನ್ನು ತೂಗಿಸಿಕೊಂಡು ಹೋಗುವವಳೇ ಬಾಳಿನಾಧಾರವಾಗುವಳು.
ಮನೆವಾರ್ತೆಗೆ ತಕ್ಕ ಸದ್ಗುಣಗಳು ಮನೆಯೊಡತಿಯಲ್ಲಿ ಇಲ್ಲವಾದರೆ ಬೇರೆ ಎಷ್ಟು ಸಿರಿಸಂಪದಗಳಿದ್ದರೂ ನಿರರ್ಥಕವೆನಿಸುತ್ತದೆ.
ಮನೆಯೊಡತಿ ಸದ್ಗುಣವಂತೆಯಾದರೆ ಬಾಳಿನಲ್ಲಿ ಇಲ್ಲವಾದುದಾದರೂ ಏನು? ಅವಳಲ್ಲಿ ಸದ್ಗುಣಗಳಿಲ್ಲವಾದರೆ ಬಾಳಿನಲ್ಲಿ ಇರುವುದಾದರೂ ಏನು?
ಹಣ್ಣಿನಲ್ಲಿ ಪಾತಿವ್ರತ್ಯ (ಚಾರಿತ್ರ್ಯ) ವೆಂಬ ಸ್ಥಿರಗುಣವು ನೆಲೆಯಾಗಿದ್ದಲ್ಲಿ, ಹೆಣ್ಣಿಗಿಂತ ಹಿರಿದಾದ ವಸ್ತು ಮತ್ತಾವುದಿದೆ ?
ಬೇರೆ ದೈವಗಳಿಗೆರಗದೆ ತನ್ನ ಪತಿಗೆರಗಿ ಏಳುವವಳು, ಹುಯ್ಯೆಂದರೆ ಮಳೆ ಹುಯ್ಯುವುದು.
ತನ್ನ ಶೀಲ ಚಾರಿತ್ರ್ಯಗಳನ್ನು ಕಾದುಕೊಂಡು, ಕೈ ಹಿಡಿದ ಗಂಡನನ್ನು ಉಪ ಚರಿಸಿ, ತನ್ನ ಕುಟುಂಬದ ಕೀರ್ತಿಯನ್ನು ಕಾದು, ಧರ್ಮಮಾರ್ಗದಲ್ಲಿ ದೃಢವಾಗಿ ನಡೆಯುವವಳೆ ಹೆಣ್ಣು.
(ಹೆಂಗಸರನ್ನು) ಕಾವಲಿಟ್ಟು ಕಾಪಾಡಿದರೇನು ಪ್ರಯೋಜನ ? ತಮ್ಮ ಶೀಲ ರಕ್ಷಣೆಯ ಬಗ್ಗೆ ಅವರಿಗಿರುವ ಮನೋ ನೆಶ್ಚಯವೇ ಎಲ್ಲಕ್ಕಿಂತ ಮುಗಿಲಾದ ಕಾವಲು.
ಪಡೆದ ಪತಿಯನ್ನು ಮೆಚ್ಚಿಕೊಂಡು ಅವನೊಂದಿಗೆ ಬಾಳಿದರೆ, ಹೆಂಗಸರು ಬಹಳ ವೈಭವವುಳ್ಳ ದೇವಲೋಕದ ಸುಖವನ್ನು ಪಡೆಯುತ್ತಾರೆ.
ಕೀರ್ತಿಯನ್ನು ಕಾಯುವ ಹೆಂಡತಿ ಇಲ್ಲದವರು, ತಮ್ಮನ್ನು ನಿಂದಿಸುವವರ ಎದುರಿನಲ್ಲಿ ಗಂಡೆದೆಯಿಂದ ತಲೆಯೆತ್ತಿ, ನಿರ್ಭೀತರಾಗಿ ನಡೆಯಲಾರರು.
ಮನೆಯೊಡತಿಯ (ಹೆಂಡತಿ) ಸದ್ಗುಣವೇ ಮನೆಗೆ ಮಂಗಳಕರ; ಒಳ್ಳೆಯ ಮಕ್ಕಳನ್ನು ಪಡೆಯುವುದು ಅದಕ್ಕೆ ಮತ್ತಷ್ಟು ಶೋಭೆ ನೀಡುವು
ಅರಿವನ್ನು ತಿಳಿದ ಮಕ್ಕಳನ್ನು ಪಡೆಯುವುದಕ್ಕಿಂತ ನಮಗೆ ಬೇರೆ ಭಾಗ್ಯವಿಲ್ಲ. (ಉಳಿದ ಭಾಗ್ಯಗಳನ್ನು ನಾವು ಲಕ್ಷಿಸುವುದಿಲ್ಲ)
ಅಪಕೀರ್ತಿ ಇಲ್ಲದ, ಗುಣಶಾಲಿಗಳಾದ ಮಕ್ಕಳನ್ನು ಪಡೆದರೆ, ಏಳು ಜನ್ಮಗಳಲ್ಲಿಯೂ ಕೇಡಿನಿಂದ ಉಂಟಾಗುವ ದುಃಖವು ನಮ್ಮ ಬಳಿ ಸಾರುವುದಿಲ್ಲ.
ತಮ್ಮ ಮಕ್ಕಳೇ ತಮ್ಮ ಸಂಪತ್ತು ಎಂದು (ಬಲ್ಲವರು) ಹೇಳುವರು; ಆ ಮಕ್ಕಳ ಸಂಪತ್ತೆಂದರೆ ಅವರವರ ಕರ್ಮಫಲಗಳು.
ಮಕ್ಕಳು ತಮ್ಮ ಕಿರುಕೈಗಳಿಂದ ಚೆಲ್ಲಾಡಿದ ಕೂಳು, ಹೆತ್ತವರಿಗೆ ಅಮೃತಕ್ಕಿಂತ ಮಿಗಿಲಾದ ಸವಿ ಉಂಟುಮಾಡುತ್ತದೆ.
ಮಕ್ಕಳ ಮೈಯನ್ನು ಸವರುವುದು ಒಡಲಿಗೆ ಹಿತ, ಆ ಮಕ್ಕಳ ತೊದಲು ನುಡಿ ಕೇಳುವುದು ಕಿವಿಗೆ ಹಿತ.
ತಮ್ಮ ಮಕ್ಕಳ ತೊದಲು ಮಾತನ್ನು ಕೇಳದವರು ಕೊಳಲು ಇನಿದು, ವೀಣೆ ಇನಿದು ಎಂದು ಹೇಳುತ್ತಾರೆ.
ತಂದೆಯಾದವನು ತನ್ನ ಮಗನಿಗೆ ಮಾಡುವ ಉಪಕಾರವೆಂದರೆ ಬುದ್ದಿ ಜೀವಿಗಳ ಸಭೆಗಳಲ್ಲಿ ಎದೆಗೊಟ್ಟು ಮಾತನಾಡುವ ಹಾಗೆ ಅವನಿಗೆ ವಿದ್ಯೆ ನೀಡುವುದು.
ತಮ್ಮ ಮಕ್ಕಳ ಬೌದ್ದಿಕ ಜಾಣ್ಮೆ ತಮಗೆ ಮಾತ್ರವಲ್ಲದೆ, ಲೋಕದ ಜೀವಿಗಳಿಗೆಲ್ಲಾ ಮಿಗಿಲಾದ ಆನಂದವನ್ನು ಉಂಟುಮಾಡುತ್ತದೆ.
ತನ್ನ ಮಗ ಕೀರ್ತಿಶಾಲಿ ಎಂದು ಹೆರರಿಂದ ಕೇಳಿದಾಗ ತಾಯಿಗೆ ಆಗುವ ಆನಂದ, ತಾನು (ಮಗನಿಗೆ) ಜನ್ಮವಿತ್ತಾಗ ಪಡೆದ ಆನಂದಕ್ಕಿಂತ ಮಿಗಿಲಾದುದು.
ಮಗನು ತನ್ನ ತಂದೆಗೆ ಮಾದುವ ಉಪಕಾರವೆಂದರೆ, ತಂದೆ ಇವನನ್ನು ಪಡೆಯಲು ಎಷ್ಟು ತಪಸ್ಸು ಮಾಡಿದನೋ ಎಂಬ ಜನರ ಉದ್ಗ
ಪ್ರೀತಿಯನ್ನು ಅಡಗಿಸಿಡುವ ಕೀಲಿ ಉಂಟೇ? ಪ್ರೀತಿಯುಳ್ಳವರ ಕಿರು ಕಣ್ಣೀರು (ಅವರೆದೆಯಲ್ಲಿರುವ ಪ್ರೀತಿಯ) ಸಾಕ್ಷಿಯಾಗಿ ಹಲವರರಿಯುವಂತೆ ಮಾಡವುದು.
ಪ್ತೀತಿ ಇಲ್ಲದವರು ಎಲ್ಲಾ ತಮ್ಮದು ಎಂದು ತಿಳಿಯುವರು; ಪ್ರೀತಿಯುಳ್ಳವರು ತಮ್ಮ ಶರೀರವೂ (ಎಲುಬು) ಪರರಿಗಾಗಿದೆ ಎಂದು ತಿಳಿಯುವರು.
ಪ್ರೀತಿಯಿಂದ ಸೇರಿ ಬಾಳಿದ ಫಲವೇ ಶರೀರದೊಂದಿಗೆ ಜೀವಿಗೆ ಇರುವ ಸಂಬಂಧ ಎಂದು ಹೇಳುತ್ತಾರೆ.
ಪ್ರೀತಿ, (ಇತರರೊಂದಿಗೆ ಬಾಳ ಬಯಸುವ) ಸಹೃದಯತೆಯನ್ನುಂಟುಮಾಡುವುದು. ಸಹೃದಯತೆಯು ಸ್ನೇಹವೆಂಬ ಅಳವರಿಯದ ಹಿರಿಮೆಯನ್ನು ತರುವುದು.
ಈ ಲೋಕದಲ್ಲಿ ಸುಖವನ್ನು ಹೊಂದಿ ಬಾಳುವವರು, ಮುಂದೆ ಮೇಲು ಲೋಕದಲ್ಲಿ ಪಡೆಯುವ ಹಿರಿಮೆಯು ಅವರ ಪ್ರೀತಿ ಮೂಲವಾದ ಬಾಳಿನ ಫಲವೆಂದು ಹೇಳುವರು.
ಅರಿಯದವರು ಪ್ರೀತಿ ಧರ್ಮಕ್ಕೆ ಮಾತ್ರ ಆಧಾರವೆನ್ನುವರು. ಆದರೆ ಪರಿಶೀಲಿಸಿ ನೋಡಿದರೆ ವೀರಕ್ಕೂ ಅದೇ ಆಧಾರವೆಂದು ತಿಳಿಯುವುದು.
ಎಲುಬಿಲ್ಲದ ಹುಲು ಜೀವಿಗಳನ್ನು (ಹುಳುಗಳನ್ನು) ಬಿಸಿಲು ಸುಡುವಂತೆ ಪ್ರೀತಿ ಇಲ್ಲದವರನ್ನು ಧರ್ಮವು ಸುಡುತ್ತದೆ.
ಮನದೊಳಗೆ ಪ್ರೀತಿ ಇಲ್ಲದೆ ಬಾಳುವವರ ಜೀವನ, ಕಡು ಮರಳುಕಾಡಿನೊಳಗೆ ಒಣಗಿದ ಮರ ಚಿಗುರಿದಂತೆ.
ಶರೀರದ ಒಳ ಅಂಗವಾದ ಮನಸ್ಸಿನಲ್ಲಿ ಪ್ರೀತಿ ಇಲ್ಲದಿದ್ದರೆ, ಶರೀರದ ಹೊರ ಅಂಗಗಳೆಲ್ಲ ಇದ್ದೂ ಏನು ಮಾಡಬಲ್ಲುವು? (ಅವುಗಳಿದ್ದೂ ವ್ಯರ್ಥ)
ಪ್ರೀತಿ ಮಾರ್ಗದಲ್ಲಿ ನಡೆಯುವ ಶರೀರವೆ ಜೀವಂತ ಶರೀರ (ಉಸಿರು ದಾಣ) ವಾಗಿರುವುದು. ಅದಿಲ್ಲದವರ ಶರೀರವು ಎಲುಬಿಗೆ ತೊಗಲು ಹೊದಿಸಿದಂತೆ.
ಮನೆಯಲ್ಲಿ ಇದ್ದು (ಸೊತ್ತುಗಳನ್ನೆಲ್ಲ) ಕಾಪಾಡಿ ಮನೆವಾರ್ತೆ ನಡೆಸುವುದೆಲ್ಲಾ ಅತಿಥಿಗಳನ್ನು ಉಪಚರಿಸ ಉಪಕಾರ ಮಾಡುವುದಕ್ಕಾಗಿಯೇ.
ಅತಿಥಿಯಾಗಿ ಬಂದವರು ಹೊರಗಿರುವಾರ ಅದು ಅಮೃತವಾದರೂ ತಾನೊಬ್ಬನೇ ಉಣ್ಣಲು ಬಯಸ ಬಾರದು.
(ತನ್ನ ಕಾಣಬರುವ) ಅತಿಥಿಯನ್ನು ಯಾವಾಗಲೂ ಉಪಚರಿಸುವವನ ಬಾಳ್ವೆ ಕಷ್ಟಗಳಿಂದ ಪಾಡುಪಟ್ಟು ಹಾಳಾಗುವುದಿಲ್ಲ.
ಯೋಗ್ಯ ಅತಿಥಿಗಳನ್ನು ಮುಖವರಳಿಸಿಕೊಂಡು ಉಪಚರಿಸುವಾತನನ್ನು ಸಿರಿಮನವೊಲಿದು ಸೇರುವಳು.
ಅತಿಥಿಗಳನ್ನುಪಚರಿಸಿ, ಉಣಬಡಿಸಿ ಮಿಕ್ಕುದನ್ನು ತಾನುಣ್ಣುವವಸ ಹೊಲಗಳಲ್ಲಿ ಬೀಜವನ್ನು ಬಿತ್ತಲೇಕೆ? (ಬಿತ್ತದೆಯೇ ತಾನಾಗಿ ಬೆಳೆಯುವುದು)
ಬಂದ ಅತಿಥಿಗಳನ್ನು ಉಪಚರಿಸಿ, ಮತ್ತೆ ಬರುವ ಅತಿಥಿಗಳನ್ನು ಎದುರು ನೋಡುತ್ತಿರುವವನು, ಸ್ವರ್ಗಲೋಕದಲ್ಲಿರುವ ದೇವತೆಗಳಿಗೆ ಒಳ್ಳೆಯ ಅತಿಥಿಯಾಗುತ್ತಾನೆ.
ಅತಿಥಿಗಳನ್ನು ಆದರಿಸುವ ಯಜ್ಞದ ಫಲ ಇಷ್ಟು ಎಂದು ಅಳೆಯಲಳವಲ್ಲ. ಅತಿಥಿಗಳ ಯೋಗ್ಯತೆಯನ್ನನುಸರಿಸಿ ಅದು ಉಂಟಾಗುತ್ತದೆ.
ಅತಿಥಿಗಳನ್ನು ಆದರಿಸಿ, ಆ ಯಜ್ಞಫಲದಲ್ಲಿ ಪಾಲುಗೊಳ್ಳದವರು ತಾವು ಕಷ್ಟಪಟ್ಟು ಕಾಪಾಡಿಟ್ಟ ಸ್ವತ್ತುಗಳೆಲ್ಲ ತಮಗೆ ಅಧಾರವಾಗದೆ ನಿಷ್ಫಲವಾದುವೆ ಎಂದು (ಮುಂದೆ) ಪರಿತಾಪ ಪಡುವರು.
ಅತಿಥಿಗಳನ್ನು ಆದರಿಸದಿರುವ ಮೂರ್ಖತನವು, ಸಿರಿಯಿದ್ದೂ ದಾರಿದ್ರ್ಯ ಅನುಭವಿಸಿದಂತೆ; ಅದು ಮೂರ್ಖರಲ್ಲಿ ಇರುತ್ತದೆ.
ಅನಿಚ್ಚ ಹೊ ಮೂಸಿದೊಡನೆ ಬಾಡುತ್ತದೆ. (ಅದೇ ರೀತಿ) ಮುಖವರಳಿಸದೆ ಬೇರೆಕಡೆಗೆ ತಿರುಗಿಸಿ ನೋಡಿದರೆ ಅತಿಥಿಯು ಬಾಡಿ ಹೋಗುತ್ತಾನೆ.
ಪ್ರೀತಿಯಿಂದ, ವಂಚನೆಯಿಲ್ಲದೆ, ಪರತತ್ತ್ವವನ್ನು ಆರಿತವರ ನಾಲಗೆಯಿಂದ ಹೊರಡುವ ಮಾತೇ ಸವಿಮಾತು ಎನಿಸಿಕೊಳುತ್ತದೆ.
ಮನಸ್ಸು ನಲಿದು ಕೊಡುವುದಕ್ಕಿಂತ ಮಿಗಿಲಾದುದು, ಮುಖವರಳಿಸಿಕೊಂಡು ಸವಿಮಾತನಾಡುವುದು.
ಮುಗವರಳಿಸಿಕೊಂಡು ಸ್ನೇಹಪರನಾಗಿ ನೋಡಿ, ಹೃದಯಮೆಚ್ಚಿ ಸವಿಮಾತುಗಳಾಡುವುದೆ ಸದ್ಧರ್ಮವೆನಿಸುವುದು.
ಯಾರೊಡನೆಯಾಗಲಿ ಸಂತೋಷವನ್ನು ಹೆಚ್ಚಿಸುವ ಸಿಹಿ ಮಾತಾಡುವವರಿಗೆ ದುಃಖವನ್ನು ಹೆಚ್ಚಿಸುವ ಬಡತನದ ಕ್ಲೇಶಗಳು ಇಲ್ಲವಾಗುವುದು.
ವಿನಯಶೀಲನಾಗಿರುವುದು, ಸವಿಮಾತು ಆಡುವುದು, ಒಬ್ಬನಿಗೆ ಅಲಂಕಾರವೆನಿಸುವುದು. ಬೇರೆ ಯಾವುದೂ ಅಲಂಕಾರವಲ್ಲ.
ಹುಡುಕಿ ಒಳೆಯ ಮಾತುಗಳನ್ನು ಹಿತವಾಗುವಂತೆ ಆಡಬೇಕು; ಅದರಿಂದ ಕೇಡಳಿದು ಧರ್ಮವು ವರ್ಥಿಸುತ್ತದೆ.
ಫಲಕೊಟ್ಟು ಸವಿತುಂಬಿ ಆಡುವ ಮಾತುಗಳು, ಈ ಲೋಕದಲ್ಲಿ ಸುಖನೀಡಿ ಪರಲೋಕದಲ್ಲಿ ಫಲಪ್ರಾಪ್ತಿಯಾಗುವಂತೆ ಮಾಡುತ್ತವೆ.
ಇತರರ ಮನಸ್ಸಿಗೆ ನೋವುಂಟುಮಾಡದಿರುವ ಸವಿ ಮಾತುಗಳು ಪರದಲ್ಲಿ ಮತ್ತು ಇಹದಲ್ಲಿ (ಇಹಪರಗಳೆಡರಲ್ಲಿಯೂ) ಸಂತೋಷವನ್ನುಂಟುಮಾಡುತ್ತವೆ.
ಸವಿಮಾತುಗಳಲ್ಲಿ ಸುಖಸಂತೋಷಗಳು ಉಂಟೆಂದು ತಿಳಿಯುವವನು ಕಟು ಮಾತುಗಳನ್ನು ಏಕೆ ಆಡಬೇಕು?
ವಿಮಾತುಗಳಿರುವಾಗ (ಅವುಗಳನ್ನು ಬಿಟ್ಟು) ಕಠಿಣವಾದ ಮಾತುಗಳನ್ನು ಆಡುವವರು, ತನಿವಣ್ಣುಗಳಿರುವಾಗ ಅವುಗಳನ್ನು ಬಿಟ್ಟು ಕಾಯನ್ನು ಕಿತ್ತುಕೊಂಡು ತಿಂದಂತೆ.
ಬೇರೊಬ್ಬರಿಂದ ನಮಗೆ ಉಪಕಾರವಾಗದಿದ್ದರೂ ನಾವು ಅವರಿಗೆ ಮಾಡಿದ ಉಪಕಾರಕ್ಕೆ, ಭೂಲೋಕವಾಗಲಿ ದೇವಲೋಕವಾಗಲೀ ಪ್ರತಿಯಾಗಿ ಬೆಲೆ ಕಟ್ಟಲು ಸಾಧ್ಯವಿಲ್ಲ.
ಸಕಾಲದಲ್ಲಿ ಮಾಡಿದ ಉಪಕಾರ ಕಿರಿದಾಗಿದ್ದರೂ ಈ ಲೋಕದ ವಿಸ್ತಾರಕ್ಕಿಂತ ಮಿಗಿಲಾಗಿ ಹಿರಿದೆನಿಸಿಕೊಳ್ಳುತ್ತದೆ.
ಫಲವನಳೆಯದೆ ಮಾಡಿದ ಉಪಕಾರದ ಭಾವನೆಯನ್ನು ಅಳೆದರೆ, ಅದು ಕಡಲಿಗಿಂತ ಹಿರಿದಾಗುತ್ತದೆ.
ಒಂದು ಸಣ್ಣ ತೆನೆಯಷ್ಟು ಉಪಕಾರವೆಸಗಿದರೂ ಅದರ ಫಲವನ್ನರಿತವರು ಅದನ್ನು ಹನೆಮರದಷ್ಟು ದೊಡ್ಡದಾಗಿ ಭಾವಿಸುತ್ತಾರೆ.
ಉಪಕಾರಕ್ಕಾಗಿ ಪ್ರತಿ ಉಪಕಾರ ಮಾಡುವುದು ಉಪಕಾರವೆನಿಸುವುದಿಲ್ಲ; ಉಪಕಾರ ಹೊಂದಿದವರ ಅರ್ಹತೆಯೇ ಉಪಕಾರವನ್ನು ಅಳೆಯುವ ಮಾನದಂಡ
ಕುಂದಿಲ್ಲದವರ ಗೆಳೆತನವನ್ನು ಮರೆಯಲಾಗದು, ಕಷ್ಟಕಾಲದಲ್ಲಿ ನೆರವಾದವರನಂಟನ್ನು ತೊರೆಯಲಾಗದು.
ತಮ್ಮ ದುಃಖಗಳನ್ನು ದೂರಮಾಡಲು ನೆರವು ನೀಡಿದವರ ಸ್ನೇಹವನ್ನು ಏಳೇಳು ಜನ್ಮಗಳಲ್ಲೂ ನೆನೆಯುವರು.
ಮಾಡಿದ ಉಪಕಾರವನ್ನು ಮರೆಯುವುದು ಒಳಿತಲ್ಲ(ಧರ್ಮವಲ್ಲ) ; ಉಪಕಾರವಲ್ಲದುದನ್ನು (ಅಪಕಾರ) ಅಂದೇ ಮರೆಯುವದು ಲೇಸು.
ಮುಂಚೆ ಉಪಕಾರ ಮಾಡಿದವರು, ಮುಂದೆ ಕೊಲ್ಲುವಂಥ (ಕಡು) ಕಷ್ಟಗಳನ್ನು ತಂದೊಡ್ಡಿದರೂ ಅವರು ಹಿಂದೆ ಮಾಡಿದ ಒಂದೇ ಒಂದು ಉಪಕಾರವನ್ನು (ಒಳಿತನ್ನು) ನೆನೆದರೆ ಸಾಕು. ಕಷ್ಟಗಳು ಪರಿಹಾರವಾಗುತ್ತದೆ.
ಯಾವ ಅಧರ್ಮ ಕೆಲಸಗಳನ್ನು ಮಾಡಿದವರಿಗೂ ಉದ್ಧಾರದ ಹಾದಿಯುಂಟು. ಒಬ್ಬರು ಮಾಡಿದ ಉಪಕಾರವನ್ನು ನೆನೆಯದೆ ಅಪಕಾರ ಮಾಡುವವನಿಗೆ ಉದ್ಧಾರವೇ ಇಲ್ಲ.
ಸ್ನೇಹಿತರು. ಶತ್ರುಗಳು ಆಗಂತುಕರು ಎಂಬ ಆಯಾ ಪಕ್ಷಗಳ ಬಗ್ಗೆ ನಿಷ್ಪಕ್ಷಪಾತವಾಗಿ ಒಪ್ಪಿ ನಡೆದುಕೊಂಡರೆ ಅದೇ ಸಮದರ್ಶಿತನವೆಂಬ ನಡತೆ(ಧರ್ಮ)ಯೆನಿಸಿಕೊಳ್ಳುತ್ತದೆ.
ಸಮದರ್ಶಿತನವುಳ್ಳವನ ಸಂಪತ್ತು (ಐಶ್ವರ್ಯ), ಅಳಿವಿಲ್ಲದೆ ಅವನ ವಂಶದವರಿಗೆಲ್ಲಾ ಆಧಾರವಾಗಿ ಒಳಿತನ್ನು ಉಂಟುಮಾಡುತ್ತದೆ.
ಸಮದರ್ಶಿತನವನ್ನು ತೊರೆದು ಉಂಟಾಗುವ ಸಂಪತ್ತು, (ಅದು ನಮಗೆ) ಒಳಿತನ್ನೇ ತಂದರೂ ಒಡನೆಯೇ ಕೈಬಿಡಬೇಕು.
ಸಮಭಾವವುಳ್ಳವರೆ, ಅಲ್ಲವೆ ಎಂಬುದನ್ನು ಅವರವರ ಮಕ್ಕಳ (ಸಂತತಿ) ಹಿನ್ನೆಲೆಯಿಂದ ತಿಳಿಯಬಹುದು.
ಬಡತನ, ಸಿರಿತನಗಳೆರಡೂ ಇಲ್ಲದಿರುವುದೇನಲ್ಲ, ಅವು ಅವರವರ ಕರ್ಮಫಲಗಳು; ಈ ಎರಡು ಸ್ಥಿತಿಗಳಲ್ಲೂ ಹೃದಯದಲ್ಲಿ ಸಮಭಾವದಿಂದ ನಡೆದುಕೊಂಡರೆ, ಸಂಪನ್ನರಾದವರಿಗೆ ಅದೇ ಅಲಂಕಾರವೆನಿಸಿಕೊಳ್ಳುವುದು.
ಸಮದರ್ಶಿತನವನ್ನು ಮರೆತು ಅಲ್ಲದುದನ್ನು ಮಾಡಿದರೆ ತಾನು ಕೆಡುತ್ತೇನೆ ಎಂಬುದನ್ನು ತನ್ನ ಮನಸ್ಸು ಅರಿಯಲಿ
ಸಮದರ್ಶಿಯಾಗಿ ಧರ್ಮದಿಂದ ಬಾಳಿದವನು, ಬಡತನದಲ್ಲಿ ಸಿಕ್ಕಿದರೂ ಅದನ್ನು ಕೇಡೆಂದು ಲೋಕ ಭಾವಿಸಿ ಅವನನ್ನು ಅಗೌರವಿಸುವುದಿಲ್ಲ.
ಮೊದಲೇ ತಾನು ಸಮನಾಗಿ ನಿಂತು, ಸರಿತೂಗುವ ತಕ್ಕಡಿ ಕೋಲಿನಂತೆ, ಒಂದು ಪಕ್ಕಕ್ಕೆ ಬಾಗದೆ ಸಮತೋಲವನ್ನು ತೋರಿಸುವುದು ತಿಳಿದವರಿಗೆ ಭೂಷಣ.
ಮನಸ್ಸು ಪಕ್ಷಪಾತವೆಳಸದಿರುವ ಸ್ಥಿತಿಯನ್ನು ಮುಟ್ಟಿದಮೇಲೆ, ನುಡಿಯಲ್ಲಿಯೂ ನೇರವಾಗಿರುವುದು ಸಮದರ್ಶಿತನವೆನಿಸಿಕೊಳ್ಳುವುದು.
ಪರರ ವಸ್ತುಗಳನ್ನು ತಮ್ಮ ವಸ್ತುಗಳಂತೆ ಪ್ರೀತಿಸಿ ಕಾಪಾಡಿದರೆ, ವಣಿಜರಿಗೆ ಅದೇ ನಿಜವಾದ ವ್ಯವಹಾರ ಧರ್ಮವೆನಿಸಿಕೊಳ್ಳುವುದು.
ಸಂಯಮವು ಅಮರರ ನಡುವೆ ಒಯ್ದು ಸೇರಿಸುತ್ತದೆ; ಸಂಯಮರಾಹಿತ್ಯವು ನರಕದ ಕಾರಿರುಳಿನಲ್ಲಿ ತಳ್ಳುತ್ತದೆ.
ಸಂಯಮವನ್ನು ಸಂಪತ್ತಿನಂತೆ ಕಾಪಾಡಬೇಕು. ಅದಕ್ಕಿಂತ ಮಿಗಿಲಾದ ಸಂಪತ್ತು ಬಾಳಿನಲ್ಲಿ ಬೇರಿಲ್ಲ
ಅರಿಯಬೇಕಾದುದನ್ನು ಅರಿತು ನಲ್ವಟ್ಟೆಯಲ್ಲಿ ಸಂಯಮದಿಂದ ನಡೆದರೆ, ಸಂಯಮವು ಪ್ರತಿಯಾಗಿ ಅವನಿಗೆ ಕೀರ್ತಿಯನ್ನು ತರುತ್ತದೆ.
ತನ್ನ ನೆಲೆಯಲ್ಲಿ ಕದಲದೆ, ಸಂಯಮದಿಂದ ಬಾಳಿದರೆ ಅವನ ಬಾಳು ಪರ್ವತದ ಔನ್ನತ್ಯಕ್ಕಿಂತ ಹಿರಿದಾಗುತ್ತದೆ.
ಅಡಗಿ ನಡೆಯುವುದರಿಂದ ಎಲ್ಲರಿಗೂ ಒಳ್ಳೆಯದೇ ; ಅದರಲ್ಲಿಯೂ ಶ್ರೀಮಂತರು ಅದರಿಂದ ಮತ್ತಷ್ಟು ಶ್ರೀಮಂತರಾಗುತ್ತಾರೆ.
ತನ್ನ ಒಂದು ಜನ್ಮದಲ್ಲಿ ಆಮೆಯಂತೆ ಐದು (ಇಂದ್ರಿಯ) ಗಳನ್ನು ಅಡಗಿಸಿ ಕೊಳ್ಳಲುಸಮರ್ಥನಾದರೆ, ಏಳು ಜನ್ಮಗಳಲ್ಲಿಯೂ ಅದು ಅವನಿಗೆ ರಕ್ಷಣೆ ನೀಡುವುದು.
ಯಾವುದನ್ನು ಅಡಗಿಸಲು ಸಾಧ್ಯವಾಗದಿದ್ದರೂ ನಾಲಗೆಯನ್ನು ಅಡಗಿಸಿಡಬೇಕು. ಅದನ್ನು ಅಡಗಿಸಲಾಗದಿದ್ದರೆ ತನ್ನ ಮಾತಿನ ದೋಷದಲ್ಲಿ ಸಿಕ್ಕಿ ದಿಃಖದಲ್ಲಿ ಮುಳುಗಬೇಕಾಗುತ್ತದೆ.
ಒಂದೇ ಒಂದು ಕೆಟ್ಟ ಮಾತಿನಿಂದ ಬೇರೊಬ್ಬರನ್ನು ದುಃಖಕ್ಕೀಡು ಮಾಡಿದರೂ ಅವನು ಗಳಿಸಿದ ಫಲವೆಲ್ಲ ಅವರಿಂದ ನಾಶವಾಗಿ ಬಿಡುವುದು.
ಕಿಚ್ಚಿನಿಂದ ಸುಟ್ಟಹುಣ್ಣು ಮಾಯುವುದು. ಆದರೆ ನಾಲಗೆಯ ನುಡಿ ಕಿಚ್ಚಿನಿಂದಾದ ಹುಣ್ಣು ಮಾಯುವುದಿಲ್ಲ.
ಕೋಪವನ್ನು ಅಡಗಿಸಿ ಕಾದು, ಕಲಿತರಿವಿನಿಂದ ನಿಗ್ರಹಿಸಿ ಬಾಳಿದರೆ ಅವನ ಹಾದಿಯಲ್ಲಿ ಧರ್ಮದೇವತೆಯು ನುಸುಳಿ ನಿರೀಕ್ಷಿಸುವಳು.
ನಡೆತೆಯೇ ಎಲ್ಲರಿಗೂ ಮೇಲ್ಮೆಯನ್ನು ತರುವುದರಿಂದ, ಅದನ್ನು(ನಡತೆಯನ್ನು) ಪ್ರಾಣಕ್ಕಿಂತ ಮೇಲಾಗಿ ಕಾಪಾಡಿಕೊಳ್ಳಬೇಕು.
ಕಷ್ಟಪಟ್ಟಾದರೂ ನಡತೆಯನ್ನು ಕಾದುಕೊಳ್ಳಬೇಕು; ಹಲವು ಶಾಸ್ತ್ರಗಳನ್ನು ಶೋಧಿಸಿ ತಿಳಿದುಕೊಂಡರೂ ಅದೇ ಬಾಳಿನ ಆಧಾರವೆಂದು ಅರಿವಾಗುವುದು.
ಒಳ್ಳೆಯ ನಡತೆಯನ್ನು ಹೊಂದಿರುವುದೇ ಸತ್ಕುಲ ಸಂಪನ್ನತೆ; ಕೆಟ್ಟ ನಡತೆ ಕೀಳು ಹುಟ್ಟಿಗೆ ಕಾರಣವಾಗುವುದು.
ಬ್ರಾಹ್ಮಣನಾದವನು ಕಲಿತ ವೇದಗಳನ್ನು ಮುರೆತರೆ ಮತ್ತೆ ಓದಿ ಕಲಿತುಕೊಳ್ಳಬಹುದು. ಆದರೆ ಕುಲ ಭೂಷಣವಾದ ನಡತೆ ಕಿಟ್ಟಲ್ಲಿ ಅವನ ಹುಟ್ಟು ಕೆಡುತ್ತದೆ.
ಅಸೂಯಾಪರನಿಗೆ ಐಶ್ವರ್ಯವಿಲ್ಲದಿರುವ ಹಾಗೆ ನಡತೆ ಇಲ್ಲದವನಿಗೆ ಉನ್ನತಿಯೂ ಇಲ್ಲ.
ಕೆಟ್ಟನಡತೆಯಿಂದ ಕೇಡುಂಟಾಗುವುದನ್ನರಿತು, ದೃಢಮನಸ್ಕರಾದ ಜ್ಞಾನಿಗಳು ಧರ್ಮಮಾರ್ಗದಿಂದ ಹಿಂದೆಗೆಯುವುದಿಲ್ಲ
ಉತ್ತಮ ನಡವಳಿಕೆಯಿಂದ ಮೇಲ್ಮೆಯನ್ನು ಹೊಂದುವರು; ಕೀಳು ನಡವಳಿಕೆಯಿಂದ ಹೊಂದಬಾರದ ನಿಂದೆಗೆ ಗುರಿಯಾಗುವರು
ಉತ್ತಮವಾದ ನಡವಳಿಕೆ ಸುಖದ ಬಾಳಿಗೆ ಅಂಕುರವಾಗುವುದು; ಕೀಳು ನಡವಳಿಕೆ ಎಂದಿಗೂ ವ್ಯಸನವನ್ನು ತರುತ್ತದೆ
ಉತ್ತಮ ನಡೆವಳಿಕೆಯುಳ್ಳವರು ಮರೆತೂ ಕೆಟ್ಟ ನುಡಿಗಳನ್ನು ಬಾಯಿಂದ ಆಡಲು ಅಸಮರ್ಥರಾಗುತ್ತಾರೆ.
ಲೋಕದೊಂದಿಗೆ ಸಮರಸವಾಗಿ ಬಾಳದವರು, ಹಲವನ್ನು ಕಲಿತೂ ಅಜ್ಞಾನಿಗಳಂತೆ ಇರುತ್ತಾರೆ
ಪರನ ಒಡವೆಯಾಗಿರುವ ಹೆಂಡತಿಯನ್ನು ಅಪೇಕ್ಷಿಸಿವುದು ತಿಳಿಗೇಡಿತನ; ಧರ್ಮ ಅರ್ಥಗಳನ್ನು ಬಲ್ಲವರಲ್ಲಿ ಈ ಗುಣವಿಲ್ಲ
ಧರ್ಮವನ್ನು ಮೀರಿ ನಿಂತವರಲ್ಲಿ, ಪರನ ಹೆಂಡತಿಯನ್ನು ಬಯಸಿ ಬೇರೊಬ್ಬನ ಮನೆ ಬಾಗಿಲಲ್ಲಿ ನಿಂತವನಷ್ಟು ಮೂರ್ಖ ಬೇರೆ ಇಲ್ಲ.
ನಂಬಿದವರ ಮಡದಿಯಲ್ಲಿ ಕೇಳೆಣಿಸಿ ನಡದುಕೊಳ್ಳುವವರು, ನಿಶ್ಚಯವಾಗಿ ಒದುಕ್ಕಿದ್ದೂ ಸತ್ತವರ ಹಾಗೆ.
ಸ್ವಲ್ಪವೂ ವಿವೇಚಿಸದೆ ಪರರ ಹೆಂಡತಿಯನ್ನು ಸೇರುವವರು ಎಷ್ಟು ದೊಡ್ಡವರಾದರೇನು
ಸುಲಭವಾಗಿ ಸಿಕ್ಕಿದಳೆಂದು ಪರಸತಿಯನ್ನು ಕೂಡುವವನು, ಯಾವಾಗಲೂ ಅಳಿಯದೆ ಉಳಿವ ನಿಂದೆಗೆ ಗುರಿಯಾಗುತ್ತಾನೆ.
ಹಗೆ, ಪಾಪ, ಭೀತಿ, ನಿಂದೆ ಎಂಬ ನಾಲ್ಕೂ ಪರಸತಿಯನ್ನು ಕೂಡುವವನನ್ನು ಬಿಟ್ಟು ಹೋಗುವುದಿಲ್ಲ.
ಧರ್ಮಮಾರ್ಗದಲ್ಲಿ ನಡೆವ ಗೃಹಸ್ಥನೆಂದರೆ, ಪರಸ್ತ್ರೀಯ ಅಂಗಲಾವಣ್ಯವನ್ನು ಬಯಸದಿರುವವನೇ
ಪರರ ಹೆಂಡತಿಯನ್ನು ನೋಡದ ಹಿರಿಯ ಕೆಚ್ಚು, ನಂಪನ್ನರಿಗೆ ಧರ್ಮಮಾತ್ರವಲ್ಲದೆ ಪರಿಪೂರ್ಣ ನಡತೆಯೂ ಆಗುತ್ತದೆ
ಭೀಕರ ಕಡಲು ಆದರಿಸಿದ ಈ ಲೋಕದಲ್ಲಿ ಕೀರ್ತಿಶಾಲಿಗಳು ಯಾರೆಂದರೆ, ಪರರ ಹಕ್ಕಿನ ಹೆಂಡತಿಯ ತೋಳ್ತೆಕ್ಕೆಯಲ್ಲಿ ಸೇರದವರು
ಧರ್ಮದ ಎಲ್ಲೆಯನ್ನು ಮೀರಿ ಅಲ್ಲದ್ದನ್ನು ಮಾಡಿದರೂ ಪರಸ್ತ್ರೀಯ ಅಂಗಲಾವಣ್ಯವನ್ನು ಬಯಸದಿರುವುದು ಒಳ್ಳೆಯದು.
ತನ್ನನ್ನು ಅಗೆಯುವವರನ್ನು ತಾಳಿಕೊಂಡಿರುವ ನೆಲದಂತೆಯೇ (ಭೂಮಿಯಂತೆ) ತಮ್ಮನ್ನು ನಿಂದಿಸುವವರನ್ನು ತಾಳಿಕೊಂಡಿರುವುದೇ ಹಿರಿಮೆ.
ಕೆಟ್ಟ ನಡವಳಿಕೆಯನ್ನು ನಾವು ಪ್ರತಿಭಟಿಸಲು ಸಾಧ್ಯವಿದ್ದರೂ ಅದನ್ನು ತಾಳಿಕೊಳ್ಳಬೇಕು; ತಾಳಿಕೊಳ್ಳುವುದಕ್ಕಿಂತ, ಮಿಗಿಲಾದ ಮನಸ್ಸಿನ ನೆಲೆಯೆಂದರೆ, ಆ ಕೆಟ್ಟ ನಡವಳಿಕೆಯನ್ನು ಮನಸ್ಸಿನಿಂದ ಪೂರ್ತಿಯಾಗಿ ತೊಡೆದುಹಾಕುವುದು.
ಅತಿಥಿಗಳನ್ನು ಸತ್ಕಾರಮಾಡದೇ ಕಳಿಸುವುದು ದಾರಿದ್ರ್ಯದೊಳಗೆ ದಾರಿದ್ರ್ಯ ಎನಿಸಿಕೊಳ್ಳುತ್ತದೆ; (ಅತೇ ರೀತಿ) ಅರಿವಿಲ್ಲದ ಮೂರ್ಖರನ್ನು ತಾಳಿಕೊಳ್ಳುವುದು ಬಲ್ಲಾಳ್ತನದಲ್ಲಿ ಬಲ್ಲಾಳ್ತನವೆನಿಸಿಕೊಳ್ಳುವುದು.
ಸಂಪನ್ನತೆಯ ತನ್ನಿಂದ ಅಗಲದಂತಿರಬೇಕಾದರೆ, ತಾಳ್ಮೆಯನ್ನು ಕಾಪಾಡಿಕೊಳ್ಳಬೇಕು. (ಸಂಪನ್ನತೆಯೆಂದರೆ ಗುಣ ಮತ್ತು ಸಿರಿ ಎರಡಕ್ಕೂ ಇಲ್ಲ ಅನ್ವಯಿಸಬಹುದು)
ನೋವೆಣಿಸಿದವರನ್ನು ಲೋಕ ಒಂದು ವ್ಯಕ್ತಿಯಾಗಿ ಗಣಿಸುವುದಿಲ್ಲ; ಅದೇ ತಾಳ್ಮೆಯುಳ್ಳವರನ್ನು ಲೋಕವು ಬಂಗಾರದಂತೆ ಮನಸ್ಸಿನೊಳಗಿಟ್ಟುಕೊಂಡು ಗೌರವಿಸುತ್ತದೆ.
ಕೇಡೆಣಿಸಿದವರಿಗೆ ಒಂದು ದಿನದ ಸುಖ ಮಾತ್ರ ದೊರೆಯುವುದು. ಆದರೆ ಅವರನ್ನು ತಾಳ್ಮೆಯಿಂದ ಕ್ಷಮಿಸುವವರಿಗೆ, (ಲೋಕವು) ಅಳಿಯುವವರೆಗೂ ಕೀರ್ತಿ ಲಭಿಸುವುದು.
ಬೇರೆಯುವರು ತನಗೆ ಕೆಟ್ಟದ್ದನ್ನು ಮಾಡಿದರೂ, ಅವರಿಗದರಿಂದುಂಟಾಗುವ ಕೇಡನ್ನು ನೆನೆದು ಮರುಕಪಟ್ಟು, ಅವರಿಗೆ ಅಧರ್ಮವೆಣಿಸದಿರುವುದೇ ಮೇಲನಿಸುತ್ತದೆ.
ಸೊಕ್ಕಿನಿಂದ ಕೆಟ್ಟದ್ದನ್ನು ಮಾಡಿದವರಿಗೆ, ತಮ್ಮಲ್ಲಿರುವ ತಕ್ಕ ನಡತೆಯಿಂದ ತಾಳಿಕೊಂಡು ಅವರನ್ನು ಗೆಲ್ಲಬೇಕು.
ತೊರೆದವರ (ಋಷಿಗಳ) ಹಾಗೆ ಶುದ್ದಿಯುಳ್ಳವರೆಂದರೆ, ಕೆಟ್ಟವರ ಬಾಯಿಂದ ಆಡುವ ಕೆಡು ನುಡಿಗಳನ್ನು ತಾಳಿಕೊಂಡು ಇರುವವರು.
ಉಪವಾಸ ವ್ರತಗಳನ್ನು ಆಚರಿಸಿ ತಾಳುವವರು ಹಿರಿಯುರು; ಆದರೆ ಕೆಟ್ಟವರಾಡುವ ಕೆಡು ನುಡಿಗಳನ್ನು ತಾಳಿಕೊಳ್ಳುವವರಿಗಿಂತ ಎರಡನೆಯವರು ಅವರು.
ಒಬ್ಬನ್ನು ತನ್ನ ಹೃದಯದಲ್ಲಿ ಅಸೂಯೆ ಇಲ್ಲದೆ ಬಾಳುವ ಸ್ವಭಾವವನ್ನು ತನ್ನ ನಡತೆಯ ಮಾರ್ಗವಾಗಿ ಕೈಕೊಂಡು ಕಾಪಾಡಬೇಕು
ಯಾರ ವಿಷಯದಲ್ಲಾಗಲೀ ಅಸೂಯೆ ಪಡದಿರಬೇಕು; (ತಾನು) ಹೊಂದತಕ್ಕ ಮೇಲಾದ ಪ್ರಯೋಜನಗಳಲ್ಲಿ ಅದಕ್ಕೆ ಸಮಾನವಾದುದು ಬೇರೊಂದಿಲ್ಲ.
ತನಗೆ ಧರ್ಮ, ಸಂಪದಗಳೆರಡೂ ಬೇಡವೆನ್ನುವವನೇ ಬೇರೊಬ್ಬರ ಸಿರಿಯನ್ನು ಕಂಡು ಸಂತೋಷಿಸದೆ ಕರುಬುತ್ತಾನೆ.
ಕೀಳಾದ ಹಾದಿಯಿಂದ ಸಂಕಟಗಳೇರ್ಪಡುವುದನ್ನು ಅರಿತು ತಿಳಿದವರು ಅಸೂಯೆಯಿಂದ ಅಲ್ಲದುದನ್ನು ಮಾಡಲಾರರು.
ಅಸೂಯಾಪರತೆಯುಳ್ಳವರಿಗೆ ಬೇರೆ ಹಗೆ ಇಲ್ಲದಿದ್ದರೂ ಅದೊಂದೇ ಸಾಕು ಕೇಡುಂಟು ಮಾಡಲು.
ಪರರಿಗೆ (ಕೊಡುಗೈಯಿಂದ) ಕೊಡುವುದನ್ನು ಕಂಡು ಕರುಬುವನು, ಅವನ ಪರಿವಾರದೊಡನೆ ಹೊಟ್ಟೆ ಬಟ್ಟೆಗಿಲ್ಲದೆ ಕೆಡುತ್ತಾನೆ.
ಅಸೂಯೆ ಉಳ್ಳವನನ್ನು ಲಕ್ಷ್ಮಿ ಸಹಿಸದೆ ಅವನನ್ನು ತನಕ್ಕ ದರಿದ್ರ ಲಕ್ಷ್ಮಿಗೆ ತೋರಿಸಿ ಬಿಡುವಳು.
ಅಸೂಯೆಯೆಂಬ ಪಾಪಿ (ತನಗೆ ಅವಕಾಶ ಕೊಟ್ಟವನ) ಸಿರಿಯನ್ನು ನಾಶ ಪಡಿಸುವುದಲ್ಲದೆ, ಅವನನ್ನು ಬೆಂಕಿಯಲ್ಲಿ (ನರಕದಲ್ಲಿ) ತಳ್ಳಿ ಬಿಡುವುದು.
ಅಸೂಯೆಯುಳ್ಳವನ ಸಿರಿಯೂ ಒಳ್ಳೆಯವನ ಕೇಡೂ ಇವೆರಡೂ ವಿಚಾರಾರ್ಹವಾದುದು. (ಇವೆರಡೂ ವೈಪರೀತ್ಯಗಳಿಗೆ ಕಾರಣವೇನು ಎಂಬುದು ವಿಚಾರ ಮಾಡ ಬೇಕಾದ ಅಂಶ)
ಅಸೂಯೆಯಿಂದ ಮೇಲ್ಮೆ ಪಡೆದವರೂ, ಅಸೂಯೆ ಇಲ್ಲದೆ ಮೇಲ್ಮೆಯನ್ನು ತೊರೆದವರೂ ಈ ಲೋಕದಲ್ಲಿಲ್ಲ.
ಸಮಭಾವನೆಯಿಲ್ಲದೆ (ಇತರರಿಗೆ ಸೇರಿದ) ಒಳ್ಲೆಯ ವಸ್ತುಗಳನ್ನು ಕಂಡು ಲೋಭಿಸಿದರೆ ಕುಲವು ಕೆಡುವುದಲ್ಲದೆ, ಪಾಪ ಕಾರ್ಯಗಳೂ ಬಂದು ಸೇರುತ್ತದೆ.
ಅಪಕೀರ್ತಿ ತರುವ ಕೆಲಸಕ್ಕೆ ನಾಚುವವರು ಅಧಿಕ ಫಲಗಳ ಆಶೆಗೆ ನಿಂದೆ ತರುವ ಕೆಲಸವನ್ನು ಮಾಡರು
ಶಾಶ್ವತವಾದ ಹಿರಿಯ ಸುಖವನ್ನು ಬಯಸುವವರು, ಕ್ಷಣಿಕವಾದ ಅಲ್ಪ ಸಂತೋಷವನ್ನು ಬಯಸಿ ಅಧರ್ಮ ಕಾರ್ಯಗಳನ್ನು ಮಾಡರು
ಇಂದ್ರಿಯಗಳನ್ನು ಗೆದ್ದ ಕೀಳುತನವಿಲ್ಲದೆ ಪೂರ್ಣ ದೃಷ್ಟಿಯುಳ್ಳವರು, ತಾವು ಏನೂ ಇಲ್ಲದವರೆಂದು ಇತರರ ಸಂಪತ್ತನ್ನು ಬಯಸಿ ಲೋಭತನವನ್ನು ತೋರಿಸರು.
ಲೋಭದಿಂದ ಯಾರಿಗಾದರೂ ಕೆಟ್ಟುದನ್ನು ಮಾಡಿದರೆ ಸೂಕ್ಷ್ಮವಾಗಿಯೂ ವ್ಯಾಪಕವಾಗಿಯೂ ಇರುವ ಅರಿವಿನಿಂದ ಪ್ರಯೋಜನವೇನು?
ದೈವಕೃಪಯನ್ನು ಬಯಸಿ ಧರ್ಮಮಾರ್ಗದಲ್ಲಿ ನಿಂತವನು, ಮತ್ತೊಬ್ಬನ ಸಂಪತ್ತನ್ನು ಲೋಭಿಸಿ ಹೊಲ್ಲ ವಿಚಾರಗಳನ್ನು ಮನದಲ್ಲಿ ಎಣಿಸಿದರೆ ಒಡನೆಯೇ ಕೆಡುತ್ತಾನೆ.
ಲೋಭದಿಂದ ದಕ್ಕುವ ಸಂಪತ್ತನ್ನು ಬಯಸದಿರು. ಬೆಳೆಯುವಾಗ ಆದರ ಫಲ (ಪರಿಣಾಮ) ಒಳ್ಳೆಯದಾಗುವುದಿಲ್ಲ.
ಒಬ್ಬನ ಸಂಪತ್ತು ಅಳಿಯದಿರುವ ಮಾರ್ಗ ಯಾವುದೆಂದರೆ ಪರರ ಕೈಯ ಸಂಪತ್ತನ್ನು ತಾನು ಬಯಸದಿರುವುದು.
ಧರ್ಮಮಾರ್ಗವನ್ನು ತಿಳಿದು, ಲೋಭಕೊಳಗಾಗದೆ ಇರುವ, ವಿಚಾರ ಸಂಪನ್ನರನ್ನು ಸಮಯ ನೋಡಿ ಸಿರಿ (ಲಕ್ಷ್ಮಿ) ಯು ತಾನೆ ಬಂದು ಸೇರುವಳು.
ತನ್ನ ಉನ್ನತಿಯನ್ನು ಎಣಿಸಿದೆ ಹೆರರ ಸಂಪತ್ತನ್ನು ಲೋಭಿಸಿದರೆ ಅದು ಅಳಿವನ್ನು ತರುತ್ತದೆ; ಹಾಗೆ ಲೋಭಿಸದ ಹಿರಿಮೆಯ ಬಾಳು ಜಯವನ್ನು ತರುತ್ತದೆ.
ಒಬ್ಬನು ಸತ್ಯವನ್ನು ನುಡಿಯದೆ ಪಾಪ ಕಾರ್ಯಗಳಲ್ಲಿ ತೊಡಗಿದ್ದರೂ ಅವನು “ಹಿಂದಿನಿಂದ ಆಡಿಕೊಳ್ಳುವುದಿಲ್ಲ” ಎಂದು (ಬೇರೆಯವರಿಂದ) ಹೇಳಿಸಿಕೊಳ್ಳುವುದು ಒಳ್ಳೆಯದು.
ಧರ್ಮವನ್ನು ಹಳಿದು ಪಾಪ ಕೃತ್ಯಗಳನ್ನು ಎಸಗುವುದಕ್ಕಿಂತ ಕೆಟ್ಟದು, ಹಿಂದಿನಿಂದ ಹಳಿದು ಎದುರಿಗೆ ತೋರಿಸುವ ಕಪಟ ನಗೆ.
ಹಿಂದಿನಿಂದ ಅಡಿಕೊಂಡು, ಸುಳ್ಳು ಹೇಳುತ್ತ ಉಸಿರಿಟ್ಟುಕೊಂಡು ಬಾಳುವುದಕ್ಕಿಂತ, ಸಾಯುವುದು ಧರ್ಮವು ಸಾರುವ ಸಿರಿಯನ್ನು ತರುತ್ತದೆ.
ಕಣ್ಣೆದುರಿನಲ್ಲಿ ನಿಂತು ನಿರ್ದಾಕ್ಷಿಣ್ಯವಾಗಿ ಆಡಿದರೂ ತಪ್ಪಲ್ಲ; ಹಿಂದಿನಿಂದ ವಿಚಾರಮಾಡದ ಮಾತುಗಳನ್ನು ಆಡಬಾರದು.
ಮನಸ್ಸಿಲ್ಲದಿದ್ದರೂ ಧರ್ಮವನ್ನು ಹೊಗಳಿ ಆಡುವವನ ಪೊಳ್ಳುತನವು, ಅವನ ಹಿಂದಿನಿಂದ ಆಡಿಕೊಳ್ಳುವ ಕೀಳುಗುಣದಿಂದ ಬಯಲಾಗುತ್ತದೆ.
ಪರನಿಂದೆ ಮಾಡುವವನ ದೋಷಗಳನ್ನೂ ಇತರರು ಸಮಯವರಿತು ಆಡಿ ಅವನನ್ನು ನಿಂದೆಗೆ ಗುರಿಮಾಡುತ್ತಾರೆ.
ಸ್ನೇಹದ ಮಾತುಗಳನ್ನಾಡಿ ಗೆಳೆತನವನ್ನು ಬೆಳಸಿಕೊಳ್ಳಲರಿಯದವರು, ಹಿಂದಿನಿಂದ ಭೇದದ ಮಾತುಗಳನ್ನಾಡಿ ಗೆಳೆಯರನ್ನು ಅಗಲಿಸುವರು
ಸಮೀಪದ ಒಡನಾಡಿಗಳ (ಬಂಧುಗಳ) ದೋಷವನ್ನು ಹಿಂದಿನಿಂದ ಎತ್ತಿ ಆಡಿ, ಅಪಪ್ರಚಾರ ಮಡುವ ಗುಣವುಳ್ಳವರು ತಮಗೆ ಅಪರಿಚಿತರಾದ ವ್ಯಕ್ತಿಗಳ ಬಗ್ಗೆ ಏನು ತಾನೆ ಮಾಡಲಾರರು.
ಒಬ್ಬರನ್ನು ಹಿಂದಿನಿಂದ ಆಡಿಕೊಳ್ಳುವವನ ಭಾರವನ್ನು ಭೂಮಿಯು “ಹೊರುವುದು ತನ್ನ ಧರ್ಮ” ವೆಂದು ತಿಳಿದು ತಾಳಿಕೊಳ್ಳುವುದಲ್ಲವೆ?
ಪರರ ಕುಂದುಗಳನ್ನು ಕಾಣುವಂತೆ ತನ್ನ ಕುಂದುಗಳನ್ನೂ ಕಾಣಬಲ್ಲವನಾದರೆ ನೆಲೆಯಾದ ಬಾಳಿಗೆ ಕೇಡುಂಟೆ?
ಹಲವರು ಜುಗುಪ್ಸೆ ಪಡುವಂತೆ ಫಲವಿಲ್ಲದ ಮಾತುಗಳನ್ನಾಡುವವನನ್ನು ಎಲ್ಲರೂ ಹಗುರವಾಗಿ ಕಾಣುತ್ತಾರೆ.
ಹಲವರ ಮುಂದೆ ಫಲವಿಲ್ಲದ ಮಾತುಗಳನ್ನಾಡುವುದು, ಗೆಳೆಯರಲ್ಲಿ ಅಹಿತವನ್ನು ಎಣಿಸುವುದಕ್ಕಿಂತ ಕೆಟ್ಟದು.
ಒಬ್ಬನು ಫಲವಿಲ್ಲದ ವಿಷಯಗಳನ್ನು ವಿಸ್ತರಿಸಿ ಬಣ್ಣಕಟ್ಟಿ ಹೇಳುವುದರಿಂದ ಅವನು ಅಸಭ್ಯನೆಂಬುದು ಲೋಕಕ್ಕೆ ಪ್ರಕಟವಾಗುವುದು.
ಗುಣವಿಲ್ಲದ ವ್ಯರ್ಥ ಮಾತುಗಳನ್ನು ಹಲವರ ಬಳಿ ಆಡುವುದರಿಂದ, (ಒಬ್ಬನನ್ನು) ಅಸಭ್ಯನನ್ನಾಗಿ ಮಾಡಿ ಅವನನ್ನು ಶ್ರೇಯಸ್ಸಿನಿಂದ ದೊರಮಾಡುತ್ತದೆ.
ಒಳ್ಳೆಯ ಗುಣಶಾಲಿಗಳಾದವರು, ಫಲವಿಲ್ಲದ ಮಾತುಗಳನ್ನು ಆಡಿದರೆ, ಅವರ ಕೀರ್ತಿ, ಘನತೆಗಳು ಅಳಿಯುವುದು.
ವ್ಯರ್ಥಾಲಾಪವನ್ನು ಹಲವು ಬಗೆಯಲ್ಲಿ ಮೆಚ್ಚಿ ಕೊಂಡಾಡುವವನನ್ನು ಮನುಷ್ಯ ಎಂದು ಕರೆಯಲಾಗದು;ಅಂಥವನನ್ನು ಮಾನವ ಕುಲದಲ್ಲಿ ಕಾಣಿಸಿಕೊಂಡ ಚೊಳ್ಳು (ಹುರುಳಿಲ್ಲದವನು) ಎಂದು ಕರೆಯಬೇಕು.
ವಿಚಾರವಂತರು, ಹಿತವಲ್ಲದ ಮಾತುಗಳನ್ನು ಆಡಿದರೂ ಆಡಲಿ; ಫಲವಿಲ್ಲದ ಮಾತುಗಳನ್ನು ಆಡದಿರುವುದು ಮೇಲು.
ಮಹೋನ್ನತ ಫಲಗಳನ್ನು ಅರಸುವ ಆಕಾಂಕ್ಷೆಯುಳ್ಳ ಅರಿವುಳ್ಳವರು, ಶ್ರೇಯಸ್ಸು ತಾರದ ಮಾತುಗಳನ್ನು ಆಡರು.
ಅಜ್ಞಾನ, ಕಲಂಕಗಳಿಂದ ದೊರವಾದ ದೃಷ್ಟಿಯುಳ್ಳವರು ಒಮ್ಮೆ ಮೈಮರೆತೂ ಅರ್ಥವಿಲ್ಲದ ಮಾತುಗಳನ್ನು ಆಡರು.
ಮಾತುಗಳಲ್ಲಿ ಫಲವಿರುವುದನ್ನೇ ಆಡಬೇಕು; ಫಲವಿರದ ಮಾತುಗಳನ್ನು ಆಡಲೇ ಕೂಡದು
ಕೆಟ್ಟ ಕೆಲಸವನ್ನು ಮಾಡುವ ಉದ್ಧಟತನಕ್ಕೆ ದುಷ್ಟರು ಹೆದರುವುದಿಲ್ಲ. ಶಿಷ್ಟರು ಹೆದರುತ್ತಾರೆ.
ಕೆಟ್ಟ ಕೆಲಸಗಳಿಂದ ಕೆಟ್ಟದೇ ಫಲಿಸುವುದು; ಆದರಿಂದ ಕೆಟ್ಟ ಕೆಲಸಗಳನ್ನು ಬೆಂಕಿಯನ್ನು ಕಂಡರೆ ಹಿಮ್ಮೆಟ್ಟುವಂತೆ ಹೆದರಬೇಕು.
ತನ್ನ ಹೆಗಳಿಗೆ ಕೂಡ ಕೆಟ್ಟದನ್ನು ಮಾಡದೆ ಇರುವುದೇ, ಅರಿವುಗಳೆಲ್ಲೆಲ್ಲಾ ಮಿಗಿಲಾದ ಅರಿವು ಎಂದು ಹೇಳುತ್ತಾರೆ.
ಮರೆತೂ ಪರರಿಗೆ ಕೇಡು ಎಣಿಸಬಾರದು; ಹಾಗೆ ಎಣಿಸಿದರೆ ಧರ್ಮವು ಕೇಡೆಣಿಸಿದವನಿಗೇ ಕೇಡನ್ನು ಎಣಿಸುತ್ತದೆ.
ತಾನು ಇಲ್ಲದವನೆಂದು (ದರಿದ್ರನೆಂದು) ಕೆಟ್ಟ ಕಾರ್ಯಗಳನ್ನು ಮಾಡ ಬಾರದು; ಹಾಗೆ ಮಾಡಿದರೆ ಮತ್ತಷ್ಟು ದರಿದ್ರನಾಗುತ್ತಾನೆ.
ದುಃಖಕ್ಕೆ ಕಾರಣವಾದ ಕೆಟ್ಟ ಕಾರ್ಯಗಳು ತನ್ನನ್ನು ಬಾಧಿಸಬಾರದು ಎಂದು ಇಚ್ಛಿಸುವವನು, ಇತರರಿಗೂ ತಾನು ಕೆಟ್ಟದನ್ನು ಮಾಡದಿರಬೇಕು.
ಎಷ್ಟು ಮುಂದಿ ಹಗೆಗಳಿದ್ದರೂ ತಪ್ಪಿ ಬಾಳಬಹುದು; ದುಷ್ಕೃತ್ಯ ಎಂಬ ಹಗೆ ಮಾತ್ರ ಬೆಂಬಿಡದೆ ಬಂದು ಕೊಲ್ಲುವುದು.
ಒಬ್ಬನ ನೆಲಳು ಅವನ ಪಾದದಡಿಯಲ್ಲಿಯೇ ಸೇರಿಕೊಂಡಿರುವಂತೆ ಅವನ ದುಷ್ಕೃತ್ಯಗಳೂ ಅವನನ್ನು ಬೆಂಬಿಡದೆ ಅಳಿವಿಗೆ ಕಾರಣವಾಗುವುದು.
ಒಬ್ಬನು ತನ್ನ ಹಿತ ಬಯಸುವವನಾದರೆ, ಎಷ್ಟೇ ಅಲೊಅವಾದರೂ ಕೇಡಿನ ಪಾಲಿನಲ್ಲಿ ಪಾಲ್ಗೊಳ್ಳದಿರಲಿ.
ತಪ್ಪಾದ ಹಾದಿಯಲ್ಲಿ ನಡೆದು ಕೆಟ್ಟ ಕಾರ್ಯಗಳನ್ನು ಮಾಡುವುದಿಲ್ಲ ಎಂದಾದರೆ, ಅವನಿಗೆ ಕೇಡಿಲ್ಲ ಎಂಬುದನ್ನು ಅರಿತುಕೊಳ್ಳಬೇಕು.
ಉಪಕಾರಕ್ಕೆ ಪ್ರತ್ಯುಪಕಾರದ ಹಂಗಿಲ್ಲ; ಮಳೆಯನ್ನು ಸುರಿಸುವ ಮೋಡಗಳಿಗೆ ಈ ಲೋಕದ ಮಾನವರು ಏನು ಉಪಕಾರ ತಾನೆ ಮಾಡಬಲ್ಲರು?
ತಾನು ಶ್ರಮದಿಂದ, ಸಂಪಾದಿಸಿ ಕೂಡಿಟ್ಟ ಹಣವೆಲ್ಲ ತಕ್ಕವರಿಗೆ ಉಪಕಾರ ಮಾಡುವುದಕ್ಕೇ ಇರುವುದು (ಎಂದು ತಿಳಿಯಬೇಕು)
ದೇವಲೋಕದಲ್ಲಿಯಾಗಲೀ, ಈ ಲೋಕದಲ್ಲಾಗಲೀ, ಉಪಕಾರಕ್ಕಿಂತ ಮಿಗಿಲಾದ ಒಳ್ಳೆಯ ಗುಣವನ್ನು ಪಡೆಯುವುದು ಕಷ್ಟ.
ಉಪಕಾರದ ನಡೆವಳಿಯನ್ನು ಅರಿತವನು ಮಾತ್ರ ತನ್ನ ಬಾಳನ್ನು ಸಾರ್ಥಕ ಪಡಿಸಿಕೊಳ್ಳುತ್ತಾನೆ; ಉಳಿದವರೆಲ್ಲ (ಬದುಕಿದ್ದೂ) ಸತ್ತ ಹಾಗೆಯೇ.
ಉಪಕಾರದಿಂದ ಲೋಕ ಕಲ್ಯಾಣವನ್ನು ಬಯಸುವ ಹಿರಿಯ ಅರಿವುಳ್ಳವನ ಸಿರಿಯು, ಊರಿನ ಕೆರೆಯ ನೀರು ತುಂಬಿಕೊಂಡು ಜನರಿಗೆ ಉಪಕಾರ ಮಾಡಿದುದಕ್ಕೆ ಸಮಾನವಾದುದು.
ಉಪಕಾರ ಮಾಡಲಾದ ಧರ್ಮಗುಣವುಳ್ಳವನ ಬಳಿ ಸಿರಿ ನೆಲೆಸಿದರೆ, ಫಲಿಸುವ ಮರವು ಊರ ನಡುವೆ ಇದ್ದು ಹಣ್ಣು ಬಿಟ್ಟಂತೆ.
ಉಪಕಾರವೇ ಮೊದಲಾದ ಹಿರಿಯ ಗುಣವುಳ್ಳವನ ಬಳಿ ಐಶ್ವರ್ಯವು ಬಂದು ನೆಲಸಿ ನಿಂತರೆ, ರೋಗರುಜಿನಗಳನ್ನು ಪರಿಹರಿಸುವ ಸಂಜೀವಿನಿ ಮರದಂತೆ (ಹತ್ತು ಜನರಿಗೆ ಪ್ರಯೋಜನ ದೊರೆಯುವುದು)
ಕರ್ತವ್ಯದರಿವಿನ ದೃಷ್ಟಿಯುಳ್ಳವರು, ಸಿರಿಯನ್ನು ಕೆಳೆದುಕೊಂಡ ಸಂಕಟ ಕಾಲದಲ್ಲೂ ಉಪಕಾರ ಮಾಡಲು ಹಿಂಜರಿಯುವುದಿಲ್ಲ.
ಉಪಕಾರ ಮಾಡುವ ಧರ್ಮಗುಣವುಳ್ಳವನು ಬಡವನಾಗಿದ್ದಲ್ಲಿ, ಅವನು ಮಾಡ ಬೇಕಾದ ಉಪಕಾರವನ್ನುಮಾಡಲಾರದೆ ದುಃಖಿಸುವ ಸ್ಥಿತಿಗೆ ಬರುವನು.
ಉಪಕಾರದ ನಡವಳಿಕೆಯಿಂದ ಒಬ್ಬನಿಗೆ ಕೇಡು ಒದುಗುವುದು ಎಂದಾದರೆ, ಅವನು ತನ್ನನ್ನು ಮಾರಿಕೊಂಡಾದರೂ ಅದನ್ನು ಸಂಪಾದಿಸತಕ್ಕದು.
ಬಡತನದಲ್ಲಿರುವವರಿಗೆ ಒಂದು ವಸ್ತುವನ್ನು ನೀಡಿದರೆ ಅದೇ ನಿಜವಾದ ಕೊಡುಗೆ; ಉಳಿದವರಿಗೆ ಕೊಡುವುದು ಎಲ್ಲ ಪ್ರತಿ ನಿರೀಕ್ಷಿಯಿಂದ ಕೊಟ್ಟ ಕೊಡುಗೆ ಎನಿಸಿಕೊಳ್ಳುವುದು.
ಬೇರೆಯವರಿಂದ ಬೇಡಿ ಪಡೆದುಕೊಳ್ಳುವುದು ಒಳ್ಳೆಯ ಮಾರ್ಗವೆಂದು ಹಲವರು ಹೇಳಿದರೂ ಅದು ಪಾಪಕರ; ಕೊಡುವುದರಿಂದ ಮೇಲುಲೋಕ (ಸ್ವರ್ಗ) ವು ತನಗೆ ಇಲ್ಲ ಎಂದರೂ ಈಯುವುದೇ ಒಳ್ಳೆಯ ಮಾರ್ಗ.
ತನ್ನಲ್ಲಿ ಏನು ಇಲ್ಲವಾದರೂ ಆ ದುಃಖವನ್ನು ಯಾರಲ್ಲಿಯೂಹೇಳಿಕೊಳ್ಳದೆ ಇತರರಿಗೆ ಕೊಡುವ ಗುಣವು ಕುಲವುಳ್ಳವನ ಲಕ್ಷಣವೆನಿಸಿಕೊಳ್ಳುವುದು.
ಬೇಡುವವರ ಆರ್ತತೆಯ ಅಹಿತರವಾದುದು; ಅವರ ಮನಸ್ಸು ತೃಪ್ತಿಯಾಗಿ ಮುಖವು ನಗೆಯಿಂದ ಅರಳುವವರೆಗೂ ಕೊಡುಗೈಯಿಂದ ಕೊಡಬೇಕು.
ತಪೋಬಲವೆಂದರೆ ಹಸಿವನ್ನು ಅಡಗಿಸಿಕೊಳ್ಳುವ ಶಕ್ತಿ. ಆದರೆ ಹಸಿವಿನಿಂದ ಕೆಂಗೆಟ್ಟವರಿಗೆ ಉಣವಿತ್ತು ಅವರ ಹಸಿವನ್ನು ಕಳೆಯುವುದರಿಂದ ಅದು ಎರೆಡನೆಯದು.
ಆರ್ತರಾದವರ ಕಡು ಹಸಿವನ್ನು ತೀರಿಸಬೇಕು; ಅದೇ ಪಡೆದವನು ತನ್ನ ಸಿರಿಯನ್ನು ಕೂಡಿಡುವ ನೆಲೆ.
ತಾನು ಪಡೆದ ಸೊತ್ತನ್ನು ಇತರರೊಡನೆ ಪಾಲ್ಗೊಂಡು ಉಣ್ಣುವವನನ್ನು ಹಸಿವೆನ್ನುವ ಕ್ರೂರ ಬಾಧೆ ತಟ್ಟುವುದಿಲ್ಲ.
ತಾವು ಗಳಿಸಿರುವ ಸೊತ್ತನ್ನು ಬಚ್ಚಿಟ್ಟು ಕಳೆಯುವ ಕಲ್ಲು ಮನಸ್ಸಿನವರು ಕೊಟ್ಟು ನಲಿಯುವ ಸುಖವನ್ನು ಅರಿಯಲಾರರೆ?
ಕೂಡಿಟ್ಟುದನ್ನು ಇತರರಿಗೆ ಕೊಡದೆ ತಾವೇ ತನಿಯಾಗಿ ಉಂಟು ಅನುಭವಿಸುವುದು, ಬೇಡಿ ಉಣ್ಣುವುದಕ್ಕಿಂತ ಕೀಳು.
ಸಾಯುವುದಕ್ಕಿಂತ ಸಂಕಟಕರವಾದುದು ಬೇರೆ ಇಲ್ಲ; ಆದರೆ ಕೊಡಲು ಸಾಧ್ಯವಾಗದಿರುವ ಕಡೆ ಆ ಸಾವೇ ಸುಖಕರವೆನಿಸುವುದು.
(ಕಷ್ಟದಲ್ಲಿರುವವರಿಗೆ) ಈವುದು, ಕೀರ್ತಿವಂತನಾಗಿ ಬಾಳುವುದು, ಇವಲ್ಲದೆ ಮಾನವನ ಬಾಳಿನಲ್ಲಿ ಬೇರೆ ಲಾಭವಿಲ್ಲ.
ಕಷ್ಟದಲ್ಲಿರುವವರಿಗೆ ಸಹಾಯ ಮಾಡುವವರ ಕೀರ್ತಿಯನ್ನು ಲೋಕದಲ್ಲಿ ಎಲ್ಲರೂ ಹೋಗುತ್ತಾರೆ.
ಉನ್ನತವಾದ ಕೀರ್ತಿಯಲ್ಲದೆ, ಲೋಕದಲ್ಲಿ ಪ್ರತ್ಯೇಕವಾಗಿ ನಾಶವಿಲ್ಲದೆ ನೆಲೆ ನಿಲ್ಲುವಂಥ ವಸ್ತು ಬೇರೊಂದಿಲ್ಲ.
ಭೂಮಿಯುದ್ದಕ್ಕೂ, ನಿಡುಗಾಲ ನಿಲ್ಲುವ ಕೀರ್ತಿಯನ್ನು ಪಡೆದವರನ್ನಲ್ಲದೆ ಜ್ಞಾನಿಗಳನ್ನು (ದೇವತೆಗಳನ್ನು) ಕೀರ್ತಿಸದು ದೇವಲೋಕ.
ಕೀರ್ತಿಯಿಂದ ಗಳಿಸಿದ ಬಡತನ, ಶಾಶ್ವತವಾದ ಕೀರ್ತಿಯೊಡನೆ ಬರುವ ಸಾವು ಬಲ್ಲವರಿಗಲ್ಲದೆ ಬೇರೆಯವರಿಗೆ ಸಾಧ್ಯವಿಲ್ಲ.
ಹುಟ್ಟಿದರೆ ಹೊಗಳಿಕೆ (ಕೀರ್ತಿ) ಯೊಂದಿಗೆ ಹುಟ್ಟಬೇಕು. ಅದಿಲ್ಲವಾದರೆ ಹುಟ್ಟುವುದಕ್ಕಿಂತ ಹುಟ್ಟದಿರುವುದೇ ಲೇಸು.
ಕೀರ್ತಿ ಪಡೆಯುವಂತೆ, ಬಾಳದವರು, ತಮ್ಮ ಕುಂದಿಗೆ ತಾವೇ ನೊಂದು ಕೊಳ್ಳದೆ ತಮ್ಮನ್ನು ತೆಳೆಗುವ ಇತರರ ಮಾತಿಗೆನೊಂದುಕೊಳ್ಳುವುದು ಏಕೆ?
ತಮ್ಮ ನಂತರ ನಿಡುಗಾಲ ಉಳಿಯುವ ಕೀರ್ತಿ ಸಂತತಿಯನ್ನು ಗಳಿಸದೆ ಬಿಟ್ಟರೆ ಈ ಲೋಕದಲ್ಲಿ ಬಾಳುವವರಿಗೆ ಅದೇ ಕಳಂಕ ಎಂದು ಬಲ್ಲವರು ಹೇಳುತ್ತಾರೆ.
ಅಪಕೀರ್ತಿಯ ಶರೀರವನ್ನು ಹೊತ್ತುಕೊಮ್ಡಿರುವ ನೆಲದಲ್ಲಿ ಸಮೃದ್ಧ ಬೆಳೆಯೂ ಕುಂದಿ ನಾಶವಾಗಿ ಹೋಗುವುದು.
ಅಪಕೀರ್ತಿ ಅಳಿಯುವಂತೆ ಬದುಕುವವರೇ (ನಿಜವಾಗಿ) ಬಾಳುವವರು. ಅದಲ್ಲದೆ, ಕೀರ್ತಿ ಅಳಿಯುವಂತೆ ಬಾಳುವ ಜನರು (ಬದುಕಿದ್ದೂ) ಬಾಳದವರು.
ಕರುಣೆಯ ಸಿರಿಯು ಸಿರಿಯೊಳಗೆ ಸಿರಿಯೆನಿಸಿಕೊಳ್ಳುವುದು; ಹಣವಂತಿಕೆಯ ಸಿರಿಯು ಕೀಳಾದವರಲ್ಲಿಯೂ ಇರುವುದು.
ಒಳ್ಳೆಯ ಮಾರ್ಗದಿಂದ ಪರಿಶೀಲಿಸಿ, ಕರುಣೆಯಿಂದ ಬಾಳಬೇಕು; ಹಲವು ಮಾರ್ಗಗಳಿಂದ (ಬೇರೆ ಬೇರೆ ಧರ್ಮಗಳಿಂದ) ವಿಚಾರ ಮಾಡೀ ನೋಡಿದರೂ ಕರುಣೆಯೇ ಬಾಳಿಗೆ ಆಧಾರ.
ಕರುಣೆ ತುಂಬಿದ ಹೃದಯವುಳ್ಳವರಿಗೆ ಇರುಳು ತುಂಬಿದ ನರಕದ ಭಯವಿಲ್ಲ.
ಲೋಕದಲ್ಲಿ ಜೀವಿಸುವ ಪ್ರಾಣಿಗಳನ್ನು ಕಾಪಾಡಿ ಕರುಣೆ ತೋರುವವರಿಗೆ ತಮ್ಮ ಪ್ರಾಣಕ್ಕಂಜಬೇಕಾದ ದುಷ್ಕರ್ಮಗಳು ಬಾಧಿಸುವುದಿಲ್ಲ.
ಕರುಣೆ ತೋರಿ ಬಾಳುವವರಿಗೆ ದುಃಖ ಬಾಧಿಸುವುದಿಲ್ಲ; ಗಾಳಿ ಬೀಸುತ್ತ, ಸಸ್ಯಸಮೃದ್ಧವಾಗಿರುವ, ಈ ವಿಸ್ತಾರವಾದ ಭೂಲೋಕವೇ ಇದಕ್ಕೆ ಸಾಕ್ಷಿ.
(ಹಿಂದಿನ ಜನ್ಮದಲ್ಲಿ) ಸಾರವಸ್ತುವಾದ ಧರ್ಮವನ್ನು ತೋರೆದು ಬಾಳಿನ ಗುರಿಯನ್ನು ಮರೆತವರೇ ಈ ಜನ್ಮದಲ್ಲಿ ಕರುಣೆ ತೋರೆದು ದುಷ್ಕೃತ್ಯಗಳಲ್ಲಿ ತೊಡಗುವರು ಎಂದು ಬಲ್ಲವರು ಹೇಳುತ್ತಾರೆ.
ಹಣವಿಲ್ಲದವರಿಗೆ ಈ ಲೋಕದ ಸುಖವು ಲಭ್ಯವಾಗದಿರುವಂತೆ (ಪ್ರಾಣಿಗಳಿಲ್ಲ) ಕರುಣೆ ಇಲ್ಲದವರಿಗೆ ಮೇಲು ಲೋಕದ ಸುಖವೂ ಲಭ್ಯವಾಗುವುದಿಲ್ಲ.
ಸಿರಿ ಬತ್ತಿದವರು ಎಂದಾದರೊಮ್ಮೆ ಮತ್ತೆ ವೃದ್ದಿ ಪಡೆವರು, ಕರುಣೆ ಬತ್ತಿದವರು ಮಾತ್ರ ಬಾಳಿನ ಪ್ರಯೋಜನದಿಂದ ದೂರವಾದವರೇ, ಅವರು ಯಾವ ಕಾಲದಲ್ಲೂ ಕೀರ್ತಿವಂತರಾಗುವುದು ಸಾಧ್ಯವಿಲ್ಲ.
ಕರುಣೆ ತೋರದವನು ಆಚರಿಸುವ ಧರ್ಮವನ್ನು ಪರೀಕ್ಷಿಸಿ ನೋಡಿದರೆ, ಅದು ಅರಿವಿಲ್ಲದ ಬುದ್ದಿಗೇಡಿಯೊಬ್ಬನು ಸತ್ಯದ ತಿರುಳನ್ನು ಕಂಡು ಗ್ರಹಿಸಿದಂತೆ.
ತನಗಿಂತ ಬಲಹೀನರಾದವರನ್ನು ಪೀಡಿಸಲು ಮುಂದುವರಿಯುವಾಗ, ತನಗಿಂತ ಬಲಶಾಲಿಯಾದವರ ಮುಂದೆ ತನ್ನನ್ನು ಇರಿಸಿಕೊಂಡು ನೆನೆದುಕೊಳ್ಳಬೇಕು.
ತನ್ನ ಮೈ ಮಾಂಸವನ್ನು ಬೆಳಸಿಕೊಳ್ಳಲು ಇತರ ಪ್ರಾಣಿಗಳ ಮೈಮಾಂಸವನ್ನು ತಿನ್ನುವವನು ಹೇಗೆ ತಾನೆ ಕರುಣೆಯಿಂದ ಬಾಳಬಲ್ಲನು?
ಸಿರಿಯನ್ನು ಅನುಭವಿಸುವ ಫಲ ಅದನ್ನು ಕಾಪಾಡಿಕೊಳ್ಳಲಾರದವರಿಗೆ ಇಲ್ಲ; ಅದೇ ರೀತಿ, ಮಾಂಸ ತಿನ್ನುವವರಿಗೆ ಕರುಣೆಯಿಂದ ಉಂಟಾಗುವ ಫಲವೂ ಇಲ್ಲ.
ಒಂದು ಪ್ರಾಣಿಯ ಒಡಲಿನ ಸವಿಯನ್ನು ಉಂಟವರ ಮನಸ್ಸು, ಕೊಲೆಗತ್ತಿಯನ್ನು ಕೈಯಲ್ಲಿ ಹಿಡಿದ ಕಟುಕರ ಮನಸ್ಸಿನಂತೆ ಒಳ್ಳೆಯದನ್ನು ಎಣಿಸುವುದಿಲ್ಲ.
ಕರುಣೆ ಯಾವುದೆಂದರೆ ಒಂದು ಪ್ರಾಣಿಯನ್ನು ಕೊಲ್ಲದಿರುವುದು; ಕರುಣೆಯಲ್ಲದ್ದು ಯಾವುದೆಂದರೆ-ಕೊಲ್ಲುವುದು. ಆ ಕೊಂದ ಒಡಲಿನ ಮಾಂಸವನ್ನು ತಿನ್ನುವುದು ಧರ್ಮವಲ್ಲದ್ದು.
ಮಾಂಸವನ್ನು ಉಣ್ಣದಿರುವುದೇ ಪ್ರಾಣಿಗಳ ಉಸಿರ ನೆಲೆ. ಮಾಂಸವನ್ನು ತಿಂದರೆ, ನರಕವೂ ಕೊಡ ಅಂಥವರನ್ನು ಬಾಯಿ ತೆರೆದು ಹೊರಗೆ ಬಿಡುವುದಿಲ್ಲ.
ಮಾಂಸವನ್ನು ತಿನ್ನಬೇಕೆಂದ ಕಾರಣದಿಂದ ಲೋಕದ ಜನರು ಒಂದು ಪ್ರಾಣಿಯನ್ನು ಕೊಲ್ಲುವುದಿಲ್ಲ ಎಂದಾದರೆ, ಹಣದಾಸೆಗೆ ಅದನ್ನು ಮಾರುವವರೂ ಇಲ್ಲವಾಗುತ್ತಾರೆ.
ಮಂಸವನ್ನು ತಿನ್ನದಿರಬೇಕು; ವಿಚಾರ ಮಾಡಿ ನೋಡಿದರೆ, ಅದು ಬೇರೊಂದು ಪ್ರಾಣಿಯ ಒಡಲ ಹುಣ್ಣು ಎಂದು ಗೊತ್ತಾಗುವುದು.
ದೋಷಮುಕ್ತವಾದ ಅರಿವುಳ್ಳವರು ಒಂದು ಪ್ರಾಣಿಯ ಒಡಲಿಂದ ಹರಿದು ಬಂದ ಮಾಂಸವನ್ನು ತಿನ್ನುವುದಿಲ್ಲ.
ತುಪ್ಪ ಮೊದಲಾದ ದ್ರವ್ಯಗಳನ್ನು ಸುರಿದು ಮಾಡುವ ಸಾವಿರ ಯಾಗಗಳಿಗಿಂತ ಒಂದು ಪ್ರಾಣಿಯ ಒಡಲನ್ನು ಹರಿದು ತಿನ್ನುದಿರುವುದು ಮೇಲು.
ಕೊಲ್ಲದವನನ್ನೂ ಮಾಂಸ ತ್ಯಾಜ್ಯ ಮಾಡಿದವನನ್ನೂ ಎಲ್ಲಾ ಪ್ರಾಣಿಗಳೂ (ಭಕ್ತಿಯಿಂದ) ಕೈಜೋಡಿಸಿ ನಮಸ್ಕರಿಸುವುದು.
ಬಂದ ನೋವನ್ನು ತಾಳಿಕೊಳ್ಳುವುದು, ಇತರ ಪ್ರಾಣಿಗಳಿಗೆ ದುಃಖವುಂಟು ಮಾಡದಿರುವುದು, ಇವೇ ತಪಸ್ಸಿನ ಲಕ್ಷಣವೆನಿಸಿಕೊಳ್ಳುವುದು.
ತಪಸ್ಸು ಎನ್ನುವುದು ಅದನ್ನು ಪೂರ್ವಜನ್ಮದಲ್ಲಿ ಸಾಧಿಸಿದವರಿಗೆ ಮಾತ್ರ ಲಭ್ಯವಾಗುವುದು. ಪೂರ್ವಸಿದ್ದಿ ಇಲ್ಲದವರು ಅದನ್ನು ಕೈಗೊಂಡರೆ ಅದು ಬಿಷ್ಫಲವಾಗುವುದು.
ಎಲ್ಲವನ್ನೂ ತೊರೆದು ತಪಸ್ಸಿಗೆ ಕುಳಿತವರಿಗೆ, ಆಹಾರ ಮೊದಲಾದವನ್ನು ನೀಡಿ ನೆರವಾಗಬೇಕೆಂದು ಬಯಸಿ ತಪಸ್ವಿಗಳಾಗದೆ ಉಳಿದವರು (ಆಂದರೆ ಗೃಹಸ್ಧರು) ತಪಸ್ಸನ್ನು ಮರೆತಿದ್ದಾರೆಯಾ?
ಒಲ್ಲದವರನ್ನು ಅಡಗಿಸುವುದಾಗಲೀ. ಒಲಿದವರನ್ನು ಮೇಲೆತ್ತುವುದಾಗಲೀ, ನೆನೆದ ಮಾತ್ರಕ್ಕೆ ತಪೋಬಲದಿಂದ ಸಾಧ್ಯವಾಗುವುದು.
ತಪಸ್ಸಿನಿಂದ ಬೇಡಿದ ಫಲಗಳನ್ನು ಬೇಡಿದಂತೆಯೇ ಪಡೆಯಲು ಸಾಧ್ಯವಾಗುವುದರಿಂದ, ಆ ತಪಸ್ಸನ್ನು ಇಲ್ಲಿಯೇ (ಈ ಜನ್ಮದಲ್ಲಿಯೇ) ಸಾಧಿಸಿಕೊಳ್ಳಬೇಕು.
ತಪಸ್ಸು ಮಾಡುವವರು ತಮ್ಮ ಕರ್ಮಗಳನ್ನು ಸರಿಯಾದ ರೀತಿಯಲ್ಲಿ ಮಾಡುತ್ತಾರೆ. ಮತ್ತಲ್ಲದವರು, ಅತಿಯಾಶೆಗೊಳಗಾಗಿ ಹೀನ ಕೆಲಸಗಳನ್ನು ಮಾಡುತ್ತಾರೆ.
ಪುಟವಿಟ್ಟಂತೆಲ್ಲ ಚಿನ್ನವು ಹೆಚ್ಚು ಹೊಳೆಯುವುದು; ಅದರಂತೆ ತಪಸ್ಸಿಗಳು ಹೆಚ್ಚು ಕಷ್ಟಕ್ಕೀಡಾದಂತೆಲ್ಲ ಆತ್ಮಬಲ ವರ್ಧಿಸುತ್ತದೆ
ತಪೋಬಲದಿಂದ ಮೋಹವನ್ನು ಕತ್ತರಿಸಿಕೊಂಡು, ತನ್ನ ಪ್ರಾಣವನ್ನು (ಆತ್ಮ ಬಲವನ್ನು) ಸಂಪೂರ್ಣವಾಗಿ ಹತೋಟೆಯಲ್ಲಿಟ್ಟು ಕೊಂಡವನನ್ನು ಲೋಕದಲ್ಲಿರುವ ಜೀವಿಗಳೆಲ್ಲ ತಲೆಬಾಗಿ ವಂದಿಸುವುವು.
ತಪಸ್ಸಿನ ಬಲವನ್ನು ಸಾಧಿಸಿಕೊಂಡವರಿಗೆ ಮೃತ್ಯುವನ್ನು ಮೆಟ್ಟಿ ಗೆಲ್ಲುವುದೂ ಸಾಧ್ಯವಾಗುತ್ತದೆ.
ಈ ಲೋಕದಲ್ಲಿ ಇಲ್ಲದವರೇ ಹೆಚ್ಚು ಮಂದಿ, ಉಳ್ಳವರು ಕೆಲವೇ ಮಂದಿ; ಇದಕ್ಕೆ ಕಾರಣ ತಪಸ್ಸನ್ನಾಚರಿಸುವವರು ಕೆಲವೇ ಮಂದಿಯಾಗಿ ಬಹುಪಾಲು ಜನ ತಪಸ್ಸಿನಿಂದ ದೂರವಾಗಿರುವುದೇ.
ವಂಚನೆಯ ಮನಸ್ಸುಳ್ಳವನ ಹುಸಿ ನಡೆವಳಿಕೆಯನ್ನು ಕಂಡು ಅವನ ಶರೀರ ದೊಳಗಿರುವ ಪಂಚಭೂತಗಳು ತಮ್ಮೊಳಗೇ ನಗುತ್ತವೆ.
ತಾನು ತಿಳಿದ ಅಪರಾಧಗಳಲ್ಲಿ ಮನಸ್ಸನ್ನು ತೊಡಗಿಸಿದರೆ, ಬಾನಿನೆತ್ತರದ ತೋರಿಕೆಯ ಬದುಕು ಇದ್ದರೂ ಅದು ಏನು ಫಲ ಸಾಧಿಸಬಲ್ಲುದು?ಅದು ವ್ಯರ್ಥ ಬದುಕು ಎನಿಸಿಕೊಳ್ಳುತ್ತದೆ.
ಮನಸ್ಸನ್ನು ಇಂದ್ರಿಯಗಳ ಆಸೆಗಳಿಂದ ಅಡಗಿಸುವ ಬಲವಿಲ್ಲದವನು ಕೈಗೊಂಡ ಕಠಿಣ ತಪಸ್ಸು, ಹಸು ಚರ್ಮವನ್ನು ಹೊದ್ದುಕೊಂಡು ಹುಲ್ಲು ಮೇಯವಂತೆ, ಅಭಾಸಸಕರವಾದದ್ದು.
ತಪಶ್ಶಕ್ತೀಯ ಮರೆಯಲ್ಲಿ ಸಲ್ಲದ ಕೀಳು ಕೆಲಸಗಳನ್ನು ಮಾಡುವುದು, ಪೋದರ ಮರೆಯಲ್ಲಿ ಅವಿತುಕೊಂಡು ಬೇಡನು ಹಕ್ಕಿಗಳನ್ನು ಬಲೆಬೀಸಿ ಹಿಡಿದಂತೆ.
"ಆಶೆಗಳನ್ನು ತೊರೆದಿದ್ದೇವೆ" ಎಂದುಕೊಳ್ಳುವವರ ಹುಸಿ ನಡವಳಿಕೆಯು, "ನಾವು ಎಂಥ ತಪ್ಪು ಮಾಡಿದೆವು" ಎಂದು ಚಿಂತಿಸುವಂತೆ, ಹಲವು ತೆರದ ದುಃಖಗಳನ್ನು ಉಂಟು ಮಾಡುವುದು.
ಮನಸ್ಸಿನಲ್ಲಿ (ಆಶೆಗಳನ್ನು) ತೊರೆಯದೆ, ತೊರೆದವರಂತೆ ನಟಿಸುತ್ತ ವಂಚಿಸಿ ಬಾಳುವವರಿಗಿಂತ, ಕ್ರೂರ ಮನಸ್ಸಿನವರು ಬೇರೆ ಇಲ್ಲ.
ಹೊರಗೆ ತೋರಿಕೆಗೆ ಗುಲಗುಂಜಿ ಮಣಿಯಂತೆ ಕೆಂಪಾಗಿ ಕಂಡರೂ ಮನಸ್ಸಿನೊಳಗೆ ಆ ಮಣಿಯ ತಾದಿಯಲ್ಲಿರುವ ಕಪ್ಪಿನಂತೆ ತೋರಿಕೊಳ್ಳುವವರೂ ಈ ಲೋಕದಲ್ಲಿ ಇದ್ದಾರೆ.
ಮನಸ್ಸಿನೊಳಗೆ ಕೊಳೆ ತುಂಬಿಕೊಂಡು ಮಹಾಮಹಿಮರಂತೆ ನೀರಲ್ಲಿ ಮುಳುಗಿ ಏಳುವ ವಂಚನೆಯ ಬದುಕುಳ್ಳವರು ಈ ಲೋಕದಲ್ಲಿ ಹಲವರಿದ್ದಾರೆ.
ಬಾಣವು ನೋಡಲು ನೇರವಾಗಿದ್ದರೂ ಅದರ ಗುಣ ಕೊಂಕು, ಕ್ರೂರ. ವೀಣೆಯ ತೋರಿಕೆಯಲ್ಲಿ ದೊಂಕಾಗಿದ್ದರೂ ಅದು ಇಂಪು. ಅದೇ ರೀತಿಯಲ್ಲಿ ಜನರ ಗುಣಗಳನ್ನು ಅವರವರ ನಡವಳಿಕೆಯಿಂದ ಅರಿಯಬೇಕು.
ಲೋಕವು ನಿಂದಿಸುವ ಕೆಟ್ಟ ನಡವಳಿಕೆಯನ್ನು ಬಿಟ್ಟುಬಿಟ್ಟರೆ, ತಮ್ಮ ವೈರಾಗ್ಯವನ್ನು ಸೂಚಿಸಲು, ತಲೆ ಬೋಳಿಸಿಕೊಳ್ಳುವುದಾಗಲೀ, ಜಟೆ ಬೆಳೆಸುವುದಾಗಲೀ ಬೇಕಿಲ್ಲ.
ಇತರರ ದೃಷ್ಟಿಯಲ್ಲಿ ಕೀಳಾಗಬಾರದೆಂದು ಬಯಸುವವನು, ಅತಿ ಸಣ್ಣವಸ್ತುವವನ್ನೂ ವಂಚಿಸಿ ಕದಿಯದಿರುವಂತೆ ತನ್ನ ಮನಸ್ಸನ್ನು ಕಾಪಾಡಿಕೊಳ್ಳಬೇಕು.
ಮನಸ್ಸಿನಿಂದ ಕೆಟ್ಟದನ್ನು ನೆನೆಯುವುದೂ ಪಾಪವೇ; ಅದರಿಂದ ಹೆರರ ಒಡವೆಯನ್ನು ಅವರಿಗೆ ಗೊತ್ತಿಲ್ಲದಂತೆ "ಅಪಹರಿಸೋಣ" ಎಂಬ ಭಾವನೆ ಮನಸ್ಸಿನಲ್ಲಿ ಬಾರದಂತಿರಬೇಕು.
ಕಳವಿನಿಂದ ಉಂಟಾದ ಸಂಪತ್ತು, ಬೆಳೆಯುವಂತೆ ತೋರಿ ಕೊನೆಗೆ ಸಂಪೂರ್ಣ ನಾಶವಾಗುವುದು.
ಕಳವಿನಿಂದ ಹೆರರ ಸಂಪತ್ತನ್ನು ದಕ್ಕಿಸಿಕೊಳ್ಳುವುದರಲ್ಲಿ ಪಕ್ವವಾದ ಒಲವು ಪರಿಣಾಮದಲ್ಲಿ ಕೊನೆಯಿಲ್ಲದ ದುಃಖವನ್ನು ತರುವುದು.
ಪರರ ಒಡವೆಯನ್ನು ಕಬಳಿಸಲು ಎಣಿಸಿ ಅದರು ಮೈಮರೆವುದನ್ನೇ ಎದುರು ನೋಡುವವರ ಬಳಿ ಕರುಣೆಯಿಂದ ಪ್ರೀತಿ ತೋರುವ ಗುಣ ಇರುವುದಿಲ್ಲ.
ಕಳ್ಳತನದಿಂದ ಪರರ ಸೊತ್ತನ್ನು ವಂಚಿಸುವುದರಿಲ್ಲ ನುರಿತ ಒಲವುಳ್ಳವರು ವಿವೇಕದಿಂದ ಧರ್ಮಮಾರ್ಗದಲ್ಲಿ ನಡೆಯಲಾರರು.
ಕಳ್ಳತನಕ್ಕೆ ಕಾರಣವಾದ ಕತ್ತಲೆಯ ಅರಿವು (ವ್ಯಾಮೋಹ), ವಿವೇಕದ ಬಲವನ್ನು ಬಯಸುವವರಲ್ಲಿ ಇರುವುದಿಲ್ಲ.
ವಿವೇಕವುಳ್ಳವರ ಹೃದಯದಲ್ಲಿ ಧರ್ಮವು ನೆಲೆಯೂರಿರುವಂತೆ, ಕಳ್ಳರ ಹೃದಯದಲ್ಲಿ ವಂಚನೆಯು ನೆಲೆಯೂರಿರುತ್ತದೆ.
ವಂಚನೆಯಲ್ಲದೆ ಬೇರೆ ಒಳ್ಳೆಯ ಮಾರ್ಗಗಳನ್ನು ಅರಿಯದವರು, ವಿವೇಕವಲ್ಲದ ಕಾರ್ಯಗಳನ್ನು ಮಾಡಿ ಒಡನೆಯೇ ಕೆಟ್ಟು ನಾಶವಾಗುವವರು.
ಕಳ್ಳತನ ಮಾಡುವವರಿಗೆ ಭೂಮಿಯಲ್ಲಿ ಉಸಿರೊಂದಿಗೆ ಬಾಳುವ ನೆಲೆಯೂ ತಪ್ಪಿಹೋಗುತ್ತದೆ. ಕಳ್ಳತನ ಮಾಡದವರನ್ನು ದೇವಲೋಕವೂ ಆದರಿಸುತ್ತದೆ.
ಯಾವೊಂದೂ ಕೆಡುಕಿಲ್ಲದ ಸೊಲ್ಲುಗಳನ್ನು ಆಡುವುದೇ ನಿಜ ಎನಿಸಿಕೊಳ್ಳುತ್ತದೆ.
ದೋಷವಿಲ್ಲದ ಒಳ್ಳೆಯತನವು, ಒಂದು ಸುಳ್ಳೀನಿಂದ ಫಲಿಸುವುದಾದರೆ, ಆಡಿದ ಸುಳ್ಳೂ ನಿಜದ ಸಾಲಿಗೇ ಸೇರುತ್ತದೆ.
ತನ್ನ ಮನಸ್ಸು ಅರಿತ ವಿಷಯಗಳಲ್ಲಿ ಒಬ್ಬನು ಸುಳ್ಳಾಡಬಾರದು; ಹಾಗೆ ಸುಳ್ಳಾಡಿದರೆ ಅವನ ಮನಸ್ಸೇ ಸಾಕ್ಷಿಯಾಗಿ ನಿಂತು ಅವನನ್ನು ಸುಡುತ್ತದೆ.
ಒಬ್ಬನು ಮನಸ್ಸಿನಿಂದ ಸುಳ್ಳಾಡದೆ ಒಳ್ಳೆಯ ರೀತಿಯಲ್ಲಿ ನಡೆದುಕೊಂಡರೆ, ಅವನು ಲೋಕದ ಜನರೆಲ್ಲರ ಮನಸ್ಸಿನಲ್ಲಿ ನೆಲೆಯಾಗುವನು.
ಒಬ್ಬನು ಮನಃಪೂರ್ವಕವಾಗಿ ನಿಜವಾಡುವುದಾದರೆ, ಅವನು ತಪಸ್ಸು ಮಾಡಿ, ದಾನಧರ್ಮಗಳನ್ನು ನಡೆಸುವವರಿಗಿಂತ ಮೇಲಾದವನು ಎನಿಸಿಕೊಳ್ಳುತ್ತಾನೆ.
ಸುಳ್ಳಾಡದೆ ಬಾಳುವುದಕ್ಕಿಂತ ಮಿಗಿಲಾದ ಕೀರ್ತಿ ಬೇರಿಲ್ಲ; ಅದು ಅವನಿಗೆ ಅರಿವಿಲ್ಲದಂತೆಯೇ ಎಲಾ ಧರ್ಮಗಳ ಫಲವನ್ನೂ ನೀಡುವುದು.
ಸುಳ್ಳಾಡದಿರುವುದನ್ನು ತಪ್ಪದೆ ನಡೆಸಿಕೊಂಡು ಬಂದಲ್ಲಿ ಬೇರೆ ಧರ್ಮಗಳನ್ನು ಆಚರಿಸದಿದ್ದರೂ ಬಾಧಕವಿಲ್ಲ.
ಬಹಿರಂಗ ಶುದ್ಧಿ ನೀರಿನಿಂದ ಉಂಟಾಗುತ್ತದೆ; ಅಂತರಂಗ ಶುದ್ಧಿ ಸತ್ಯವಂತಿಗೆಯಿಂದುಂಟಾಗುವುದು.
ಹೊರಗಿನ ಕತ್ತಲೆಯನ್ನು ಹೋಗಲಾಡಿಸುವ ಬೆಳಕು ಬೆಳಕಲ್ಲ; ಅರಿವುಳ್ಳ ಜ್ಞಾನಿಗಳಿಗೆ ಸುಳ್ಳಾಡದಿರುವುದೇ ನಿಜವಾದ ಬೆಳಕು.
(ಧರ್ಮಗ್ರಂಥಗಳ ಆಧಾರದಿಂದ) ನಾವು ನಿಜವೆಂದು ಕಂಡ ವಸ್ತುಗಳಲ್ಲಿ ಸತ್ಯಶೀಲತೆಗಿಂತ ಮೇಲ್ಮೆಯುಳ್ಳದು ಬೇರೆ ಯಾವುದೂ ಇಲ್ಲ.
ಒಬ್ಬನಿಗೆ ಹಾನಿಯುಂಟು ಮಾಡುವ ಸಂಧರ್ಭಗಳಲ್ಲಿ ಕೋಪ ಮಾಡದೆ ಸಂಯಮದಿಂದ ನಡೆದುಕೊಳ್ಳುವವನೇ ಕೋಪ ನಿಗ್ರಹಿ ಎನಿಸಿಕೊಳ್ಳುತ್ತಾನೆ. ಬೇರೆ ಸಂಧರ್ಭಗಳಲ್ಲಿ ಅವನು ತಾಳಿಕೊಂಡರೂ, ಬಿಟ್ಟರೂ ಒಂದೇ.
ಸಲ್ಲದಎಡೆಗಳಲ್ಲಿ (ಅಂದರೆ ತನಗಿಂತ ಬಲಶಾಲಿಗಳಾದವರ ಮೇಲೆ) ಕೋಪ ತೋರಿಸಿಕೊಳ್ಳುವುದು ಕೆಟ್ಟದ್ದೇ; ಆದರೆ ಸಲ್ಲುವ ಎಡೆಗಳಲ್ಲಿ (ಅಂದರೆ ತನಗಿಂತ ದುರ್ಬಲರಲ್ಲಿ) ಕೋಪ ತೋರಿಸುವುದಕ್ಕಿಂತ ಕೆಟ್ಟದು ಬೇರೆಯಿಲ್ಲ.
ಯಾರಲ್ಲಿಯೂ ಕೋಪವನ್ನು ತಾಳದೆ ಅದನ್ನು ಮರೆಸಿಕೊಳ್ಳಬೇಕು; ಕೋಪದಿಂದಲೇ ಕೆಟ್ಟ ಕಾರ್ಯಗಳು ಹುಟ್ಟಿಕೊಳ್ಳುತ್ತವೆ.
ನಗೆಯನ್ನೂ ಸಂತೋಷವನ್ನೂ ಕೊಲ್ಲುವ ಕೋಪಕ್ಕಿಂತ ಮಿಗಿಲಾದ ಹಗೆ ಬೇರುಂಟೆ?
ತನ್ನನ್ನು ತಾನು ಕಾದುಕೊಳ್ಳಬೇಕೆಂಬ ಅಪೇಕ್ಷೆ ಇದ್ದರೆ, ಒಬ್ಬನು ತನಗೆ ಕೋಪವು ಬರದಂತೆ ಕಾದುಕೊಳ್ಳಬೇಕು. ಹಾಗೆ ಅದನ್ನು ಕಾಯದೆ ಬಿಟ್ಟರೆ, ಅದು ತನ್ನನ್ನೇ ಕೊಲ್ಲುವುದು.
ಕೋಪವು ತನ್ನನ್ನು ಸೇರಿಕೊಂಡವರನ್ನು ಸುಡುವ ಬೆಂಕಿಯಂತೆ; ಅದು ಕುಲವೆನ್ನುವ ರಕ್ಷಣೆಯ ಹರಿಗೋಲನ್ನು ಸುಟ್ಟು ನಾಶಪಡಿಸುವುದು.
ನೆಲಕ್ಕೆ ಕೈಯಪ್ಪಳಿಸಿ ಹೊಡೆದರೆ, ಅದರಿಂದ ಕೈಗೆ ನೋವಾಗುವುದುಹೇಗೆ ತಪ್ಪುವುದಿಲ್ಲವೂ ಹಾಗೆ ಕೋಪವನ್ನು ಬಯಸಿಕೊಂಡವನ ಕೇಡೂ ತಪ್ಪುವುದಿಲ್ಲ.
ಹಲವಾರು ಸೊಡರುಗಳ ಉರಿಯಲ್ಲಿ ಅದ್ದಿದಂಥ ಸಂಕಟಗಳನ್ನು ಒಬ್ಬನು ತಂದೊಡ್ಡಿದರೂ, ಅವನ ಮೇಲೆ ಕೋಪತಾಳದೆ ಸಮಾಧಾನಿಯಾಗಿರುವುದು ಮೇಲು.
ಒಬ್ಬನು ತನ್ನ ಮನಸ್ಸಿನಲ್ಲಿ ಕೋಪವನ್ನು ಎಣಿಸುವುದಿಲ್ಲವಾದರೆ, ಅವನು ನೆನೆದುದನ್ನೆಲ್ಲಾ ಒಡನೆಯೇ ಪಡೆದುಕೊಳ್ಳುವನು.
ಕೋಪದ ಎಲ್ಲೆಯನ್ನು ಮೀರಿದವರು ಸತ್ತವರಿಗೆ ಸಮಾನರು; ಅದನ್ನು ತೊರೆದವರು, ಋಷಿಗಳಿಗೆ ಸಮಾನರು.
ಪರರಿಗೆ ಕೇಡುಂಟು ಮಾಡುವುದರಿಂದ ತಮಗೆ ಅಷ್ಟಸಿದ್ದಿಗಳು ಲಭಿಸುವಂತಿದ್ದರೂ, ಹಾಗೆ ಕೇಡುಂಟು ಮಾಡದಿರುವುದೇ ಶುದ್ದ ಮನಸ್ಕರ ಸಂಕಲ್ಪ.
ಹಗೆತನದಿಂದ, ಒಬ್ಬನು ಕೇಡೂಂಟು ಮಾಡಿದರೂ, ಅದಕ್ಕೆ ಪ್ರತಿಯಾಗಿ ಕೇಡನ್ನು ಬಗೆಯದಿರುವುದು ಸಚ್ಚಾರಿತ್ರರ ಸಂಕಲ್ಪ.
ತಾನು ಕೇಡು ಬಗೆಯದಿದ್ದರೂ ತನ್ನ ಮೇಲೆ ಹಗೆ ಸಾಧಿಸುವವನಿಗೆ ಪ್ರತಿಯಾಗಿ ಕೇಡೆಣಿಸಬಾರದು; ಹಾಗೆ ಎಣಿಸದರೆ ತಪ್ಪಿಸಿಕೊಳ್ಳಲು ಅಸಾಧ್ಯವಾದ ದುಃಖವನ್ನು ತಂದೊಡ್ಡುವುದು.
ತನಗೆ ಕೇಡು ಬಗೆದವರನ್ನು ದಂಡಿಸುವುದು ಹೇಗೆಂದರೆ, ಅವರು ನಾಚವರೀತಿಯಲ್ಲಿ, ಅವರಿಗೆ ಒಳ್ಳೆಯದನ್ನು ಮಾಡಿ, ಅವರು ಮಾಡಿದ ಅಪಕಾರವನ್ನು ಮರೆತು ಬಿಡುವುದು.
ಬೇರೊಂದು ಜೀವಿಯ ನೋವನ್ನು ತನ್ನ ನೋದೆಂದು ಬಗೆದು, ಕಾಪಾಡದಿದ್ದರೆ, ತಾನು ಪಡೆದ ಅರಿವಿನಿಂದ ಪ್ರಯೋಜನವೇನು?
ತಾನು ತನ್ನ್ ಬಾಳಿನಲ್ಲಿ ಅಹಿತಕರವೆಂದು ಕಂಡು ಅರಿತಿರುವುದನ್ನು ಬೇರೆಯವರಿಗೆ ಮಾಡಲು ಹಿಂಜರಿಯಬೇಕು.
ಎಷ್ಟೇ ಅಲ್ಪವಾಗಿರಲಿ, ಯಾವ ಸಂಧರ್ಭವೇ ಆಗಲಿ, ಯಾರೇ ಆಗಿರಲಿ, ಮನಸ್ಸಿನಲ್ಲಿ ಕೂಡ ಕೇಡು ಬಗೆಯದಿರುವುದೇ (ಎಲ್ಲಾ ಧರ್ಮಗಳಿಗಿಂತ) ಮೆಗಿಲಾದುದು.
ತನ್ನ ಜೀವಕ್ಕೆ ಇದು ಕೆಡುಕಾದುದು ಎಂದು ಬಲ್ಲವನು ಇತರ ಜೀವಿಗಳಿಗೆ ಆ ಕೇಡೆಸೆಗುವುದರ ಕಾರಣವೇನೋ?
ಮುಂಜಾನೆ ಒಬ್ಬರಿಗೆ ಕೇಡು ಬಯಸಿದರೆ, ಸಂಜೆ ವೇಳೆ ಆ ಕೇಡು ನಮ್ಮನ್ನು ತಾನಾಗಿಯೇ ಬಂದು ಸೇರಿಕೊಳ್ಳುವುದು.
ಕಷ್ಟವೆಲ್ಲ (ಇತರರಿಗೆ) ನೋವುಂಟು ಮಾಡಿದವರ ಮೇಲೆಯೇ ಬಂದೆರುಗುವುದು; ಕಷ್ಟಗಳಿಂದ ಮುಕ್ತರಾಗಿ ಬಾಳಬಯಸುವವರು ಪರರಿಗೆ ನೋವುಂಟು ಮಾಡುವುದಿಲ್ಲ
ಧರ್ಮವಾದ ಕಾರ್ಯ ಯಾವುದೆಂದರೆ ಕೊಲ್ಲದಿರುವುದು; ಕೊಲ್ಲುವುದು ಧರ್ಮವಲ್ಲದ ಪಾಪ ಕಾರ್ಯಗಳನ್ನು ಉಂಟು ಮಾಡುವುದು.
ಇದ್ದುದನ್ನು ಹಂಚಿಕೊಂಡು ಉಂಟು ಹಲವು ಜೀವಗಳನ್ನು ಕಾಪಾಡುವುದೇ, ಶಾಸ್ತ್ರಜ್ಞರು ಹೇಳಿರುವ ಧರ್ಮಗಳಲ್ಲೆಲ್ಲ ಮಿಗಿಲಾದುದು.
ಕೊಲ್ಲದಿರುವುದು ಎಲ್ಲದಕ್ಕೂ ಮೇಲಾದ ಒಳ್ಳೆಯ ಗುಣ; ಸುಳ್ಳು ಹೇಳದಿರುವುದು ಅದಕ್ಕೆ ಎರಡನೆಯದು.
ಯಾವೊಂದು ಪ್ರಾಣಿಯನ್ನು ಕೊಲ್ಲುವುದನ್ನು ತಪ್ಪಿಸುವ ಮಾರ್ಗವೇ ಶಾಸ್ತ್ರಗ್ರಂಥಗಳು ಹೇಳುವ ಮಾರ್ಗಗಳಲ್ಲೆಲ್ಲ ಒಳ್ಳೆಯದು.
ಸಂಸಾರ, ಹುಟ್ಟುಗಳ ನೆಲೆಗಂಜಿ, ಆಶಗಳನ್ನು ತೊರೆದು ಸನ್ಯಾಸಿಗಳಾದವರಲ್ಲಿಯೂ, ಕೊಲೆಗಂಜಿ ಕೊಲ್ಲದಿರುವ ಧರ್ಮವನ್ನು ಕೈಕೊಂಡವರೇ ಮೇಲಾದವರು ಎನಿಸಿಕೊಳ್ಳುತ್ತಾರೆ.
ಕೊಲ್ಲದಿರುವ ಧರ್ಮವನ್ನು ಕೈಕೊಂಡು ನಡೆಯುವವನ ಬಾಳನಡೆಯ ಮೇಲೆ ಜೀವಗಳನ್ನು ಕೊಂಡುಂಬ ಮೃತ್ಯು ಬಂದು ಎರಗಲಾರದು.
ತನ್ನ ಪ್ರಾಣ ಹೋದರೂ (ಅದರ ರಕ್ಷಣೆಗಾಗಿ) ಬೇರೊಂದು ಇನಿಯೊಡಲನ್ನು ಕೊನೆಗಾಣಿಸುವ ಕೊಲೆಗೆಲಸ ಮಾಡಬಾರದು.
(ಯಜ್ಞ ಯಾಗಾದಿಗಳಲ್ಲಿ) ಕೊಲೆ ಮಾಡುವುದರಿಂದ ಎಷ್ಟೇ ಹಿರಿದಾದ ಸುಖ ಸಂಪತ್ತುಗಳು ಉಂಟಾದರೂ, ತಿಳಿದವರ ದೃಷ್ಟಿಯಲ್ಲಿ, ಕೊಲ್ಲುವುದರಿಂದ ಬರುವ ಸಿರಿಯು ಕೀಳಾದುದು.
ಕೀಳು ಕೆಲಸ ಯಾವುದು ಎಂದು ತಿಳಿದವರ ಮನಸ್ಸಿನಲ್ಲಿ, ಕೊಲೆಗೆಲಸ ಮಾಡುವವರು ಹೊಲೆಗೆಲಸದವರೆಂದು ಗಣಿಸಲ್ಪಡುತ್ತಾರೆ.
(ಹಿಂದಿನ ಜನ್ಮದಲ್ಲಿ) ಪ್ರಾಣವನ್ನು ಒಡಲಿನಿಂದ ಬೇರ್ಪಡಿಸಿದವರೇ (ಕೊಲೆಗಡುಕರೇ) ಈ ಜನ್ಮದಲ್ಲಿ ರೋಗರುಜಿನಗಳಿಂದ ನವೆದು ಕೀಳಾದ ಬಾಳು ನಡೆಸುವರು ಎಂದು (ಬಲ್ಲವರು) ಹೇಳುವರು.
ನೆಲೆಯಿಲ್ಲದಿರುವ ಸಿರಿ, ಸಂಪತ್ತುಗಳನ್ನು ಶಾಶ್ವತವಾದುದೆಂದು ತಿಳಿಯವ ಅಜ್ಞಾನ ಎಲ್ಲಕ್ಕಿಂತ ಕೀಳಾದುದು.
ನಾಟಕವನ್ನು ನೋಡಲು ಜನ ಬಂದು ಸೇರುವಂತೆ, ಹೇರಳವಾದ ಸಿರಿ ಸಂಪತ್ತುಗಳು ಒಬ್ಬನಲ್ಲಿ ಸೇರುವುವು. ನಾಟಕ ಮುಗಿದ ಮೇಲೆ ಜನ ಚದುರಿ ಹೋಗುವಂತೆ, ಸಿರಿಯೂ ಅವನನ್ನು ಬಿಟ್ಟು ಹೋಗುವುದು.
ಸಿರಿಯು, ಚಂಚಲ ಗುಣವುಳ್ಳದು; ಆ ಸಿರಿ ಕೈಬಿಟ್ಟು ಹೋಗುವ ಮೊದಲು ನೆಲೆಯಾಗಿ ನಿಲ್ಲುವ ಧರ್ಮಕಾರ್ಯಗಳನ್ನು ಕೈಗೊಳ್ಳಬೇಕು.
ಬಾಳನ್ನು ಶೋಧಿಸಿ ಅರಿತವರ ದೃಷ್ಟಿಯಲ್ಲಿ, ದಿನ ಎಂಬುದು ಒಂದು ಕಾಲದ ಗಡಿಯಂತೆ ಕಾಣಿಸಿಕೊಂಡು, ಒಡಲನ್ನು ಸೀಳುತ್ತಿರುವ ಗರಗಸವಾಗಿ ತೋರುವುದು.
ನಾಲಗೆಯುಡುಗಿ ಬಿಕ್ಕಳಿಕೆ ಮೇಲೇರಿ ಬರುವ ಮುನ್ನವೇ (ಸಾವು ಬರುವ ಮುನ್ನವೇ) ಒಳ್ಳೆಯ ಕಾರ್ಯಗಳನ್ನು ತ್ವರಿತವಾಗಿ ಮಾಡಿ ಮುಗಿಸಬೇಕು.
ನಿನ್ನೆ ಬದುಕಿದ್ದವನೊಬ್ಬನು ಇಂದಿಲ್ಲವೆಂಬ ಹಿರಿಮೆಯನ್ನು ಪಡೆದಿರುವುದು ಈ ಲೋಕ.
ದಿನದಲ್ಲಿ ಒಂದು ಹೊತ್ತು ಸರಿಯಾಗಿ ಬಾಳುವುದನ್ನು ಅರಿಯರು ಜನ, ಆದರೆ, ಮನಸ್ಸಿನಲ್ಲಿ ಕೋಟಿಗೂ ಮಿಗಿಲಾದ ಎಣಿಕೆಗಳನ್ನು ತಾಳುವರು.
ಮೊಟ್ಟೆಯನ್ನು ಒಡೆದು ಬೇರೆಯಾಗಿ ಹಾರಿಹೋಗುವ ಹಕ್ಕಿಯಂತೆಯೇ ಶರೀರ ಮತ್ತು ಪ್ರಾಣಿಗಳ ನಡುವಿನ ಸಂಬಂಧ ಕೂಡ.
ಸಾವೆನ್ನುವುದು ಮೈಮರೆತ ನೆದ್ದೆಯಂತೆ; ಹುಟ್ಟು ಎನ್ನುವುದು ಆ ನಿದ್ದೆಯಿಂದ ಎಚ್ಚರಗೊಂಡು ಕಣ್ಣು ಬಿಟ್ಟಂತೆ.
(ರೋಗಗಳ ನೆಲೆಯಾದ) ಶರೀರದಲ್ಲಿ (ಪ್ರಯಾಣಿಕನಂತೆ) ತಂಗಿರುವ ಜೀವಕ್ಕೆ ಇನ್ನೂ ನೆಲೆಯಾದ ಬೀಡೊಂದು ಸಿದ್ದವಾಗಿಲ್ಲವೋ ಏನೋ?
ಒಬ್ಬನು ಯಾವ ಯಾವ ವಸ್ತುಗಳಿಂದ ಸಂಬಂಧವನ್ನು ಕಡಿದುಕೊಂಡಿರವನೋ ಆ ವಸ್ತುಗಳಿಂದ ಉಂಟಾಗುವ ಬಾಧೆಯಿಂದ ಅವನು ಮುಕ್ತನಾಗುವನು.
ದುಃಖವಿಲ್ಲದಿರುವ ನೆಲೆಯನ್ನು ಬಯಸುವುದಾದರೆ, ಎಲ್ಲ ವಸ್ತುಗಳನ್ನು ಇರುವಾಗಲೇ ತೊರೆದುಬಿಡಬೇಕು. ತೊರೆದ ಬಳಿಕ ಇಲ್ಲಿಯೇ (ಈ ಲೋಕದಲ್ಲಿಯೇ) ಪ್ರಾಪ್ತವಾಗುವ ಸುಖಗಳು ಹಲವಿವೆ.
ಐದು ಇಂದ್ರಿಯಗಳ ಆಡುಂಬೋಲವನ್ನು ನಾಶಪಡಿಸಬೇಕು; ಆ ಇಂದ್ರಿಯಗಳು ಬಯಸುವ ಎಲ್ಲ ಭೋಗ ವಸ್ತುಗಳನ್ನು ಒಂದೇ ಸಾರಿಗೆ ತೊರೆಯಬೇಕು.
ಎಲ್ಲವನ್ನೂ ತೊರೆದಿರುವುದು. ತಪಸಿಗೆ ಸಹಜಗುಣವೆನಿಸುವುದು; ವಸ್ತುಗಳನ್ನು ಪಡೆದಲ್ಲಿ, ಅವು ಮತ್ತೆ ಮನಸನ್ನು ಮರುಳುಗೊಳಿಸಿ, ತಪಸ್ಸಿನ ತನ್ಮಯತೆಯನ್ನು ಕೆಡಿಸುವುವು.
ಹುಟ್ಟನ್ನೇ ಹರಿದುಕೊಳ್ಳಲು ಪ್ರಯತ್ನಿಸುವವರಿಗೆ ಶರೀರವೇ ಒಂದು ಹೊರೆ; ಹಾಗಿರುವಾಗ (ವಸ್ತು ಮೋಹದಿಂದ) ಮತ್ತಷ್ಟು ತೊಡರು, ಸಂಕಟಗಳನ್ನು ಬರ ಮಾಡೀಕೊಳ್ಳುವುದೇಕೆ?
ನಾನು ನನ್ನದು ಎಂಬ ಮೋಹವನ್ನು ಕತ್ತರಿಸಿಕೊಂಡವನು ದೇವತೆಗಳಿಗೂ ಎಟುಕದ ಎತ್ತರವಾದ ಲೋಕವನ್ನು ಸೇರುವನು.
ನಾನು ನನ್ನದೆಂಬ ವ್ಯಾಮೋಹಗಳನ್ನು ಅಂಟಿಕೊಂಡಿರುವವರನ್ನು ದುಃಖಗಳೂ ಬಿಡದೆ ಬಿಗಿಯಾಗಿ ಅಂಟಿಕೊಳ್ಳುತ್ತವೆ.
ಎಲ್ಲವನ್ನೂ ತೊರೆದವರು ಮುಕ್ತಿಯನ್ನು ಪಡೆದವರು; ತೊರೆಯದೆ ಉಳಿದವರೆಲ್ಲ ಮೈಮರೆತು (ಹುಟ್ಟು ಸಾವುಗಳ) ಬಲೆಯಲ್ಲಿ ಸಿಲುಕಿದವರು.
ನಾನು ನನ್ನದು ಎಂಬ ಇಬ್ಬಗೆಯಾದ ಸಂಬಂಧ ಹರಿದು ಹೋದೊಡನೆಯೇ ಹುಟ್ಟು ಹರಿಯುವುದು; ಅದಿಲ್ಲವಾದರೆ, ಹುಟ್ಟು ಸಾವುಗಳಿಂದ ನೆಲೆಯಿಲ್ಲದೆ ತೊಳಲಾಡಬೇಕಾಗುವುದು.
ಆಶೆಯ ಬಂಧನವನ್ನು ಕತ್ತರಿಸಿಕೊಂಡವನು ದೇವರು; ನಾವಿ ಈ ಲೋಕದಲ್ಲಿರುವ ವ್ಯಾಮೋಹವನ್ನು ಕತ್ತರಿಸಿಕೊಳ್ಳಬೇಕಾದರೆ, ಆ ದೇವರಲ್ಲಿ ಶರಣಾಗಬೇಕು.
ನಿಜವಲ್ಲದವುಗಳನ್ನು ನಿಜವೆಂದು ಭಾವಿಸುವ ಮರಳುತನದಿಂದ ಕೀಳಾದ ಹುಟ್ಟು ಸಂಭವಿಸುವುದು.
ತಮ್ಮನ್ನು ಆದರಿಸಿರುವ ಭ್ರಮೆಯನ್ನು ತೊರೆದು, ಶುದ್ದವಾದ ದರ್ಶನದಿಂದ ಲೋಕವನ್ನು ನೋಡುವವರಿಗೆ ಭವದ ಕತ್ತಲು ಹರಿದು ಸುಖದ ನೆಲೆ ಪ್ರಾಪ್ತವಾಗುವುದು.
ಸಂದೇಹವಿಲ್ಲದ ನಿರ್ಮಲ ಮನಸ್ಸಿನಿಂದ ನಿಜವನ್ನು ತಿಳಿದವರಿಗೆ, ವಾಸಿಸುತ್ತಿರುವ ಭೂಲೋಕಕ್ಕಿಂತ, ದೇವಲೋಕವೇ ಸಮೀಪವೆನಿಸುವುದು.
ಪಂಚೇಂದ್ರಿಯಗಳ ವಾಸನೆಯನ್ನು ಗೆದ್ದು ಐದು ಬಗೆಯ ಅರಿವುಗಳನ್ನು ಪಡೆದಿದ್ದರೂ, ನಿಜ ತತ್ವದರಿವಿಲ್ಲದವರಿಗೆ ಅದರಿಂದ ಫಲ ಉಂಟಾಗುವುದಿಲ್ಲ.
ಯಾವ ವಸ್ತು ಯಾವ ರೀತಿಯಲ್ಲಿ ತೋರಿದರೂ (ಆ ತೋರಿಕೆಯನ್ನೇ ನಿಜವೆಂದು ಭಾವಿಸದೆ) ಅವರ ನಿಜವಾದ ಅರ್ಥವನ್ನು ತಿಳಿದುಕೊಳ್ಳುವುದೇ ಅರಿವು ಎನಿಸಿಕೊಳ್ಳುತ್ತದೆ.
ಕಲಿಯಬೇಕಾದುದನ್ನು ಕಲಿತುಕೊಂಡು, ಇಲ್ಲಿಯೇ ನಿಜದ ಹುರುಳನ್ನು ಕಂಡವರು ಮತ್ತೆ ಈ ಹುಟ್ಟಿಗೆ ಬಾರದಿರುವ ಮಾರ್ಗವನ್ನು ಪಡೆದುಕೊಳ್ಳುವರು. (ಮೋಕ್ಷವನ್ನು ಪಡೆಯುವರು)
ಒಬ್ಬನ ಮನಸ್ಸು ನಿಜ ವಸ್ತುವನ್ನು ಇರಿವಂತೆಯೇ ನಿಶ್ಚಯವಾಗಿ ಅರ್ಥಮಾಡಿಕೊಂಡರೆ, ಅವನಿಗೆ ಮತ್ತೆ ಮರುಹುಟ್ಟು ಇರುವುದೆಂದು ಭಾವಿಸಬಾರದು.
ನಿಜ ತತ್ವವನ್ನು ಮರೆಸಿ ತರೆದ ದುಃಖಗಳನ್ನು ತಂದೊಡ್ಡುವುದರಿಂದ ಹುಟ್ಟನ್ನು ಅಜ್ಞಾನವೆಂದು ತಿಳಿದು ಹರಿದುಕೊಳ್ಳಬೇಕು; ಹಾಗಿ ಹುಟ್ಟೆಂಬ ಅಜ್ಞಾನವನ್ನು ತೊರೆದು ಮುಕ್ತಿಯ ನೆಲೆಗೆ ಕಾರಣನಾದ ಪರವಸ್ತುವನ್ನು ತಿಳಿಯುವುದೇ ನಿಜವಾದ ಅರಿವು.
ಎಲ್ಲಾ ಸತ್ಯಗಳಿಗೂ ಆಶ್ರಯವಾದ ಪರವಸ್ತುವನ್ನು ಅರಿತು, ಮಮಕಾರಗಳ ಆಶ್ರಯವನ್ನು ನಾಶಪಡಿಸಿಕೊಂಡರೆ, ಒಂದು ಸೇರಲಿರುವ ದುಃಖಗಳೊಂದೂ ಬಳಿಸಾರುವುದಿಲ್ಲ.
ನಿಜ ತತ್ವವನ್ನು ತಿಳಿದು, ಕಾಮ, ಕ್ರೋಧ, ಮೋಹಗಳೆಂಬ ಮೂರರ ಹೆಸರೂ ಕೆಡುವಂತೆ ನಡೆದುಕೊಂಡರೆ, ಅವುಗಳಿಂದುಂಟಾಗುವ ದುಃಖಗಳೂ ಅಳಿಯುತ್ತದೆ.
ಎಲ್ಲಾ ಜೀವಿಗಳಿಗೂ ಎಲ್ಲ ಕಾಲಗಳಲ್ಲಿಯೂ ತಪ್ಪದೆ ಉಂಟಾಗುತ್ತಿರುವ ಹುಟ್ಟಿನ ವ್ಯರ್ಥಗಳಿಗೆಲ್ಲ ಆಸೆಯೇ ಬೀಜವೆಂದು ಜ್ಞಾನಿಗಳು ಹೇಳುವರು.
ಒಬ್ಬನು ಬಯಸುವುದಾರೆ, ಹುಟ್ಟಿಲ್ಲದ ಸ್ಥಿತಿಯನ್ನು ಬಯಸಬೇಕು; ಆಶೆಗಳನ್ನು ಹರಿದುಕೊಳ್ಳುವುದರಿಂದ ಅದು ಲಭ್ಯವಾಗುವುದು.
ಆಶೆಯನ್ನು ಹರಿದುಕೊಳ್ಳುವುದಕ್ಕಿಂತ ಅಮೂಲ್ಯವಾದ ಸಿರಿ ಈ ಲೋಕದಲ್ಲಿ ಇಲ್ಲ; ಬೇರೆ ಎಲ್ಲೂ (ಪರ ಲೋಕದಲ್ಲಿಯೂ) ಅದಕ್ಕೆ ಎಣಿಯಾದುದು ಇಲ್ಲ.
(ಮನಃ) ಶುದ್ಧಿ ಎಂದು ಕರೆಯಲ್ಪಡುವುದು ಆಶೆ ಇಲ್ಲದ ನೆಲೆಯೇ; ಆಶೆ ಹರಿದ ಸಿತ್ಥಿಯು ಪರಮಾರ್ಥವನ್ನು ಬೇಡೂವುದರಿಂದ ಉಂಟಾಗುವುದು.
ಆಶೆಯನ್ನು ಹರಿದುಕೊಂಡವರೇ ಹುಟ್ಟು ಸಾವುಗಳ ಬಂಧನದಿಂದ ಮುಕ್ತರಾದವರು; ಉಳಿದವರು ಆ ರೀತಿ ಮುಕ್ತರಲ್ಲ.
ಆಸೆಗೆ ಅಂಜಿ ಬಾಳುವುದೇ ಧರ್ಮ; (ಸ್ವಲ್ಪ ಎಚ್ಚರ ತಪ್ಪಿದರೂ ಸಾಕು) ಅದು ಒಬ್ಬನನ್ನು ವಂಚಿಸಿ ನಾಶ ಮಾಡುತ್ತದೆ.
ಒಬ್ಬನು ತನ್ನ ಆಶೆಯನ್ನು ಸಂಪೂರ್ಣ ಕತ್ತರಿಸಿಕೊಂಡರೆ, ಒಳ್ಳೆಯದುಂಟು ಮಾಡುವ ಅವಿನಾಶಿಕರ್ಮವು (ಮುಕ್ತಿಗೆ ಕಾರಣವಾಗುವ ಕರ್ಮವು) ತಾನು ಬಯಸಿದ ದಾರಿಯಲ್ಲಿ ಒದಗುತ್ತದೆ.
ಆಶೆ ಇಲ್ಲದವರಿಗೆ ದುಃಖಗಳು ಇಲ್ಲವಾಗುವುವು; ಆಧೆ ಇದ್ದರೆ ಆ ದುಃಖಗಳು ಬಿಡದೆ ಮೇಲೆ ಮೇಲೆ ಬರುತ್ತವೆ.
ಆಶೆಯೆನ್ನುವುದು ದುಃಖಗಳಲ್ಲೇ ಮಿಗಿಲಾದ ದುಃಖ; ಅದು ನಾಶವಾದರೆ ಈ ಲೋಕದಲ್ಲೆ ಸುಖವು ನಿರಂತರವಾಗಿ ಲಭ್ಯವಾಗುವುದು.
ಆರದ (ತಣಿಯದ) ಸ್ವಭಾವವುಳ್ಳ ಆಶೆಯನ್ನು ನೀಗಿದರೆ, ಅದರಿಂದಲೇ, ಮಾರ್ಪಡದ (ಶಾಶ್ವತ) ಸುಖವು ಬಾಳಿನಲ್ಲಿ ಲಭ್ಯವಾಗುವುದು.
ಅದೃಷ್ಟ ತರುವ ವಿಧಿಯಿಂದ ಪ್ರಯತ್ನಶೀಲತೆಯುಂಟಾಗುತ್ತದೆ; ಸಿರಿ ಕೈತಪ್ಪಿಸುವ ವಿಧಿಯಿಂದ ಆಲಸಿಕೆ ಹುಟ್ಟಿಕೊಳ್ಳುತ್ತದೆ.
ದುರ್ವಿಧಿಯು ಬುದ್ಧಿವಂತನನ್ನೂ ದಡ್ಡನನ್ನಾಗಿ ಮಾಡೀಬಿಡುತ್ತದೆ; ಅದೃಷ್ಟ ತರುವ ವಿಧಿ ಅವನ ಬುದ್ಧಿವಂತಿಕೆಯನ್ನು ವಿಸ್ತರಿಸುತ್ತದೆ.
ಒಬ್ಬನು ಹಲವಾರು ಸೂಕ್ಷ್ಮ ವಿಚಾರಗಳುಳ್ಳ ಶಾಸ್ತ್ರ ಗ್ರಂಥಗಳನ್ನು ಓದಿಕೊಂಡಿದ್ದರೂ ವಿಧಿ ತಂದ ಸ್ವಾಭಾವಿಕವಾದ ಅರಿವೇ ಅವನಲ್ಲಿ ಮೇಲಾಗಿ ನಿಲ್ಲುತ್ತದೆ.
(ವಿಧಿಯ ಕಾರಣದಿಂದ) ಲೋಕದ ಸ್ವಭಾವದಲ್ಲಿ ಎರಡು ಬಗೆಗಳು; ಸಿರಿವಂತರಾಗಿರುವುದು ಬೇರೆ, ಬುದ್ಧಿವಂತರಾಗಿರುವುದು ಬೇರೆ.
ಸಿರಿಯನ್ನು ಕೂಡಿಡುವ ಪ್ರಯತ್ನದಲ್ಲಿ (ವಿಧಿಯ ದೆಸೆಯಿಂದ) ಒಳ್ಳೆಯದೆಲ್ಲ ಕೆಟ್ಟದೂ, ಕೆಟ್ಟದೆಲ್ಲ ಒಳ್ಳೆಯದೂ ಆಗುವುದುಂಟು.
ತಮ್ಮ ಪಾಲಿಗೆ ವಿಧಿ ಕೊಡದ ವಸ್ತುಗಳನ್ನು ಎಚ್ಚರಿಕೆಯಿಂದ ಕಾಪಾಡಿಕೊಂಡರೂ ಅವು ನಿಲ್ಲುವುದಿಲ್ಲ; ವಿಧಿ ವಸ್ತುಗಳನ್ನು ಬೇಡವೆಂದು ಹೊರಗೆ ಸುರಿದರೂ ಅವು ತೊಲಗುವುದಿಲ್ಲ.
ವಿಧಿಯು ಪಾಲು ಮಾಡಿಕೊಟ್ಟ ಬಗೆಯಲ್ಲಲ್ಲದೆ, ಕೋಟಗಟ್ಟಲೆ ಹಣವನ್ನು ಕೊಡಿಟ್ಟುಕೊಂಡರೂ, ಅದನ್ನು ಅನುಭವಿಸುವುದು ಕಷ್ಟವೇ. (ಎಷ್ಟೇ ಕೊಡಿಟ್ಟರೂ ವಿಧಿ ನೇವಿಸಿದಷ್ಟೇ ಅನುಭವಿಸಲು ಸಾಧ್ಯ)
ವಿಧಿಯಿಂದ ಬರಬೇಕಾದ ದುಃಖಗಳು ಬಂದು ಕಷ್ಟಕ್ಕೀಡುಮಾಡದೆ ಹಾಗೆಯೆ ಕಳೆಯುವುದಾದರೆ, ಅನುಭವಿಸಲು ಏನೂ ಇಲ್ಲದ ದರಿದ್ರರು ಸನ್ಯಾಸಿಗಳಾಗಿ ಬಿಡುತ್ತದ್ದರಲ್ಲವೆ?
ತಮಗೆ ಒಳ್ಳೆಯುದಾಗುವ ಕಾಲದಲ್ಲಿ ಸುಖ್ ಸಂತೋಷಗಳಿಂದ ಸ್ವಾಗತಿಸುವವರು, ಕೆಟ್ಟದು ಸಂಭವಿಸಿದಾಗ ಆತಂಕ ಪಡುವುದೇಕೆ? (ಸುಖ ದುಃಖ ಎರಡೂ ವಿಧಿಯ ಮುಖಗಳೇ. ಯಾವುದೇ ಬಂದರೂ ಅನುಭವಿಸದೆ ಬೇರೆ ಮಾರ್ಗವಿಲ್ಲ)
ವಿಧಿಗಿಂತ ಅಧಿಕ ಬಲಶಾಲಿಯಾದುದು ಯಾವುದಿದೇ? ಅದನ್ನು ಮರೆಯಲು ಬೇರೊಂದನ್ನು ನೆನೆದರೂ ವಿಧಿ ತಾನೇ ಮುಂದೆ ಬಂದು ನಿಲ್ಲುತ್ತದೆ.
ಪಡೆ, ಜನತೆ, ಸಂಪತ್ತು, ಮಂತ್ರಿ, ಕೆಳೆ ಮತ್ತು ಕೋಟೆ ಎಂಬ ಆರು ಅಂಗಗಳನ್ನು ಉಳ್ಳವನು ಅರಸರಲ್ಲಿ ಪುರುಷ ಸಿಂಹವೆಂದು ಕರೆಸಿಕೊಳ್ಳುತ್ತಾನೆ.
ಧೈರ್ಯ, ದಾನ, ಜ್ಞಾನ ಮತ್ತು ಪ್ರಯತ್ನ- ಈ ನಾಲ್ಕು ಗುಣಗಳಲ್ಲಿ ಯಾವಾಗಲೂ ಸೋಲದೆ ನಿರಂತರವಾಗಿರುವುದೇ ಅರಸನ ಗುಣಗಳೆನಿಸುವುದು.
(ಸದಾ) ಎಚ್ಚರ, ವಿದ್ಯೆ ಮತ್ತು ಪರಾಕ್ರಮ ಇವು ಮೂರೂ ನೆಲವಾಳುವವನನ್ನು ಬಿಟ್ಟು ಹೋಗಬಾರದು.
ಧರ್ಮವನ್ನು ಬಿಡದೆ ಧರ್ಮ ವಲ್ಲದುದನ್ನು ನೀಗಿ, ಪರಾಕ್ರಮದಲ್ಲಿ ಕುಗ್ಗದೆ ಅಭಿಮಾನ ಧನನಾಗಿರುವವನೇ ಅರಸು.
(ಐಶ್ವರ್ಯವನ್ನು) ಸಂಪಾದಿಸಿ, ಸೇರಿಸಿಟ್ಟು ಕಾಪಾಡಿ (ಸಮನಾಗಿ) ಹಂಚಲು ಬಲ್ಲವನೇ ಅರಸು.
ಕಾಣಲು ಸುಲಭನಾಗಿ, ಕಡುನುಡಿಗಳನ್ನು ಆಡದವನಾಗಿದ್ದರೆ, ಆ ಅರಸನ ಆಳ್ವಿಕೆಗೊಳಪಟ್ಟ ನಾಡನ್ನು ಲೋಕವೇ ಹೊಗಳುವುದು.
ಇನಿದಾದ ಮಾತುಗಳಿಂದ (ತಕ್ಕವರಿಗೆ) (ವಸ್ತುಗಳನ್ನು) ಉದಾರವಾಗಿ ಕೊಟ್ಟು ಕಾಪಾಡಬಲ್ಲ ಅರಸನಿಗೆ ಈ ಲೋಕವು ವಿಧೇಯವಾಗಿ, ಅವನು ಹೇಳಿದಂತೆ ನಡೆದುಕೊಳ್ಳುತ್ತದೆ.
(ತನ್ನ ಜನರಿಗೆ) ನ್ಯಾಯ ನೀಡಿ, ಕಾಪಾಡುವ ಅರಸನನ್ನು ಜನರು (ಪ್ರತ್ಯಕ್ಷ) ದೇವರೆಂದು ಗೌರವಿಸುವರು.
(ದೊರುವವರ) ಕಹಿ ಮಾತುಗಳನ್ನು ಕಿವಿಯಲ್ಲಿ ಕೇಳಿ ತಾಳಿಕೊಳ್ಳುವ ಗುಣವುಳ್ಳ ಅರಸನ ಕೃಪಾ ಛತ್ರದಡಿಯ ನೆರಳಲ್ಲಿ ಲೋಕವೇ ತಂಗುತ್ತದೆ.
ಕೊಡುವಿಕೆ (ದಾನ), ಅನುಗ್ರಹ, ಸಮನ್ಯಾಯ, ಆಶ್ರಿತ ಜನರ ರಕ್ಷಣೆ ಈ ನಾಲ್ಕು (ಗುಣಗಳನ್ನು) ಉಳ್ಳ ಅರಸನು ಅರಸರಿಗೆಲ್ಲಾ ಬೆಳಕಿನಂತೆ ಇರುವನು.
ಕಲಿಯಬೇಕಾದ ಯೋಗ್ಯತೆಯುಳ್ಳ ಕಲಿಕೆಯನ್ನು ದೋಷವಿಲ್ಲದೆ ಕಲಿಯ ಬೇಕು. ಕಲಿತ ನಂತರ ಕಲಿತ ವಿದ್ಯೆಗೆ ತಕ್ಕದಾದ ಮಾರ್ಗದಲ್ಲಿ ನಿಲ್ಲಬೇಕು.
ಗಣಿತ ಮತ್ತು ಅಕ್ಷರಗಳು ಇವೆರಡೂ (ಕಲೆಗಳೂ) ಮನುಷ್ಯನ ಬಾಳಿಗೆ ಕಣ್ಣುಗಳಿದ್ದಂತೆ ಎಂದು ಹೇಳುವರು.
ಕಲಿತವರೇ ಕಣ್ಣುಳ್ಳವರು; ಕಲಿಯದವರ ಮುಖದಲ್ಲಿರುವ ಎರಡು ಕಣ್ಣುಗಳೂ ಹುಣ್ಣಿದ್ದಂತೆ.
ಬೆರೆತಾಗ ಸಂತೋಷ ತರುವುದು, ಅಗಲಿದಾಗ ನೆನೆಯುವಂತೆ ಮಾಡುವುದು ಇದೇ ವಿದ್ವಜ್ಜನರ ಕಲೆ.
ಐಶ್ವರ್ಯವಂತರ ಮುಂದೆ ಇಲ್ಲದವರು ನಿಲ್ಲುವಂತೆ, ಕಲಿತವರ ಮುಂದೆ ದೈನ್ಯದಿಂದ ಬಾಗಿನಿಂತು ಕಲಿತವರೇ ಶ್ರೇಷ್ಠರು; ಹಾಗೆ ಕಲಿಯದವರು ಕೀಳು ಜನರು.
ಮಳಲು ತೋಡಿದ ಪ್ರಮಾಣಕ್ಕೆ ಬಾವಿಯಲ್ಲಿ ನೀರು ತುಂಬುವಂತೆ ಮನುಷ್ಯರು ಕಲಿತ ವಿದ್ಯೆಯ ಪ್ರಮಾಣಕ್ಕೆ ಅರಿದು ಸಂಪಾದಿಸುತ್ತಾರೆ
ಕಲಿತವನಿಗೆ ಯಾವ ದೇಶವೇ ಆಗಲಿ, ಊರೇ ಆಗಲಿ, ತನ್ನ ದೇಶ, ಊರು ಎಂದಾಗುತ್ತದೆ. ಹಾಗಿರುವಾಗ ಸಾಯುವವರೆಗೂ ಒಬ್ಬನು ಕಲಿಯದೆ ಕಾಲಹರಣ ಮಾಡುವುದೇಕೆ?
ಒಂದು ಜನ್ಮದಲ್ಲಿ ತಾನು ಕಲಿತ ವಿದ್ಯೆ, ಏಳು ಜನ್ಮಗಳಲ್ಲಿಯೂ ತನ್ನ ನೆರವಿಗೆ ಬರುವುದು.
ತಾವು ಸಂತೋಷಪ್ಪಡುವುದಕ್ಕೆ ಕಾರಣವಾದ ವಿದ್ಯೆಯಿಂದ ಲೋಕವೂ ಸಂತೋಷಪ್ಪಡುವುದನ್ನು ಕಂಡು ವಿದ್ಯಾವಂತರು ಮತ್ತೆ ಮತ್ತೆ ಆ ವಿದ್ಯಯನ್ನು ಕಲಿಯಲು ಬಯಸುವರು.
ಒಬ್ಬನಿಗೆ ಕೇಡಿಲ್ಲದ ಸಿರಿಯೆಂದರೆ ವಿದ್ಯೆಯೇ; ಮತ್ತಾವುದೂ ಸಿರಿಯಲ್ಲ.
ಜ್ಞಾನವೃದ್ದಿಗೆ ಕಾರಣವಾದ ಗ್ರಂಥಗಳನ್ನು ಓದದೆ ಕಲಿತವರ ಸಭೆಯಲ್ಲಿ ಮಾತನಾಡುವುದು, ಚದುರಂಗದ ಮನೆಯಿಲ್ಲದೆ ಪಗಡೆಯಾಡಿದಂತೆ.
ಕಲಿಯದವನು ಕಲಿತವರ ಸಭೆಯಲ್ಲಿ ಮಾತನಾಡಬಯಸುವುದು ಮೊಲೆಗಳೆರಡೂ ಇಲ್ಲದ ಹೆಣ್ಣು, ತನ್ನ ಹೆಣ್ತನದ ಬಯುಕೆಯನ್ನು ತೀರಿಸಿಕೊಳ್ಳಲು ವ್ಯಕ್ತ ಪಡಿಸಿದಂತೆ.
ಕಲಿತವರ ಮುಂದೆ ಮಾತನಾಡದೆ ಸುಮ್ಮನಿದ್ದರೆ ಕಲಿಯದವರೂ ಬಹಳ ಒಳ್ಳೆಯವರೇ ಎನಿಸಿಕೊಳ್ಳುತ್ತಾರೆ.
ಕಲಿಯದವನ ಅರಿವು ಬಹಳ ಉತ್ತಮವಾಗಿದ್ದರೂ ಜ್ಞಾನಿಗಳು (ಅದನ್ನು) ಒಪ್ಪಿಕೊಳ್ಳುವುದಿಲ್ಲ.
ಕಲಿಯದವನೊಬ್ಬನ ಯೋಗ್ಯತೆಯು, ಕಲಿತವರ ಸಭೆಯಲ್ಲಿ ಮಾತಾಡುವಾಗ ಬಾಡಿಹೋಗಿ ಕೆಡುತ್ತದೆ.
ಕಲಿಯದವರು ಉಸಿರೊಂದಿಗೆ ಬದುಕ್ಕಿದ್ದರೂ ಫಲ ಬಿಡದ ಬರಡು ನೆಲಕು ಸಮಾನರು.
ನಯವೂ, ಗಾಂಭೀರ್ಯವೂ, ಸೂಕ್ಷ್ಮವಾದ ಅರಿವೂ ಇಲ್ಲದವನ ಚೆಲುವು ಮತ್ತು ಒಳ್ಳೆಯತನಗಳು ಮಣ್ಣಿಂದ ಮಾಡಿ ಸುಂದರವಾಗಿ ಅಲಂಕರಿಸಿದ ಪ್ರತಿವ್ಕೆಯಂತೆ.
ಕಲಿತವರ ಬಡತನ ತರುವ ದುಃಖಕ್ಕಿಂತ ಕೀಳಾದುದು ಕಲಿಯದವರ ಶ್ರಿಮಂತಿಕೆಯು.
ಕಲಿಯದವರು ಮೇಲಾದ ವಂಶದಲ್ಲಿ ಹುಟ್ಟಿದವರಾದರೂ, ಕೀಳು ವಂಶದಲ್ಲಿ ಹುಟ್ಟಿದ ಕಲಿತವರ ಹಿರಿಮೆಗೆ ಸಮಾನರಲ್ಲ.
ಅರಿವು ಬೆಳೆಗುವ ಗ್ರಂಥಗಳನ್ನು ಓದಿಕೊಂಡವರ ಮುಂದೆ ಕಲಿಯದವರು ಮನುಷ್ಯರ ಮುಂದಿನ ಪ್ರಾಣಿಗಳಂತೆ.
ಕಿವಿಯಿಂದ ಕೇಳರಿಯುವ ಸಿರಿ ಸಿರಿಯೊಳಗೆ ಸಿರಿಯೆನಿಸುವುದು; ಆ ಸಿರಿಯು ಸಿರಿಗಳಲ್ಲೆಲ್ಲಾ ಶ್ರೇಷ್ಠವಾದುದು.
ಕಿವಿಗೆ ಆಹಾರ ಇಲ್ಲವೆಂದಾದ ಮೇಲೆ ಹೊಟ್ಟೆಗೂ ಸ್ವಲ್ಪವೇ ಆಹಾರ ಸಾಕು.
ಕಿವಿಗೆ ಆಹಾರವಾದ ಕೇಳುವ ಗುಣವನ್ನು ಹೊಂದಿರುವವರು, ನೆಲದಲ್ಲಿ (ಬಾಳಿದರೂ) ಹವಿಸ್ಸನ್ನು ಉಣ್ಣುವ ದೇವರಿಗೆ ಸಮಾನರು.
ಕಲಿಯದವನಾದರೂ ಕಲಿತವರಿಂದ ಕೇಳಿ ಅರಿಯಬೇಕು. ಅದು ಒಬ್ಬನಿಗೆ ಕಷ್ಟಕಾಲದಲ್ಲ ಊರುಗೋಲಾಗಿ ಆಧಾರವೆನಿಸುವುದು.
ಒಳ್ಳೆಯ ನಡೆಯುಳ್ಳ ಜಾಣರ ಸೊಲ್ಲುಗಳು, ಇಳಿಜಾರಾದ ಕುಸಿಯುವ ನೆಲದಲ್ಲಿ ಊರುಗೋಲಿನಂತೆ, ಬಾಳಿನಲ್ಲಿ ನೆರವಾಗುವುವು.
ಎಷ್ಟೇ ಕಿರಿದಾದರೂ ಒಳಿತನ್ನು ಕೇಳರಿಯುಬೇಕು; ಕೇಳಿದ ಪ್ರಮಾಣಕ್ಕನು ಗುಣವಾಗಿ ಅದು ತುಂಬಿದ ಹಿರಿಮೆಯನ್ನು ತರುವುದು.
(ಗ್ರಂಥಗಳನ್ನು ಓದಿ) ಸೂಕ್ಷ್ಮವಾಗಿ ಅರಿತು, ಬೇರೆಯವರಿಂದಲೂ ಕೇಳಿ ತಿಳಿದುಕೊಂಡವರು, ಒಂದು ವಿಷಯವನ್ನು ತಪ್ಪಾಗಿ ಗ್ರಹಿಸಿದ್ದರೂ, ಅದನ್ನು ವ್ಯಕ್ತಪಡಿಸುವಾಗ ದಡ್ಡತನವನ್ನು ತೋರುವುದಿಲ್ಲ.
ಕೇಳಿ, ಕೇಳಿ ಸಂಸ್ಕಾರಗೊಳ್ಳದ ಕಿವಿ, ಇದ್ದೂ ಕಿವುಡಾದಂತೆ.
ಸುಸಂಸ್ಕೃತ ವಿಚಾರಗಳನ್ನು ಕೇಳರಿಯದವರು, ವಿನಯಪರವಾದ ಮಾತುಗಳನ್ನಾಡುವುದು ಸಾಧ್ಯವಿಲ್ಲ.
ಕಿವಿಯಿಂದ ಕೇಳುವ ಸವಿಯಿಲ್ಲದೆ, ಬಾಯ ಸವಿ ಮಾತ್ರ ತಿಳಿದವರು ಸತ್ತರೇನು, ಬದುಕ್ಕಿದ್ದರೇನು?
ಅರಿವು ಎನ್ನುವುದು ಅಳಿವುಂಟಾಗದಂತೆ ರಕ್ಷಿಸುವ ಆಯುಧ; ಅಲ್ಲದೆ ಶತ್ರುಗಳಿಗೂ ಎದುರಿಸಲಾಗದ ಭದ್ರವಾದ ಕೋಟೆ ಎನಿಸುವುದು.
ಮನಸ್ಸನ್ನು ಹೋದೆಡೆಗೆಲ್ಲಾ ಹೋಗಲು ಬಿಡದೆ, ಕೆಟ್ಟ ವಿಚಾರಗಳಿಂದ ದೂರ ಮಾಡಿ, ಒಳ್ಳೆಯ ಮಾರ್ಗದಲ್ಲಿ ಒಯ್ಯುವುದೇ ಅರಿವು.
ಯಾವ ವಿಷಯವನ್ನೇ ಆಗಲಿ, ಯಾರಿಂದ ಕೇಳಿ ತಿಳಿದುಕೊಂಡರೂ, ಆ ವಿಷಯದ ಸತ್ಯವನ್ನು ಕಂಡುಕೊಳ್ಳುವುದೇ ಶುದ್ಧವಾದ ಅರಿವು.
ತಾನು ಒಂದು ವಿಷಯವನ್ನು ಹೇಳುವಾಗ, ಅದು ಜೆನ್ನಾಗಿ ಪ್ರತಿಫಲಿಸುವಂತೆ ಸರಳವಾಗಿ, ಮನಮುಟ್ಟುವಂತೆ ಹೇಳಿ, ಇತರರಿಂದ ತಿಳಿದ ವಿಷಯಗಳಲ್ಲಿರುವ ಸೂಕ್ಷ್ಮ ವಿಚಾರಗಳನ್ನು ಕಂಡುಕೊಳ್ಳುವುದೇ ಅರಿವು.
ಲೋಕದಲ್ಲಿ ಮಹನೀಯರಾದವರ ಸ್ನೇಹ ಮಾಡುವುದು, ಆ ಸ್ನೇಹವು ಕಮಲದ ಹೂವಿನಂತೆ ಒಮ್ಮೆ ಅರಳುವುದಾಗಲೀ, ಮತ್ತೊಮ್ಮೆ ಮುಚ್ಚಿಕೊಳ್ಳುವುದಾಗಲೀ ಇರದೆ, ಸದಾ ಒಂದೇ ಸಮನಾಗಿರುವಂತೆ ಮಾಡುವುದು ಅರಿವು.
ಲೋಕವು ಹೇಗೆ ನಡೆದುಕೊಳ್ಳುವುದೋ ಅದಕ್ಕೆ ಹೊಂದಿಕೊಂಡಂತೆ ತಾನೂ ಬಾಳುವುದೇ ಅರಿವು.
ಅರಿವುಳ್ಳವರು ಮುಂದೆ ಆಗುವುದನ್ನು ಅರಿಯಬಲ್ಲರು; ಅರಿವಿಲ್ಲದವರು ಅದನ್ನರಿಯಲು ಅಸಮರ್ಥರು.
ಅಂಜಬೇಕಾದ ವಿಷಯಗಳಲ್ಲಿ ಹೆದರದಿರುವುದು ಮೂರ್ಖತನವೆನ್ನಿಸುವುದು; ಅಂಜಬೇಕಾದ ವಿಷಯಗಳಲ್ಲಿ ಅಂಜಿ ನಡೆದುಕೊಳ್ಳುವುದೇ ಅರಿವುಳ್ಳವರ ಧರ್ಮ.
ಮುಂದೆ ಬರುವುದನ್ನು ಮೊದಲೇ ತಿಳಿದುಕೊಂಡು, ತಮ್ಮನ್ನು ಕಾದುಕೊಳ್ಳಬಲ್ಲ ಅರಿವುಳ್ಳವರಿಗೆ, ತತ್ತರಿಸುವಂತೆ ಬರುವ ಕಷ್ಟ ನೋವುಗಳೊಂದೂ ಇರುವುದಿಲ್ಲ.
ಅರಿವುಳ್ಲವರು (ದರಿದ್ರರಾಗಿದ್ದರೂ) ಎಲ್ಲವನ್ನೂ ಉಳ್ಳವರು; ಅರಿವಿಲ್ಲದವರು, ಎಲ್ಲವನ್ನು ಉಳ್ಳವರಾಗಿದ್ದರೂ ಏನೂ ಇಲ್ಲದ ದರಿದ್ರರೇ.
ಗರ್ವ, ಕೋಪ, ಕಾಮಗಳೆಂಬ (ದೋಷಗಳು) ಇಲ್ಲದವರ ಬಾಳಿನಲ್ಲಿ ಕಾಣುವ ಹಿರಿಮೆಯು ಮೇಲು ಮಟ್ಟದಾಗಿರುವುದು.
ಲೋಭ, ಗೌರವ ತಾರದ ಸ್ವಾಭಿಮಾನ, ಅರ್ಥವಿಲ್ಲದ ಸಂತೋಷ ಇವೆಲ್ಲವೂ ಅರಸನಲ್ಲಿರುವ ದೋಷಗಳೆನಿಸುವುವು.
ನಿಂದೆಗೆ ನಾಚುವವರು, ತೆನೆಯ ಕಾಳಿನಷ್ಟು ಅಲ್ಪವಾದ ಅಪರಾಧ ತಮ್ಮಿಂದ ನಡೆದರೂ, ಅದನ್ನು ಹನೆಯಷ್ಟು (ತಾಳೆಮರದಷ್ಟು) ದೊಡ್ಡದಾಗಿ ಭಾವಿಸುವರು.
ಅಪರಾಧ ಮಾಡದಿರುವುದನ್ನೇ ಧ್ಯೇಯವಾಗಿ ಕಾದುಕೊಳ್ಲಬೇಕು. ಏಕೆಂದರೆ ಅಪರಾಧವೇ ಅಳಿವನ್ನು ತರುವಂಥ ಹಗೆ.
ಅಪರಾಧವುಂಟಾಗುವ ಮುನ್ನವೇ ಬರದಂತೆ ಕಾದುಕೊಳ್ಲದಿರುವವನ ಬಾಳು; ಬೆಂಕಿಯ ಮುಂದಿರುವ ಹುಲ್ಲಿನ ಬಣವೆಯಂತೆ ನಾಶವಾಗುವುದು.
ಮುಂದಾಗಿ ತನ್ನ ದೋಷಗಳನ್ನು ನಿವಾರಿಸಿಕೊಂಡು, ಬೇರೆಯವರ ದೋಷಗಳನ್ನು ಸೂಕ್ಷ್ಮವಾಗಿ ಕಾಣಬಲ್ಲ ಅರಸನಿಗೆ ಬೇರೇನು ದೋಷಗಳು ಸಂಭವಿಸುವುವು?
ಮಾಡಬೇಕಾದ ಒಳ್ಳೆಯ ಕಾರ್ಯಗಳನ್ನು ಮಾಡದೆ, ಇರುವ ಲೋಲುಪನ ಸಿರಿಯು, ಸಿರಿಯಾದ ಚಲಾವಣೆಯಿಲ್ಲದೆ ನಾಶವಾಗುವುದು.
ಪರರಿಗೆ ಕೊಡದೆ ಬಲವಾಗಿ ಅಂಟಿಕೊಳ್ಲುವ ಆಸೆಬುರುಕತನವು, ಬೇರೆ ಅಪರಾಧಗಳೊಂದಿಗೆ ಎಣಿಸಲ್ಪಡುವುದೂ ಇಲ್ಲ; ಅಂದರೆ- ಇದೇ ಮಿಗಿಲಾದ ಅಪರಾಧ ಎನಿಸಿ ಕೊಳ್ಳುತ್ತದೆ.
ಯಾವ ಕಾಲದಲ್ಲಿಯೂ, ತನ್ನನ್ನು ಮೇಲಾಗಿ ಭಾವಿಸಿ ಹೊಗಳಿಕೊಳ್ಲಬಾರದು. ಒಳಿತು ಫಲಿಸದ ಕೆಲಸಗಳನ್ನು ಬಯಸಲೂ ಬಾರದು.
ಅರಸನಾದವನು, ತಾನು ಬಯಸಿದುದನ್ನು ಇತರರಿಗೆ ತಿಳಿಯದಂತೆ ಅನುಬೋಗಿಸಬಲ್ಲವನಾದರೆ, ಹಗೆಗಳು ತನ್ನನ್ನು ಪಂಚಿಸಲು ಹೂಡಿದ ಉಪಾಯಗಳೆಲ್ಲ ಫಲಿಸದೆ ಹೋಗುವುವು.
ಅರಸನಾದವನು ಧರ್ಮವನ್ನು ಅರಿತವನಾಗಿ, ಪಕ್ವವಾದ ಅರಿವುಳ್ಲವರ ಗೆಳೆತನವನ್ನು ವಿಚಾರಮಾಡಿ ಸಂಪಾದಿಸಿಕೊಳ್ಳಬೇಕು.
ಬಂದ ಸಂಕಟಗಳನ್ನು ಪರಿಹರಿಸಿಕೊಂಡು, ಅವು ಮತ್ತೆ ಬಾರದಂತೆ ಮುಂದಾಗಿ ತಮ್ಮನ್ನು ಕಾದುಕೊಳ್ಳುವ ಗುಣವುಳ್ಳ ಜನರನ್ನು ಅರಸನು, ಆರೈಸಿ ಗೆಳೆತನ ಮಾಡಬೇಕು.
ಬಲ್ಲವರಾದ ಹಿರಿಯರನ್ನು ತಮ್ಮವರನ್ನಾಗಿ ಮಾಡಿಕೊಳ್ಳುವುದು, (ಅರಸನಿಗೆ) ಅಸಾಧ್ಯವಾದ ಕಾರ್ಯಗಳಲ್ಲೆಲ್ಲ ಅತಿ ಕಠಿಣವಾದುದು.
ತಮಗಿಂತ ಅರಿವಿನಲ್ಲಿ ಹಿರಿಯರಾದವರನ್ನು ತಮ್ಮವರನ್ನಾಗಿ ನಡೆಸಿಕೊಳ್ಳುವುದು, ಕಠಿಣವಾದ ಕಾರ್ಯಗಳಲ್ಲೆಲ್ಲ ಮೇಲಾದ ಕಾರ್ಯವೆನಿಸುವುದು.
ಸೂಕ್ಷ್ಮ ಬುದ್ದಿಯುಳ್ಳವರನ್ನು ಲೋಕವು ಕಣ್ಣಾಗಿ ನಡೆಸಿಕೊಳ್ಳುವುದರಿಂದ, ಅಂಥವರನ್ನು ಅರಸನು, ಸೂಕ್ಷ್ಮವಾಗಿ ಗ್ರಹಿಸಿ, (ತನ್ನ ಮಂತ್ರಾಲೋಚನೆಯಲ್ಲಿ) ಸ್ವೀಕರಿಸಬೇಕು.
ತಕ್ಕವರಾದ ಹಿರಿಯರ, ಒಡನಾಟದಲ್ಲಿ ನಡೆದುಕೊಳ್ಳುವ ಅರಸನಿಗೆ ಅವನ ಹಗೆಗಳಿಂದ ಯಾವ ಕೇಡೂ ಉಂಟಾಗುವುದಿಲ್ಲ.
ಕಂಡಿತವಾದಿಗಳಾದ ಜ್ಞಾನಿಗಳ ಸ್ನೇಹವನ್ನು ಕೊಂಡು ಆಳುವ ಅರಸನನ್ನು ನಾಶಪಡಿಸುವ ಎದೆಗಾರಿಕೆ ಯಾರಿಗಿದೆ?
ಕಂಡಿತವಾದಿಗಳಾದ ಜ್ಞಾನಿಗಳ ಬೆಂಬಲವಿಲ್ಲದೆ, ಸ್ವೇಚ್ಛೆಯಾಗಿ ಆಳುವ ಅರಸನು, ನಾಶಪಡಿಸುವ ಹಗೆಗಳಿಲ್ಲದೆಯೂ, ಕೆಡುತ್ತಾನೆ.
ಬಂಡವಾಳವಿಲ್ಲದವರಿಗೆ ಲಾಭವೂ ಇಲ್ಲ; ಆಶ್ರಿತರಾದ ಜ್ಞಾನಿಗಳ ನೆರವಿಲ್ಲದರಸನಿಗೆ ನೆಲೆಯೂ ಇಲ್ಲ.
ಒಳ್ಳೆಯವರಾದ ಜ್ಞಾನಿಗಳ ಸಂಬಂಧವನ್ನು ಕಡಿದುಕೊಳ್ಳುವುದು, ಹಲವಾರು ಮುಂದಿಯ ಹಗೆಯನ್ನು ಕೊಳ್ಲುವುದಕ್ಕಿಂತ ಹತ್ತುಪಾಲು ಕೆಟ್ಟುದು.
ನೀಚರ ಸಹವಾಸಕ್ಕೆ ಅಂಜುವುದು ದೊಡ್ಡವರ ಗುಣ; ಅಲ್ಪರಾದವರು ಮಾತ್ರ ನೀಚರ ಒಡನಾಟದಲ್ಲಿ ವಿಚಾರಮಾಡದೆ ತಮ್ಮನ್ನು ಒಪ್ಪಿಸಿಕೊಂಡು ಬಿಡುವರು.
ನೆಲದ ಗುಣದಿಂದ (ಹರಿಯುವ) ನೀರಿನ ಗುಣವೂ ಬದಲಾಗುತ್ತದೆ; ಅದೇ ರೀತಿ ಮನುಷ್ಯನ ತಿಳಿವಳಿಕೆ ಕೂಡ ಒಡನಾಟದ ಗುಣವನ್ನು ಹೊಂದಿಕೊಂಡಿರುತ್ತದೆ.
ಮನುಷ್ಯರಿಗೆ ಸ್ವಾಭಾವಿಕವಾದ ತಿಳಿವಳಿಕೆ ಮನಸ್ಸಿನಿಂದ ಉಂಟಾಗುತ್ತದೆ; ಹಾಗೆಯೇ ‘ಅವನು ಇಂಥವನು’ ಎಂಬ ಮಾತು ಒಡನಾಟದಿಂದ ಕೇಳಿಬರುತ್ತದೆ.
ಮನುಷ್ಯನ ತಿಳಿವಳಿಕೆಯು ಅವನ ಮನಸ್ಸಿನ ಶಿಶುವೆಂದು ತೋರಿದರೂ ಅದು ವ್ಯಕ್ತವಾಗುವುದು ಅವನ ಒಡನಾಟದಿಂದಲೇ.
ಮನ:ಶುದ್ದಿ, ನಡೆವಳಿಕೆಯ ಶುದ್ದಿ ಇವೆರಡೂ ಒಡನಾಟದ ಶುದ್ದಿಯನ್ನು ಹೊಂದಿಕೊಂಡು ಬರುತ್ತವೆ.
ಮನಶುದ್ದಿಯುಳ್ಳವರಿಗೆ ಕುಲಸಂಪನ್ನತೆಯೂ ಒಳ್ಳೆಯದಾಗಿಯೇ ಬರುವುದು; ಒಡನಾಟದ ಶುದ್ದಿಯುಳ್ಳವರಿಗೆ ಒಳ್ಳೆಯದಾಗದ ಕಾರ್ಯವೇ ಇಲ್ಲ.
ಮನಃಶುದ್ದಿಯು ಬಾಳಿಗೆ ಸಿರಿಯಾಗಿ ನಿಲ್ಲುತ್ತದೆ; ಒಡನಾಟದ ಶುದ್ದಿಯು ಎಲ್ಲಾ ತರದ ಕೀರ್ತಿಗೂ ಕಾರಣವಾಗುತ್ತದೆ.
ಸ್ವಾಭಾವಿಕವಾದ ಒಳ್ಲೆಯತನವಿದ್ದರೂ ಸಂಪನ್ನರಾದವರಿಗೆ ಒಳ್ಳೆಯ ಒಡನಾಟವು ಅದನ್ನು ಬಲಪಡಿಸುವ ಶಕ್ತಿಯಾಗಿ ನಿಲ್ಲುತ್ತದೆ.
ಒಳ್ಳೆಯ ಮನಸ್ಸಿನಿಂದ ಮರುಭವದಲ್ಲಿ ಸುಖ ಪ್ರಾಪ್ತಿಯಾಗುವುದು; ಒಳ್ಳೆಯ ಒಡನಾಟದಿಂದ ಅದು ಮತ್ತಷ್ಟು ಬಲಗೊಳ್ಳುವುದು.
ಒಳ್ಳೆಯ ಒಡನಾಟಕ್ಕಿಂತ ಮಿಗಿಲಾದ ರಕ್ಷೆಯೂ ಇಲ್ಲ; ಕೆಟ್ಟ ಒಡನಾಟಕ್ಕಿಂತ ದುಃಖಕ್ಕೀಡು ಮಾಡುವ ಹಗೆಯೂ ಇಲ್ಲ.
ಒಂದು ಕೆಲಸಕ್ಕೆ ತೊಡಗುವ ಮುನ್ನ, ಆ ಕೆಲಸದಿಂದ ಉಂಟಾಗುವ ವ್ಯಯವನ್ನೂ ಬರುವ ಆದಾಯವನ್ನೂ ತೂಗಿ ನೋಡಿ, ಬರಲಿರುವ ಲಾಭವನ್ನು ಪರಾಮರ್ಶಿಸಿ, ತೊಡಗಬೇಕು.
ಒಳ್ಳೆಯ ಒಡನಾಟವನ್ನು ಆಯ್ದುಕೊಂಡು, ಮಾಡುವ ಕೆಲಸದ ಬಗ್ಗೆ ವಿವರವಾಗಿ ಆಲೋಚಿಸಿ ತೊಡಗುವವರಿಗೆ ಕಷ್ಟಸಾಧ್ಯವಾದ ಸಂಗತಿ ಎಂಬುದೊಂದೂ ಇಲ್ಲ.
ತಿಳಿದವರು ಮುಂದೆ ಬರಲಿರುವ ಸಿರಿಯನ್ನು ಬಯಸಿ, ಕೈಯಲ್ಲಿರುವ ಬಂಡವಾಳವನ್ನೇ ಹಾಳುಮಾಡಿಕೊಳ್ಳುವ ಕೆಲಸವನ್ನು (ಎಂದಿಗೂ) ಕೈಗೊಳ್ಳುವುದಿಲ್ಲ.
ಅಪನಿಂದೆಗೆ ಗುರಿಯಾಗುವಂಥ ಕೆಲಸಗಳಿಗೆ ಅಂಜುವವರು, ಆಲೋಚನೆ ಮಾಡದೆ ತಿಳಿವಿಲ್ಲದ ಕಾರ್ಯಗಳಲ್ಲಿ ತೊಡಗುವುದಿಲ್ಲ.
(ಅರಸನಾದವನು) ತಾನು ಕೈಗೊಂಡ ಕೆಲಸದ (ಹೋರಾಟದ) ಉಪಾಯಗಳನ್ನು ಚೆನ್ನಾಗಿ ವಿಚಾರಮಾಡದೆ ತೊಡುಗವುದರಿಂದ, ಹಗೆಗಳ ಪ್ರಾಬಲ್ಯವನ್ನು ನೀರೆರೆದು ಪೋಷಿಸಿದ ಹಾಗಾಗುವುದು.
(ಅರಸನಾದವನು) ಮಾಡಲು ಯೋಗ್ಯವಲ್ಲದನ್ನು ಮಾಡಿದರೆ, ಕೆಡುವನು; ಮಾಡಲು ಯೋಗ್ಯವಾದ ಕೆಲಸಗಳನ್ನು ಮಾಡದೆಯೇ ಬಿಟ್ಟರೂ ಕೆಡುವನು.
ಆಲೋಚನೆ ಮಾಡಿದ ಮೇಲೇ ಕೆಲಸವನ್ನು ಕೈಗೊಳ್ಳುವ ನಿರ್ಧಾರಕ್ಕೆ ಬರಬೇಕು. ಮೊದಲೇ ಕೆಲಸ ಮಾಡಲು ನಿರ್ಧರಿಸಿ ಆಮೇಲೆ ಆ ಬಗ್ಗೆ ‘ಆಲೋಚನೆ ಮಾಡೋಣ’ ಎನ್ನುವುದು ದೋಷವೆನಿಸುವುದು.
ಸರಿಯಾದ ಮಾರ್ಗದಲ್ಲಿ ನಡೆಸದ ಪ್ರಯತ್ನವು ಹಲವರು ಬೆಂಬಲವಾಗಿನಿಂತು, ಅದನ್ನು ಪೋಷಿಸಿದರೂ ಫಲಸುವುದಿಲ್ಲ.
ಅವರವರ ಸ್ವಭಾವಗಳನ್ನು ಅರಿತು ಅವರವರಿಗೆ ಒಪ್ಪಿಗೆಯಾಗುವಂತೆ ಕೆಲಸ ಮಾಡದಿದ್ದರೆ, ಒಳ್ಳೆಯ ಕಾರ್ಯಗಳಲ್ಲಿಯೂ ತಪ್ಪು ಸಂಭವಿಸುವುದುಂಟು.
ಲೋಕವು ತನ್ನೊಂದಿಗೆ ಹೊಂದದುದನ್ನು ಸ್ವೀಕರಿಸುವುದಿಲ್ಲ, ಅದರಿಂದ ನಿಂದೆಯನ್ನು ತಾರದ ಕೆಲಸವನ್ನು ಆಲೋಚಿಸಿ ಮಾಡಬೇಕು.
ಅರಸನು ತಾನು ಕೈಗೊಂಡ ಕಾರ್ಯದ ಬಲ, ತನ್ನ ಬಲ, ತನ್ನ ಹಗೆಯ ಬಲ ಮತ್ತು ಇಬ್ಬಣ್ಣದ ಬೆಂಬಲದ ಬಲ- ಇವೆಲ್ಲವನ್ನೂ ತೂಗಿ ನೋಡಿ ನಂತರ ಕಾರ್ಯಕ್ಕೆ, ಕೈಹಾಕಬೇಕು.
(ಎದುರಾಳಿಗಳನ್ನು ಎದುರಿಸುವ ಮುನ್ನ) ತನ್ನ ಬಲದ ಸಾಮರ್ಥ್ಯವನ್ನು ತಿಳಿದು, ಅದರಲ್ಲಿ ದೃಡವಾಗಿ ಮನಸ್ಸಿಟ್ಟು ನಡೆಯುವವರಿಗೆ ಅಸಾಧ್ಯವಾದುದೇನೂ ಇಲ್ಲ.
ತಮ್ಮಲ್ಲಿರುವ ಬಲದ ಮಿತಿಯನ್ನು ಅರಿಯದವರು, ಉತ್ಸಾಹದಿಂದ (ಕಾಳಗದಲ್ಲಿ) ಮುನ್ನುಗ್ಗಿ ನಡುವಿನಲ್ಲಿಯೇ ಮುರಿದು ಬಿದ್ದವರು ಹಲವರು.
ನೆರೆಯವರೊಂದಿಗೆ ಹೊಂದಿಕೊಂಡು ಬಾಳದೆ, ತನ್ನ ಬಲದ ಮಿತಿಯನ್ನು ತಿಳಿಯದೆ, ತನ್ನ ಹಿರಿಮೆಯನ್ನು ಹೊಗಳಿಕೊಳ್ಳುವ ಅರಸನು ಕೊಡಲೇ ಕೆಡುತ್ತಾನೆ.
ನವಿಲುಗರಿ ತುಂಬಿದ ಗಾಡಿಯೇ ಆದರೂ, ಅದನ್ನು ಅಳತೆ ಮೀರಿ ತುಂಬಿದರೆ, ಗಾಡಿಯ ಅಚ್ಚು ಮುರಿದು ಹೋಗುತ್ತದೆ.
ತುದಿಕೊಂಬೆಯನ್ನು ಏರಿದವರು, ಅದಕ್ಕೂ ಮುಂದೆ ಏರಿಹೋಗಲು ಸಾಹಸ ಮಾಡಿದರೆ, ಪ್ರಾಣಕ್ಕೆ ಸಂಚಕಾರವುಂಟಾಗುತ್ತದೆ.
ಕೊಡುವ ಸಾಮರ್ಥ್ಯವನ್ನರಿತು (ಇತರರಿಗೆ) ದಾನಮಾಡಬೇಕು; ಅದು ಸಿರಿಯನ್ನು ಕಾದುಕೊಂಡು ಬಾಳುವ ಮಾರ್ಗವೆನಿಸುವುದು.
ಬರುವ ಆದಾಯವು ಅಲ್ಪವಾಗಿದ್ದರೂ, ಮಾಡುವ ವ್ಯಯವು ಮಿತಿ ಮೀರದೆ ಇದ್ದರೆ, ಅದರಿಂದ ಕೇಡಿಲ್ಲ.
ಮಿತಿಯರಿತು ಬಾಳದಿರುವವನ ಸೊತ್ತು, ಇರುವಂತೆ ತೋರಿ, ಕ್ರಮೇಣ ಇಲ್ಲವಾಗಿ ಕೆಡುತ್ತದೆ.
ತನ್ನಲ್ಲಿರುವ ಸಿರಿಯ ಮಿತಿಯನ್ನು ಲೆಕ್ಕಿಸದೆ, ಊದಾರಗುಣದಿಂದ ವ್ಯಯಮಾಡಿದರೆ, ಆ ಸಿರಿಯು, ಅತಿ ವೇಗದಲ್ಲಿ ಕೆಡುತ್ತದೆ.
ಕಾಗೆಯು (ತನಗಿಂತ ಬಲಶಾಲಿಯಾದ) ಗೂಬೆಯನ್ನು ಹಗಲು ವೇಳೆ ಗೆದ್ದುಬಿಡುತ್ತದೆ. ಅದೇ ರೀತಿ ತಮ್ಮ ಶತ್ರುಗಳನ್ನು ಗೆಲ್ಲಬಯಸುವ ಅರಸರು ಸೂಕ್ತ ವೇಳೆಗಾಗಿ ಕಾಯಬೇಕು.
ಸೂಕ್ತ ಸಮಯವರಿತು ಕಾರ್ಯಸಾಧಿಸಲು ಯತ್ನಿಸಬೇಕು; ಅದೇ ಯಶಸ್ಸು ಜಾರಿಕೊಳ್ಳದಂತೆ ಬಂಧಿಸುವ ಪಾಶವಾಗುವುದು.
ಸೂಕ್ತ ಕಾಲವನ್ನು ಅರಿತು, ತಕ್ಕ ಸಾಧನಗಳೊಂದಿಗೆ, ಕೈಗೊಂಡ ಕಾರ್ಯವನ್ನು ನಿರ್ವಹಿಸಿದಲ್ಲಿ, ಅರಸನಾದವನಿಗೆ ಕಠಿಣವಾದ ಕಾರ್ಯವೆಂಬುದು ಉಂಟೆ?
ತಕ್ಕ ಕಾಲವನ್ನು ತಿಳಿದು, ತಕ್ಕ ಸ್ಥಳದಲ್ಲಿ ಕಾರ್ಯವನ್ನು ನಡೆಸಿದರೆ, ಲೋಕವೇ ತನ್ನದಾಗಬೇಕೆಂದು ಬಯಸಿದರೂ ಅದು ಕೈಗೊಡುತ್ತದೆ.
ಲೋಕವನ್ನೇ ಜಯಿಸಲು ಇಚ್ಚಿಸುವವರು, ತಮ್ಮ ಮನಸ್ಸನ್ನು ಚಂಚಲ ಗೊಳಿಸದೆ, ತಕ್ಕ ವೇಳೆಯನ್ನು ನಿರೀಕ್ಷಿಸುತ್ತ ಕಾಯುವರು.
ಹೋರಾಡಲು ಸಿದ್ದವಾಗ ತಗರು, ತಾಗುವುದಕ್ಕೆ ಮುಂಚೆ, ಹಿಂದ ಸರಿಯುವಂತೆ, ಶಕ್ತಿಯುಳ್ಳವನು ಕಾಲವನ್ನು ನಿರೀಕ್ಷಿಸಿ ಅಡಗಿ ಕಾಯುತ್ತಾನೆ.
ಸೂಕ್ಷ್ಮವಾದ ಅರಿವುಳ್ಳವರು, (ಹಗೆಗಳು ಮಾಡಿದ ಕೆಡುಕಿಗೆ) ಒಡನೆಯೇ ಬಹಿರಂಗವಾಗಿ ಕೋಪಿಸಿಕೊಳ್ಳದೆ, ತಕ್ಕ ಕಾಲವನ್ನು ಎದುರು ನೋಡುತ್ತ ಮನಸ್ಸಿನಲ್ಲೇ ಅದನ್ನು ಅಡಗಿಸಿಕೊಳ್ಳುವರು.
ಹಗೆಗಳನ್ನು ಕಂಡಾಗ, ತಾಳಿಕೊಂಡು ನಡೆಯಬೇಕು. ಆ ಹಗೆಗಳ ಅಂತ್ಯಕಾಲ ಬಂದಾಗ ಅವರ ತಲೆ (ತಾನಾಗಿಯೇ) ಕೆಳಬಾಗುತ್ತದೆ.
ದುರ್ಲಭವಾದ ಕಾಲವು ಒದಗಿಬಂದಾಗ, ಅದರ ಲಾಭವನ್ನು ಪಡೆದುಕೊಂಡು ಮಾಡಲು ಅಸಾಧ್ಯವಾದ ಕಾರ್ಯಗಳನ್ನೆಲ್ಲ ಮಾಡಿ ಮುಗಿಸಬೇಕು.
ತಾಳಿಕೊಂಡಿರಬೇಕಾದ ಸಮಯದಲ್ಲಿ ಕೊಕ್ಕರೆಯಂತೆ ಸಮಾಧಾನಿಯಾಗಿರ ಬೇಕು; ತನಗೆ ಅನುಕೂಲವಾದ ಸಮಯ ಬಂದಾಗ, ಅದೇ ಕೊಕ್ಕರೆಯಂತೆ ಕುಕ್ಕಬೇಕು. (ಎದುರಿಸಬೇಕು)
(ಶತ್ರುವನ್ನು) ಮುತ್ತುವುದಕ್ಕೆ ತಕ್ಕ ಸ್ಥಳವನ್ನು ಕಂಡುಕೊಳ್ಳದೆ (ಅರಸನಾದವನು) ಅವನಿಗೆ ಎದುರಾಗಿ ಯಾವ ಕಾರ್ಯದಲ್ಲೂ ತೊಡಗಬಾರದು; ಹಗೆಯನ್ನು ನಿಂದಿಸಲೂ ಬಾರದು.
ಯುದ್ದಕುಶಲಿಗಳಾದ ಶಕ್ತಿವಂತರಿಗೂ, ಭದ್ರವಾದ ಕೋಟೆಯ ರಕ್ಷಣೆಯಿದ್ದರೆ, ಅದರಿಂದುಂಟಾಗುವ ಲಾಭಗಳು ಹಲವು.
ತಕ್ಕ ಸ್ಥಳವನ್ನು ನೋಡಿ, ತಮ್ಮನ್ನು ಕಾದುಕೊಂಡು ಹಗೆಗಳನ್ನು ಎದುರಿಸಿ ಹೋರಾಡಿದರೆ, ಶಕ್ತಿ ಇಲ್ಲದವರೂ ಶಕ್ತಿವಂತರಾಗಿ ಗೆಲ್ಲುವರು.
ತಕ್ಕ ಸ್ಥಳವನ್ನು ಅರಿತು (ಹಗೆಗಳನ್ನು) ಸಮೀಪಿಸಿ ಹೋರಾಡುವವರಾದರೆ, ಅವರನ್ನು ಗೆಲ್ಲಲು ಬಗೆದು ಬಂದ ಹಗೆಗಳೂ ತಮ್ಮ ಆಲೋಚನೆಯನ್ನು ಕೈಬಿಡುವರು.
ಆಳವಾದ ಹೊನಲಿನಲ್ಲಿ (ನೀರಲ್ಲಿ) ಇತರ ಪ್ರಾಣಿಗಳನ್ನು ಗೆಲ್ಲುವ ಮೊಸಳಿ ಆ ಹೊನಲಿನಿಂದ ತಪ್ಪಿ ಹೊರಬಂದರೆ, ಅದನ್ನು ಇತರ ಪ್ರಾಣಿಗಳು ಗೆದ್ದುಬಿಡುತ್ತವೆ.
ಬಲವಾದ ಚಕ್ರಗಳುಳ್ಳ ದೊಡ್ಡ ತೇರು ಕಡಲಿನಲ್ಲಿ ಓಡಲು ಸಾಧ್ಯವಿಲ್ಲ; ಕಡಲಿನಲ್ಲಿ ಓಡುವ ನಾವೆಗಳೂ ನೆಲದಲ್ಲಿ ಓಡಲು ಸಾಧ್ಯವಿಲ್ಲ.
ದೋಷವಿಲ್ಲದೆ, ಆಲೋಚಿಸಿ, ತಕ್ಕ ಸ್ಥಳದಲ್ಲಿ ಮಾಡಬೇಕಾದ ಕೆಲಸವನ್ನು ಕೈಕೊಂಡರೆ. ಧೈರ್ಯವೊಂದಲ್ಲದೆ ಬೇರೆ ಸಾಧನದ ಅಗತ್ಯವಿಲ್ಲ.
ಕಿರಿದಾದ ಪಡೆ ನಿಲ್ಲಬೇಕಾದ ಎಡೆಯಲ್ಲಿ ಹಿರಿದಾದ ಪಡೆ ಆಕ್ರಮಿಸಿದರೆ, ಆ ಪಡೆಯ ಬಲ ನಾಶವಾಗುತ್ತದೆ.
ಹಗೆಗಳಿಗೆ ಕೋಟೆ ಮೊದಲಾದ ರಕ್ಷಣೆ, ಸೇನಾಬಲಗಳು ಇಲ್ಲವಾದರೂ ಅವರ ಸ್ವಂತ ನೆಲದಲ್ಲಿ ಹೊಕ್ಕು ಅವರೊಂದಿಗೆ ಹೋರಾಡುವುದು ಅಸಾಧ್ಯ.
ವೀರಯೋಧನಂತಿರುವ ಧೈರ್ಯಶಾಲಿಯಾದ ಆನೆ ಕೂಡ ಕಾಲು ಹುಗಿಯುವ ಕೆಸರು ಮಣ್ಣಿನಲ್ಲಿ ಸಿಕ್ಕಿಬಿದ್ದಾಗ, ನರಿಗಳು ಅದನ್ನು ಕೊಂದುಬಿಡುತ್ತದೆ.
(ಒಬ್ಬನ) ಧಾರ್ಮಿಕ ನಡತೆ, ಧನಾಸಕ್ತಿ, ಕಾಮಾಸಕ್ತಿ, ಜೀವಭಯ- ಈ ನಾಲ್ಕು ಗುಣಗಳನ್ನು ಶೋಧಿಸಿದ ತರುವಾಯವೇ ಅವನನ್ನು (ಮಂತ್ರಿ) ಕೆಲಸಕ್ಕೆ ಅರ್ಹನೆಂದು ತೀರ್ಮಾನಿಸಬೇಕು.
ಉತ್ತಮ ಕುಲದಲ್ಲಿ ಹುಟ್ಟಿ, ದೋಷಗಳನ್ನು ನೀಗಿಕೊಂಡು ನಿಂದಾತ್ಮಕ ಕಾರ್ಯಗಳನ್ನು ಮಾಡಲಂಜುವ, ಲಜ್ಜೆಯುಳ್ಳವನನ್ನೇ ನಂಬಿ (ಒಂದು ಕೆಲಸಕ್ಕೆ) ತೀರ್ಮಾನಿಸಬೇಕು.
ದುರ್ಲಭ ಗ್ರಂಥಗಳನ್ನು ಓದಿ ತಿಳಿದು, ದೋಷಗಳನ್ನು ನಿವಾರಿಸಿಕೊಂಡವರನ್ನು ಪರೀಕ್ಷಿಸುವಾಗಲೂ (ಅವರಲ್ಲಿ) ಅಜ್ಞಾನವಿಲ್ಲದಿರುವುದು ಅಪರೂಪವೆಂಬುದು ಕಂಡು ಬರುವುದು.
(ಅರಸನಾದವನು) (ಒಬ್ಬನ) ಗುಣ, ದೋಷಗಳನ್ನು ಪರೀಕ್ಷಿಸಿ, ಅವನಲ್ಲಿ ಉಳಿದ ಗುಣಗಳೇನೆಂಬುದು ವಿಚಾರಿಸಿ, ಅವುಗಳಿಂದ ಅರ್ಹತೆಯನ್ನು ಕುರಿತು ತೀರ್ಮಾನಕ್ಕೆ ಬರಬೇಕು.
ಒಬ್ಬನಲ್ಲಿರುವ ಹಿರಿಯ ಗುಣಗಳಿಗೂ, ಅಲ್ಪ ಗುಣಗಳಿಗೂ, ಅವನಿಗೆ ದತ್ತವಾಗಿ ಬಂದ ಕರ್ಮವೇ ಒರೆಗಲ್ಲಾಗುವುದು.
ತಮ್ಮವರು ಎಂಬ ಸಂಬಂಧವೇ ಇಲ್ಲದಿರುವವರನ್ನು ಅರಸನಾದನು ನಂಬದೆ ದೂರವಿರಿಸಬೇಕು; ಏಕೆಂದರೆ ಅಂಥವರು ಯಾರ ಅಂಕೆಯೂ ಇಲ್ಲದೆ ತಪ್ಪು ಮಾಡಲೂ ನಾಚುವುದಿಲ್ಲ.
ಪ್ರೀತಿ, ಪಕ್ಷಪಾತಗಳಿಂದ ಏನೂ ಅರಿಯದ ಮೂರ್ಖರನ್ನು ನಂಬಿ ಒಂದು ಕೆಲಸಕ್ಕೆ ಅರಿಸುವುದು, ಮೂರ್ಖತನದ ಪರಮಾವಧಿಯೆನಿಸುತ್ತದೆ.
ಬೇರೊಬ್ಬನ ಬಗ್ಗೆ ಒಂದೂ ತಿಳಿಯದೆ ಒಂದು ಕೆಲಸಕ್ಕೆ ನಿರ್ಧರಿಸುವ ಅರಸನು, (ಅವನಿಗೆ ಮಾತ್ರವಲ್ಲದೆ) ಅವನ ಸಂತತಿಗೂ ತೀರದ ದುಃಖವನ್ನು ತರುತ್ತಾನೆ.
ಅರಸನಾದವನು ಯಾರನ್ನೂ ಹಿನ್ನೆಲೆ ಅರಿಯದೆ ನಂಬಕೂಡದು. ಚೆನ್ನಾಗಿ ಪರಿಶೀಲಿಸಿದ ಮೇಲೆ ಅವರಲ್ಲಿ ನಂಬತಕ್ಕ ಗುಣಗಳನ್ನು ಕಂಡು ನಂಬಬೇಕು.
(ಒಬ್ಬನನ್ನು) ತಿಳಿಯದೆ ನಂಬುವುದೂ, ನಂಬಿದ ಮೇಲೆ ಅವನನ್ನು ಸಂದೇಹಿಸುವುದೂ ಅರಸನಿಗೆ ತೀರದ ದುಃಖವನ್ನು ಉಂಟುಮಾಡುತ್ತವೆ.
ಒಳ್ಳೆಯದನ್ನೂ ಕೆಟ್ಟದನ್ನೂ ವಿಚಾರಮಾಡಿ ಒಳ್ಳೆಯ ವಿಚಾರಗಳಲ್ಲಿ ಮಾತ್ರ ಅಭಿಲಾಷೆ ತೋರುವವನನ್ನು (ಅರಸನ ಕಾರ್ಯಕ್ಕೆ ಸಹಾಯಕನಾಗಿ) ನೇಮಿಸಬೇಕು.
ಐಶ್ವರ್ಯ (ಹಣ) ಬರುವ ಮಾರ್ಗವನ್ನು ಹೆಚ್ಚಿಸಿ, ಅದನ್ನು ಅಭಿವೃದ್ದಿಪಡಿಸಿ, ಬರುವ ಕಂಟಕಗಳನ್ನು ಪರಿಶೀಲಿಸಿ, ನೀಗಿಸಬಲ್ಲವನೆ ಕಾರ್ಯಮುಖನಾಗಬೇಕು.
ಪ್ರೀತಿ, ಅರಿವು, ದೃಢ ನಿರ್ಧಾರ, ಆಶೆ ಇಲ್ಲದಿರುವಿಕೆ- ಈ ನಾಲ್ಕು ಒಳ್ಳೆಯ ಗುಣಗಳು ಇರುವವನಲ್ಲೇ (ಅರಸನಾದವನು) ನಂಬಿಕೆ ಇರಿಸಬೇಕು.
ಹಲವು ಬಗೆಯಿಂದ ಪರೀಕ್ಷಿಸಿ ನಂಬಿ, ಉದ್ಯೋಗಕ್ಕೆ ತೊಡಗಿಸಿದ ಮೇಲೂ ಕಾರ್ಯದ ಹಾದಿ ತಪ್ಪಿಸುವ ಜನರು ಈ ಲೋಕದಲ್ಲಿ ಹಲವರಿದ್ದಾರೆ.
ಕೆಲಸವನ್ನು ಚೆನ್ನಾಗಿ ತಿಳಿದು ಸಮರ್ಥವಾಗಿ ಎದುರಿಸಬಲ್ಲವನಿಗಲ್ಲದೆ, ತನಗೆ ಬೇಕಾದವನೆಂದು ಒಬ್ಬನನ್ನು ಆ ಕೆಲಸಕ್ಕೆ ನೇಮಿಸಬಾರದು.
ಕಾರ್ಯ ಮಾಡುವವನ (ಸ್ವಭಾವ) ವನ್ನು ಪರೀಕ್ಷಿಸಿ, ಕಾರ್ಯದ ಸ್ವಭಾವವನ್ನು ಪರೀಕ್ಷಿಸಿ, ತಕ್ಕ ಕಾಲವನ್ನು ತಿಳಿದುಕೊಂಡು ಕಾರ್ಯೋನ್ಮುಖವಾಗಬೇಕು.
ಈ ಕಾರ್ಯವನ್ನು ಈ ಸಾಧನದಿಂದ ಇಂಥವನು ಮುಗಿಸಬಲ್ಲನು ಎಂಬುದನ್ನು ಪರಿಶೀಲಿಸಿದ ಮೇಲೆ ಆ ಕೆಲಸವನ್ನು ಅವನಿಗೆ ಒಪ್ಪಿಸಬೇಕು.
(ಒಬ್ಬನನ್ನು) ಒಂದು ಕೆಲಸವನ್ನು ಮಾಡಲು ಯೋಗ್ಯನೆಂದು ಪರಿಶೀಲಿಸಿದ ಮೇಲೆ ಅವನನ್ನು ಅದಕ್ಕೆ ಅರ್ಹನಾಗುವಂತೆ ಬೆಳೆಯಲು ಬಿಡಬೇಕು.
ಕೈಕೊಂಡ ಕೆಲಸದಲ್ಲಿ ಯಾವಾಗಲೂ ಪ್ರಯತ್ನ ಪಡುವವನ ಸ್ನೇಹವನ್ನು ತಪ್ಪಾಗಿ ತಿಳಿಯುವ ಅರಸನನ್ನು ಸಿರಿಬಿಟ್ಟು ತೊಲಗುತ್ತದೆ.
ಕೆಲಸ ಮಾಡುವವನು ನೇರವಾಗಿರುವವರೆಗೆ ಲೋಕವೂ ನೇರವಾಗಿರುತ್ತದೆ; ಅರಸನಾದವನು ಯಾವಾಗಲೂ ತನ್ನ ಸೇವಕರ ನಡವಳಿಕೆಯನ್ನು ಪರೀಕ್ಷಿಸಬೇಕು.
ಒಬ್ಬನ ಸಿರಿ ಅಳಿದ ಮೇಲೂ, ಅವನ ಹಳೆಯ ಸಂಬಂಧವನ್ನು ನೆನೆಸಿ ಕೊಂಡಾಡುವುದು ಬಂಧುಗಳಲ್ಲಿ ಇರುತ್ತದೆ.
ಪ್ರೀತಿ ಅಳಿಯದ ಸಂಬಂಧವು (ಒಬ್ಬನಿಗೆ) ದೊರೆತರೆ, ಅದೇ ಅವನಿಗೆ ಮೇಲ್ಮೆಯುಳ್ಳ ಭಾಗ್ಯವನ್ನು ತರುತ್ತದೆ.
(ಸಂಬಂಧಿಗಳೊಡನೆ) ನೆಕಟತೆಯನ್ನು ಹೊಂದದಿರುವವನ ಬಾಳ್ವೆ ಕರೆಯಿಲ್ಲದ ಕೊಳದಲ್ಲಿ ನೀರು ತುಂಬಿ ಹರಿದಂತೆ.
ಸಿರಿವಂತನಾಗಿ ತಾನು ಪಡೆದ ಫಲವೆಂದರೆ, ಸಂಬಂಧಿಗಳಿಂದ ಸುತ್ತುವರಿದು ಬಾಳುವುದು.
ಕೊಡುಗೈ ದಾನ, ಸವಿ ಮಾತು- ಈ ಗುಣಗಳಿದ್ದರೆ, ಸಂಬಂಧಿಗಳು ಹೆಚ್ಚು ಹೆಚ್ಚಾಗಿ ಬಂದು ಸುತ್ತುವರಿಯುವರು.
ಹೇರಳವಾಗಿ ಕೊಡುವವನೂ, ಕೋಪವನ್ನು ತೋರದವನೂ ಆಗಿದ್ದರೆ, ಅವನಂತೆ ಸಂಬಂಧಿಗಳ ಕೂಡ ಬಾಳುವವರು ಲೋಕದಲ್ಲಿ ಇಲ್ಲ.
ಕಾಗೆಯು ಬಚ್ಚಿಟ್ಟುಕೊಳ್ಳದೆ ತನ್ನ ಬಳಗವನ್ನೆಲ್ಲ ಕರೆದು ಉಣ್ಣುತ್ತದೆ, ಐಶ್ವರ್ಯವೂ ಅಂಥ ಸ್ವಭಾವವಿರುವವರಲ್ಲೇ ಇರುತ್ತದೆ.
ಅರಸನಾದವನು, ಎಲ್ಲರನ್ನೂ ಸಾಧಾರಣ ದೃಷ್ಟಿಯಲ್ಲಿ ನೋಡದೆ, ಅವರವರ ಅರ್ಹತೆಗನುಗುಣವಾಗಿ ಆದರಿಸಿದರೆ, ಅದನ್ನು ನೋಡಿ ಮೆಚ್ಚಿ ಹಲವರು ಅವನ ಸುತ್ತ ಸೇರುತ್ತಾರೆ.
ಮೊದಲು ಸಮೀಪವರ್ತಿಗಳಾಗಿದ್ದು, ಕಾರಣಾಂತರದಿಂದ ಬೇರೆಯಾದವರು ಆ ಅತೃಪ್ತಿಯ ಕಾರಣವಿಲ್ಲವಾದಾಗ ಮತ್ತೆ ಬಂದು ಸೇರುವರು.
ತನ್ನೋಡನಿದ್ದು ಬೇರೆಯಾಗಿ, ಯಾವುದೋ ಕಾರಣದಿಂದ ಮತ್ತೆ ಸೇರ ಬಂದವನನ್ನು ಅರಸನಾದವನು ಸಹಾನುಭೂತಿಯಿಂದ ನೋಡಿ, ಆಲೋಚನೆ ಮಾಡಿ ಸ್ವೀಕರಿಸಬೇಕು
ಕಾಮಾದಿಗಳಿಂದುಂಟಾದ ಅತಿ ಆನಂದದಿಂದ ಬರುವ ಮರವೆ, ಅತಿ ಕೋಪದಿಂದ ಬರುವ ಮರವೆಗಿಂತ ಕೆಟ್ಟದು.
ನಿತ್ಯದಾರಿದ್ರ್ಯ ಅರಿವನ್ನು ಕೊಲ್ಲುವಂತೆ ಮರವೆಯು ಒಬ್ಬನ ಕೀರ್ತಿಯನ್ನು ಕೆಡಿಸುತ್ತದೆ.
ಮರವೆಯ ವಶವಾದವರಿಗೆ ಕೀರ್ತಿಯಿಂದ ಬಾಳುವ ನೆಲೆ ಇಲ್ಲ. ಅದು ಲೋಕದಲ್ಲಿರುವ ಎಲ್ಲಾ ವಿಚಾರಶೀಲರೂ ಒಪ್ಪುವಂಥ ನಂಬಿಕೆ.
(ಮನಸ್ಸಿನಲ್ಲಿ) ಅಂಜಿಕೆ ಇರುವವರಿಗೆ, ಕೋಟೆಯ ರಕ್ಷಣೆ ಇದ್ದರೂ ಫಲವಿಲ್ಲ. ಅದೇ ರೀತಿ ಮರವೆಯ ವಶವಾದವರಿಗೆ (ಎಲ್ಲ ಅನುಕೂಲವಿದ್ದರೂ) ಫಲವಿಲ್ಲ.
ಮುಂದೆ ಬರಲಿರುವ ಸಂಕಟಗಳನ್ನು ತಿಳಿದು ಕಾಯ್ದುಕೊಳ್ಳದೆ ಮರೆತು ಬಿಡುವವನು. ಅವು ಬಂದ ಮೇಲೆ ತನ್ನ ಸ್ಥಿತಿಯನ್ನು ನೆನೆದು ಪಶ್ಚಾತ್ತಾಪಪಡುವನು.
ಯಾರಲ್ಲೂ ಯಾವ ಕಾಲದಲ್ಲೂ ಮರವೆಯಿಂದ ಪರವಶವಾಗದಿರುವ ಸ್ಥಿತಿಯ ತಪ್ಪದೆ ಇದ್ದರೆ, ಅದಕ್ಕೆ ಒಪ್ಪುವಂಥದು ಬೇರೆ ಇಲ್ಲ.
ಮರೆಯದಿರುವಿಕೆಯೆಂಬ ಸಾಧನದಿಂದ, ಕರ್ತವ್ಯಗಳನ್ನು ಪಟ್ಟು ಹಿಡಿದು ಮಾಡಿದರೆ, ಅಸಾಧ್ಯವೆಂದು ಆಗದಿರುವ ಕಾರ್ಯ ಒಂದೂ ಇಲ್ಲ.
ತಿಳಿದವರು ಕೀರ್ತಿಸಿ ಹೇಳಿದ ಕಾರ್ಯಗಳನ್ನು ಸಾಧಿಸಿಮಾಡಿ ತೋರಿಸ ಬೇಕು; ಮಾಡದೆ ಮರೆತುಬಿಟ್ಟರೆ, ಏಳು ಜನ್ಮಗಳಲ್ಲೂ ಒಳಿತಾಗುವುದಿಲ್ಲ.
(ಅರಸನಾದವನು) ತನ್ನ ಸಂತೋಷದಲ್ಲಿ ಮೈಮರೆತಿರುವಾಗ, ಆ ರೀತಿ ಮರೆತು ಕೆಟ್ಟವರನ್ನು ನೆನೆದುಕೊಳ್ಳಬೇಕು.
(ಅರಸನಾದವನು) ಆಲೋಚಿಸಿದುದನ್ನು ಬಿಡದೆ, ಮತ್ತೆ ಮತ್ತೆನೆನೆದುಕೊಳ್ಳುತ್ತಿದ್ದರೆ, ಅವನು ಬಯಸಿದುದನ್ನು ಪಡೆದುಕೊಳ್ಳುವುದು ಸುಲಭವಾಗುವುದು.
ಯಾರೆಲ್ಲ ಆಗಲಿ ತಪ್ಪು ಯಾವುದೆಂದು ಪರಿಶೀಲಿಸಿ, ಪಕ್ಷಪಾತವೆಣಿಸದೆ ವಿಚಾರಮಾಡಿ ನಡೆದುಕೊಳ್ಳುವುದೇ ನ್ಯಾಯವೆನಿಸುವುದು.
ಲೋಕದಲ್ಲಿರುವ ಜೀವಿಗಳೆಲ್ಲ ಮಳೆಯನ್ನು ನಿರೀಕ್ಷಿಸಿ ಬಾಳುವರು; ಅದೇ ರೀತಿ ಪ್ರಜೆಗಳೆಲ್ಲಾ ಅರಸನ (ನ್ಯಾಯಪಾಲನೆಯ) ರಾಜದಂಡವನ್ನು ನಿರೀಕ್ಷಿಸಿ ಬಾಳುವರು.
ಬಾಹ್ಮಣರ ವೇದಗಳಿಗೂ, ಧರ್ಮಕ್ಕೂ ಅಡಿಗಲ್ಲಾಗಿ ನಿಂತು (ಕಾಪಾಡುವುದು) ಅರಸನ ರಾಜದಂಡ.
ಪ್ರಜೆಗಳನ್ನು (ಪ್ರೀತಿಯಿಂದ) ತಪ್ಪಿಕೊಂಡು, ರಾಜದಂಡದಿಂದ ನ್ಯಾಯವನ್ನು ನಡೆಸುವ ಅರಸನ ಅಡಿಗಳನ್ನು ಲೋಕವೇ ತಬ್ಬಿಕೊಂಡು ಬಾಳುವುದು.
ನೀತಿಧರ್ಮಗಳಿನುಸಾರವಾಗಿ ತನ್ನ ರಾಜದಂಡವನ್ನು ನಿರ್ವಿಹಿಸುವ ಅರಸನ ನಾಡಿನಲ್ಲಿ (ಸಕಾಲದಲ್ಲಿ) ಮಳೆಯೂ ಸಮೃದ್ದಿಯಾದ ಬೆಳೆಯೂ ಒಟ್ಟಿಗೇ ನೆಲಸುತ್ತದೆ.
ಅರಸನಿಗೆ ಜಯಗಳಿಸಿ ತರುವುದು ಆಯುಧಗಳಲ್ಲ; ಪಕ್ಷಪಾತವಿಲ್ಲದ ಅವನ ರಾಜದಂಡದ ಬಲ.
ಲೋಕವನ್ನೆಲ್ಲಾ ಅರಸನು ಕಾಪಾಡುವನು; ನೀತಿಧರ್ಮ ಕೆಡದಂತೆ ಆಡಳಿತ ನಡೆಸುವವನಾದರೆ ಅರಸನನ್ನು ಆ ಧರ್ಮವೇ ಕಾಪಾಡುವುದು.
ಭೋಳೇ ಸ್ವಭಾವದಿಂದ, ವಿಚಾರ ಮಾಡದೆ, ನೀತಿ ಧರ್ಮವನ್ನು ನಡೆಸದಿರುವ ಅರಸನು, ಕೀಳು ಸ್ಥಿತಿಗೆ ಬಂದು ತಾನೇ ಕೆಡುತ್ತಾನೆ.
ಪ್ರಜೆಗಳನ್ನು ಇತರರು ಬಾಧೆಪಡಿಸದಂತೆ ಕಾಪಾಡಿ ಅವರನ್ನು ಸಲಹಿ, ಅಪರಾಧಗಳಿಗೆ ತಕ್ಕ ದಂಡನೆ ವಿಧಿಸುವುದು ಅರಸನ ಕರ್ತವ್ಯವೇ ಹೊರತು ಅದು ಅವನ ದೋಷದಲ್ಲ.
ಅರಸನಾದವನು ಕೆಡುಕನ್ನು ಮಾಡುವ ಪ್ರಜೆಗಳಿಗೆ ಕೋಲೆದಂಡನೆಯಿಂದ ದಂಡಿಸುವುದು, ಪಯಿರನ್ನು ಕಾಪಾಡಲು ಕೆಳೆಯನ್ನು ನಿವಾರಿಸುವುದಕ್ಕೆ ಸಮಾನವಾದುದು.
ಪ್ರಜೆಗಳನ್ನು ಹಿಂಸಿಸಿ ದಮನ ಮಾಡುತ್ತ, ಧರ್ಮವಲ್ಲದ ಕಾರ್ಯಗಳಲ್ಲಿ ತೊಡಗಿದ ಅರಸನು ಕೊಲೆಗಾರನಿಗಿಂತ ಕೀಳೆನಿಸಿಕೊಳ್ಳುತ್ತಾನೆ.
ಆಡಳಿತ ದಂಡವನ್ನೆತ್ತಿ ಪ್ರಜೆಗಳನ್ನು ಹಣ ಕೇಳುವ ಅರಸನು, ಹಾದಿಯಲ್ಲಿ ಆಯುಧ ತೋರಿಸಿ ಪಥಿಕರಿಂದ ಹಣ ಸುಲಿಯುವ ದರೋಡೆಗಳ್ಳನನ್ನು ಹೋಲುತ್ತಾನೆ.
ಪ್ರತಿನಿತ್ಯವೂ ತನ್ನ ಆಡಳಿತದಲ್ಲಿರುವ ಒಳಿತುಕೆಡುಕುಗಳನ್ನು ವಿಚಾರಮಾಡಿ, ಧರ್ಮದಿಂದ ನಡೆದುಕೊಳ್ಳದ ಅರಸನು ದಿನದಿನವೂ ತನ್ನ ನಾಡನ್ನು ಅವನತಿಗೆ ತರುವನು.
ದುರಾಡಳಿತಗಾರನಾಗಿ, ವಿಚಾರಮಾಡದೆ ದುಡುಕುವ ಅರಸನು, ತನ್ನ ಸಂಪತ್ತನ್ನು ಪ್ರಜೆಗಳನ್ನೂ ಒಟ್ಟಾಗಿ ಕಳೆದುಕೊಳ್ಳುವನು.
ಸಂಕಟಕ್ಕೊಳಗಾಗಿ ಸಹಿಸಲಾರದೆ ಅಳುವ (ಪ್ರಜೆಗಳ) ಕಣ್ಣೀರಲ್ಲವೆ (ನೀತಿ ಪಾಲಿಸದ ಅರಸನ) ಸಿರಿಯನ್ನು ಕತ್ತರಿಸಿ ನಾಶಪಡಿಸುವ ಗರಗಸ.
ಅರಸರಿಗೆ ಮನ್ನಣೆ ದೊರೆಯಲು ನ್ಯಾಯವಾದ ಆಳ್ವಿಕೆಯೇ ಕಾರಣವಾಗುವುದು; ಅದಿಲ್ಲವಾದರೆ ಅರಸರಿಗೆ ಕೀರ್ತಿನೆಲೆ ಇಲ್ಲವಾಗಿ ಹೋಗುವುದು.
ಮಳೆ ಹನಿ ಇಲ್ಲವಾದರೆ ಲೋಕವು ಹಾನಿಗೊಳಗಾಗುವಂತೆ ಅರಸನ ಕರುಣೆ ಇಲ್ಲದೆ ನಾಡಿನ ಪ್ರಜೆಗಳೂ ಕಷ್ಟಪಡುತ್ತಾರೆ.
ನೀತಿಧರ್ಮಗಳನ್ನು ಪಾಲಿಸದಿರುವ ಅರಸನ, ರಾಜದಂಡದ ಕೆಳಗೆ ಆಶ್ರಯ ಪಡೆದರೆ, ಸಿರಿವಂತಿಕೆಗಿಂತ ಬಡತನವೇ ಮೇಲು ಎನಿಸಿಕೊಳ್ಳುತ್ತದೆ.
ಅರಸನಾದವನು ನೀತಿಧರ್ಮ ಉಲ್ಲಂಘಿಸಿ ಆಳ್ವಿಕೆ ನಡೆಸಿದರೆ, ಆ ನಾಡಿನಲ್ಲಿ ಮಳೆಗಾಲ ತಪ್ಪಿ, ಮೋಡಗಳು (ಚದುರಿ) ಮಳೆ ಸುರಿಯಲು ನಿರಾಕರಿಸುತ್ತದೆ.
ಕಾಯುವ ಅರಸನು ರಕ್ಷಿಸದಿದ್ದರೆ, ಅವು ಹಾಲು ಕರೆಯುವುದಿಲ್ಲ; ಬ್ರಾಹ್ಮಣರೂ ಧರ್ಮಗ್ರಂಥಗಳನ್ನು ಮರೆಯುತ್ತಾರೆ.
ಮಾಡಿದ ಅಪರಾಧಗಳನ್ನು ತಕ್ಕ ರೀತಿಯಲ್ಲಿ ವಿಚಾರಿಸಿ, ಆ ಅಪರಾಧವನ್ನು ಮತ್ತೆ ಮಾಡದಂತೆ ಒಪ್ಪುವ ದಂಡನೆಯನ್ನು ವಿಧಿಸುವವನೇ ಅರಸನೆನಿಸಿಕೊಳ್ಳುವನು.
ತಮ್ಮ ಸಿರಿಯು ನಿಡುಗಾಲ ನಾಶವಾಗದಂತೆ ಇರಲು ಬಯಸುವ ಅರಸರು (ದಂಡಿಸುವಾಗ) ಮೊದಲು ಕಟ್ಟುನಿಟ್ಟಾಗಿ ಇರುವಂತೆ ತೋರಿಸಿ, ಅನಂತರ ಸೌಮ್ಯ ರೀತಿಯಲ್ಲಿ ಶಿಕ್ಷಿಸಬೇಕು.
ಪ್ರಜೆಗಳು ಭೀತಿಗೊಳ್ಳುವಂಥ ಕಾರ್ಯಗಳನ್ನು ಮಾಡಿ, ನೀತಿಭ್ರಷ್ಟ ಆಳರಸನೆನಿಸಿಕೊಂಡರೆ ಅವನು ನಿಶ್ಚಯವಾಗಿ ಒಡನೆಯೇ ಕೆಡುತ್ತಾನೆ.
ತನ್ನ ಪ್ರಜೆಗಳ ಬಾಯಲ್ಲಿ ಕ್ರೂರಿ ಎಂದು ಕರೆಸಿಕೊಳ್ಳುವ ಅರಸನು ಬಾಳಿನಲ್ಲಿ ಹಿರಿಮೆಯನ್ನು ಕಳೆದುಕೊಂಡು, ಒಡನೆಯೇ ನಾಶವಾಗುವನು.
ಜನರಿಗೆ ಕಾಣಲು ದುರ್ಲಭನಾಗಿ, ಸಿಡುಕು ಮೋರೆಯಿಂದ ಕೂಡಿದ ಅರಸನ ಹೇರಳವಾದ ಸಿರಿಯು, ದೆವ್ವ ಬಡಿದು ಕಾದೊಕೊಂಡಿರುವಂತೆ ಇರುವುದು.
(ಅರಸನು) ಕಡುನುಡಿಯವನೂ ಕರುಣೆಯ ಕಣ್ಣು ಇಲ್ಲದವನೂ ಆದರೆ ಅವನ ನಿಡಿದಾದ ಐಶ್ವರ್ಯವು ನಿಡಿದಾಗಿ ನಿಲ್ಲದೆ ಕೊಡಲೇ ನಾಶವಾಗುತ್ತದೆ.
ಕಡು ಮಾತೂ, ಕಟ್ಟಳೆ ಮೀರಿದ ದಣ್ಣನೆಯೂ, ಅರಸನ ಅಜೇಯ ಶಕ್ತಿಯನ್ನು ಕ್ಷಯಿಸುವಂತೆ ಮಾಡುವ ಅರವಾಗುತ್ತದೆ.
(ಅರಸನಾದವನು) ಮಂತ್ರಿಗಳೇ ಮೊದಲಾದ ತನಗೆ ಬೇಕಾದವರೊಡನೆ ಸೇರಿ ವಿಚಾರಮಾಡದೆ, ಕೆಲಸ ಕೆಟ್ಟಾಗ ಅವರ ಮೇಲೆ ಕೋಪಗೊಂಡು, ಅಬ್ಬರಿಸಿದರೆ (ಚೀರಿದರೆ) ಅವನ ಸಿರಿಯು ಸೊರಗುತ್ತದೆ.
ಮುಂಚಿತವಾಗಿ ಕೋಟೆಯನ್ನು ಕಟ್ಟಿ ಬಲಪಡಿಸಿಕೊಳ್ಳಲಾರದ ಅರಸನು ಹೋರಾಟ ಬಂದ ಕಾಲದಲ್ಲಿ (ರಕ್ಷಣೆ ಇಲ್ಲದೆ) ಅಂಜಿ, ಶೀಘ್ರವೇ ಅಳಿಯುತ್ತಾನೆ.
ಕ್ರೂರ ನೀತಿಯ ಆಳ್ವಿಕೆಯು, ಕಲಿಯದವರನ್ನು (ಧರ್ಮಗ್ರಂಥಗಳನ್ನು ಅರಿಯದವರನ್ನು) ತನಗೆ ಆಸರೆಯಾಗಿ ಮಾಡಿಕೊಳ್ಳುವುದು; ಅದಕ್ಕಿಂತ ಹೆಚ್ಚು ಹೊರೆ ಭೂಮಿಗಿಲ್ಲ.
ಕರುಣೆ ಎನ್ನುವ ಅತಿಶಯವಾದ ಸೌಂದರ್ಯವು (ಆಭರಣವು) ಇರುವ ಕಾರಣದಿಂದಲೇ ಈ ಲೋಕವು ಅಳಿಯುದೆ ಉಳಿದುಕೊಂಡಿದೆ.
ಕರುಣೆಯಿಂದಲೇ ಲೋಕ ನಡೆಯುತ್ತಿದೆ. ಕರುಣೆಯಿಲ್ಲದವರು ಬದುಕಿರುವುದು ಭೂಮಿಗೆ ಹೊರೆಯಷ್ಟೇ ಹೊರತು ಬೇರೆ ಇಲ್ಲ.
ಹಾಡಿನೊಂದಿಗೆ ಸಮರಸವಿಲ್ಲವಾದರೆ ಆ ಸಂಗೀತದಿಂದ ಏನು ಫಲವಿದೆ? ಅದೇ ರೀತಿ ಕರುಣೆಯಿಲ್ಲದ ಕಣ್ಣು ಇದ್ದೂ ಏನು ಪ್ರಯೋಜನ?
ತಕ್ಕ ಪ್ರಮಾಣದಲ್ಲಿ ಕರುಣೆ ತೋರದ ಕಣ್ಣುಗಳು ಮುಖದಲ್ಲಿ ಇರುವಂತೆ ತೋರುವುದನ್ನು ಬಿಟ್ಟರೆ ಬೇರೇನು ಪ್ರಯೋಜನ ನೀಡುತ್ತದೆ?
ಕರುಣೆಯೇ ಕಣ್ಣಿಗೆ ಅಲಂಕಾರ; ಅದಿಲ್ಲವಾದರೆ ಆ ಕಣ್ಣು ಹುಣ್ಣೆಂದು ಭಾವಿಸಲ್ಪಡುತ್ತದೆ.
ಕಣ್ಣಿದ್ದೂ ಕರುಣೆ ಇಲ್ಲದವರು, ಮಣ್ಣಿನಲ್ಲಿ ಚಲಿಸದೆ ನಿಂತ ಮರದ ಸಮಾನರು.
ಕರುಣೆ ಇಲ್ಲದವರು ಕಣ್ಣಿಲ್ಲದವರೆನಿಸಿಕೊಳ್ಳುವರು; ಕಣ್ಣುಳ್ಳವರು ಕರುಣೆಯಿಲ್ಲದವರಾಗಿರುವುದು ಸಾಧ್ಯವಿಲ್ಲ.
ಕರ್ತವ್ಯಕ್ಕೆ ಚ್ಯುತಿ ಬಾರದಂತೆ, ಕರುಣೆ ತೋರಬಲ್ಲ ಅರಸನಿಗೆ, ಈ ಲೋಕವನ್ನೇ ತನ್ನದಾಗಿ ಮಾಡಿಕೊಳ್ಳುವ ಹಕ್ಕು ಇರುತ್ತದೆ.
ಶಿಕ್ಷಿಸಲು ಅರ್ಹರಾಗಿದ್ದರೂ, ಕರುಣೆ ತೋರಿ, ಶಿಕ್ಷಿಸದೆ ಸಹನೆಯಿಂದ ಕಾಯುವ ಗುಣವೇ (ಎಲ್ಲಕ್ಕಿಂತ) ಹಿರಿದು.
ಕರುಣೆಯುಳ್ಳ ನಾಗರಿಕ ಗುಣವನ್ನು ಬಯಸುವವರು, ತಮಗೆ ಬೇಕಾದವರು ನಂಜು ನೀಡದರೂ ಅದನ್ನು ಕುಡಿದು ಶಾಂತವಾಗಿರುವರು.
ಬೇಹುಗಾರಿಕೆ, ಕೀರ್ತಿವೆತ್ತ ನ್ಯಾಯಶಾಸ್ತ್ರ ಈ ಎರಡು ಸಾಧನೆಗಳನ್ನೂ ನಿಶ್ಚಿತವಾಗಿ ಅರಸನು ತನ್ನ ಎರಡು ಕಣ್ಣುಗಳಾಗಿ ತಿಳಿಯಬೇಕು.
ಎಲ್ಲರಿಗೂ ಸಂಭವಿಸುವ ಎಲ್ಲಾ ಸಂಗತಿಗಳನ್ನೂ ಎಲ್ಲಾ ಕಾಲದಲ್ಲೂ (ಬೇಹುಗಾರಿಕೆ ಮೂಲಕ) ಚೆನ್ನಾಗಿ ತಿಳಿದುಕೊಂಡಿರುವುದು ಅರಸನ ಕರ್ತವ್ಯವೆನಿಸುವುದು.
ಬೇಹುಗಾರನು ಬೇಹುಗಾರಿಕೆಯಿಂದ ತಿಳಿಸಿದ ಸಂಗತಿಗಳನ್ನು ಅರಿತು ಅವುಗಳ ಪ್ರಯೋಜನವನ್ನು ಬಳಸಿಕೊಳ್ಳಲಾರದ ಅರಸನು, ಜಯಗಳಿಸುವ ಮಾರ್ಗ ಬೇರೆ ಇಲ್ಲ.
ಅರಸನಲ್ಲಿ ಕೆಲಸ ಮಾಡುವವರು, ಅವನ ಸಂಬಂಧಿಗಳು, ಹಗೆಗಳು ಎಂಬ ಎಲ್ಲಾ ಬಗೆಯ ಜನರನ್ನು ಪರೀಕ್ಷಿಸುವುದೇ ಬೇಹುಗಾರನ ಕೆಲಸವಾಗುವುದು.
ಸಂದೇಹಕ್ಕೆ ಆಸ್ವದ ಕೊಡದ ಮಾರು ವೇಷದಿಂದ, ನೋಡಿದವರ ಕಣ್ಣೋಟಕ್ಕೆ ಅಂಜದೆ, ಯಾವೆಡೆಯಲ್ಲೂ ತನ್ನ ರಹಸ್ಯಗಳನ್ನು ಬಯಲುಮಾಡದೆ ಇರಬಲ್ಲವನೇ ಬೇಹುಗಾರನೆನಿಸುವನು.
ಸನ್ಯಾಸಿಗಳ ವೇಷಧರಿಸಿ, ದುರ್ಗಮವಾದ ಎಡೆಗಳಲ್ಲೆಲ್ಲಾ ಓಡಾಡಿ, ಪರೀಕ್ಷಿಸಿ (ತನ್ನನ್ನು ಸಂದೇಹಿಸಿದವರು) ಏನು ಮಾಡಿದರೂ ತನ್ನ ಪತ್ತೆ ಹೇಳದವನೇ ಬೇಹುಗಾರನೆನಿಸುವನು.
ಅಡಗಿಸಿರುವ ಸುದ್ದುಗಳನ್ನೂ ಕೇಳಿ ತಿಳಿಯಬಲ್ಲವನಾಗಿ, ತಿಳಿದ ವಿಷಯಗಳಲ್ಲಿ ಸಂದೇಹವಿಲ್ಲದೆ ನಡೆದುಕೊಳ್ಳುವುದೇ ಬೇಹುಗಾರನ ಲಕ್ಷಣ.
(ಅರಸನಾದವನು) ಒಬ್ಬ ಬೇಹುಗಾರನು ಪತ್ತೆಮಾಡಿ ತಂದ ಸುದ್ದಿಯನ್ನು ಮತ್ತೊಬ್ಬ ಬೇಹುಗಾರನಿಂದ ಪತ್ತೆಹಚ್ಚಿದನಂತರ ಒಪ್ಪಿಕೊಳ್ಳಬೇಕು.
ಒಬ್ಬ ಬೇಹುಗಾರನನ್ನು ಮತ್ತೊಬ್ಬ ಬೇಹುಗಾರನು ಅರಿಯದಂತೆ ಅರಸನು ನೇಮಿಸಬೇಕು. ಆ ರೀತಿ ನೇಮಿಸಲ್ಪಟ್ಟ ಮೂವರು ಬೇಹುಗಾರರ ಮಾತು ಹೊಂದಿಕೆಯಾದ ಮೇಲೆ ಅದನ್ನು ಸ್ವೀಕರಿಸಬೇಕು.
(ಅರಸನು) ಬೇಹುಗಾರನನ್ನು ಇತರರು ಅರಿಯುವಂತೆ ಸನ್ಮಾನಿಸಬಾರದು. ಹಾಗೆ ಮಾಡಿದರೆ, ರಹಸ್ಯ ಸಂಗತಿಗಳನ್ನು ತಾನೇ ಹೊರಗೆಡಹಿದಂತೆ ಆಗುತ್ತದೆ.
ಸಾಮರ್ಥ್ಯವನ್ನು ಪಡೆದವನೇ ಉಳ್ಳವನು, ಅದಿಲ್ಲದೆ ಬಂದ ಸಿರಿ ಬೆಲೆಯಿಲ್ಲದ್ದು ಎನಿಸಿಕೊಳ್ಳುತ್ತದೆ.
ಒಬ್ಬನಿಗೆ ಸಾಮರ್ಥ್ಯ ಹೊಂದಿರುವುದೇ (ನೆಲೆಯಾದ) ಸೊತ್ತು, (ಮತ್ತುಳಿದ) ವಸ್ತುಗಳು ನೆಲೆಯಾಗಿ ನಿಲ್ಲದೆ ನಾಶವಾಗುತ್ತವೆ.
ಸಾಮರ್ಥ್ಯವನ್ನು ದೃಢವಾಗಿ ತಮ್ಮ ಕೈಯಲ್ಲುಳ್ಳವರು 'ಸಿರಿಯನ್ನು ಕಳೆದುಕೊಂಡೆ' ಎಂದು ವ್ಯಸನಪಡುವುದಿಲ್ಲ.
ಸೋಲದ ಸಾಮರ್ಥ್ಯವನ್ನು ಉಳ್ಳವನ ಬಳಿಗೆ ಸಿರಿಯ ತಾನೇ ಹಾದಿ ಕೇಳಿಕೊಂಡು ಹೋಗಿ ಸೇರುತ್ತದೆ.
ನೀರಿನಲ್ಲಿ ಬೆಳೆಯುವ ಹೂವುಗಳ ಕಾಂಡಗಳ ನೀಳವು, ಆ ನೀರಿನ ಆಳಕ್ಕೆ ಅನುಗುಣವಾಗಿರುತ್ತದೆ; ಮನುಷ್ಯರ ಹಿರಿಮೆ ಅಳವು ಕೂಡ ಅವರ ಸಾಮರ್ಥ್ಯದ ಆಳಕ್ಕೆ ಅನುಗುಣವಾಗಿರುತ್ತದೆ.
(ಅರಸನಾದವನು) ಆಲೋಚಿಸುವಾಗಲೆಲ್ಲಾ ಹಿರಿಮೆಯನ್ನೇ ಕುರಿತು ಆಲೋಚಿಸಬೇಕು. ಹಿರಿಮೆ ಕೈಗೊಡದಿದ್ದರೂ ಆ ಚಿಂತನೆಯಿಂದಲೇ ಕೈಗೊಡಿದ ಸುಖ ದೊರೆಯುವುದು.
ಒಡಲನ್ನು ಪೂದೆ ಅಂಬುಗಳಿಂದ (ಮಳೆಗರೆದು) ಗಾಯಗೊಳಿಸಿ ಅಚೇತನಗೊಳಿಸಿದರೂ ಆನೆ ತನ್ನ ಧೈರ್ಯದ ನಿಲುವನ್ನು ತಾಳಿಕೊಂಡೇ ಇರುತ್ತದೆ; ಅದೇ ರೀತಿ ಸಾಮರ್ಥ್ಯವುಳ್ಳವರು ಎಲ್ಲ ಕಳೆದುಕೊಂಡರೂ ಅಧೀರರಾಗುವುದಿಲ್ಲ.
ಮನಸ್ಸಿನಲ್ಲಿ ಸಾಮರ್ಥ್ಯವಿಲ್ಲದವರು "ಈ ಲೋಕದಲ್ಲಿ ನಾನು ಉದಾರಿ" ಎಂದು ತಮ್ಮಲ್ಲಿ ತಾವು ಹೇಳಿಕೊಂಡು ಸಂತೋಷಪಡುವ ಭಾಗ್ಯ ಪಡೆಯಲಾರರು.
ದೊಡ್ಡ ಶರೀರ, ಕೂರಾದ ಕೊಂಬುಗಳು ಇದ್ದರೂ ಆನೆ, ಹುಲಿಯನ್ನು ಎದುರಿಸುವಾಗ ಭಯಪಡುತ್ತದೆ.
ಒಬ್ಬನಿಗೆ ಸಾಮರ್ಥ್ಯವೆಂಬುದು ಮಾನಸಿಕ ಸಂಪತ್ತು; ಅದಿಲ್ಲದವರು; ಅದಿಲ್ಲದವರು ಮನುಷ್ಯರ ರೂಪದಲ್ಲಿರುವ ಮರಗಳೇ ವಿನಾ ಬೇರೆ ಅಲ್ಲ.
ಕುಟುಂಬವೆನ್ನುವ ನಂದದ ಬೆಳಕು, ಸೋಮಾರಿತನವೆನ್ನುವ ಕತ್ತಲೆ ವ್ಯಾಪಿಸಿ, ಆರಿ ಹೋಗುತ್ತದೆ.
ತಮ್ಮ ವಂಶವನ್ನು ಬೆಳಕಾಗಿ ಬೆಳಗಬಯಸುವವರು, ಆಲಸ್ಯವನ್ನು ವ್ಯಾಧಿಯೆಂದು ತಿಳಿದು ದೊರಮಾಡಬೇಕು.
ಆಲಸಿಯಾಗಿ ನಡೆದು ಬಾಳುವ ಮೂರ್ಖನು ಜನಿಸಿದ ವಂಶವು ಅದನಿಗಿಂತ ಮುಂಚೆಯೇ ಅವಸಾನ ಪಡೆಯುವುದು.
ಸೋಮಾರಿತನದಲ್ಲೇ ಮುಳುಗಿ ವಿಶೇಷ ಪ್ರಯತ್ನವೇನೂ ಮಾಡದವರಿಗೆ, ಅವರ ಕುಲವು ನಾಶವಾಗಿ, ಅಪರಾಧಗಳು ಹೆಚ್ಚುವುವು.
ಕಾಲವಿಳಂಬ, ಮರೆವು, ಆಲಸ್ಯ ಹಾಗೂ ಅತಿನಿದ್ರೆ- ಈ ನಾಲ್ಕೂ ಕೆಡುವ ಸ್ವಭಾವವುಳ್ಳವರು ಬಯಸಿ ಏರುವ ಮೋಹಕ ನಾವೆಯಾಗುವುದು.
ಆಲಸಿಗಳು ರಾಜೈಶ್ವರ್ಯವನ್ನು ತಾವಾಗಿಯೇ ಪಡೆದ ಮೇಲೂ (ಅದರಿಂದ) ವಿಶೇಷ ಫಲವನ್ನು ಪಡೆಯಲು ಸಾಧ್ಯವಿಲ್ಲ.
ಆಲಸ್ಯವನ್ನೇ ಬಯಸಿ, ವಿಶೇಷವಾದ ಪ್ರಯತ್ನದಲ್ಲಿ ತೊಡಗದವರು ಸ್ನೇಹಿತರಿಂದ ಕಟುವಾದ ಅಪನಿಂದೆಗೆ ಗುರಿಯಾಗುವರು.
ಆಲಸ್ಯವು ಹಿರಿಯ ವಂಶದ ಅರಸನಲ್ಲಿ ಸೀರಿಕೊಂಡರೆ ಅವನನ್ನು ಹಗೆಗಳ ಅಡಿಯಾಳಿಗೆ ಮಾಡಿಬಿಡುವುದು.
ಒಬ್ಬನು ತನ್ನ ಆಲಸ್ಯವನ್ನು ಕಿತ್ತೊಗೆದರೆ, ವಂಷದಲ್ಲಿಯೂ, ಅವನ ಕಲಿತನದಲ್ಲಿಯೂ ಬಂದ ದೋಷವು ಪರಿಹಾರವಾಗುವುದು.
ತನ್ನಡಿಗಳಿಂದ ಲೋಕವನ್ನೇ ಅಳೆದ ಭಯವಂತನು ವ್ಯಾಪಿಸಿರುವ ಭಾಗವನ್ನೆಲ್ಲಾ ಆಲಸ್ಯವನ್ನು ಕಳೆದ ಅರಸನು ಒಟ್ಟಿಗೇ ಪಡೆಯುವನು.
ಇದು ಮುಗಿಸಲು ಕಷ್ಟಸಾಧ್ಯವಾದುದು ಎಂದು ಅಧೀರತೆಗೊಳಗಾಗಬಾರದು; ಪ್ರಯತ್ನದಿಂದ ಹಿರಿಮೆಯು ಲಇಸುತ್ತದೆ.
ಕೆಲಸವನ್ನು ಪೂರ್ತಿಮಾಡದೆ ಅರ್ಧದಲ್ಲಿ ಕೈಬಿಟ್ಟವರನ್ನು ಲೋಕವೂ ಕೈಬಿಡುವುದು; ಅದರಿಂದ ಹಿಡಿದ ಕೆಲಸದಲ್ಲಿ ಬರುವ ಎಡರುತೊಡರುಗಳನ್ನೂ ಲಕ್ಷ್ಯದಲ್ಲಿಟ್ಟುಕೊಳ್ಳಬೇಕು.
ಪರೋಪಕಾರವೆನ್ನುವ ಸಿರಿಯು, ಮಾನುಷ ಪ್ರಯತ್ನವೆನ್ನುವ ಹಿರಿಯ ಗುಣದಲ್ಲಿ ನೆಲಸಿರುವುದು.
ಮನುಷ್ಯ ಪ್ರಯತ್ನವಿಲ್ಲದವನ ಪರೋಪಕಾರವು, ಹೇಡಿಯು ಕೈಯಲ್ಲಿ ಕತ್ತಿ ಹಿಡಿದು ಬಲ್ಲಾಳ್ತನವನ್ನು ತೋರಿದಂತೆ ವ್ಯರ್ಥವಾಗುವುದು.
ತನ್ನ ಸುಖವನ್ನು ಬಯಸದೆ, ಕೈಕೊಂಡ ಕೆಲಸವನ್ನು ಪ್ರೀತಿಸುವವನು ತನ್ನ ಬಂಧುಗಳ ಸಂಕಟವನ್ನು ತೊಡೆದು ಹಾಕಲು ತಾಳಿನಿಲ್ಲುವ ಆಧಾರ ಕಂಬವಾಗುವನು.
ಪ್ರಯತ್ನದಿಂದ ಸಿರಿಯು ಬೆಳೆಯುವುದು; ಪ್ರಯತ್ನವಿಲ್ಲದಿದ್ದರೆ ದಾರಿದ್ರ್ಯವು ಹೋಗುವುದು.
ಒಬ್ಬನ ಆಲಸ್ಯದಲ್ಲಿ ದರಿದ್ರಲಕ್ಷ್ಮಿ ನೆಲಸಿ ಆಳುವಳು. ಆಲಸ್ಯವಿಲ್ಲದವನ ಪ್ರಯತ್ನದಲ್ಲಿ ಭಾಗ್ಯಲಕ್ಷ್ಮಿ ನೆಲೆಸುವಳು ಎಂದು (ಬಲ್ಲವರು) ಹೇಳುತ್ತಾರೆ.
ದಾರಿದ್ರ್ಯವು ಯಾರಿಗೂ ದೋಷವಲ್ಲ; ಅರಿವಿನಿಂದ ವಿಚಾರಮಾಡಿ ಪ್ರಯತ್ನ ಮಾಡದಿದ್ದರೆ ಅದು ದೋಷವಾಗುವುದು.
ದೈವವಿಧಿಯ ಕಾರಣದಿಂದ ಒಂದು ಕೆಲಸ ಫಲಿಸದೆ ಹೋದರೂ ಪ್ರಯತ್ನವು ತನ್ನ ಶರೀರಶ್ರಮದ ಕೂಲಿಯಾಗಿ ಫಲವನ್ನು ನೀಡುತ್ತದೆ.
ದಣೆವಿಲ್ಲದೆ, ಎದೆಗುಂದದೆ ಪ್ರಯತ್ನಶೀಲರಾಗಿರುವವರು (ತಮ್ಮನ್ನು ಕಾಡುವ) ವಿಧಿಯನ್ನು ತಮ್ಮ ಬೆನ್ನ ಹಿಂದೆ ಕಾಣುವರು. (ವಿಧಿಯಿಂದ ಪಾರಾಗುವರು)
ಆಪತ್ತು ಬಂದಾಗ (ಅಧೀರರಾಗದೆ) ನಗಬೇಕು; ಅದನ್ನು ಮೆಟ್ಟಿ ಸಹಿಸಿ ಗೆದ್ದುನಿಂತರೆ ಅದಕ್ಕೂಪ್ಪುವಂಥದು ಬೇರೆ ಇಲ್ಲ.
ಪ್ರವಾಹದಂತೆ ಮೇರೆವರಿದು ಬರುವ ಸಂಕಟವನ್ನು, ಅರಿವುಳ್ಳವನು ತನ್ನ ಮನಸ್ಸಿನಲ್ಲಿ ನೆನೆದು, ಧೈರ್ಯವಾಗಿ ಎದುರಿಸಬಲ್ಲವನಾದರೆ, ಆ ಸಂಕಟವು ಮಾಯವಾಗಿ ಬಿಡುವುದು.
ಸಂಕಟವೊದಗಿ ಬಂದಾಗ, ಅದಕ್ಕಾಗಿ ದುಃಖಿಸಿ ಅಧೀರರಾಗದವರು, ಆ ಸಂಕಟಕ್ಕೇ ದುಃಖವನ್ನು ತಂದೊಡ್ಡಿ ಅದನ್ನೇ ಗೆದ್ದುಬಿಡುವರು.
ಎಡರುಗಳನ್ನು ಎದುರಿಸುವ ಸಮಯದಲ್ಲೆಲ್ಲಾ ಗಾಡಿಯತ್ತಿನಂತೆ ಕಷ್ಟವನ್ನು ತಾಳಿಕೊಳ್ಳಬಲ್ಲನಾದರೆ, ಆ ಎಡರೇ ತೊಂದರೆಯಲ್ಲಿ ಸಿಕ್ಕಿ ನರಳುವುದು.
ಸಂಕಟಗಳು ಒಂದರ ಮೇಲೊಂದರಂತೆ ದಾಳಿ ಇಟ್ಟು ಬಂದರೂ ಎದೆಗೆಡದೆ ತಾಳಬಲ್ಲವನಾದರೆ ಆ ಸಂಕಟಗಳೇ ಇಕ್ಕಟ್ಟಿನಲ್ಲಿ ಸಿಕ್ಕಿ ಪಾಡುಪಡುವುದು.
ಸಿರಿಬಂದಾಗ ನಾವು 'ಪಡೆದಿದ್ದೇವೆ' ಎಂದು ಹೆಮ್ಮೆಯಿಂದ ಕಾದುಕೊಳ್ಳಲರಿಯದವರು, ಸಂಕಟ ಬಂದಾಗ "ನಾವು ಸೋತೆವು" ಎಂದು ದುಃಖಪಡುವರೋ?
ದೊಡ್ಡವರು (ಜ್ಞಾನಿಗಳು) ಒಡಲು ಸಂಕಟಗಳಿಗೆ ತವರು ಎಂದು ತಿಳಿದಿರುವುದರಿಂದ, ಬಂದ ಸಂಕಟಗಳನ್ನು ಲೆಕ್ಕಿಸುವುದಿಲ್ಲ.
ಸುಖಾಮಿಷಗಳಿಗೆ ಆಸೆಪಡದವನು, ಸಂಕಟವನ್ನು ನೈಸರ್ಗಿಕವೆಂದು ಸಹಜವಾಗಿ ಪರಿಗಣಿಸುವವನು, ದುಃಖ ಬಂದಾಗ ಅದಕ್ಕಾಗಿ ವ್ಯರ್ಥಗೊಳಗಾಗುವುದಿಲ್ಲ.
ಸುಖಬಂದ ಕಾಲದಲ್ಲಿ ಸುಖವನ್ನು ಪೋಷಿಸದವನು, ದುಃಖ ಬಂದ ಕಾಲದಲ್ಲಿ ದುಃಖವನ್ನೂ ಅನುಭವಿಸುವುದಿಲ್ಲ.
ಒಬ್ಬನು ತನ್ನ ಪ್ರಯತ್ನದಲ್ಲಿ ಸಂಕಟವನ್ನೆ ಸುಖವೆಂದು ಸ್ವೀಕರಿಸಬಲ್ಲವನಾದರೆ, ಅವನ ಹಗೆಗಳೂ ಅವನನ್ನು ಮೆಚ್ಚುವ ಶ್ರೇಷ್ಠ ಗುಣವನ್ನು ಪಡೆಯುತ್ತಾನೆ.
ಕೆಲಸಕ್ಕೆ ತಕ್ಕ ಸಾಧನವನ್ನೂ, ತಕ್ಕ ಕಾಲವನ್ನೂ ಕೆಲಸ ಮಾಡಲು ತಕ್ಕ ವೆಧಾನವನ್ನೂ, ಕಷ್ಟಸಾಧ್ಯವಾದ ಕೆಲಸವನ್ನೂ ಅರಿತು ವಿಶಿಷ್ಟ ರೀತಿಯಲ್ಲಿ ಮಾಡ ಬಲ್ಲವನೇ ಮಂತ್ರಿಯು.
ಮೇಲಿನ ಐದು ಗುಣಗಳೊಂದಿಗೆ ನಿರ್ಭೀತ ದೃಷ್ಟಿ, ಪ್ರಚಾರಕ್ಷಣೆ, ನಿಖರವಾದ ಜ್ಞಾನ, ಪ್ರಮಾಣಿಕ ಪ್ರಯತ್ನ ಇವುಗಳನ್ನು ವಿಶಿಷ್ಟವಾಗಿ ಹೊಂದಿರುವವನು ಮಂತ್ರಿಯು.
ಹಗೆಗಳಿಗೆ ನೆರವಾಗುವವರನ್ನು ದೊರಮಾಡಿ, ತನ್ನೊಡನೆ ಇರುವವರನ್ನು ರಕ್ಷಿಸುತ್ತ ತನ್ನಿಂದ ದೊರವಾದವರನ್ನು ಮತ್ತೆ ಸೇರಿಸಿಕೊಳ್ಳಬಲ್ಲವನೇ ಮಂತ್ರಿಯು.
ಮಾಡುವ ಕೆಲಸಗಳನ್ನು ಚೆನ್ನಾಗಿ ತಿಳಿದುಕೊಂಡು, ಅದಕ್ಕೆ ಬೇಕಾದ ಮಾರ್ಗಗಳನ್ನು ಆಲೋಚಿಸಿ ಕೈಕೊಂಡು, ನಿಷ್ಚಯವಾಗಿ ಅಭಿಪ್ರಾಯಗಳನ್ನು ಹೇಳಬಲ್ಲವನೇ ಮಂತ್ರಿಯು.
ಧರ್ಮವನ್ನು ತಿಳಿದು, ಪೂರ್ಣ ಜ್ಞಾನದಿಂದ ಮಾತಾಡ ಬಲ್ಲವನಾಗಿ, ಮಾಡುವ ಕೆಲಸದ ಮರ್ಮವನ್ನು ಅರಿತವನಾಗಿಯೂ ಇರಬಲ್ಲವನೇ ಅರಸನ ಮಂತ್ರಾಲೋಚನೆಗೆ ಸಹಾಯಕನೆನಿಸುವನು.
ಶಾಸ್ತ್ರ ಜ್ಞಾನದೊಂದಿಗೆ ಸ್ವಾಭಾವಿಕವಾದ ಸೂಕ್ಷ್ಮ ಬುದ್ದಿಯುಳ್ಳವರಿಗೆ ಎದುರಿಸಿ ನಿಲ್ಲಬೇಕಾದಂಥ ಅತಿ ಸೂಕ್ಷ್ಮ ವಿಚಾರಗಳು ಯಾವುವಿವೆ?
ಪುಸ್ತಕ ಜ್ಞಾನದಿಂದ ಕೆಲಸ ಮಾಡುವ ಬಗೆ ತಿಳಿದಿದ್ದರೂ ಲೋಕದ ಸ್ವಭಾವವನ್ನು ತಿಳಿದು ಕೆಲಸ ಮಾಡಬೇಕು.
ಅರಸನಾದವನು ಪೂರ್ತಿ ಅಜ್ಞಾನಿಯಾಗಿದ್ದರೂ ಅವನಿಗೆ ಖಚಿತವಾಗ ಸಲಹೆಗಳನ್ನು, ಕೊಡುವುದು ಮಂತ್ರಿಯಾದವನ ಕರ್ತವ್ಯ.
ಸನಿಹದಲ್ಲೇ ಇದ್ದು (ಅರಸನ) ನಾಶವನ್ನು ಬಯಸುವ ಮಂತ್ರಿಗಿಂತ, ಎಪ್ಪತ್ತು ಕೋಟಿ ಹಗೆಗಳು ಇದ್ದರೂ ಅದು ಉತ್ತಮವೇ.
ಕಾಯದಕ್ಷತೆಯಿಲ್ಲದ ಮಂತ್ರಿಗಳು, ತಾವು ಕೈಗೊಂಡ ಕೆಲಸದಲ್ಲಿ ಮುಂಚಿತವಾಗಿ ಸಾಕಷ್ಟು ಸಲಹೆಗಳನ್ನು ಪಡೆದಿದ್ದರೂ, ಅದನ್ನು ಮುಗಿಸಲಾರದೇ ಕೈಬಿಡುತ್ತಾರೆ.
ನ್ಯಾಯವಾದುದನ್ನೇ ಆಡುವ ನಾಲಗೆಯ ಒಳ್ಳೆಯ ಗುಣವು ಮಿಕ್ಕಲ್ಲ ಗುಣಗಳಿಂದ ವಿಶಿಷ್ಟವಾಗಿ ನಿಲ್ಲುತ್ತದೆ.
ಆದುವ ಮಾತಿನ ಬಲದಿಂದ, ಸಿರಿಯೂ, ಕೇಡೂ ಬರುವುದರಿಂದ, ತಾನಾಡುವ ಮಾತಿನಲ್ಲಿ ತಪ್ಪು ಸಂಭವಿಸದಂತೆ (ಎಚ್ಚರಿಕೆಯಿಂದ) ಕಾದು ಕೊಳ್ಳಬೇಕು.
ನುಡಿಯುವಾಗ ಕೇಳಿದವರನ್ನು ವಶಪಡಿಸಿಕೊಂಡು, ಹಿರಿಮೆಯುಳ್ಳವಾಗಿ ಕೇಳಲಿಚ್ಛಿಸದವರನ್ನು ಕೇಳಲು ಇಷ್ಟಪಡುವಂತೆ ಮಾತನಾಡುವುದು ಮಾತಿನ ಬಲ್ಮೆಯೆನಿಸುವುದು.
ಮಾತಿನ ಗುಣವರಿತುಆಡಬೇಕು; ಆ ರೀತಿಯ ಮಾತಿನ ಬಲ್ಮೆಗಿಂತ ಮಿಗಿಲಾದ ಧರ್ಮವಾಗಲೀ, ಸಿರಿಯಾಗಲೀ ಇಲ್ಲ.
ಬೇರೊಬ್ಬರು ತಮ್ಮ ಮಾತನ್ನು ಎದುರಾಡಿ ಗೆಲ್ಲಲಾರರು ಎಂಬುದನ್ನು ಅರಿತುಕೊಂಡೇ ಹೇಳಬೇಕೆನಿಸಿದ ಮಾತನ್ನು ಆಡಬೇಕು.
ಇತರರು ಕೇಳಲು ಇಷ್ಟಪಡುವಂತೆ ತಾವು ನುಡಿದು, ಇತರರು ಆಡಿದ ಮಾತಿನ ಪ್ರಯೋಜನವನ್ನು ಪರಿಶೀಲಿಸಿ ಸ್ವೀಕರಿಸುವುದು ಮಂತ್ರಿಗುಣದ ಹಿರಿಮೆಯಲ್ಲಿ ದೋಷವಿಲ್ಲದವರ ಅಭಿಮತವೆನಿಸುವುದು.
ಮಾತು ಬಲ್ಲವನೂ, ಜ್ಞಾಪಕಶಕ್ತಿಯುಳ್ಳವನೂ, ನಿರ್ಭೀತನೂ ಆದವನನ್ನು ಎದುರಿಸಿ ಗೆಲ್ಲುವುದು ಯಾರಿಗೂ ಅಸಾಧ್ಯ.
ಮಾತುಗಳನ್ನು ಜಾಣ್ಮೆಯಿಂದ ಪೋಣಿಸಿ ಇನಿದಾಗಿ ಮಾತನಾಡ ಬಲ್ಲವರನ್ನು ಪಡೆದಲ್ಲಿ ಲೋಕವು ಕೋಡಲೇ ಅವರು ಹೇಳಿದಂತೆ ಕೇಳುವುದು.
ಲೋಪವಿಲ್ಲದ ಕೆಲವೆ ಮಾತುಗಳನ್ನು ಆಡಲು ಅರಿಯದವರು ಸಹಜವಾಗಿಯೇ (ವ್ಯರ್ಥವಾದ) ಹಲವು ಮಾತುಗಳನ್ನು ಆಡಬಯಸುವರು.
ತಾವು (ಗ್ರಂಥಗಳಿಂದ) ಕಲಿತುದನ್ನು (ಇತರರು) ತಿಳಿಯುವಂತೆ ವಿಶದವಾಗಿ ವ್ಯಕ್ತಗೊಳಿಸಲಾರದವರು ಗೊಂಚಲು ಗೊಂಚಲಾಗಿ ಅರಳಿಯೂ, ಪರಿಮಳವನ್ನು ಬೀರದ ಹೂವುಗಳನ್ನು ಹೋಲುವರು.
ಯೋಗ್ಯವಾದ ನೆರವು ಸಿರಿಯನ್ನು ಮಾತ್ರ ತರುತ್ತದೆ; ಉತ್ತಮ ಕಾರ್ಯವು ಬಯಸಿದ ಎಲ್ಲವನ್ನೂ ನೀಡುವುದು.
ಅರಸನಿಗೆ, ಬಯಸದಕ್ಕ ಕೀರ್ತಿಯೊಂದಿಗೆ, ಉತ್ತಮ ಫಲವನ್ನು ನೀಡದ ಕಾರ್ಯವನ್ನು (ಮಂತ್ರಿಯಾದವನು) ಎಂದೆಂದಿಗೂ ತ್ಯಜಿಸಬೇಕು.
ತಾವು ಮೇಲೆ ಮೇಲೆ ಏರಬೇಕು ಎನ್ನುವವರು, ತಮ್ಮ ಕೀರ್ತಿಗೆ ಕಳಂಕವಾದ ಕಲಸಗಳಿಂದ ದೂರವಿರಬೇಕು.
ಸಮದರ್ಶಿಯಾದ ದೃಷ್ಟಿಯುಳ್ಳವರು ತಾವು ಸಂಕಟದಲ್ಲಿ ಸಿಲುಕಿದರೂ ಕೀಳ್ತರದ ಕೆಲಸಗಳಲ್ಲಿ ತೊಡಗುವುದಿಲ್ಲ.
'ಏನು ಎಂಥ ಕೆಲಸ ಮಾಡಿದೆ!' ಎಂದು ನಂತರ ಆಲೋಚಿಸಿ ದುಃಖಿಸುವ ಕಾರ್ಯವನ್ನು ಮಾಡದಿರಲಿ; ಒಂದುವೇಳೆ ತಪ್ಪಿ ಮಾಡಿದರೂ ಮತ್ತೆ ಅದು ಪುನರಾವರ್ತಿಯಾಗದಿರುವುದು ಒಳ್ಳೆಯದು.
ಹೆತ್ತ ತಾಯಿ ಹಸಿವಿಂದ ನರಳುವ ಸಮಯದಲ್ಲೂ ತಿಳಿದವರು ನಿಂದಿಸುವಂಥ (ಹೀನ) ಕೆಲಸವನ್ನು ಮಾಡಬಾರದು.
ನಿಂದೆಯನ್ನು ಧರಿಸಿ (ಕೀಳು ಕೆಲಸಮಾಡಿ) ಸಂಪಾದಿಸಿದ ಐಶ್ವರ್ಯಕ್ಕಿಂತ, ವಿಚಾರವಂತರ ಕಡು ಬಡತನವೇ ಲೇಸು.
(ದೊಡ್ಡವರು) ಮಾಡಕೂಡದೆಂದು ನಿಷೇಧಿಸಿದ ಕೆಲಸಗಳನ್ನು ಮಾಡಿದವರಿಗೆ ಆ ಕೆಲಸ ನೆರವೇರಿದರೂ ಅವು ಕಷ್ಟಗಳನ್ನೇ ತರುತ್ತವೆ.
ಇತರರನ್ನು ದುಃಖಕ್ಕೀಡುಮಾಡಿ ಸಂಪಾದಿಸಿದ ಸಿರಿಯೆಲ್ಲವೂ ಪಡೆದವನನ್ನು ದುಃಖಕ್ಕೀಡುಮಾಡಿ, ನಾಶವಾಗಿ ಬಿಡುವುದು. ಒಳ್ಳೆಯ ಹಾದಿಯಲ್ಲಿ ಪಡೆದ ಸಿರಿ ಮೊದಲು ನಷ್ಟವಾದರೂ ನಂತರ ಫಲ ಪ್ರಾಪ್ತಿಯಾಗುವುದು.
ವಂಚನೆಯ ಮಾರ್ಗದಲ್ಲಿ ಸಿರಿಯನ್ನು ಸೇರಿಸಿ ಕಾಪಾಡುವುದು, ಹಸಿ ಮಣ್ಣಿನ ಮಡಕೆಯಲ್ಲಿ ನೀರನ್ನು ಹೊಯ್ದು ಇರಿಸಿದಂತೆ.
ಕಾರ್ಯ ನಿರ್ಧಾರವೆನ್ನುವುದು ಒಬ್ಬನ ಮನೋದಾರ್ಢ್ಯವನ್ನು ಅವಲಬಿಸಿದೆ. ಉಳಿದುವೆಲ್ಲಾ ಬೇರೆಯವೇ.
ಅಡ್ಡಿ ಆದಂಕಗಳು ಬರುವ ಮುನ್ನವೇ (ಅದರಿಂದ) ನೀಗಿಕೊಳ್ಳುವುದು, ಬಂದಮೇಲೆ ಎದೆಗೆಡದಿರುವುದು, ಎಂಬಿವೆರಡು ಮಾರ್ಗಗಳೇ ಕಾರ್ಯ ಸಾಮರ್ಥ್ಯಕ್ಕೆ ನಿದರ್ಶನವೆಂದು, ಪರಿಶೋಧನೆ ನಡಸಿದವರ ಅಭಿಮತ.
ಮಾಡುವ ಕೆಲಸವನ್ನು ಕೊನೆಯಲ್ಲಿ ಬಹಿರಂಗಪಡಿಸುವುದೇ ಪುರುಷ ಲಕ್ಷಣವೆನಿಸಿಕೊಳ್ಳುವುದು. ನಡುವೆ ಪ್ರಕಟಿಸಿದಲ್ಲಿ ನೀಗಲಾಗದ ದುಃಖವನ್ನು ತರುತ್ತದೆ.
ಈ ಕೆಲಸವನ್ನು ಹೀಗೆ ಮಾಡಬೇಕೆಂದು ಹೇಳುವುದು ಯಾರಿಗೂ ಸುಲಭ; ಹೇಳಿದಂತೆ ಮಾಡಿ ಮುಗಿಸುವುದು ಕಷ್ಟ ಸಾಧ್ಯವಾಗುವುದು.
ಕಾರ್ಯ ಪರತೆಯಿಂದ ಹಿರಿಮೆಯನ್ನು ಗಳಿಸಿ ದೊಡ್ಡವರಾದವರ ಕಾರ್ಯ ನಿರ್ಧಾರವು ಅರಸನ ಸೆಳೆದು ನಾಡಿನಲ್ಲೆಲ್ಲಾ ವ್ಯಾಪಿಸಿ ಗೌರವಿಸಲ್ಪಡುವುದು.
ಒಂದು ಕೆಲಸವನ್ನು ಮಾಡಬೇಕೆಂದು ಆಲೋಚಿಸಿದವರು, ಆ ಕೆಲಸದಲ್ಲಿ ನಿಶ್ಚಲವಾದ ನಿರ್ಧಾರವನ್ನು ತಳೆದಿದ್ದರೆ ಅವರು ಬಯಸಿದುದನ್ನು ಬಯಸಿದ ರೀತಿಯಲ್ಲೆ ಪಡೆಯುವರು.
ಉರುಳುವ ದೊಡ್ಡ ತೇರಿಗೆ, ಚಕ್ರದ ಅಚ್ಚಿನಲ್ಲಿರುವ (ಪುಟ್ಟ) ಕೀಲಿಮೊಳೆಯಂತೆ, ಲೋಕದಲ್ಲಿ (ಕೆಲವರು) ಇರುವರು; ಅವರ ಸಾಮಾನ್ಯ ಆಕಾರವನ್ನು ಕಂಡು ನಾವು ಕೀಳೆಣಿಸಬಾರದು.
ಕೈಗೊಂಡ ಕೆಲಸವನ್ನು ಮನಸ್ಸಿನಲ್ಲಿ ಚಂಚಲಗೊಳ್ಳದೆ, ಅಧೀರರಾಗದೆ, ಆಲಸ್ಯವನ್ನು ಬಿಟ್ಟು ಮಾಡಿ ಪೂರೈಸಬೇಕು.
ಮೊದಲು ಅತಿಯಾದ ದುಃಖವನ್ನು ತಂದೊಡ್ದಿದ್ದರೂ ಅಂತ್ಯದಲ್ಲಿ ಸುಖವನ್ನು ತರುವ ಕೆಲಸವನ್ನು, ನಿರ್ಧಾರದಿಂದ ಮಾಡಿ ಮುಗಿಸಬೇಕು.
ಬೇರೆ ಎಷ್ಟೇ ಸಾಮರ್ಥ್ಯ ಶೀಲಿಯಾಗಿದ್ದರೂ ಮಾಡುವ ಕೆಲಸದಲ್ಲಿ ನಿರ್ಧಾರ ಇಲ್ಲದವರನ್ನು ಲೋಕವು ಮನ್ನಿಸುವುದಿಲ್ಲ.
ಒಂದು ಕೆಲಸ ಬಗ್ಗೆ, ಹಲವರಲ್ಲಿ ಆಲೋಚಿಸಿ ವಿಚಾರ ಮಾಡಿ ನಿರ್ಧಾರವನ್ನು ಕೈಗೊಳ್ಳಬೇಕು; ಆ ರೀತಿ ಕೈಗೊಂಡ ನಿರ್ಧಾರವನ್ನು ಕಾಲಹರಣದಿಂದ ನಿರ್ಧಾನಿಸಿದರೆ ಅದರಿಂದ ಕೆಡುಕೇ ಆಗುವುದು.
ಕಾಲವನ್ನು ತಾಳಿ ನಿಧಾನಿಸಿ ಮಾಡಬೇಕಾದ ಕೆಲಸವನ್ನು ನಿಧಾನಿಸಿಯೇ ಮಾಡಬೇಕು. ಆಲಸ್ಯವಿಲ್ಲದೆ ಕೂಡಲೇ ಮಾಡಬೇಕಾದ ಕೆಲಸವನ್ನು ಒಡನೆಯೇ (ಆಲಸ್ಯವಿಲ್ಲವೆ) ಮಾಡಿ ಪೂರೈಸಬೇಕು.
ಸಾಧ್ಯವಿರುವ ಎಡೆಯಲ್ಲೆಲ್ಲ ಕೆಲಸಮಾಡಿ ಮುಗಿಸುವುದು ಒಳ್ಳೆಯುದು. ಸಾಧ್ಯವಾಗದ ಎಡೆಯಲ್ಲಿ ಫಲಪ್ರದವಾಗಬಲ್ಲ್ ಉಛಿತ ವಿಧಾನಗಳನ್ನು ನೋಡಿ ಅನುಸರಿಸಿ ಮಾಡಬೇಕು.
ತೊಡಗಿದ ಕೆಲಸ, ಹಗೆತನ, ಈ ಎರಡರ ಉಳಿಕೆಗಳು, ವಿಚಾರ ಮಾಡಿ ನೋಡಿದಾಗ, ಕಿಚ್ಚಿನ ಅವಶೇಷದಂತೆ ಅರಿವಾಗದಂತೆ ವ್ಯಾಪಿಸಿ ಕೆಡುಕುಂಟು ಮಾಡುತ್ತವೆ.
ಹಣ, ಸಾಧನ, ಕಾಲ, ಕೆಲಸ, ಸ್ಥಳ- ಈ ಐದರ ವಿಷಯದಲ್ಲಿಯೂ ವಿಸ್ತರಣೆಗೆ ಎಡೆಕೊಡದೆ, ಆಲೋಚಿಸಿ ಮಾಡಬೇಕು.
ಕೆಲಸವನ್ನು ಮುಗಿಸುವ ರೀತಿ, ನಡುವೆ ಬರುವ ಅಡಚಣೆಗಳು, ಮುಗಿದ ಮೇಲೆ ದೊರೆಯುವ ಹಿರಿಯ ಪ್ರಯೋಜನ ಇವುಗಳನ್ನು ವಿಚಾರಮಾಡೀ ಕೆಲಸದಲ್ಲಿ ತೊಡಗಬೇಕು.
ಒಂದು ಕೆಲಸದಲ್ಲಿ ತೊಡಗಿದವನು ಮಾಡಬೇಕಾದ ಕರ್ತವ್ಯವೆಂದರೆ, ಆ ಕೆಲಸದ ರಹಸ್ಯವನ್ನು ಚೆನ್ನಾಗಿ ತಿಳಿದವನ ಸಲಹೆಯನ್ನು ಪಡೆದುಕೊಳ್ಳುವುದು.
ಒಂದು ಕೆಲಸದಿಂದ ಮತ್ತೊಂದು ಕೆಲಸವು ಆಗುವಂತೆ ಮಾಡೀಕೊಳ್ಳುವುದು. ಮದವುಳ್ಳ ಆನೆಯ ಸಹಾಯದಿಂದ ಮತ್ತೊಂದು ಆನೆಯನ್ನು ಹಿಡಿಯವಂತೆ.
ಸ್ನೇಹಿತರಾದವರಿಗೆ ಒಳ್ಳೆಯುದು ಮಾಡದಕ್ಕಿಂತ ಮುಖ್ಯವಾಗಿ ಮೊದಲು ಮಾಡಬೇಕಾದ ಕೆಲಸವೆಂದರೆ, ಶತ್ರುಗಳನ್ನು ತಮ್ಮ ಸಮೀಪಕ್ಕೆ ಸೆಳೆದುಕೊಳ್ಳುವುದು.
ಸಣ್ಣಪುಟ್ಟ ಮಾಡಲಿಕರಾದವರು, ತಮ್ಮ ಪ್ರಜೆಗಳು ಶತ್ರುಗಳಿಂದ ಭೀತರಾದಾಗ, ತಮಗಿಂತ ಬಲಿಷ್ಠರಾದ ಹಗೆಗಳು ತಮಗೆ ಕ್ಷಮೆತೋರಿ ಸಂಧಿಗೆ ಅವಕಾಶ ಕೊಟ್ಟರೆ ಅವರ ಸಾಮಂತಿಕೆಯನ್ನು ತೆಲೆಬಾಗಿ ಒಪ್ಪಿಕೊಳ್ಳುತ್ತಾರೆ.
ಪ್ರೀತಿಯುಳ್ಳವನಾಗಿರುವುದು, ತಕ್ಕ ವಂಶೋದ್ಭವನಾಗಿರುವುದು, ಅರಸನು ಮೆಚ್ಚುವ ಗುಣಗಳನ್ನು ಪಡೆದಿರುವುದು- ಇವು ರಾಯಭಾರವನ್ನು ನಡೆಸುವವನ ಲಕ್ಷಣಗಳು.
ಪ್ರೀತಿ, (ತನ್ನ ವ್ಯವಹಾರದಲ್ಲಿ) ಅರಿವು, ವಿಚಾರಮಾಡಿ ಆಡುವ ಮಾತುಗಾರಿಕೆ- ಇವು ಮೂರು ದೂತನಲ್ಲಿ ಅನಿವಾರ್ಯವಾದ ಗುಣಗಳು.
(ದೂತನಾದವನು) ಬೇರೆ ಅರಸರಲ್ಲಿಗೆ ಹೋಗಿ ತನ್ನರಸನ ವಿಜಯ ಸಾಧನೆಗಳನ್ನು ವಿಶದಪಡಿಸುವ ಜಾಣ್ಮೆಯನ್ನು ತೋರುವುದರಿಂದ, ರಾಜ್ಯ ಶಾಸ್ತ್ರ ಬಲ್ಲವರಲ್ಲೆ ಪಂಡಿತನೆನಿಸಿಕೊಳ್ಳುತ್ತಾನೆ.
(ಸ್ವಾಭಾವಿಕ) ಅರಿವು, ಆಕರ್ಷಕ ನೋಟ, ಸತತ ಪ್ರಯತ್ನದಿಂದ ಬಂದ ಕಲಿಕೆ- ಈ ಮೂರರ ಹೊಂದಾಣಿಕೆಯುಳ್ಳವನು, ದೂದು ಹೇಳುವ ಕೆಲಸಕ್ಕೆ ತೊಡಗಬಹುದು.
ಹೊರನಾಡಿನ ಅರಸರಿಗೆ ಹೇಳುವುದನ್ನು ಸಂಗ್ರಹವಾಗಿ, ಅಹಿತವಾದ ವಿಷಯಗಳನ್ನು ಬಿಟ್ಟು, ನಗೆಸೂಸುವಂತೆ ಹೇಳಿ ತನ್ನರಸನಿಗೆ ಒಳ್ಳೆಯದಾಗುವಂತೆ ಮಾಡುವವನೇ ದೂತನೆನಿಸಿಕೊಳ್ಳುವನು.
(ರಾಜನೀತಿ ಮೊದಲಾದುವುಗಳನ್ನು) ಕಲಿತು, (ಹಗೆಗಳ ಬಿರುನೋಟಕ್ಕೆ) ಹೆದರದೆ, ಹೇಳುವುದನ್ನು ಮನಮುಟ್ಟುವಂತೆ ಹೇಳಿ, ಕಾಲಕ್ಕೆ ತಕ್ಕ ತಿಳುವಳಿಕೆ ಹೊಂದಿರುವವನೇ ದೂತನೆನಿಸಿಕೊಳ್ಳುವನು.
ತನ್ನ ಕರ್ತವ್ಯವನ್ನು ಚೆನ್ನಾಗಿ ಬಲ್ಲವನಾಗಿ, ಅದನ್ನು ನೆರವೇರಿಸಲು ತಕ್ಕ ಕಾಲವನ್ನು ನಿರೀಕ್ಷಿಸಿ, ತಕ್ಕ ಸ್ಥಳವನ್ನೂ ಬಲ್ಲವನಾಗಿ, ವಿಚಾರಮಾಡಿ, ದೂತ ಕಾರ್ಯವನ್ನು ನೆರವೇರಿಸ ಬಲ್ಲವನು ದೂತರಲ್ಲಿಯೇ ಶ್ರೇಷ್ಠನೆನಿಸಿಕೊಳ್ಳುವನು.
ಶುದ್ಧವಾದ ನಡತೆ, ಪರರ ಸಹಕಾರ, ವಿದೆಗಾರಿಕೆ- ಈ ಮೂರರ ವಾಸ್ತವತೆಯನ್ನು ತಿಳಿದಿರುವುದೇ ದೂತ ಕಾರ್ಯ ಮಾಡುವವನ ಲಕ್ಷಣಗಳು.
ದೋಷವುಳ್ಳ ಮಾತುಗಳನ್ನು ಬಾಯಿತಪ್ಪಿಯೂ ಹೇಳದಿರುವ ನಿಶ್ಚಲಧೋರಣೆಯುಳ್ಳವನೇ ಅರಸನು ಹೇಳಿಕಳಿಸಿದ ಮಾತುಗಳನ್ನು ಇತರ ಅರಸರಿಗೆ ಹೇಳಲು ಸಮರ್ಥನಾದವನು.
ತನಗೆ (ತನ್ನ ಕೆಲಸದಲ್ಲಿ) ಸಾವು ಸಂಭವಿಸಿದರೂ ಹೆದರದೆ, ಅರಸನಿಗೆ ಒಳ್ಳೆಯದು ಉಂಟಾಗುವಂತೆ ಮಾಡುವವನೇ ದೂತನೆನಿಸಿಕೊಳ್ಳುವನು.
ವಿಚಿತ್ರವಾಗಿ ವರ್ತಿಸುವ ರಾಜರನ್ನು ಸೇರಿ ಬಾಳುವ ಮಂತ್ರಿಗಳು, (ಚಳಿಯಲ್ಲಿ) ಬೆಂಕಿ ಕಾಯಿಸುವವರಂತೆ, ಹೆಚ್ಚು ನಿಕಟವಾಗಿರದೆಯೂ, ಹೆಚ್ಚು ದೂರವಾಗಿರದೆಯೂ ಇರಬೇಕು.
ಅರಸರನ್ನು ಕೂಡಿಬಾಳುವವರು ಅರಸರು ಬಯಸಿದ ವಸ್ತುಗಳನ್ನು ತಾವು ಬಯಸದಿದ್ದಲ್ಲಿ, ಅರಸರಿಂದಲೇ ನೆಲೆಯಾದ ಐಶ್ವರ್ಯವನ್ನು ಪಡೆದು ಬಾಳುತ್ತಾರೆ.
(ಅರಸನನ್ನು ಸೇರಿ ಬಾಳುವವರು) ತಮ್ಮನ್ನು ಕಾದುಕೊಳ್ಳಬೇಕಾದರೆ, ತೀವ್ರವಾದ ತಪ್ಪುಗಳು ಸಂಭವಿಸದಂತೆ ಎಚ್ಚರಿಕೆಯಿಂದಿರಬೇಕು. ಒಮ್ಮೆ (ಅರಸನ) ಸಂಶಯಕ್ಕೆ ಈಡಾದರೆ, ಅದನ್ನು ತಿಳಿಯಾಗುವಂತೆ ಬಗೆಹರಿಸುವುದು ಯಾರಿಗೂ ಸಾಧ್ಯ.
ಬಲಶಾಲಿಗಳಾದ ಅರಸರ ಸಮ್ಮುಖದಲ್ಲಿ, ಬೇರೊಬ್ಬರೊಂದಿಗೆ ಕಿವಿಯಲ್ಲಿ ಪಿಸುಗುಟ್ಟುವುದಾಗಲೀ, ನಗೆಯಾಡುವುದಾಗಲೀ ಮಾಡದಂತೆ ನಡೆದುಕೊಳ್ಳಬೇಕು.
ಅರಸರು, ರಹಸ್ಯವಾಗಿ ಮಾತನಾಡುವಾಗ ಮಂತ್ರಿಗಳುಯಾವ ವಿಷಯವನ್ನಾಗಲೀ, ಕದ್ದು ಕೇಳದೆ, ಪ್ರಶ್ನೆಗಳ ಮಳೆಸುರಿಸದೆ, ಆ ವಿಷಯವನ್ನು ಅವರೇ ಪ್ರಕಟವಾಗಿ ಹೇಳುವಾಗ ಕೇಳಿ ತಿಳಿದುಕೊಳ್ಳುವುದೇ ಧರ್ಮ.
ಅರಸರ ಸಂಜ್ಞೆಯನ್ನು ಅರಿತು, ತಕ್ಕ ಕಾಲವನ್ನು ಎದುರುನೋಡಿ, ಅಹಿತವಾಗದಂತೆ, ಅಪೇಕ್ಷೆಪಡುವ ಸಂಗತಿಗಳನ್ನು (ಅವರಿಗೆ) ಇಷ್ಟವಾಗುವಂತೆ ಹೇಳಬೇಕು.
ಅರಸರು ಇಷ್ಟಪದುವಂಥ ಸಂಗತಿಗಳನ್ನು (ಮಾತ್ರ) ಹೇಳಿ, ಅನುಪಯುಕ್ತ ವಿಷಯಗಳನ್ನು ಅವರೇ ಕೇಳಿದರೂ ಯಾವಾಗಲೇ ಆಗಲಿ, ಹೇಳದಿರಬೇಕು.
ಅರಸನು "ನನಗಿಂತ ಕಿರಿಯನು, ಹತ್ತಿರದ ಸಂಬಂಧಿ" ಎಂದು ಅವನನ್ನು ಕೀಳು ಮಾಡದೆ, ಅರಸನ ಸ್ಥಾನಕ್ಕೆ ಮನ್ನಣೆಯಿತ್ತು ನೆಲೆಯಾದ ವಿವೇಚನೆಯಿಂದ ನಡೆದುಕೊಳ್ಳಬೇಕು.
ದೃಢವಾದ ಮನಸ್ಸುಳ್ಳವರು, ತಾವು ಅರಸರಿಗೆ ಬೇಕಾದವರೆಂದು ನೆನೆದು ಅವರಿಗೆ ಇಷ್ಟವಾಗದಂಥ ಕೆಲಸಗಳನ್ನು ಮಾಡುವುದಿಲ್ಲ.
ನಾವು ಅರಸರಿಗೆ ತುಂಬ ಸಲಿಗೆಯುಳ್ಳವರೆಂದು ಭಾವಿಸಿ, ಪ್ರಯೋಜನವಿಲ್ಲದ ಕೆಲಸಗಳನ್ನು ಮಾಡಿದರೆ, ಅಂಥ ಸಲಿಗೆ ಕೇಡನ್ನು ತರುತ್ತದೆ.
ಅರಸನ ಅಭಿಪ್ರಾಯವನ್ನು, ಅವರು ವ್ಯಕ್ತಪಡಿಸದೆಯೇ ಮುಖಭಾವದಿಂದಲೇ ಸಂಕೇತವನ್ನು ಗ್ರಹಿಸುವವನು, ಲೋಕಕ್ಕೆ ಅಲಂಕಾರವಿದ್ದಂತೆ.
(ಯಾವ ರೀತಿಯ) ಸಂಶಯಕ್ಕೂಳಗಾಗದೆ, ಒಬ್ಬರ ಮನಸ್ಸಿನಲ್ಲಿರುವುದನ್ನು ಗ್ರಹಿಸಬಲ್ಲವನನ್ನು ದೈವಕ್ಕೆ ಸಮಾನವೆಂದೆಣಿಸಬೇಕು.
ಮುಖಕಣ್ಣುಗಳ ಇಂಗಿತದಿಂದಲೇ ಮನಸ್ಸನ್ನು ತಿಳಿಯಬಲ್ಲವರನ್ನು (ಅರಸನು) ತನ್ನ ಸೊತ್ತಿನಲ್ಲಿ ಏನನ್ನಾದರೂ ಕೊಟ್ಟು ಪಡೆದುಕೊಳ್ಳಬೇಕು.
ಒಬ್ಬರ ಮ್ನಸ್ಸಿನ ಇಂಗಿತವನ್ನು ಹೇಳದೆಯೇ ತಿಳಿದುಕೊಳ್ಳಬಲ್ಲವರನ್ನು ಉಳಿದವರೊಡನೆ ಹೋಲಿಸಿದಾಗ, ಶರೀರಧಾರಣೆಯಲ್ಲಿ ಸಮಾನರಾಗಿ ಕಂಡರೂ, ಅರಿವಿನಲ್ಲ ಅವರು ಬೇರೆಯೇ.
ಬರಿಯ ಇಂಗಿತ ಮಾತ್ರದಿಂದಲೇ, ಸೂಚನೆಯನ್ನು ಗ್ರಹಿಸದಿದ್ದ ಮೇಲೆ ಕಣ್ಣುಗಳು ದೇಹದಲ್ಲಿ ಇದ್ದೂ ಏನು ಪ್ರಯೋಜನ?
ತನ್ನ ಹತ್ತಿರದಲ್ಲಿರುವ ವಸ್ತುಗಳನ್ನು ಕನ್ನಡಿಯು ತೋರಿಸುವಂತೆ, (ಒಬ್ಬನ) ಮನಸ್ಸಿನಾಳದೊಳಗಿರುವುದನ್ನು (ಅವನ) ಮುಖವು ತೋರಿಸುತ್ತದೆ.
ಮುಖಕ್ಕಿಂತ ಮಿಗಿಲಾದ ಅರಿವುಳ್ಳದು ಉಂಟೆ? ಅದು, ಒಬ್ಬನು ಸಂತೋಷಿಸಲಿ, ಕೋಪಿಸಲಿ, ಅದನ್ನು ಮುಂದಾಗಿಯೇ ಒರೆಯುತ್ತದೆ.
(ಅರಸನಾದವನು) ತನ್ನ ಮನಸ್ಸಿನ ಒಳಹೊಕ್ಕು ಅರಿತು ಹೇಳಬಲ್ಲವರನ್ನು ಪಡೆದಿದ್ದಲ್ಲಿ, ಅವರ ಮುಂದೆ ಸುಮ್ಮನೆ ಮುಖವನ್ನು ನೋಡುತ್ತ (ಏನೊಂದೂ ಹೇಳದೆ) ನಿಂತರ ಸಾಕು.
ಕಣ್ಣಿನ ಭಾವಭೇದಗಳನ್ನು ಗ್ರಹಿಸಬಲ್ಲವನನ್ನು (ಅರಸನು) ಮಣ್ತ್ರಿಯಾಗಿ ಪಡೆದಿದ್ದಲ್ಲ, (ವಿರೋಧಿಗಳ ಮನಸ್ಸಿನಲ್ಲಿರುವ) ಹಗೆತನವನ್ನು, ಕೆಳೆತನವನ್ನು ಅವನಿಗೆ ಅವರ ಕಣ್ಣುಗಳೇ ಹೇಳಿ ಬಿಡುತ್ತವೆ.
'ತಾನು ಸೂಕ್ಷ್ಮಮತಿ' ಎಂದು ಹೇಳುವ ಮಂತ್ರಿಗಳ ಅಳತೆಗೋಲು, ವಿಚಾರ ಮಾಡಿ ನೋಡಿದಲ್ಲಿ ಅವರ ಕಣ್ಣುಗಳಲ್ಲದೆ ಬೇರೆಯಲ್ಲ.
ಮಾತುಗಳ ಜೋಡಣೆಯನ್ನು ಅರಿತ ಶುದ್ದವಾದ ತಿಳುವಳಿಕೆಯುಳ್ಳವರು ಸಭೆಯ ಸ್ವಭಾವವನ್ನು ಅರಿತು ವಿಚಾರಮಾಡಿ ಮಾತನಾಡಲಿ.
ಮಾತಿನ ನಡಾವಳಿಯನ್ನು ಅರಿತ ಒಳ್ಳೆಯ ಗುಣಶಾಲಿಗಳು (ಸಭೆಯ) ಅವಕಾಶವನ್ನು ತಿಳಿದುಕೊಂಡು ಚೆನ್ನಾಗಿ ಗ್ರಹಿಸಿ ಮಾತನಾಡಲಿ.
ಸಭಾ ತಿಳುವಳಿಕೆಯಿಲ್ಲದೆ ಮಾತನಾಡಲು ತೊಡಗುವವರು ಮಾತಿನ ಬಗೆಯನ್ನು ಅರಿಯದವರು; ಅವರಲ್ಲಿ ವಿದ್ಯೆಯ ಬಲಿಮೆಯೂ ಇರುವುದಿಲ್ಲ.
ಜ್ಞಾನಿಗಳ ಸಭೆಯ ಮುಂದೆ ಜ್ಞಾನಿಗಳಂತೆಯೇ ವರ್ತಿಸಬೇಕು. ಮೂರ್ಖರ (ಬೆಳ್ಳಕ್ಕರಿಗರ) ಮುಂದೆ, ಬೆಪ್ಪುತನವನ್ನು ತೋರಿಸಬೇಕು.
ಒಳ್ಳೆಯದೆಂದು ಹೇಳಲ್ಪಡುವ ಎಲ್ಲಾ ಗುಣಗಳಲ್ಲೂ ಮಿಗಿಲಾದುದು ಬಲ್ಲವರ ಸಭೆಯಲ್ಲಿ ಮುಂದಾಗಿ ಹೋಗಿ ಮಾತನಾಡದಿರುವ ವಿನೀತಗುಣವೇ.
ಬಹುಮುಖ ಜ್ಞಾನವನ್ನು ಸಂಪಾದಿಸಿ ಚಿಂತಿಸುವವರ ಸಭೆಯಲ್ಲಿ ತಪ್ಪುಮಾಡುವುದು, ಒಳ್ಳೆಯ ಮಾರ್ಗದಲ್ಲಿ ನಡೆದು ಬಂದು ಇದ್ದಕ್ಕದ್ದಂತೆ, ನೆಲೆತಪ್ಪಿ ಕುಸಿದ ಹಾಗೆ.
ದೋಷಮುಕ್ತವಾದ ಮಾತುಗಳನ್ನು ಅರಿಯಬಲ್ಲ. ಬಲ್ಲವರ ಸಭೆಯಲ್ಲಿ ಹಲವು ವಿದೈಯರಿತವರ ಜ್ಞಾನವು ಚೆನ್ನಗಿ ಪ್ರಕಾಶಕ್ಕೆ ಬರುವುದು.
ತಾವು ತಿಳಿಯಬಲ್ಲ ಸಾಮರ್ಥ್ಯವುಳ್ಳವರ ಮುಂದೆ, ಹೇಳುವುದು, ಸ್ವಾಭಾವಿಕವಾಗಿ ಬೆಳೆಯುವ ಸಸಿಯ ಪಾತಿಯಲ್ಲಿ ನೀರನ್ನು ಸುರಿದಂತೆ.
ಒಳ್ಳೆಯ ಅರಿತವರ ಸಭೆಯಲ್ಲಿ ಚೆನ್ನಾಗಿ ಮನ ಮುಟ್ಟುವಂತೆ ಮಾತನಾಡಬಲ್ಲ ಸಾಮರ್ಥ್ಯವುಳ್ಳವರು, ಅರಿವಿಲ್ಲದವರ ಕೂಟದಲ್ಲಿ ಮರೆತಾದರೂ ಮಾತನಾಡಬಾರದು.
ತನಗೆ ಹಿತವರಲ್ಲದವರ ಮುಂದೆ, ಗೋಷ್ಠಿಯಲ್ಲಿ ಪಾಲ್ಗೊಳ್ಳುವುದು, ಅಂಗಳದಲ್ಲಿ ಅಮೃತವನ್ನು ಚೆಲ್ಲಿದಂತೆ. (ವ್ಯರ್ಥ).
ಮಾತಿನ ಜೋಡಣೆಯನ್ನು ಅರಿತ ಪರಿಶುದ್ಧವಾದ ನಡೆಯುಳ್ಳವರು, ಸಭೆಯ ರೀತಿಯನ್ನು ಅರಿತವರಾಗಿ, ಬಲ್ಲವರ ಸಭೆಯಲ್ಲಿ (ಭೀತಿಯಿಂದ) ಬಾಯಿತಪ್ಪಿ ತಪ್ಪಾಗಿ ಮಾತನಾಡಲಾರರು.
ಕಲಿತವರ (ವಿದ್ವಾಂಸರ) ಮುಂದೆ ತಾವು ಕಲಿತುದನ್ನು ಮನಮುಟ್ಟುವಂತೆ ಹೇಳಬಲ್ಲದವರು, ಜ್ಞಾನಿಗಳಲ್ಲಿ ಜ್ಞಾನಿಗಳೆಂದು ಕರಯಲ್ಪಡುವರು.
ಯುದ್ಧ ರಂಗದಲ್ಲಿ ಧೈರ್ಯದಿಂದ ಹೋರಾಡಿ ಸಾಯುವವರು (ಲೋಕದಲ್ಲಿ) ಹಲವು ಮುಂದಿ ಇದ್ದಾರೆ; (ಆದರೆ) ಅರಿತವರ ಸಭಯಲ್ಲಿ ಅಂಜದೆ ಮಾತನಾಡಬಲ್ಲವರು ಕೆಲವೇ ಮುಂದಿ.
ಕಲಿತವರ ಮುಂದೆ ತಾವು ಕಲಿತುದನ್ನು ಮನಮುಟ್ಟುವಂತೆ ಹೇಳಿ, ಅಪಾರವಾಗಿ ಕಲಿತವರಿಂದ ಮಿಗಿಲಾಗಿ ಜ್ಞಾನವನ್ನು ಕೇಳಿ ತಿಳಿದುಕೊಳ್ಳಬೇಕು.
ಬೇರೆ ಅರಸರ ಸಭಯಲ್ಲಿ ಸಭಾಭೀತಿಯಿಲ್ಲದ ಸಮರ್ಪಕವಾದ ಉತ್ತರ ನೀಡಲು, ಯೋಗ್ಯವೆನಿಸಿದ ತರ್ಕ ಗ್ರಂಥಗಳನ್ನು ಅರಿತು ಅಭ್ಯಾಸ ಮಾಡಬೇಕು.
ವೀರೋಚಿತವಾಗ ದೃಷ್ಟಿಯುಳ್ಲವರಲ್ಲದವರಿಗೆ ಕತ್ತಿಯೊಡನೆ ಏನು ಸಂಬಂಧ? ಸೂಕ್ಷ್ಮಮತಿಗಳ ಸಭೆಗೆ ಅಂಜುವವರಿಗೆ, ಶಾಸ್ತ್ರ ಗ್ರಂಥಗಳೊಡನೆ ಏನು ನಂಟು?
(ಅರಿತವರ) ಸಭಯಲ್ಲಿ ಅಂಜುವವನ ಶಾಸ್ತ್ರಜ್ಞಾನವು, ಹಗೆಯೊಡನೆ ಹೋರಾಟ ನಡೆಸಲು ಹೋದ ಹೇಡಿಯ ಕೈಯಾಳಗಿನ ಕೂರಲಗಿನಂತೆ.
ಚೆನ್ನಾಗಿ ಅರಿತವರ ಸಭಯಲ್ಲಿ ಒಳ್ಳೆಯ ವಿಷಯಗಳನ್ನು (ಕೇಳುವವರ) ಮನಮುಟ್ಟುವಂತೆ ಹೇಳಲಾರದವರು, ಹಲವು ವಿಷಯಗಳನ್ನು ಕಲಿತೂ ಪ್ರಯೋಜನವಿಲ್ಲದವರೇ (ಆಗುತ್ತಾರೆ).
ಶಾಸ್ತ್ರಗ್ರಂಥಗಳನ್ನು ಓದಿಬಲ್ಲವರಾದರೂ, ಚೆನ್ನಾಗಿ ಬಲ್ಲವರ ಸಭೆಯಲ್ಲಿ (ಮಾತನಾಡಲು) ಹೆದುರುವವರು, ಕಲಿಯದವರಿಗಿಂತ, ಕಡೆ ಎಂದೆಣಿಸಲ್ಪಡುವರು.
ಸಭೆಗೆ ಅಂಜಿ ಮನಮುಟ್ಟುವಂತೆ ಹೇಳಲು ಅಶಕ್ತರಾದವರು, ಬದುಕ್ಕಿದ್ದೂ ಸತ್ತವರ ಸಮಾನರು.
ಕೊರೆಯಿಲ್ಲದ ಕೃಷಿ ಸಂಪತ್ತು, ಯೋಗ್ಯರಾದ ಅರಿತವರು ಮತ್ತು ಕೇಡೀಲ್ಲದ ಸಂಪತ್ತುಳ್ಳ ವಣಿಜರೂ ಕೂಡಿಕೊಂಡಿರುವುದೇ ನಾಡೆನಿಸಿಕೊಳ್ಳುವುದು.
ಹೇರಳವಾದ ಸಂಪತ್ತಿನಿಂದ ಹೊರದೇಶದವರೂ ಬಯಸುವುದಾಗಿ ಕೇಡಿಲ್ಲದೆ ಮಿಗಿಲಾಗಿ ಬೆಳೆಯುವುದೇ ನಾಡೆನಿಸಿಕೊಳ್ಳುವುದು.
(ನೆರೆನಾಡ ಅರಸನು ದಾಳಿಯಿಡುವುದರಿಂದ) ಒಮ್ಮೆಲೇ ತನ್ನ ಮೇಲೆ ಬರುವ ಹೊರೆಯನ್ನು ಸಹಿಸಿಕೊಂಡು, ತನ್ನ ಅರಸರಿಗೆ, ಕಂದಾಯ ತರಿಗೆಗಳನ್ನು ಪೂರ್ತಿಯಾಗಿ ಸಲ್ಲಿಸಿಕೊಂಡು ಬರುವುದೇ ನಾಡು ಎನಿಸಿಕೊಳ್ಳುವುದು.
ಕಡುತರವಾದ ಹಸಿವೂ, ತೀರದ ರೋಗರುಜೀನಗಳೂ ಕೊಲ್ಲುವ ಹಗೆತನವೂ ಸೇರವಂತೆ, ಸ್ವಾಭಾವಿಕವಾಗಿ ನಡೆದು ಬರುವುದೇ ನಾಡೆನಿಸಿಕೊಳ್ಳುವುದು.
ಹಲವು ರೀತಿಯ ದುಷ್ಟ ಕೂಟಗಳು, ಕೇಡುಂಟು ಮಾಡುವ, ಒಳನಾಡಿನ ಹಗೆಯೂ, ಅರಸನನ್ನು ಭೀತಿಗೀಡು ಮಾಡುವ ಕೊಲೆ ಸಂಚಿನ ಗುಂಪ್ರಗಳೂ ಇಲ್ಲದಿರುವುದೇ ನಾಡೆನಿಸಿಕೊಳ್ಳುವುದು.
ಹಗೆಗಳಿಂದ ಕೇಡರಿಯದೆ, ಕೆಟ್ಟ ಕಾಲದಲ್ಲೂ ಏಳಿಗೆಯೂ ಕುಂದದಂತೆ ಇರುವ ನಾಡು, ನಾಡುಗಳಲ್ಲೆಲ್ಲಾ ಹಿರಿಮೆಯುಳ್ಳದು ಎಂದು (ಬಲ್ಲವರು) ಹೇಳುವರು.
ಹರಿಯುವ ತೊರೆಗಳಿಂದ ಮತ್ತು ಮಳೆಯಿಂದ ಉಂಟಾಗುವ ಎರಡು ಬಗೆಯ ನೀರಿನ ಸಂಪತ್ತೂ ಸ್ವಾಭಾವಿಕವಾಗಿ ವ್ಯಾಪಿಸಿರುವ ಮಲೆಗಳೂ, ಅಲ್ಲಿಂದ ಹರಿದು ಬರುವ ನದಿಯ ನೀರೂ ಬಲವಾದ ಕೋಟೆಯೂ ನಾಡಿಗೆ ಅವಶ್ಯಕವಾದ ಅಂಗಗಳೆನಿಸುವುವು.
ನೀರೋಗತನ, ಐಸಿರಿ, (ಸಮೃದ್ಧ) ಬೆಳೆ, ತೃಪ್ತಿಯ ಜೀವನ, (ಪ್ರಜಾ) ರಕ್ಷಣೆ ಈ ಐದು ನಾಡಿಗೆ ಅಲಂಕಾರ ಎಂದು ಹೇಳುವುದು.
ಪ್ರಯತ್ನವಿಲ್ಲದೆಯೇ ಸ್ವಾಭಾವಿಕವಾಗಿ ಸಿರಿಯನ್ನು ಬೆಳೆಸುವ ನಾಡು ನಾಡೆನ್ನುವರು. ಪ್ರಯತ್ನ ಮಾತ್ರದಿಂದ (ಶ್ರಮಪಟ್ಟು) ಅಭ್ಯುದಯವನ್ನು ಪಡೆಯುವ ನಾಡು ನಾಡಲ್ಲ.
ಮೇಲೆ ತಿಳಿಸಿದ ಎಲ್ಲಾ ಗುಣಗಳನ್ನು ಹೊಂದಿದ ಮೇಲೂ, ಆ ನಾಡಿನಲ್ಲಿ ಒಳ್ಳೆಯ ಪ್ರಭುತ್ವವಿಲ್ಲವಾದರೆ, ಅದು ವ್ಯರ್ಥವಾಗಿ ಹೋಗುವುದು.
ಶತ್ರುವನ್ನು ಎದುರಿಸಿ ಹೋರಾಡುವವರಿಗೆ ಕೋಟೆಯೇ ಆಧಾರ; ಅದರಂತೆ, ಶತ್ರು ಅಂಜಿ, ತಮ್ಮ ರಕ್ಷಣೆ ಮಾಡೀಕೊಳ್ಳುವವರಿಗೂ ಅದೇ ಆಧಾರ.
ಮಣಿಯಂತೆ ತಿಳಿಯಾದ ನೀರು, ಸಮತಟ್ಟಾದ ಭೂಮಿ, (ಹಬ್ಬಿರುವ) ಮಲೆ, ಸೂಗಸಾದ (ತಂಪಾದ) ನೆರಳುಳ್ಳ ಕಾಡು- ಇವುಗಳನ್ನು ಉಳ್ಳದೇ ಹೋಟೆಯೆನಿಸಿಕೊಳ್ಳುವುದು.
(ಹಗೆಗಳಿಂದ ನಾಶಪಡಿಸಲಾಗದಂತೆ) ಎತ್ತರ, ಅಗಲ, ದೃಢತೆ, ದುರ್ಗಮತೆಗಳೆಂಬ ನಾಲ್ಕೂ ಕೂಡಿರುವುದೇ ಕೋಟೆ ಎಂದು ಶಾಸ್ತ್ರ ಬಲ್ಲವರು ಹೇಳುವರು.
ಕಾವಲಿಡುವ ಜಾಗ ಕಿರಿಯದಾಗಿ, ಒಳೆ ವಿಸ್ತರಣ, ವಿಶಾಲ ಹರಹುಳ್ಳದಾಗಿ, ಮುತ್ತಿಗೆ ಹಾಕುವ ಕಡು ಹಗೆಗಳ ಶಕ್ತಿಯನ್ನು ನಾಶಪಡಿಸಬಲ್ಲುದೇ ಕೋಟೆ ಎನಿಸಿಕೊಳ್ಳುವುದು.
ಹಗೆಳಿಂತ ವಶಪಡಿಸಿಕೊಳ್ಳಲು ಅಸಾಧ್ಯವಾದುವಾಗಿ, ಆಹಾರವನ್ತುಗಳನ್ನು ಹೇರಳವಾಗಿ ಪಡೆದು, ತನ್ನೊಳಗೆ ನೆಲಸಿರುವವರನ್ನು ರಕ್ಷಿಸಿ ಸುಖವಾಗಿಡುವುದೇ ಕೋಟೆ ಎನಿಸಿಕೊಳ್ಳುವುದು.
ಒಳಗಿರುವವರಿಗೆ ಬೇಕಾದ ಎಲ್ಲಾ ಆವಶ್ಯವಾದ ವಸ್ತುಗಳನ್ನು ಪಡೆದು, ಶತ್ರುಗಳೊಡನೆ ಹೋರಾಡುವ ಸಮಯದಲ್ಲಿ ರಕ್ಷಿಸಬಲ್ಲ ಒಳ್ಳೆಯ ವೀರರನ್ನು ಹೊಂದಿರುವುದೇ ಕೋಟೆ ಎನಿಸಿಕೊಳ್ಳುವುದು.
ಮುತ್ತಿಗೆ ಹಾಕಿಯೂ, ಮುತ್ತಿಗೆ ಹಾಕದೆ ಮೇಲೆಬಿದ್ದು ಹೋರಾಟ ನಡೆಸಿಯೂ ವಂಚನೋಪಾಯಗಳಿಂದಲೂ ವಶಪಡಿಸಿಕೊಳ್ಳಲು" ದುಸ್ಸಾಧುಅವಾದುದೇ ಕೋಟೆ.
ಮುತ್ತಿಗೆ ಆಕುವುದರಲ್ಲಿ ಬಲಿಮೆಯನ್ನು ತೋರಿ ಸುತ್ತುವರಿದ ಹಗೆಗಳನ್ನು ಎದುರಿಸಿ ಬಳಗಿರುವರು, ನೆಲೆಯಾಗಿ ನಿಂತು ಹೋರಾಡಿ ಗೆಲ್ಲುವುದೇ ಕೋಟೆ.
ಯುದ್ಧ ಮುಖದಲ್ಲಿ ಶತ್ರುಗಳು ಸಾಯುವಂತೆ ಹೋರಾಟ ನಡೆಸುವುದರಿಂದ (ಒಳಗಿರಿವವರು) ಹಿರಿಮೆ ತೋರಿ, ಕೀರ್ತಿಶಾಲಿಗಳಾಗುವಂತೆ ಮಾಡುವುದೇ ಕೋಟೆ.
ಎಲ್ಲ ಬಗೆಯ ಹಿರಿಮೆಯನ್ನು ಹೊಂದಿದ್ದರೂ ಒಳಗಿರುವವರು ಕಾರ್ಯದಕ್ಷತೆಯ ಹಿರಿಮೆ ಕೋಟೆಯು ವ್ಯರ್ಥವೆನಿಸುವುದು.
ಹುರುಳಿಲ್ಲದವರನ್ನು ಗಣನೀಯರನ್ನಗಿ ಮಾಡುವುದು ಸಿರಿ; ಅದಕ್ಕಿಂತ ಮುಖ್ಯವಾದ ವಸ್ತು ಲೋಕದಲ್ಲಿ ಬೇರೆ ಇಲ್ಲ.
ಬಡವರನ್ನು (ಅವರಲ್ಲಿ ಒಳ್ಳೆಯ ಗುಣಗಳಿದ್ದರೂ) ಎಲ್ಲರೂ ಕೀಳಾಗಿ ನೋಡುವರು; ಸಿರಿವಂತರನ್ನು (ಅವರಲ್ಲಿ ಅವಗುಣಗಳಿದ್ದರೂ) ಎಲ್ಲರೂ ಸ್ತುತಿಸುವರು.
(ಒಬ್ಬನಲ್ಲಿರುವ) ಸಿರಿ ಎನ್ನುವ ನಂದದ ಬೆಳಕು, ಅವನು ನೆನೆದ ಪ್ರದೇಶವನ್ನೆಲ್ಲ ವ್ಯಾಪಿಸಿ, ಇರುವ ಕತ್ತಲನ್ನೆಲ್ಲ (ಆತಂಕಗಳನ್ನೆಲ್ಲ) ಹೋಗಲಾಡಿಸುತ್ತದೆ.
ಸರಿಯಾದ ಮಾರ್ಗವರಿತು, (ಇತರರಿಗೆ) ಕೆಡುಕುಂಟು ಮಾಡದೆ ಬಂದು ಸೇರಿದ ಸಿರಿಯು, (ಒಬ್ಬನಿಗೆ) ಸನ್ಮಾರ್ಗವನ್ನೂ ಸಂತೋಷವನ್ನು ಈಯುತ್ತದೆ.
(ಪ್ರಚೆಗಳಲ್ಲಿ) ದಯೆ, ಪ್ರೀತಿಗಳನ್ನು ತೋರದೆ, ಬರುವ ಸಿರಿ ಸಂಪತ್ತನ್ನು ಅರಸನಾದವನು ಸ್ವೀಕರಿಸದೆ ದೂರವಿಡಬೇಕು.
ಸಾರ್ವಜನಿಕೆ ಹಣ, ಸುಂಕ ರೂಪದಲ್ಲಿ ಬಂದ ಹಣ, ತನ್ನ ಶತ್ರುಗಳನ್ನು ಗೆದ್ದ ಮೇಲ್;ಎ ಅವರು, ಕಪ್ಪವಾಗಿಕೊಡುವ ಹಣ- ಇದು ಅರಸನ (ಅಧಿಕಾರಕ್ಕೆ ಸೇರಿದ) ಸೊತ್ತಾಗುವುದು.
ಕರುಣೆ ಎನ್ನುವುದು ಪ್ರೀತಿಯ ಕೂಸು ಇದ್ದಂತೆ; ಅದು ಬೆಳೆಯಬೇಕಾದರೆ ಸಿರಿಯೆನ್ನುವ ಅಕ್ಕರೆಯ ಪೋಷಣೆ ಬೇಕು.
ತನ್ನ ಕೈಯಲ್ಲಿ ಸಿರಿಯಿಟ್ಟುಕೊಂಡು ಒಬ್ಬನು ಒಂದು ಕೆಲಸವನ್ನು ಕೈಗೊಂಡರೆ ಬೆಟ್ಟವೆನ್ನೇರಿ ಆನೆಗಳ ಹೋರಾಟವನ್ನು ಕಂಡದೆ ಅದರ ಫಲವು ನಿಚ್ಚಳವಾಗಿರುತ್ತದೆ.
ಹಣವನ್ನು (ಹೇರಳವಾಗಿ) ಕೂಡಿಸಬೇಕು; ಅದು ಶತ್ರುಗಳ ಗರ್ವವನ್ನು ಕತ್ತರಿಸಿ ಹಾಕುವ ಆಯುಧ; ಅದಕ್ಕಿಂತ ಹಿರಿತವಾದ ಆಯುಧ ಬೇರೆ ಇಲ್ಲ.
ಒಳ್ಳೆಯ ಮಾರ್ಗದಲ್ಲಿ ವೃದ್ಧಿಯಾಗುವಂತೆ ಹಣವನ್ನು ಕೂಡಿಸಿಟ್ಟವರಿಗೆ ಊಳಿದ ಎರೆಡು ವಸ್ತುಗಳಾದ ಸದ್ಗುಣ ಮತ್ತು ಸಂತೋಷಗಳು ಏಕಕಾಲದಲ್ಲಿ ನೆನೆದಾಗ ಬರುವುವು. ಅದ್ಗ್ಯಾಯ 77. ಪಡೆಗಳ ಹಿರಿಮೆ.
ಚತುರಂಗ ಬಲವನ್ನು ಕೂಡಿಕುಂಡು, ಗಾಯಗಳಿಗೆ ಅಂಜದೆ ಶತ್ರುಗಳೊಂದಿಗೆ ಹೋರಾಡಿ ಜಯ ತರುವಂಥ್ ಪಡೆಯು ಅರಸನ ಸೊತ್ತುಗಳಲ್ಲೆಲ್ಲಾ ಮಿಗಿಲಾದುದೆನಿಸುವುದು.
ತನ್ನ ಬಲ ಕುಂದಿ ಹೋರಾಟದಲ್ಲಿ ಅಳಿವು ಬಂದಾಗಲೂ, ಸಂಕಟಗಳಿಗೆ ಹೆದರದೆ ಅರಸನ ಬೆಂಗಾವಲಿಗೆ ನಿಲ್ಲುವ ಎದೆಗಾರಿಕೆ, ಪರಂಪರಾಗತವಾದ ಹಿರಿಮೆಯುಳ್ಳ ಪಡೆಗಲ್ಲದೆ ಬೇರೆ ಪಡೆಗಳಿಗೆ ಸಾಧ್ಯವಿಲ್ಲ.
ಇಲಿಗಳ ಸಮೂಹವು (ಶತ್ರುಸೇನೆ) ಭೋರ್ಗರೆವ ಕಡಲಿನಂತೆ ಗರ್ಜಿಸಿದರ ನಾಗರಹಾವಿಗೆ ಹಾನಿಯೇನು? ಆ ನಾಗರಹಾವು ಒಮ್ಮೆ ಉಸಿರು ಬಿಟ್ಟರೆ ಸಾಕು ಇಲಿಗಳೆಲ್ಲ ನಾಶವಾಗುವುದು.
ಯುದ್ಧ ಕಣದಲ್ಲಿ ಅಳಿವಿಲ್ಲದೆ, ಹಗೆಗಳ ವಂಚನೆಗೆ ತುತ್ತಾಗದೆ, ಪರಂಪರೆಯಿಂದ ಬಂದ ಪರಾಕ್ರಮವುಳ್ಳದೆ ಅರಸನ ಪಡೆಯೆನಿಸಿಕೊಳ್ಳುವುದು.
ಯಮನೇ ಕೋಪಗೊಂಡು ಮೇಲೆ ಬಿದ್ದರೂ, ಒಂದಾಗಿ ಕೂಡಿ ಎದುರಿಸಿ ನಿಲ್ಲುವ ಎದೆಗಾರಿಕೆಯುಳ್ಳದೇ ಪಡೆ ಎನಿಸಿಕೊಳ್ಳುವುದು.
ಪರಾಕ್ರಮ, ಅಭಿಮಾನ, ತನ್ನ ಹಿಂದಿನ ವೀರರು ತುಳಿದ ಹಾದಿಯಲ್ಲಿ ಮುನ್ನುಗ್ಗುವ ನಡೆ, ಅರಸನ ವಿಶ್ವಾಸ ಮನ್ನುವ ನಾಲ್ಕು ಗುಣಗಳೇ ಪಡೆಗೆ ಬೆಂಗಾವಲಾಗುವುದು.
ತನ್ನ ಮೇಲೆ ಬೀಳಲು ಬಂದ ಹಗೆಗಳ ಪಡೆಯನ್ನು ಹಿಮ್ಮೆಟ್ಟಿಸುವ ನೆಲೆಯನ್ನು ತಿಳಿದುಕೊಂಡು, ಶತ್ರು ಪಡೆ ತನ್ನ ಬಳಿ ಸಾರುವ ಮುನ್ನವೇ ತಾನೇ ಮುನ್ನುಗ್ಗಿ ನಡೆಯುವುದು ಪಡೆ.
ಮೇಲೆ ಬಿದ್ದು ಹೋರಾಡುವ ಕೆಚ್ಚು, ಪರಾಕ್ರಮವೂ ಇಲ್ಲವಾದರೂ, ಪಡೆಯು ತಾನು ಯುದ್ಧವನ್ನು ಎದುರಿಸಲು ಮಾಡಿಕೊಳ್ಳುವ ಸಿದ್ಧತ್ರ್ಯಿಂದಲೇ ಹಿರಿಮೆಯನ್ನು ಪಡೆಯುವುದು.
(ಗಾತ್ರದಲ್ಲಿ) ಕಿರಿದಾಗಿರುವುದು, ಅನುಚಿತವಾದ ಕೋಪ ಮತ್ತು ಬಡತನ ಇವು ಇಲ್ಲವಾದಲ್ಲಿ ಪಡೆಯು ಯುದ್ಧದಲ್ಲಿ ಗೆಲ್ಲುತ್ತದೆ.
ಸ್ಥೈರ್ಯವುಳ್ಳ ವೀರರು ಹಲವು ಮುಂದಿ ಇದ್ದರೂ, ಸರಿಯಾದ ನಾಯಕರು ಇಲ್ಲವಾದಲೇ ಆ ಪಡೆಗೆ ಹಿರಿಮೆ ಇಲ್ಲವಾಗುವುದು.
ಹಗೆಗಳೇ, ತನ್ನ ನಾಯಕನ ಮುಂದೆ ಎದುರಿಸಿ ನಿಲ್ಲಬೇಡಿರಿ! ಹಾಗೆ ಮಾಡಿದವರನೇಕರು ಕಲ್ಲಾಗಿ ನಿಂತಿದ್ದಾರೆ.
ಕಾಡಿನಲ್ಲಿ ಮೊಲಕ್ಕೆ ಗುರಿತಾಗುವಂತೆ ಹೊಡೆದ ಅಂಬಿಗಿಂತ, ಆನೆಯ ಮೇಲೆ ಹೊಡೆದು ಗುರಿ ತಪ್ಪಿದ ಶೂಲವನ್ನು ಹೊದಿರುವುದೇ ಮೇಲು.
(ಹಗೆಯನ್ನು ಎದುರಿಸುವ) ವೀರತ್ವವನ್ನು ಅತಿದೊಡ್ಡ ಶೌರ್ಯ ಪ್ರದರ್ಶನವೆಂದು ಹೇಳುವರು. ಅದೇ ಹಗೆಗೆ ಆಪತ್ತು ಬಂದಾಗ ಉದಾರವಾಗಿ ನಡೆದುಕೊಳ್ಳುವುದು ಶೌರ್ಯದ ಪರಮಾವಧಿಯಾಗುವುದು.
ತನ್ನ ಕೈಯಲ್ಲಿದ್ದ ಶೂಲದಿಂದ ಎದುರಿಸಿ ಬಂದ ಆನೆಯನ್ನು ತಿವಿದು ಬೇರೊಂದು ಆನೆಯನ್ನು ತಿವಿಯಲು ಶೂಲಕ್ಕಾಗಿ ಅರಸುತ್ತ ಬಂದ ಯೋಧನು, ತನ್ನ ಮೈಮೇಲೆ ಶೂಲವೊಂದು ಬಂದು ನಾಟಲು, ಅದನ್ನು ಕಿತ್ತು ತೆಗೆಯುತ್ತ ಆನಂದಪಡುವನು.
ಹಗೆಗಳನ್ನು ಕೋಪದಿಂದ ಅಗಲಿಸಿ ನೋಡುವ ಕಣ್ಣು, ಅವರು ಶೂಲದಿಂದ ಇರಿಯುವಾಗ, ಆ ನೋವನ್ನು ತಾಳಲಾರದೆ, ಒಮ್ಮೆ ಮುಚ್ಚಿ ತರೆದರೆ, ಅದು ಶೂರರಾದವರಿಗೆ ಸೋಲಿನ ಸಮಾನವಲ್ಲವೆ?
ವೀರನಾದವನು, ತಾನು (ಯುದ್ಧದಲ್ಲಿ) ಕಳೆದ ದಿನಗಳ ಲೆಕ್ಕ ಇಟ್ಟು, ಅವುಗಳಲ್ಲಿ ತೀವ್ರವಾದ ಗಾಯಗಳನ್ನು ಹೊಂದದಿರುವ ದಿನಗಳೆಲ್ಲ ವ್ಯರ್ಥವಾಯಿತೆಂದು ಭಾವಿಸುತ್ತಾನೆ.
ಬಿರುಗಾಳಿಯಂತೆ ಭೂಮಿಯಲ್ಲಿ ವ್ಯಾಪಿಸುವ ಕೀರ್ತಿಯನ್ನು ಬಯಸಿ ಪ್ರಾಣವನ್ನು ಲೆಕ್ಕಿಸದ ವೀರರು, ಕಾಲಿಗೆ ಕಟ್ಟುವ ವೀರ ಕಡಗವು ಅವರಿಗೆ ಅಲಂಕಾರವಾಗಿ ಶೋಭಿಸುವುದು.
ಯುದ್ಧ ಸಂಭವಿಸಿದಾಗ ಪ್ರಾಣಕ್ಕೆ ಹೆದರದಿರುವ ಯೋಧರು, ತಮ್ಮ ಅರಸನು, ಕೋಪದಲ್ಲಿ ಯ್ಯುದ್ಧವನ್ನು ಹಿಂದೆಗೆದುಕೊಂಡರೂ, ತಮ್ಮ ಶೌರ್ಯದಲ್ಲಿ ಕುಂದುವುದಿಲ್ಲ.
ತಾವು ಕೈಗೊಂಡ ಪ್ರತಿಜ್ಞೆಯನ್ನು ತಪ್ಪದೆ ನಡಿಸಿ ಸಾಯಲು ಸಿದ್ಧರಾಗಿರುವವರನ್ನು ಅವರು ತಪ್ಪಿದರೆಂದು ಹೇಳಿ ದಂಡಿಸುವ ಹಕ್ಕು ಯಾರಿಗಿದೆ?
ಪೂರೆಯುವ ಅರಸರ ಕಣ್ಣುಗಳು ಕಂಬನಿಯಿಂದ ತುಂಬುವಂತೆ (ಯುದ್ಧದಲ್ಲಿ) ಸಾವನ್ನಪ್ಪುವುದಾದರೆ, ಅಂಥ ಸಾವನ್ನು ಭಿಕ್ಷೆಯೆತ್ತಿಯಾದರೂ ಪಡೆದುಕೊಳ್ಳಬೇಕು.
ಸ್ನೇಹಕ್ಕಿಂತ ಪಡೆಯಲು ಕಷ್ಟವಾದ ವಸ್ತು ಯಾವುದಿದೆ? ಹಾಗೆ ಪಡೆದುಕೊಂಡ ಸ್ನೇಹಕ್ಕಿಂತ ಶತ್ರುಗಳ ಸಂಚನ್ನು ಮುರಿಯಲು ಮಿಗಿಲಾದ ರಕ್ಷಣೆ (ಅರಸನಿಗೆ) ಬೇರೆ ಯಾವುದೆ?
ತುಂಬಿದ ಅರಿವುಳ್ಳವರ ಗೆಳೆತನ ಬಿದಿಗೆಯ ಚಂದ್ರನು ವರ್ಧಿಸಿದಂತೆ; ಅರಿವುಗೇಡಿಗಳ ಕೆಳೆತನ ಪೂರ್ಣ ಚಂದ್ರ ತೇಯುತ್ತ ಕ್ಷಯಿಸುವಂತೆ.
ಒಳ್ಳೆಯ ಗ್ರಂಥಗಳನ್ನು ಓದುತ್ತ ಓದುತ್ತ ಮನಸ್ಸು ಆನಂದಿಂದ ವಿಕಾಸವಾಗುವಂತೆ, ಸದ್ಗುಣೆಗಳ ಸ್ನೇಹವೂ ಪಳಗಿದಂತೆಲ್ಲ ಹೆಚ್ಚು ಸಂತೃಪ್ತಿಯನ್ನು ತರುವುದು.
ಸ್ನೇಹ ಮಾಡುವುದು ಬರಿಯ ಸಂತೋಷಕ್ಕಾಗಿ ಅಲ್ಲ; ಸ್ನೇಹಿತರಾದವರು ದಾರಿತಪ್ಪಿದಾಗ ಮುಂದೆ ನಿಂತು ಅವರ ತಪ್ಪುಗಳನ್ನು ನಿಷ್ಠುರವಾಗಿ ಎತ್ತಿ ಹೇಳಬೇಕು.
ನಿಕಟವಾದ ಒಡನಾಟವಾಗಲೀ, ಪರಸ್ಪರ ಬಳಕೆಯಾಗಲೀ ಸ್ನೇಹಕ್ಕೆ ಅಗತ್ಯವಿಲ್ಲ; ಒಬ್ಬರನ್ನೊಬ್ಬರು (ಅಂತರಂಗದಲ್ಲಿ) ಅರಿತು ನಡೆದುಕೊಳ್ಳುವುದರಿಂದ ಸ್ನೇಹದ ಹಕ್ಕನ್ನು ಪಡೆಯುಬಹುದು.
ಕಂಡಾಗ ಮುಖದಲ್ಲಿ ಮಾತ್ರ ನಗೆ ಸೂಸುವ ಕೆಳೆತನವು ಕೆಳೆ ಎನಿಸಿಕೊಳ್ಳುವುದಿಲ್ಲ; ಪ್ರೀತಿಯಿಂದ ಹೃದಯವರಳಿಸಿ ಸಕ್ಕಾಗ ಅದು ಸ್ನೇಹವೆನಿಸಿಕೊಳ್ಳುವುದು.
ಆಪ್ತನಾದವನ್ನು ಕೇಡಿನ ಮಾರ್ಗದಿಂದ ತಪ್ಪಿಸಿ, ಅವನನ್ನು ಸನ್ಮಾರ್ಗದಲ್ಲಿ ನಡೆಸಿ, ಆಪತ್ಕಾಲದಲ್ಲಿ ಅವನೊಡನಿದ್ದು ದುಃಖದಲ್ಲಿ ಪಾಲ್ಗೊಳ್ಳುವುದೇ ಸ್ನೇಹವೆನಿಸುವುದು.
(ಸಭೆಯಲ್ಲಿ) ತೊಟ್ಟ ಉಡುಗೆ ಚಾರಿದರೆ ಕೂಡಲೇ ಕೈ ಅದನ್ನು ಹಿಡಿದು ಕೊಳ್ಳುವಂತೆ, ಗೆಳೆಯನ ಸಂಕಟ ಕಾಲದಲ್ಲಿ ಕೂಡಲೇ ನೆರವಾಗಿ ಅವನ ಕಷ್ಟವನ್ನು ಪರಿಹರಿಸುವುದೇ ಗೆಳೆತನವೆನ್ನಿಸಿಕೊಳ್ಳುತ್ತದೆ.
ಗೆಳೆತನಕ್ಕೆ ಉನ್ನತವಾದ ನೆಲೆ ಯಾವುದೆಂದರೆ ಗೆಳೆಯನಿಂದ ಬೇರೆಯಾಗದೆ ಸಾಧ್ಯವಾದಾಗಲೆಲ್ಲ ಅವನ ಸಂಕಟದ ವೇಳೆಯಲ್ಲಿ ನೆರವಾಗಿ ನಿಲ್ಲುವುದು.
"ಇವರು ನಮಗೆ ಬಹಳ ಬೇಕಾದವರು, ನಾವು ಅವರಿಗೆ ಬಹಳ ಬೇಕಾದವರು". ಎಂದು ಪರಸ್ಪರ ಪ್ರಶಂಸಿಸಿಕೊಳ್ಳುವುದು ಸ್ನೇಹವನ್ನು ಕೀಳು ಮಾಡುತ್ತದೆ.
ಪರೀಕ್ಷೆ ಮಾಡದೆ (ವಿಚಾರ ಮಾಡದೆ) ಬೆಳೆಸಿದ ಸ್ನೇಹಕ್ಕಿಂತ ಕೆಟ್ಟದು ಬೇರಿಲ್ಲ; ಸ್ನೇಹಶೀಲರಾದವರಿಗೆ ಒಮ್ಮ ಸ್ನೇಹ ಗಳಿಸಿದ ನಂತರ ಅದರಿಂದ ಬಿಡುಗಡೆಯಿಲ್ಲ.
ಹಲವು ಬಾರಿ ಪರೀಕ್ಷಿಸಿ ಸ್ನೇಹವನ್ನು ಕೈಗೊಳ್ಳದವನ ಗೆಳೆತನದ ಪರಿಣಾಮವೆಂದರೆ ತಾನು ಸಾಯುವ ತನಕ ದುಃಖವನ್ನು ಅನುಭವಿಸುವುದು.
ಒಬ್ಬನ ಗುಣವನ್ನೂ, ಕುಲೀನತೆಯನ್ನೂ, ಗುಣದೋಷಗಳನ್ನೂ, ಕುಂದದಿರುವ ಬಂಧುಗಳ ಸ್ವಭಾವವನ್ನು ಅರಿತು ಸ್ನೇಹವನ್ನು ಕೈಗೊಳ್ಳಬೇಕು.
ಒಳ್ಳೆಯ ಕುಲೀನನಾಗಿದ್ದು, ತನ್ನನ್ನು ಕುರಿತ ಬರುವ ನಿಂದೆಗಳಿಗೆ ನಾಚುವವನ ಸ್ನೇಹವನ್ನು ಏನಾದರೂ ಪ್ರತಿಫಲ ಕೊಟ್ಟಾದರೂ ಕೊಂಡುಕೊಳ್ಳಬೇಕು.
ಲೋಕಾಚಾರವಲ್ಲದ ಕೆಲಸವನ್ನು ಮಾಡೀದಾಗ ಪಶ್ಚಾತ್ತಾಪ ಪಡುವಂತೆ ನಿಂದಿಸಿ ಹೇಳುವ, ಲೋಕದ ನಡೆಯನ್ನು ಅರಿಯುವಂತೆ ಮಾಡುವ ಸ್ನೇಹವನ್ನು ಶೋಧಿಸಿ ಪಡೆದುಕೊಳ್ಳಬೇಕು.
ಕೇಡಿನಲ್ಲಿಯೂ ಒಂದು ಒಳ್ಳೆಯ ಗುಣವುಂಟು; ಅದು ಗೆಳೆಯರ ಗುಣ ಸ್ವಭಾವಗಳನ್ನು ಹಾಸಿ ಅಳೆಯುವ ತೋರುಗೋಲಾಗುವುದು.
ಒಬ್ಬನಿಗೆ ಲಾಭದಾಯಕವಾದ ವಿಷಯವೆಂದರೆ, ಮೂರ್ಖರ ಗೆಳೆತನವನ್ನು ತ್ಯಜಿಸಿ ದೂರವಿರುವುದು.
ಮನಸನ್ನು ಅಸ್ಥಿರಗೊಳ್ಳುವ ಆಲೋಚನೆಗಳನ್ನು ಮನಸ್ಸಿನಲ್ಲಿ ನೆನೆಯದಿರಬೇಕು; (ಅದೇ ರೀತಿ) ಸಂಕಟದ ಸಮಯದಲ್ಲಿ ಕೈಬಿಡುವಂಥವರ ಸ್ನೇಹವನ್ನು ಕೈಗೊಳ್ಳದಿರಬೇಕು.
ನಾವು ಕೆಟ್ಟ ಸಮಯದಲ್ಲಿ ಕೈಬಿಡುವವರ ಕೆಳೆಯನ್ನು ಸಾವು ನಮ್ಮನ್ನು ಸೆಳೆದೊಯ್ಯುವ ಸಮಯದಲ್ಲಿ ನೆನೆದರೂ ಕೂಡ ಮನಸ್ಸು ಸುಡುವುದು.
ನಿಷ್ಠಳಂಕಿಗಳ ಗೆಳೆತನವನ್ನು ಅಪ್ಪಿ ಸ್ವೀಕರಿಸಬೇಕು; ಲೋಕದೊಂದಿಗೆ ಒಪ್ಪಿಲ್ಲದವರ ಗೆಳೆತನವನ್ನು ಪ್ರತಿಫಲ ಕೊಟ್ಟಾದರೂ ಕೈಬಿಡಬೇಕು.
ಸಲಿಗೆ ಎಂದರೆ, ಬಹಳ ಕಾಲದ ಗಾಢವಾದ ಗೆಳೆತನದ ಹಕ್ಕಿನಿಂದ ಮಾಡುವ ಕೆಲಸಗಳಲ್ಲಿ ಸ್ವಲ್ಪವೂ ವಿರೋಧವಿಲ್ಲದೆ ಬಂದಾಗಿರುವುದೇ.
ಗೆಳೆಯರಾದವರು ಸಲಿಗೆಯ ಹಕ್ಕಿನಿಂತ ಮಾಡೂವ ಕೆಲಸಗಳೇ ಗೆಳೆತನದ ಮುಖ್ಯವಾದ ಅಂಗಗಳು. ಅದುದರಿಂದ ಆ ಕೆಲಸಗಳಿಗೆ ಕೋಪಿಸಿಕೊಳ್ಳದೆ ಪರಸ್ಪರ ಒಪ್ಪಿಕೊಂಡು ಸಂತೋಷಪಡುವುದೇ ತಿಳಿದವರ ಲಕ್ಷಣ (ಧರ್ಮ)
ಸ್ನೇಹಿತರು ಸಲಿಗೆಯ ಹಕ್ಕಿನಿಂದ ಮಾಡಿದ ಕಾರ್ಯಗಳನ್ನು ಮಾಡಿದ ರೀತಿಯಲ್ಲೆ ಒಪ್ಪಿಕೊಳ್ಳುದ ಹೊದರೆ, ಅವರಲ್ಲಿರುವ ನಿಡುಗಾಲದ ಸ್ನೇಹದಿಂದೇನು ಲಾಭ?
ಗೆಳೆತನದ ಸಲಿಗೆಯಿಂದ ಸ್ನೇಹಿತರು ತಮ್ಮನ್ನು ಕೇಳದೆಯೇ ಏನಾದರೊಂದು ಕೆಲಸ ಮಾಡಿದಲ್ಲಿ, ಅದನ್ನು ತಿಳಿದವರು ಸಂತೋಷದಿಂದ ಒಪ್ಪಿಕೊಳ್ಳುವರು.
ಸ್ನೇಹಿತರಾದವರು ಮನಸ್ಸು ನೋಯುವಂಥ ಕೆಲಸವೇನಾದರೂ ಮಾಡಿದರೆ, ಅದಕ್ಕೆ ಅಜ್ಞಾನ ಮಾತ್ರವಲ್ಲದೆ, ಕೆಳೆತನದ ಗಾಢವಾದ ಸಲಿಗೆಯೂ ಕಾರಣವೆಂದು ತಿಳಿಯಬೇಕು.
ಸ್ನೇಹದ ಎಲ್ಲೆಯನು ಮೀರದೆ ಅದರ ಪರಿಧಿಯಲ್ಲಿ ನಿಂತರು, ಸ್ನೇಹಿತರಿಂದ ಕೇಡುಂಟಾದ ಸಮಯದಲ್ಲಿಯೂ ಅವರ ಗೆಳೆತನವನ್ನು ಬಿಡುವುದಿಲ್ಲ.
ಬಹುಕಾಲದ ಗಾಢ ಸ್ನೇಹದಲ್ಲಿ ಬಂದ ಸ್ನೇಹಿತರು, ತಮ್ಮಲ್ಲಿ ಪಳಗಿದವರೇ ತಮಗೆ ನಾಶವನ್ನು ತಂದರೂ ಅವರಲ್ಲಿರುವ ಪ್ರೀತಿಯನ್ನು ತ್ಯಜಿಸುವುದಿಲ್ಲ.
ತಮ್ಮ ಸಲಿಗೆಯ ಗೆಳೆಯರ ದೋಷಗಳನ್ನು ಇತರರು ಹೇಳಿದರೂ ಅದನ್ನು ಮನಸ್ಸಿಗೆ ಹಾಕಿಕೊಳ್ಳದೆ ಇರುವವರು, ಆ ಸ್ನೇಹಿತರು ತಪ್ಪು ಮಾಡಿದ ದಿನವೇ ಶುಭ ದಿನವೆಂದು ಬಗೆಯುತ್ತಾರೆ.
ಗಾಢತ್ವವು ಕೆಡದಂತೆ, ಬಹುಕಾಲದಿಂದ ಬೆಸೆದು ಬಂದ ಗೆಳೆತನದ ಸಂಬಂಧವನ್ನು ಕೈಬಿಡದೆ ಉಳಿಸಿಕೊಂಡು ಬಂದವರನ್ನು ಲೋಕವು ಪ್ರೀತಿಯಿಂದ ಕೊಂಡಾಡುತ್ತದೆ.
ತಮ್ಮ ಸಲಿಗೆಯ ಸ್ನೇಹಿತರ ಗಾಢವಾದ ಗೆಳೆತನದಿಂದ ವಿಮುಖರಾಗದವರನ್ನು ಅವರ ಶತ್ರುಗಳೂ ಕೊಂಡಾಡುತ್ತಾರೆ.
ಪ್ರೀತ್ಯಾಧಿಕ್ಯದಿಂದ ಹೀರಿಕೊಳ್ಳುವಂತೆ ಕಂಡರೂ ದುರ್ಜನರ ಕೆಳೆತನವುವೃದ್ಧಿಯಾಗುವುದಕ್ಕಿಂತ ನಶಿಸಿ ಹೋಗುವುದು ಒಳ್ಳೆಯದು.
ತಮಗೆ ಪ್ರಯೋಜನವಿರುವಾಗ ಸ್ನೇಹಮಾಡಿ, ಪ್ರಯೋಜನವಿಲ್ಲದಾಗ ದೂರಮಾಡುವ, ಹೊಂದಿಕೆ ಇಲ್ಲದವರ ಕೆಳೆಯನ್ನು ಹೊಂದಿದ್ದರೇನು?
ಬರುವ ಲಾಭದಿಂದ ಅಳೆದು ನೋಡುವ ಸ್ನೇಹಿತರು, ಪಡೆದ ಸೊತ್ತನ್ನು ಸೆಳೆಯುವ ವೇಶ್ಯಯರಿಗೂ, ಕಳ್ಳರಿಗೂ ಸಮಾನರು.
ಹೋರಾಟದ ಕಣದಲ್ಲಿ ತಿಳಿಬಿಟ್ಟು ಓಡುವ ಶಿಕ್ಷಣವಿಲ್ಲದ ಕುದುರೆಯಂಥವರ ಗೆಳೆತನಕ್ಕಿಂತಲೂ (ಗೆಳೆತನವೇ ಇಲ್ಲದ) ಏಕಾಂತ ಜೀವನವೇ ಮೇಲು.
ಆಪತ್ಕಾಲದಲ್ಲಿ ತಮ್ಮ ರಕ್ಷಣೆಗಾಗಿ ಇಟ್ಟುಕೊಂಡರೂ, ರಕ್ಷಣೆ ಮಾಡದಿರುವ ಕೀಳು ಜನರ ಸ್ನೇಹವನ್ನು ಹೊಂದುವುದಕ್ಕಿಂತಲೂ ಹೊಂದದಿರುವುದೇ ಲೇಸು.
ಅರಿವಿಲ್ಲದವರ ಅಧಿಕವಾದ ಸಲಿಗೆಯ ಸ್ನೇಹಕ್ಕಿಂತಲೂ, ಅರಿವುಳ್ಳವರ ನಿರ್ಲಕ್ಷ್ಯ ಮನೋಭಾವವು ಕೋಟಿಪಾಲು ಪ್ರಯೋಜನವನ್ನುಂಟು ಮಾಡುವುದು.
ಮನಸ್ಸಿನಲ್ಲಿ ಪ್ರೇಮವಿಲ್ಲದೆ, ನಗಿಸಿ ಕಾಲ ಕಳೆಯುವವರ ಸ್ನೇಹದಲ್ಲಿ ಪಡೆದುಕೊಳ್ಳುವ ಪ್ರಯೋಜನಕ್ಕಿಂತ ಹಗೆಗಳಿಂದ ಬರುವ ಲಾಭ ಹತ್ತು ಕೋಟಿ ಪಾಲು ಮೇಲು.
ತಾವು ಮಾಡಬಲ್ಲ ಕೆಲಸವನ್ನ್ನು ಮಾಡಲಾಗದೆ ಕೆಡೀಸುವವರ ಸ್ನೇಹವನ್ನು ಅವರಿಗೆ ತಿಳಿಯದ ಹಾಗೆ ಮೌನವಾಗಿ ಕೈಬಿಡಬೇಕು.
ನಡೆ ಬೇರೆ ನುಡಿ ಬೇರೆಯಾಗಿರುವವರ ಸ್ನೇಹವು ಒಬ್ಬನಿಗೆ ಕನಸಿನಲ್ಲಿ ಕೂಡ ದುಃಖವನ್ನು ತರುವುದಾಗುತ್ತದೆ.
ಪ್ರತ್ಯೇಕವಾಗಿರುವಾಗ ಅತಿಯಾದ ಒಲವು ತೋರಿ, ಸಭೆಯಲ್ಲಿ ಹಳಿಯುವವರ ಸ್ನೇಹವನ್ನು ಸ್ವಲ್ಪವೂ ಬಯಸದೆ ಕೈಬಿಡಬೇಕು.
ಮನಃಪೂರ್ವಕವಾಗಿ ಅಲ್ಲದೆ ಕೇವಲ ತೋರಿಕೆಗೆ ಹೊಂದಿಕೊಂಡವರ ಸ್ನೇಹವು ಸಮಯ ಬಂದಾಗ ಆಪತ್ತು ತರುವ ಬಲಿಗಲ್ಲಾಗುವುದು.
ಸ್ನೇಹಿತರಂತೆ ತೋರಿಸಿಕೊಂಡು, ಸ್ನೇಹಿತರಾಗದಿರುವವರ ಗೆಳೆತನವು, ಹೆಂಗಸರ ಮನಸ್ಸಿನಂತೆ, ಹೊರಗೊಂದು ಒಳಗೊಂದು ಆಗಿರುವುದು.
ಹಲವು ಒಳೆಯ ಗ್ರಂಥಗಳನ್ನು ಓದಿಕೊಂಡು ವಿದ್ಯಾವಂತರಾಗಿದ್ದರೂ ಮನಸ್ಸಿನಲ್ಲಿ ಒಳ್ಳೆಯವರಾಗಿರುವುದು, ಅಲ್ಪ ಮನಸ್ಕರಿಗೆ (ಹಗೆಗಳಿಗೆ) ಅಸಾಧ್ಯ.
ಕಂಡಾಗ ಮುಖದಲ್ಲಿ ಸ್ನೇಹದ ನಗೆ ಸೂಸುತ್ತ ಹೃದಯದಲ್ಲಿ ಕೆಟ್ಟದ್ದನ್ನು ಎಣಿಸುವ ವಂಚಕರನ್ನು ಕಂಡು ಹೆದರಿ ದೂರವಿರಬೇಕು.
ತಮ್ಮೊಡನೆ ಮನಸ್ಸಿನಲ್ಲಿ ಹೊಂದಾಣಿಕೆ ಇಲ್ಲದವರ ಯಾವೊಂದು ಮಾತಿನಲ್ಲೂ ವಿಶ್ವಾಸವಿಡಕೂಡದು.
ಹಗೆಗಳ ಮಾತು, ಸ್ನೇಹಿತರ ಮಾತಿನಂತೆ ಒಳ್ಳೆಯುದನ್ನೇ ಹೇಳಿದರೂ ಅದರಲ್ಲಿರುವ ಕೇಡಿನ ದನಿ, ಕೂಡಲೇ ಬಯಲಾಗುತ್ತದೆ.
ಬಿಲ್ಲಿನ ಡೊಂಕು ಅಥವಾ ಬಾಗುವಿಕೆಯು ಇನ್ನೊಬ್ಬರ ಪ್ರಾಣವನ್ನು ತೆಗೆಯುವುದರಿಂದ ಕೆಟ್ಟದ್ದನೇ ಸೂಚಿಸುವುದು; ಅದರಂತೆ, ಒಲ್ಲದವರ ಮಾತಿನ ವೆನಯ (ಡೊಂಕು) ಕೂಡ; ಅದನ್ನ್ಯ್ ಸ್ವೀಕರಿಸಬಾರದು.
(ಹಗೆಗಳು) ಕೈಮುಗಿದು ನಮಸ್ಕರಿಸುವಾಗಲೂ ಕೈಯೊಳಗೆ ಆಯುಧವನ್ನು ಅಡಗಿಸಿಟ್ಟುಕೊಂಡಿರುತ್ತಾರೆ; ಅವರು ಅತ್ತು ಸುರಿಸುವ ಕಾಣ್ಣೀರು ಕೂಡ ಅದೇ ಬಗೆಯದು (ವಂಚನೆಯಿಂದ ಕೂಡಿದುದು)
ಹೊರಗೆ ಮಿಗಿಲಾದ ಸ್ನೇಹವನ್ನು ತೋರಿಸುತ್ತ ಒಳಗೊಳಗೇ ತಮ್ಮನ್ನು ನಿಂದಿಸುವ ಹಗೆಗಳೊಡನೆ, ಅರಸನಾದವನು ತಾನೂ ಸ್ನೇಹವನ್ನು ಪ್ರಕಟಿಸಿ, ಒಳಗೇ ಆ ಸ್ನೇಹವು ನಶಿಸುವಂತೆ ವರ್ತಿಸಬೇಕು.
ಹಗೆಗಳು ಸ್ನೇಹಿತರಾಗುವ ಕಾಲ ಬಂದಾಗ, ಅರಸನು ಮುಖದಲ್ಲಿ ಸ್ನೇಹವನ್ನು ಪ್ರಕಟಿಸಿ, ಮನಸ್ಸಿನಲ್ಲಿ ಆ ಸ್ನೇಹವನ್ನು ತೊಡೆದು ಹಾಕಬೇಕು. ಸ್ವಲ್ಪ ಕಾಲದ ನಂತರ ಬಹಿರಂಗವಾಗಿಯೂ ಆ ಸ್ನೇಹವನ್ನು ಕೈಬಿಡಬೇಕು.
ತನಗೆ ಕೆಡುಕಾದುದನ್ನು ಕೈಗೊಂಡು ತನಗೆ ಪ್ರಯೋಜನ ತರುವುದನ್ನು ಕೈಬಿಡುವುದೇ ದಡ್ಡತನ ಎನಿಸಿಕೊಳ್ಳುವುದು.
ತನ್ನ ನಡತಗೆ ಒಗ್ಗದ ಕೆಲಸಗಳನ್ನು ಬಯಸಿ ಕೈಗೊಳ್ಳುವುದು ದಡ್ಡತನದ ಪರಮಾವಧಿಯೆನಿಸುವುದು.
ಲಜ್ಜೆಗೇಡಿತನ, ಗೊತ್ತುಗುರಿ ಇಲ್ಲದಿರುವಿಕೆ, ಪ್ರೇಮಶೂನ್ಯತೆ, ಯಾವ ವಿಷಯದಲ್ಲೂ ಆಸಕ್ತಿ ಇಲ್ಲದಿರುವಿಕೆ- ಇವು ದಡ್ಡತನದ ಲಕ್ಷಣಗಳು.
ಹಲವು ಗ್ರಂಥಗಳನ್ನು ಓದಿ, ಗ್ರಹಿಸಿ, ಇತರರಿಗೆ ಅದನ್ನು ಬೋಧಿಸಿಯೂ ತಾನು ಮಾತ್ರ ತ್ರಿಕರಣ ಶುದ್ಧಿಯಿಂದ ದಡ್ಡನಿಗಿಂತ ಮಿಗಿಲಾದ ದಡ್ಡ ಬೇರಿಲ್ಲ.
ದಡ್ಡನಾದವನು ಏಳು ಜನ್ಮದಲ್ಲಿ ಉಂಟಾಗುವ ದುಃಖ, ನರಕ ಯಾತನೆಗಳನ್ನು ಒಂದೇ ಜನ್ಮದಲ್ಲಿ ತನಗುಂಟಾಗುವಂತೆ ಮಾಡಿಕೊಳ್ಳಬಲ್ಲನು.
ಕೆಲಸದ ವಿಧಾನವನ್ನು ಅರಿಯದ ದಡ್ಡನು ಒಂದು ಕೆಲಸವನ್ನು ಕೈಗೊಂಡರೆ, ಆ ಕೆಲಸವು ನಿಷ್ಫಲವಾಗುವುದು ಮಾತ್ರವಲ್ಲ, ಆ ಕೆಲಸದಿಂದ ಅವನು "ತಪ್ಪಿತಸ್ಥ" ನೆನಿಸಿ ಬೇಡಿ ತೊಡಿಸಿಕೊಳ್ಳುವನು.
ದಡ್ಡನಾದವನು ಹೇರಳವಾದ ಸಿರಿಯನ್ನು ಸಂಪಾದಿಸಿದಾಗ, ಅಪರಚಿತರು ಅದರ ಲಾಭ ಪಡೆದುಕೊಳ್ಳುವರು; ಹತ್ತಿರದ ಸಂಬಂಧಿಗಳು ಹಸಿವಿನಲ್ಲಿ ಬೀಳುವರು.
ದಡ್ಡನ ಕೈಯಲ್ಲಿರುವ ಒಡವೆಯೆಂಬುದು ಹುಚ್ಚನೊಬ್ಬನ ಕೈಯಲ್ಲಿ ಸಿಕ್ಕಿದ ಕಳ್ಳಿನಂತೆ.
ದಡ್ಡರೊಂದಿಗೆ ಮಾಡುವ ಗೆಳೆತನವು ಅತಿ ಮಧುರವಾಗಿರುತ್ತದೆ; ಏಕೆಂದರೆ ಅಗಲಿಕೆಯ ಸಮಯದಲ್ಲಿ ಯಾವೊಂದು ದುಃಖವನ್ನು ಅದು ಉಂಟು ಮಾಡುವುದಿಲ್ಲ.
ಬಲ್ಲವರ ಸಭೆಯಲ್ಲಿ ದಡ್ಡನಾದವನು ಹೊಗುವುದು, ಅಶುದ್ಧವಾದ ಕಾಲನ್ನು ತೊಳೆಯದೆ (ಮಲಗಲು) ಹಾಸಿಗೆಯ ಕಾಲಿಟ್ಟಂತೆ.
ಅರಿವುಗೇಡಿತನವು ದಾರಿದ್ರ್ಯದೊಳಗೇ ಅತಿ ಕ್ರೂರವಾದುದು; ಮತ್ತಿತರ ಸಿರಿ ಮೊದಲಾದವುಗಳ ದಾರಿದ್ರ್ಯವನ್ನು ಲೋಕವು (ಅಷ್ಟಾಗಿ) ಗಣನೆಗೆ ತೆಗೆದುಕೊಳ್ಳುವುದಿಲ್ಲ.
ಅರಿವುಗೇಡಿಯು ಮನಃಪೂರ್ವಕವಾಗಿ ಒಂದು ವಸ್ತುವನ್ನು ಯಾರಿಗಾದರೂ ಕೊಟ್ಟರೆ, ಅದು ಅವನ ಒಳ್ಳೆಯ ಗುಣವನ್ನು ಸಾರುವುದಕ್ಕಿಂತ ಪಡೆಯುವವನ ಸತ್ಕರ್ಮವನ್ನು ಸಾರುವುದು.
ಅರಿವುಗೇಡಿಗಳುತಮಗೆ ತಾವೇ ತಂದೊಡ್ಡಿಕೊಳ್ಳುವ ಸಂಕಟ ಪರಿಸ್ಥಿತಿಯನ್ನು ಅವರ ಶತ್ರುಗಳೂ ಉಂಟುಮಾಡುವುದು ಅಸಾಧ್ಯ.
ಅರಿವುಗೇಡಿತನ ಯಾವುದೆಂದರೆ, ನಾನು "ಜ್ಞಾನಿ" ಎಂದು ಹೇಳಿಕೊಳ್ಳುವ ಅಹಂಕಾರವೇ.
ಮೂರ್ಖರು ತಾವು ಓದದಿರುವುದನ್ನು ಗ್ರಂಥಗಳನ್ನು ಓದಿರುವಂತೆ ನಟಸುವುದರಿಂದ ಅವರು ಓದಿರುವ ವಿಷಯಗಳಲ್ಲಿ ಕೂಡ ಇತರರಿಗೆ ಸಂಶಯ ಬರಲು ಕಾರಣವಾಗುತ್ತದೆ.
ತಮ್ಮ ದೋಷಗಳನ್ನು ತಿಳಿದು ಅವುಗಳನ್ನು ಮರೆಸಲು ಯತ್ನಿಸದಿದ್ದರೆ ತಮ್ಮ ಮಾನವನ್ನು ಬಟ್ಟೆಗಳಿಂದ ಮರೆಮಾಚುವುದು ಅರಿವುಗೇಡಿತನವಾಗುತ್ತದೆ.
ಬಹು ಮುಖ್ಯವಾದ ಉಪದೇಶವನ್ನು ವಿಷಯವನ್ನು ಕಾಪಾಡಿಕೊಳ್ಳಲಾರದೆ ನಿರ್ಲಕ್ಷ್ಯ ಮಾಡುವ ಅರಿವಿಲ್ಲದವನು, ತಾನೇ ತನಗೆ ದೊಡ್ಡ ಕುತ್ತನ್ನು ತಂದುಕೊಳ್ಳುತ್ತಾನೆ.
ಅರಿವುಗೇಡಿಯು ತಿಳಿದವರು ಒಳ್ಳೆಯದನ್ನು ಹೇಳಿದರೂ ಪಾಲಿಸನು; ತಾನೂ ಅದನ್ನು ಅರಿತುಕೊಳ್ಳಲಾರನು; ಇಂಥವನ ಬದುಕು ಸಾಯುವವರೆಗೂ ಒಂದು ಕುತ್ತಾಗಿ ಪರಿಣಮಿಸುವುದು.
ಅರಿವುಗೇಡಿಗೆ, ಅರಿವು ಮೂಡಿಸಲು ಹೋಗುವವನು ಕೊನೆಯಲ್ಲಿ ತಾನೇ ಬುದ್ಧಿಗೇಡಿಯಾಗಿ ಬಿಡುವನು; ಅರಿವಿಲ್ಲದವನು ತಾನು ಕಂಡ ರೀತಿಯಲ್ಲಿ ತಿಳಿದವನ ಹಾಗೆ ತೋರ್ಪಡಿಸಿಕೊಳ್ಳುವನು.
ಲೋಕದಲ್ಲಿ ಬಲ್ಲ ಹಿರಿಯ ಅನುಭವಿಗಳು ಇದೆ ಎನ್ನುವುದನ್ನು ಇಲ್ಲ ಎಂದು ಹೇಳುವವನು, ಭೂಮಿಯ ಮೇಲೆ ಸುಳಿದಾಡುವ ಪಿಶಾಚಿಕೆ ಸಮಾನ ಎಂದು ಭಾವಿಸಬೇಕು.
(ಲೋಕದಲ್ಲಿರುವ) ಜೀವಿಗಳು ಪರಸ್ಪರ ಹೊಂದಿಕೊಳ್ಳದಂತೆ ಬೇರ್ಪಡಿಸುವ ಕೆಟ್ಟ ಜಾಡ್ಯವೇ ಹಗೆತನವೆಂದು (ತಿಳಿದವರು) ಹೇಳುವರು.
ಒಬ್ಬನು ತನಗೆ ಆಗದವರ ಸಬಂಧದಲ್ಲಿ ಅಗಲಿಕೆಯನ್ನು ಬಯಸಿ ಅಹಿತವನ್ನು ಉಂಟು ಮಾಡಿದರೂ, ಅವರಲ್ಲಿ ಹಗೆತನ ಬೆಳೆಸಿ ಕೇಡುಂಟು ಮಾಡದಿರುವುದೇ ಮೇಲು.
ಹಗೆಯನವೆನ್ನುವ ದುಃಖಕರವಾದ ನೋವನ್ನು ಒಬ್ಬನು ನೀಗಿದಲ್ಲಿ, ಅಳಿವಿಲ್ಲದ ನೆಲೆಯಾದ ಕೀರ್ತಿಯನ್ನು ಪಡೆಯುವನು.
ಹಗೆತನವೆನ್ನುವ ಅತಿ ಸಂಕಟಕರವಾದ ದುಃಖವನ್ನು ತೊಡೆದು ಹಾಕುವುದರಿಂದ, ಸುಖ ಪ್ರಾಪ್ತಿಯಲ್ಲೀ ಮಿಗಿಲಾದ ಶಾಶ್ವತ ಆನಂದವು ಲಭಿಸುತ್ತದೆ.
ಮನದಲ್ಲಿ ತೋರುವ ಹಗೆ ತನಕ್ಕೆ ಎಡೆಕೊಡದೆ. ಅದರೆದುರು ನಾಚಿ ತಲೆತಗ್ಗಿಸಿ ನಡೆಯುವವರನ್ನು ಗೆಲ್ಲಬೇಕೆಂಬ ಅಭಿಲಾಶೆಯುಳ್ಳವರಾದರೂ ಯಾರಿದ್ದರೆ?
ಹಗೆತನವನ್ನು ಸಾಧಿಸುವುದರಿಂದ ಸಂತೋಷವಿದೆ ಎಂದು ತಿಳಿಯುವವನ ಬಾಳುವೆಯು ಅತಿ ಶೀಘ್ರದಲ್ಲಿಯೇ ಸೋಲನ್ನು ಅಳಿವನ್ನು ಪಡೆಯುವುದು.
ಹಗೆತನವನ್ನೇ ಬಯಸುವ ಕೆಟ್ಟ ಅರಿವುಳ್ಳವರು, ಜಯ ಸಾಧಕವಾದ ಸತ್ಯವನ್ನು ಕಾಣಲಾರರು.
ಮನದಲ್ಲಿ ತೋರುವ ಹಗೆತನಕ್ಕೆ ನಾಚಿ, ಅದರೆದುರು ತಲೆತಗ್ಗಿಸಿ ನಡೆದರೆ ಅದೇ ಐಶ್ವರ್ಯ; ಆ ಹಗೆತನವನ್ನು ಬಯಸಿ ಕೈಕೊಂಡರೆ ಅದೇ ಕೇಡಿಗೆ ಕಾರಣ.
(ಒಬ್ಬನಿಗೆ) ಐಶ್ವರ್ಯವು ಬರುವಾಗ, ಹಗೆತನವನ್ನು ಕಾಣಲಾರನು (ಎಣಿಸುವುದಿಲ್ಲ). ಆದರೆ, ತನಗೆ ಕೇಡು ಬರುವ ಕಾಲದಲ್ಲಿ ಆ ಹಗೆತನವನ್ನು ವೃದ್ಧಿಪಡಿಸಿಕೊಳ್ಳುತ್ತಾನೆ.
ಒಬ್ಬನಿಗೆ ಹಗೆತನದಿಂದ ದುಃಖವನ್ನು ತರುವ ಕೇಡುಗಳೆಲ್ಲವೂ ಉಂಟಾಗುತ್ತದೆ. ಆದರೆ ಮನವರಳಿಸುವ ಪ್ರೀತಿಯಿಂದ ಸದ್ಭಾವನೆಯೆಂಬ ಹಿರಿಮೆಯುಂಟಾಗುತ್ತದೆ. ಅದ್ಗ್ಯಾಯ 87. ಹಗೆತನದ ಹಿರಿಮೆ.
ತಮಗಿಂತ ಬಲಿಷ್ಠರಾದವರ ಮೇಲೆ ಎದುರಿಸಿ ಹೋಗುವುದನ್ನು ತಪ್ಪಿಸಿಕೊಳ್ಳಬೇಕು; ಬಲಹೀನರಾದವರ ಮೇಲೆ ಹಗೆತನವನ್ನು ಬಿಡದೆ ಸಾಧಿಸಬೇಕು.
(ಬಂಧು ಮಿತ್ರರ) ಪ್ರೀತಿ ಗಳಿಸದಿರುವವನು, ಬಲಿಷ್ಠವಾದ ನೆರವಿಲ್ಲದವನು, ತಾನೂ ಬಲಹೀನನಾಗಿರುವವನು, ಶತ್ರುವಿನ ಬಲವನ್ನು ಹೇಗೆ ಎದುರಿಸಬಲ್ಲನು?
ಒಬ್ಬನು ಅಂಜುಬುರುಕನಾಗಿ, ತಿಳಿವಳಿಕೆ ಇಲ್ಲದವನಾಗಿ, ಹೊಂದಿಕೊಂಡು ಹೋಗುವ ಗುಣವಿಲ್ಲದವನಾಗಿ, ಕೊಡುವ ಧಾರಾಳತೆ ಇಲ್ಲದವನಾಗಿದ್ದರೆ, ಅವನು ಹಗೆಗಳಿಗೆ ಸುಲಭನೂ ಸದರನೂ ಎನಿಸಿಕೊಳ್ಳುತ್ತಾನೆ.
ಕೋಪವನ್ನು ನೀಗದವನು, ತುಂಬಿದ ಗುಣವಿಲ್ಲದವನು ಅಂದರೆ ರಹಸ್ಯಗಳನ್ನು ಕಾಪಾಡಿಕೊಳ್ಳದವನು ಯಾವ ಕಾಲದಲ್ಲೂ ಯಾವೆಡೆಯಲ್ಲೂ ಯಾರಿಗಾದರೂ ಸದರವೆನಿಸಿಕೊಳ್ಳುವನು.
ನೀತಿ ಗ್ರಂಥಗಳಲ್ಲಿರುವ ಒಳ್ಳೆಯ ಮಾರ್ಗವನ್ನು ಕಾಣದವನು, ಸೂಕ್ತವಾದುದನ್ನು ಮಾಡದಿರುವವನು, ತನಗೆ ಬಂದ ನಿಂದೆಯನ್ನು ಲೆಕ್ಕಕ್ಕೆ ತರದವನು, ಸದ್ಗುಣಗಳಿಲ್ಲದವನು, ಹಗೆಗಳಿಗೆ (ಸದರವೆನಿಸಿ) ಸಂತೋಷವನ್ನುಂಟು ಮಾಡುವನು.
ನಿಜವರಿಯದೆ ಕೋಪ ತಾಳುವವನ, ಅತಿಯಾದ ಕಾಮ (ಆಶೆ) ವುಳ್ಲವನ ಹಗೆತನವನ್ನು, (ಹಗೆಗಳಾದವರು) ಬಯಸಿ ಸ್ವಾಗತಿಸುತ್ತಾರೆ.
ಒಂದು ಕೆಲಸದಲ್ಲಿ ತೊಡಗಿ ಅದನ್ನು ವಿರುದ್ಧವಾದ ದಿಕ್ಕಿನಲ್ಲಿ ಮುಗಿಸುವವನ ಹಗೆತನವನ್ನು ಹಣ ಕೊಟ್ಟಾದರೂ ಕೊಂಡುಕೊಳ್ಳಬೇಕು.
ಒಬ್ಬನು ಗುಣವಿಲ್ಲದವನಾಗಿ, ಅವನಲ್ಲಿ ಹಲವಾರು ದೋಷಗಳು ಇದ್ದರೆ ಅವನಿಗೆ ಕೆಳೆಯೇ ಇಲ್ಲವಾಗುವುದು. (ಅದರಿಂದ) ಅವನ ಹಗೆಗಳಿಗೆ ಸಂತೋಷವಾಗುವುದು.
ನ್ಯಾಯದ ತಿಳುವಳಿಕೆ ಇಲ್ಲದವರೂ, ಅಂಜುಕುಳಿ ಸ್ವಭಾವದವರೂ ಆದ ಹಗೆಗಳನ್ನು ಪಡೆದರೆ, ಅವರನ್ನು ಎದುರಿಸುವವರ ಸಂತೋಷಕ್ಕೆ ಕೋನೆಯೇ ಇಲ್ಲವಾಗುವುದು.
ಕಲಿಯದ ಅಜ್ಞಾನಿಯ ಹಗೆತನವನ್ನು ಸಾಧಿಸುವುದರಿಂದ ಬರುವ ಸುಲಭ ಸಂಪತ್ತನ್ನು ಬಯಸದಿರುವವನನ್ನು ಎಂದೂ ಕೀರ್ತಿಯೆಂಬ ಬೆಳಕು ಬಂದು ಸೇರುವುದಿಲ್ಲ.
ಹಗೆ ಎನ್ನುವ ಕೇಡಿನ ಸ್ವಭಾವವನ್ನು ಒಬ್ಬನು ಸಕ್ಕು ಹೊತ್ತು ಕಳೆಯುವ ಆಟವೆಂದು ಬಗೆಯಲಾಗದು.
ಬಿಲ್ಲನ್ನೇ ನೇಗಿಲಾಗಿ ಉಳುವವರ (ಯೋಧರ) ಹಗೆಯನ್ನು ಪಡೆದುಕೊಂಡರೂ, ಮಾತನ್ನೇ ನೇಗಿಲಾಗಿ ಉಳುವವರ (ಬುದ್ಧಿಮತಿಗಳ)ಹಗೆಯನ್ನು ಕೊಳ್ಳಬಾರದು.
ತಾನುಏಕಾಕಿಯಾಗಿದ್ದು ಹಲವು ಜನರ ಹಗೆತನವೆನ್ನೇ ಸಂಪಾದಿಸಿಕೊಳ್ಳುವವನು ಹುಚ್ಚರಿಗಿಂತ ಮಿಗಿಲಾದ ಅರಿವುಗೇಡಿಯಾಗುವನು.
ಹಗೆತನವನ್ನು ಸ್ನೇಹವಾಗಿ ಪರಿವರ್ತಿಸಿಕೊಂಡು ನಡೆದುಕೊಳ್ಳುವ ಗುಣವುಳ್ಳ ಅರಸನ ಹಿರಿಮೆಯೊಳಗೆ ಇಡೀ ಲೋಕವೇ ತಂಗಿರುತ್ತದೆ.
ತನಗೆ ಬೆಂಬಲವಾಗುವ ಸಹಾಯಕರೊಬ್ಬರು ಇಲ್ಲದೆ, ಹಗೆಯೂ ಎರಡು ಕಡೆಯಲ್ಲಿದ್ದು ತಾನು ಒಭ್ಭನೇ ಆಗಿರುವಾಗ, ಆ ಎರಡು ಹಗೆಗಳಲ್ಲಿ ಒಂದನ್ನು ತನ್ನ ಹಿತವನ್ನು ಬಯಸುವ ಬೆಂಬಲವಾಗಿ ಪಡೆದುಕೊಳ್ಳಬೇಕು.
ಹಗೆಯಾದವನನ್ನು ಈ ಮೊದಲು ಬಲಪರೀಕ್ಷೆ ಮಾಡಿ ತಿಳಿಯದಿದ್ದರೂ, ತನಗೆ ಆಪತ್ತು ಬಂದ ಕಾಲದಲ್ಲಿ ಅವನ ಸ್ನೇಹವನ್ನೂ ಗಳಿಸದೆ ಹಗೆತನವನ್ನೂ ಸಾಧಿಸದೆ ಮಧ್ಯವರ್ತಿಯಾಗಿರಬೇಕು.
ನೋವನ್ನು ಅರಿಯದ ಸ್ನೇಹಿತರಲ್ಲಿ ತಮ್ಮ ನೋವನ್ನು ತಾವಾಗಿಯೇ ಹೇಳಿಕೊಳ್ಳಬಾರದು; ಹಗೆಗಳ ಬಳಿ ತಮ್ಮ ದೌರ್ಬಲ್ಯವನ್ನು ವ್ಯಕ್ತಪಡಿಸಬಾರದು.
ಕೆಲಸ ಮಾಡುವ ರೀತಿಯನ್ನುರಿತು, ತನ್ನನ್ನು ಬಲಪಡಿಸಿಕೊಂಡು, ರಕ್ಷಿಸಿ ಕೊಂಡಲ್ಲಿ, ಹಗೆಗಳಲ್ಲುಂಟಾದ ಗರ್ವವು ತಾನಾಗಿಯೇ ನಾಶವಾಗುತ್ತದೆ.
ಮುಳ್ಳಿನ ಮರವನ್ನುಎಳೆಯದಾಗಿರುವಾಗಲೆ ಕತ್ತರಿಸಿ ಹಾಕಬೇಕು; ಅದು ಬಲವಾಗಿ ಬೆಳೆದ ನಂತರ, ಕಡಿಯಲು ಹೋದವರ ಕೈಯನ್ನೇ ಕತ್ತರಿಸುತ್ತದೆ.
ಹಗೆಗಳ ಸೊಕ್ಕನ್ನು ಮುರಿಯಲಾರದ ಅರಸರು ಉಸಿರಾಡಿಕೊಂಡಿರಲೂ ಕೂಡ ಅಸಮರ್ಥರು.
ತಂಪೆರೆಯಬಲ್ಲ ನೆಳಲೂ ನೀರೂ ಅಸುಖಕರವಾದರೆ ಅದರಿಂದ ಬಾಧೆಯುಂಟಾಗುವುದು; ಅದೇ ರೀತಿ ಬಂಧುಗಳ ಸ್ವಭಾವವು ಅಹಿತಕರವಾಗಿದ್ದರೆ ಅದರಿಂದ ಕೆಡುಕೇ ಸಂಭವಿಸುವುದು.
ಕತ್ತಿಯಂತೆ ಬಹಿರಂಗವಾಗಿಯೇ ಪ್ರಕಟವಾಗುವ ಹಗೆಗಳಿಗೆ ಅಂಜಬಾರದು; ಆದರೆ ಗೆಳೆಯರಂತೆ ಪ್ರಕಟಿಸಿ ಒಳಗೆ ಹಗೆ ಸಾಧಿಸುವವರ ಸಂಬಂಧದ ಬಗ್ಗೆ ಅಂಜೆ ಬೇಕು.
ಒಳ ಹಗೆಗೆ ಅಂಜಿ ತನ್ನನ್ನು (ತಾನು) ಕಾಪಾಡಿಕೊಳ್ಳಬೇಕು; ಇಲ್ಲವಾದರೆ ಕುಂಬಾರನ ಆಯುಧದಂತೆ, ದುರ್ಬಲಗಳಿಗೆಯಲ್ಲಿ, ತಪ್ಪದೆ ಅಳಿವು ತರುತ್ತದೆ.
ಮನಸ್ಸು ಪರಿವರ್ತಿಸಲಾಗದ ಒಳಹಗೆಯು ಅರಸನಿಗೆ ಉಂಟಾದರೆ, ಅವನ ಸಂಬಂಧದವರಲ್ಲಿಯೇ ಅಸಮಾಧಾನವನ್ನು ಅದು ಸೃಷ್ಟಿಸಿ, ಹಲವು ದುಃಖಗಳನ್ನು ಅವನಿಗೆ ತರುತ್ತದೆ.
(ದೊರೆಯಾದವನಿಗೆ) ತನ್ನ ಸಂಬಂಧದವರಲ್ಲಿಯೇ ಬಳಹಗೆಯು ಕಾಣಿಸಿಕೊಂಡರೆ, ಅಳಿವು ತರುವಂಥ ಹಲವು ದುಃಖಗಳನ್ನು ಉಂಟುಮಾಡುತ್ತದೆ.
ತನ್ನ ಸಂಬಂಧಿಗಳಾದವರಲ್ಲೆ ಹಗೆಯು ಏರ್ಪಟ್ಟರೆ, ಅರಸನಾದವನಿಗೆ ದುಃಖಕರವಾದ ಮರಣವು ನಿಶ್ಚಯ.
ಭರಣಿಯು ತನ್ನ ಮುಚ್ಚಳದೊಂದಿಗೆ ಕೂಡಿಯೂ ಕೂಡಿಕೊಳ್ಳದಂತೆ ಇರುತ್ತದೆ; ಅದೇ ರೀತಿ ಒಳಹಗೆ ಏರ್ಪಟ್ಟ ಕುಟುಂಬವೂ ತೋರಿಕೆಗೆ ಕೂಡಿಕೊಂಡಿದ್ದರೂ ಅಂತರಂಗ ಸಾಮರಸ್ಯವಿರುವುದಿಲ್ಲ.
ಒಳಹಗೆಯುಂಟಾದ ಸಂಸಾರವು ಅರದಿಂದ ತೇಯಲ್ಮಟ್ಟ ಕಬ್ಬಿಣದಂತೆ ಬಲವನ್ನು ಕಿಳಿದುಕೊಂಡು ದುರ್ಬಲವಾಗುತ್ತದೆ.
ಎಳ್ಳಿನ ಕಣದಷ್ಟು ಅತಿ ಕಿರಿದಾದ ಒಳ ಹಗೆ ಸುಳಿದರೂ ಕೂಡ (ಆ ನಂಶವು) ಕೇಡಿನ ದಾರಿ ತುಳಿಯುತ್ತದೆ.
ಮನಸ್ಸಿನಲ್ಲಿ ಒಡುಂಬಡಿಕೆ ಇಲ್ಲದವರ ಸಹಬಾಳ್ವೆಯು, ಒಂದೇ ಗುಡಿಸಿಲೊಳಗೆ ಹಾವಿನೊಂದಿಗೆ ಕೂಡಿ ಬಾಳಿದಂತೆ.
ಸಮರ್ಥರ ಸಾಮರ್ಥ್ಯವನ್ನು ತೆಗಳದಿರುವುದೇ ತಮ್ಮನ್ನು ಕೇಡಿನಿಂದ ಕಾಯ್ದುಕೊಳ್ಳುವ ಕಾವಲಲ್ಲಿ ಹಿರಿದೆನಿಸುತ್ತದೆ.
ಬಲವಂತರೊಡನೆ ಅಗೌರವದಿಂದ ನಡೆದುಕೊಂಡರೆ, ಅವರ ಸಾಮರ್ಥ್ಯದಿಂದ, ಕೊನೆಯಿಲ್ಲದ ದುಃಖಕ್ಕೀಡಾಗಬೇಕಾಗುತ್ತದೆ.
ಅರಸನು ತಾನು ಕೆಟ್ಟು ನಾಶವಾಗಲು ಬಯಸಿದರೆ, ಬಲ್ಲಿದರೆದುರು ತಪ್ಪಿ ನಡೆಯಲಿ; ಅವರಲ್ಲಿ ನ್ಯಾಯ ನೀತಿಗಳನ್ನು ಅತಿಕ್ರಮಿಸಿ ವರ್ತಿಸಲಿ!
ಬಲ್ಲಿದರಾದವರಿಗೆ, ಅಶಕ್ತರಾದವರು ಕೆಟ್ಟದ್ದನ್ನು ಮಾಡಿದರೆ, ತಾವೇ ಕೈಯಾರೆ, ಮೃತ್ಯುವನ್ನು ಆಹ್ವಾನಿಸಿದಂತೆ.
ಬಲಶಾಲಿಯಾದ ಅರಸನ ಹಗೆಗೊಳಗಾದವರು ತಲೆ ತಪ್ಪಿಸಿ ಎಲ್ಲಿಗೆ ಹೋದರೂ ಜೀವದಿಂದ ಉಳಿಯುವುದಿಲ್ಲ.
ಕಾಳ್ಗಿಚ್ಚಿನ ಬೇಗೆಗೆ ತುತ್ತಾದರೂ ಜೀವದಿಂದ ಉಳಿಯಬಹುದು. ಬಲಶಾಲಿಗಳಾದ ಅರಸರನ್ನು ಪೀಡಿಸಿದವರು ಜೀವಸಹಿತ ಉಳಿಯುವುದು ಕಷ್ಟ.
ಮಹಾಮಹಿಮರಾದ ಸಚ್ಚರಿತರು ಕೋಪಿಸಿಕೊಂಡರೆ (ಅರಸನ) ಅರಸಾಂಗಗಳನ್ನು ಒಳಗೊಂಡ ಕೀರ್ತಿವೇತ್ತ ಬಾಳೂ ಸಂಪನ್ಮೂಲಗಳೂ ಏನಾಗುವುದು?
ಪರ್ವತಸದೃಶರಾದವರನ್ನು ಅಗೌರವದಿಂದ ಕೀಳಾಗಿ ಕಂಡರೆ, ನೆಲದ ಮೇಲೆ ಭದ್ರವಾಗಿ (ವಂಶಪಾರಂಪರ್ಯವಾಗಿ) ನಿಂತವರು ಕೂಡ ಅಳಿದು ಹೋಗುವರು.
ವ್ರತ ನೇಮಾದಿಗಳಿಂದ ನಿಷ್ಠರಾದ ಋಪಿಗಳು ಮೊನಿದರೆ, ದೇವತೆಗಳ ಅರಸನಾದ ಇಂದ್ರನು ಕೂಡ, ತನ್ನ ಸ್ಥಾನ ಕಳೆದುಕೊಂಡು ಅಳಿದುಹೋಗುತ್ತಾನೆ.
ಪ್ರಬಲವಾದ ಸಿರಿಸಂಪತ್ತುಳ್ಳವರಾದವರೂ ಕೂಡ, ಕೀರ್ತಿಶಾಲಿಗಳೆನಿಸಿದ ಮಹಿಮಾನ್ವಿತರ ಹಗೆಯುಂಟಾದರೆ (ಒಡನೆಯೇ) ನಾಶವಾಗುವರು.
ಹೆಂಡತಿ ಹೇಳಿದಂತೆ ಕೇಳಿ ನಡೆಯುವವರು ಶ್ರೇಷ್ಠವಾದ ಫಲವನ್ನು ಪಡೆಯಲಾರರು. ನಿಜವಾದ ಕರ್ತವ್ಯವನ್ನು ಬಯಸುವವರಿಗೆ ಬೇಡವಾದ ಸಂಗತಿ ಅದುವೆ.
ಕರ್ತವ್ಯವನ್ನು ಮರೆತು ಹೆಂಡತಿಯ ಹೆಣ್ತನಕ್ಕೆ ಮನಸೋತವನ ಐಶ್ವರ್ಯವು ನಾಚಿಕೆಗೇಡಿನವಾಗಿ ಅವಮಾನವನ್ನು ತರುತ್ತದೆ.
ಗೃಹಿಣಿಯಾದವಳಿಗೆ ಹೆದರಿ ವಿವೇಚನೆಯಿಲ್ಲದೆ ನಡೆದುಕೊಳ್ಳುವವನು ಸಂಪನ್ನರ ನಡುವೆ ಅವಹೇಳನಕ್ಕೆ ಗುರಿಯಾಗುತ್ತಾನೆ.
ಗೃಹಿಣಿಯಾದವಳಿಗೆ ಅಂಜಿ, ಪರಲೋಕದ ಫಲವನ್ನು ಕಳೆದುಕೊಂಡವನಿಗೆ, ಕಾರ್ಯವನ್ನು ಸಾಧಿಸುವ ಶಕ್ತಿ ಇದ್ದರೂ ಅದು ಸಜ್ಜನರ ಗೌರವಕ್ಕೆ ಪಾತ್ರವಾಗುವುದಿಲ್ಲ.
ಮನೆಯೊಡತಿಗೆ ಅಂಜಿ ಬಾಳುವವನು, ಯಾವಾಗಲೂ, ಸಜ್ಜನರಿಗೆ ಒಳ್ಳೆಯದನ್ನು ಮಾಡಲು ಅಂಜುವನು.
ಮನೆಯಾಕೆಯ ಬಿದಿರು ಕಾಂಡದಂಥ ನಳಿದೊಳಿನ ತೆಕ್ಕೆಗೆ ಅಂಜಿ ಬಾಳುವವರು ದೇವತೆಗಳಂತೆ (ಈ ಲೋಕದಲ್ಲಿ) ಬಾಳಿದರೂ ಹಿರಿಮೆ ಇಲ್ಲದವರೇ ಆಗುತ್ತಾರೆ.
ಹೆಣ್ಣಿನ ಆಜ್ಞೆಯನ್ನು ಶಿರಸಾವಹಿಸಿ ನಡೆಯುವವನ ಪುರುಷತ್ವಕ್ಕಿಂತ, ನಾಚಿಕೆಯೇ ಸ್ವಭಾವವಾಗುಳ್ಳ ಹೆಣ್ಣಿನ ಹಿರಿಮೆಯೇ ದೊಡ್ಡದು.
ಮೃದು ನೊಸಲಿನ ಮನೆಯಾಕೆಯ ಇಚ್ಛೆಯಂತೆ ನಡೆದುಕೊಳ್ಳುವವರು, ತಮ್ಮ ಸ್ನೇಹಿತರಿಗೆ ಒದಗಿದ ಕಷ್ಟಗಳನ್ನು ನೀಗಿಸಲಾರರು; ಒಳ್ಲೆಯ ಕೆಲಸಗಳನ್ನೂ ಮಾಡಲಾರರು.
ಒಳ್ಳೆಯ ಧರ್ಮ ಕಾರ್ಯಗಳೂ, ಅದರಿಂದ ಗಳಿಸಿದ ಸಿರಿ ಸಂಪಾದನೆಯೂ, ಮತ್ತಿತರ ಕರ್ತವ್ಯಗಳೂ, ಹೆಣ್ಣಿನ ಆಜ್ಞಾಧಾರಿಗಳಾದವರಲ್ಲಿ ಸೇರುವುದಿಲ್ಲ.
ಒಳ್ಳೆಯದನ್ನು ಆಲೋಚಿಸುವ ಮನಸ್ಸೂ ಅದರಿಂದ ಪಡೆದ ಸಿರಿಯೂ ಉಳ್ಳವರಲ್ಲಿ, ಹೆಣ್ಣಿನ ದಾಸ್ಯತೆಯಿಂದ ಉಂಟಾಗುವ ಆಜ್ಞಾನವಿರುವುದಿಲ್ಲ.
ಪ್ರೀತಿಯನ್ನು ಬಯಸದೆ (ಕೇವಲ) ಹಣವನ್ನು ಬಯಸುವ ಚೆಲುವ ಸ್ತ್ರೀಯರ (ವೇಶ್ಯೆಯರ) ಇನಿದಾದ ಮಾತುಗಳು ಒಬ್ಬನಿಗೆ ದುಃಖವನ್ನು ತರುತ್ತವೆ.
ಲಾಭವನ್ನು ತೂಗಿ ನೋಡಿ ಅದಕ್ಕೆ ತಕ್ಕಂತೆ ನಯವಾದ ಮಾತುಗಳನ್ನಾಡುವ ಗುಣವುಳ್ಳ ಸ್ತ್ರೀಯರ ವರ್ತನೆಯನು ತೂಗಿ ನೋಡಿ, ಅವರ ಪ್ರೀತಿಯನ್ನು ಅಲಕ್ಷಿಸ ಬೇಕು.
ಹಣವನ್ನೇ ಗುರಿಯಾಗುಳ್ಳ ವೇಶ್ಯಾ ಸ್ತ್ರೀಯರ ಹುಸಿ ಆಲಿಂಗನವು ಕತ್ತಲೆ ಕೋಣೆಯಲ್ಲಿ ಅಪರಿಚಿತ ಹೆಣವೊಂದನ್ನು ತಬ್ಬಿಕೊಂಡಂತೆ.
ದೈವ ಕೃಪೆಯ ಸಿರಿಯನ್ನು ಅರಸುವ ವಿಚಾರವಂತರು, ಹಣವನ್ನೇ ಮುಖ್ಯವಾಗಿ ಬಯಸುವ ವೇಶ್ಯೆಯರು ಕೂಡುವ ಕೀಳು ಸುಖವನ್ನು ಆಶಿಸುವುದಿಲ್ಲ.
ಬುದ್ಧಿ ಸಾಮರ್ಥ್ಯದಿಂದ ಶ್ರೇಷ್ಠ ಅರಿವುಳ್ಳವರಾರೂ ಹಣದಾಸೆಗೆ ಎಲ್ಲರಿಗೂ ಪ್ರೀತಿ ತೋರುವ ವೇಶ್ಯೆಯರ ಅಳಿಯೊಲಿವಿಗೆ ದಾಸರಾಗುವುದಿಲ್ಲ.
ಆತ್ಮೋನ್ನತಿಯನ್ನು ಅರಸುವವರು, ತಮ್ಮ ಚೆಲುವಿನಿಂದ ಮರುಳುಗೊಳಿಸಿ ಕೀಳು ಸುಖ ನೀಡುವ ವೇಶ್ಯೆಯರ ತೋಳ ಅಪ್ಪುಗೆಯಲ್ಲಿ ಸೇರುವುದಿಲ್ಲ.
ಅನಂಭವದಿಂದ ಶ್ರಿಮಂತವಾದ ಮನಸ್ಸು, ಇಲ್ಲದವರು, ತಮ್ಮ ಮನಸ್ಸಿನಲ್ಲಿ ಇತರ ವಸ್ತುಗಳನ್ನು ಬಯಸಿ ಕೂಡಲೆಳಸುವ ವೇಶ್ಯೆಯರ ತೋಳ್ತೆಕ್ಕೆಯಲ್ಲಿ ಸೆರೆಯಾಗುವರು.
ವಿಚಾರ ಮಾಡಿ ನೋಡುವ ಶಕ್ತಿಯಿಲ್ಲದವರಿಗೆ, ಮಾಯಾಂಗನೆಯರ (ವೇಶ್ಯೆಯರ) ಅಪ್ಪುಗೆಯು, ಮೋಹಿನಿ ಹಿಡಿದ ಹಾಗೆ ಎಂದು ಬಲ್ಲವರು ಹೇಳುವರು.
ದೊಡ್ಡವರು, ಅಲ್ಪರು ಎನ್ನದೆ ಬೆಲೆಕೊಟ್ಟು ಕೊಳ್ಳುವ ಯಾರನ್ನೂ ಅಪ್ಪುವ ಲಜ್ಜೆಗೆಟ್ಟ ವೇಶ್ಯಾಂಗನೆಯರ ಮೆದುದೋಳು, ಹಿರಿಮೆಯಿಲ್ಲದೆ ಕೀಳು ಜನರು ಬೀಳುವ ಸರಕದಂತೆ.
ಇಬ್ಬಗೆಯ ಮನಸ್ಸುಳ್ಳ ವೇಶ್ಯಾಂಗನೆಯರು, ಕಳ್ಳು ಮತ್ತು ಜೂಜು ಇವು ಮೂರೂ ಸಿರಿಯಳಿದ ದರಿದ್ರರ ಒಡನಾಡೀಗಳು.
ಕಳ್ಳನ್ನು ಪ್ರೀತಿಸಿ ಅದಕ್ಕೆ ದಾಸರಾಗಿರುವ ಅರಸರು ಯಾವಾಗಲೂ, ಹಗೆಗಳಲ್ಲಿ ಭೀತಿಯನ್ನುಂಟು ಮಾಡಲಾರರು; ಪ್ರತಿಯಾಗಿ ತಮ್ಮ ಕೀರ್ತಿಯನ್ನು ಕೆಡಿಸಿಕೊಳ್ಳುವರು.
ಕಳ್ಳನ್ನು ಕುಡಿಯಬಾರದು; ಸಜ್ಜನರ ಗೌರವಕ್ಕೆ ಪಾತ್ರರಾಗಲು ಇಚ್ಛಿಸದವರು ಬೇಕಾದರೆ ಕುಡಿಯಲಿ!
ಮಗ ಹೇಗ ನಡೆದುಕೊಂಡರೂ ತಾಯಿಗೆ ಇಷ್ಟವೇ ಆಗುವುದಾದರೂ ಕಳ್ಳು ಕುಡಿದು ಅಮಲಿನಲ್ಲಿ ಸ್ವೇಚ್ಛಿಯಾಗಿ ವರ್ತಿಸುವುದು ಅವಳಿಗೆ ಸಹಿಸದು; ಹಾಗಿರುವಾಗ ಸಜ್ಜನರ ಮುಂದೆ ಕುಡಿದು ಸ್ವೇಚ್ಛಿಯಾಗಿ ವರ್ತಿಸಿದರೆ ಹೇಗೆ ಸಹಿಸಬಲ್ಲರು?
ಕಳ್ಳು ಕುಡಿಯುವ, ತ್ಯಾಜ್ಯಾವಾದ ದೊಡ್ಡ ಅಪರಾಧ ಮಾಡೀದವರಿಗೆ ನಾಚಿಕೆಯೆಂಬ ಸಜ್ಜನ ವಧು ಬೆನ್ನು ತೋರಿಸಿ ಹೊರಟು ಹೋಗುವಳು.
ಹಣ ತೆತ್ತು ಮೈಯರಿಯದ ಸ್ಥಿತಿಯನ್ನು ತಂದುಕೊಳ್ಳುವುದು, ತಾನು ಮಾಡುವ ಕೆಲಸದ ಅರಿವುಗೇಡಿತನವನ್ನು ಸಂಪಾದಿಸಿದಂತೆಯೇ.
ಕಳ್ಳಿನ ಅಮಲಿನಲ್ಲಿ ಮೈಮರೆತು ಮಲಗಿದವರು ಸತ್ತವರಿಗಿಂತ ಬೇರೆ ಅಲ್ಲ; ಕಳ್ಳು ಕುಡಿದವರು ನಂಜುಣ್ಣುವವರೆ ಆಗುತ್ತಾರೆ.
ಕಳ್ಳಿಗೆ ಸೋತು ಬಲಿಯಾದವರು, (ತಮ್ಮ ಅಮಲಿನಿಂದ) ಯಾವಾಗಲೂ, ತಮ್ಮ ಮನಸ್ಸನ್ನು ಪ್ರಕಟಪಡಿಸಿ ಊರ ನಗೆಗೆ ಪಾತ್ರರಾಗುವರು.
"ನಾನು ಕಳ್ಳು ಕುಡಿದರಿಯೆನು" ಎಂದು ಕಳ್ಳು ಕುಡಿಯುವವನು ಹೇಳುವುದನ್ನು ಕೈಬಿಡಬೇಕು; ಅವನು ಕಳ್ಳು ಕುಡಿದಾಗಲೇ ಅವನ ಮನಸ್ಸಿನೊಳಗಿನ ದೌರ್ಬಲ್ಯವೆಲ್ಲ ಹೊರಗೆ ಬರುವುದು.
ಕುಡಿದ ಅಮಲಿನಲ್ಲಿರುವವನಿಗೆ ಕಾರಣ ಹೇಳಿ ತಿಳಿಯಪಡಿಸುವುದು, ನೀರಿನಡಿಯಲ್ಲಿ ಮುಳುಗಿದವನನ್ನು, ಕೊಳ್ಳಿ ದೀಪವನ್ನು ಹಿಡಿದುಕೊಂಡು ಅರಸಿದಂತೆ.
ಒಬ್ಬನು ತಾನು ಕಳ್ಳು ಕುಡಿಯದಿರುವಾಗ, ಕಳ್ಳಿನ ಅಮಲಿನಲ್ಲಿ ಇರುವವನನ್ನು ಕಂಡಾದ ಕಳ್ಳು ಕುಡಿಯುವುದರಿಂದ ಆಗುವ ಕೆಡುಕನ್ನು ಯೋಚಿಸಲಾರನೆ?
ಜೂಜಿನಲ್ಲಿ ಗೆಲುವುದಾದರೂ ಜೂಜನ್ನು ಬಯಸಬಾರದು; ಆ ಗೆಲ್ಲುವಿಕೆ ಕೂಡ, ಗಾಳದ ತುದಿಯ ಲೋಹವನ್ನು ಮೀನು (ಆಹಾರವೆಣ್ದು ಎಣಿಸಿ) ನುಂಗಿದಂತೆ.
ಒಂದನ್ನು ಗೆದ್ದು ನೂರ್ಮಡಿಯಾಗಿ ಕಳೆದುಕೊಳ್ಳುವ ಜೂಜು ಕೋರರಿಗೆ ಸುಖ ಪಡೆದು ಬಾಳುವ ಮಾರ್ಗವುಂಟೆ?
(ಅರಸನಾದವನು) ಉರುಳುವ ದಾಳವನ್ನು ಊಹಿಸಿ ಹೇಳಿ ಬರುವ ಹಣವನ್ನು ಎಡೆಬಿಡದೆ ತೊಡಗಿಸಿ ಜೂಜಾಡಿದರೆ, ಅವನ ಗಳಿಕೆಯು ಕೈತಪ್ಪಿ ಹೋಗಿ ಇತರರ (ಹಗೆಗಳ) ಕೈ ಸೇರುವುದು.
ಹಲವು ತೆರದ ದುಃಖಗಳನ್ನು ತಂದೊಡ್ಡಿ ಕೀರ್ತಿಯನ್ನು ಅಳಿಸುವ ಜೂಜಿಗಿಂತ ದಾರಿದ್ರ್ಯ ತರುವುದು ಬೇರೊಂದಿಲ್ಲ.
ದ್ಯೂತದ ದಾಳಗಳನ್ನು ಆಡುವ ಕೂಟವನ್ನು ತಮ್ಮ ಕೈಬಳಕವನ್ನೂ ಮೆಚ್ಚಿ ಬಯಸಿ ಕೈಬಿಡಲಾರದ ಅರಸರು ಸಿರಿಯಲ್ಲಿ ಕಳೆದುಕೊಂಡು ದರಿದ್ರರಾರುತಾರೆ.
ಜೂಜು ಎನ್ನುವ ಮೂದೇವಿಯ ವಶವಾದದರು ಬದುಕ್ಕಿದ್ದಾಗ ತಾವು ತಮ್ಮ ಹೊಟ್ಟೆ ತುಂಬ ಉಣ್ಣದೆ ಹಲವು ದುಃಖಗಳಿಂದ ಬಾಧಿಸಲ್ಪಟ್ಟು ನರಕಕೆ ಹೋಗುವರು.
ಜೂಜಡುವ ಕೂಟದಲ್ಲಿ ಅರಸನು ಧರ್ಮ, ಅರ್ಥ, ಕಾಮಗಳನ್ನು ಮೀರಿ ಕಾಲಹರಣ ಮಾಡಿದರೆ, ಪರಂಪರಯಾಗಿ ಅವನಿಗೆ ಬಂದ ಸಿರಿಸಂಪತ್ತುಗಳೂ ಮತ್ತು ಸ್ವಾಭಾವಿಕವಾದ ಸದ್ಗುಣಗಳೂ ನಾಶವಾಗಿ ಹೋಗುತ್ತವೆ.
ಜೂಜು ಹಣವನ್ನು ಕಳೆದುಕೊಂಡು ಸುಳ್ಳು ಹೇಳುವಂತೆ ಮಾಡುವುದು; ದೈವ ಕೃಪಯನ್ನು ಕೆಡಿಸಿ ಹಲ ತೆರನಾದ ದುಃಖಗಳನ್ನು (ಇಹಪರಗಳೆರಡರಲ್ಲೂ) ತಂದೊಡ್ಡುವುದು.
ಒಬ್ಬನು ಜೂಜಾಡುವುದನ್ನು ಕೈಗೊಂಡರೆ, ಉಡುಪು, ಸಿರಿ, ಆಹಾರ, ಕೀರ್ತಿ ಮತ್ತು ಜ್ಞಾನವೆಂಬ ಐದು ಅವನಿಂದ ಮರೆಯಾಗುತ್ತವೆ.
ಇಹಪರಗಳೆರಡರಲ್ಲಿಯೂ ಒಬ್ಬನನ್ನು ಕೀಳಾಗಿ ಮಾಡಿ, ದುಃಖದಿಂದ ಕಷ್ಟಕ್ಕೇಡು ಮಾಡೂವುದು ಅವನು ಬಯಸುವ ಜೂಜು; ಅದೇ ರೀತಿ, ಜೀವದ ಮೇಲಿನ ವ್ಯಾಮೋಹವೂ- (ಮನುಷ್ಯನ) ದುಃಖವನ್ನು ಹೆಚ್ಚಿಸಿ ಅವನನ್ನು ತೋದರೆಯಲ್ಲಿ ಸಿಲುಕಿಸುವುದು.
ಊಟದಲ್ಲಿ ಅಳತೆ ಮೀರಿ ಹೆಚ್ಚಾದರೂ, ಕರ್ಮಿಯಾದರೂ ವೈದ್ಯಶಾಸ್ತ್ರಜ್ಞರು ಸೂಚಿಸಿರುವ ವಾತ, ಪಿತ್ತ, ಕಫ ಈ ಮೂರೂ (ಮನುಷ್ಯನಿಗೆ) ಬೇನೆಯುಂಟಾಗುತ್ತವೆ.
ಮುಂಚಿತವಾಗಿ ಉಂಟ ಆಹಾರವು ಜೀರ್ಣವಾದುದನ್ನು ಅರಿತು ಮತ್ತೆ ಉಂಟರೆ, ಶರೀರಕ್ಕೆ ಔಷಧ (ಮದ್ದು) ವೇ ಬೇಕಾಗುವುದಿಲ್ಲ.
ಮುಂಚಿತವಾಗಿ ಸೇವಿಸದ ಆಹಾರ ಜೀರ್ಣವಾದ ಮೇಲೆ ಅಳತೆಯರಿತು ಊಟ ಮಾಡಬೇಕು; ಅದೇ ದೇಹಧಾರಿಯಾದ ಮಾನವನ್ನು ನಿಡುಗಾಲ ಬಾಳುವ ಮಾರ್ಗ.
ಆಹಾರವು ಚೆನ್ನಾಗಿ ಜೀರ್ಣವಾದುದನ್ನು ಅರಿತುಕೊಂಡು, ಪೂರ್ತಿ ಹಸಿದ ಮೇಲೆ ಶರೀರಕ್ಕೆ ಒಗ್ಗುವ ಆಹಾರವನ್ನು ನಿಯಮಿತವಾಗಿ ತಿನ್ನಬೇಕು.
ಶರೀರಕ್ಕೆ ಒಗ್ಗುವಂಥ ಆಹಾರವನ್ನು ಮಿತಿಯರಿತು ಊಟ ಮಾಡಿದರೆ ಜೀವಕ್ಕೆ ಯಾವ ಅಪಾಯವೂ ಉಂಟಾಗುವುದಿಲ್ಲ.
ತನಗೆ ಕೆಡುಕು ಯಾವುದೆಂದು ತಿಳಿದು ಮಿತಿಯರಿತು ಊಟ ಮಾಡೂವವನ ಬಳೀ ಸುಖವು ಬಂದು ನಿಲ್ಲುವಂತೆ, ಅತಿಯಾಗಿ ತಿನ್ನುವವನ ಬಳಿ ರೋಗವು ಬಂದು ನೆಲಸುತ್ತದೆ.
ಜೀರ್ಣಿಸಿಕೊಳ್ಳುವ ಶಕ್ತಿ ಮೀರಿ, ವಿಚಾರ ಮಾಡದೆ ಅತಿಯಾಗಿ ತಿಂದರೆ ರೋಗಗಳು ಎಲ್ಲೆ ಮೀರಿ ಬೆಳೆಯುತ್ತವೆ.
ವೈದ್ಯನಾದವನು, ರೋಗವನ್ನೂ ರೋಗದ ಕಾರಣವನ್ನೂ ಪರೀಕ್ಷಿಸಿ ತಿಳಿದು ಅದನ್ನು ಪರಿಹರಿಸುವ ಮಾರ್ಗವನ್ನು ಕಂಡುಹಿಡಿದು, ಸೂಕ್ತ ಚಿಕಿತ್ಸೆಯನ್ನು ಕೈಗೊಳ್ಳಬೇಕು.
ವೈದ್ಯಶಾಸ್ತ್ರಬಲ್ಲವನು, ರೋಗಿಯ ಸ್ಥಿತಿಯನ್ನೂ ರೋಗದ ಅವಸ್ಥೆಯನ್ನೂ ರೋಗದ ಕಾಲಾವಧಿಯನ್ನೂ, ವಿಚಾರಮಾಡಿ (ಪರಿಶೀಲಿಸಿ) ಹೊಂದುವ (ಚಿಕಿತ್ಸೆ) ನೀಡಬೇಕು.
ರೋಗಿ, ವೈದ್ಯ, ಔಷಧಿ ಮತ್ತು ಔಷಧಿ ತಯಾರಿಸಿ ಕೊಡುವವನು- ಎಂದು ವೈದ್ಯ ವಿದ್ಯೆಯಲ್ಲಿ ನಾಲ್ಕು ವಿಭಾಗಗಳನ್ನು ಒಳಗೊಂಡಿರುವುದು.
ನ್ಯಾಯಪರತೆ, ವಿನಯಶೀಲತೆ ಇದೆರಡೂ ಸತ್ಕುಲ ಸಂಭೂತರಲ್ಲಿ ಮಾತ್ರ ಸಹಜವಾಗಿರುತ್ತವೆ; ಬೇರೆಯವರಲ್ಲಿ ಇರುವುದಿಲ್ಲ.
ಸತ್ಕುಲದಲ್ಲಿ ಹುಟ್ಟಿದವರು, ಸನ್ಮಾರ್ಗ, ಸತ್ಯಸಂಧತೆ, ವಿನಯಶೀಲತೆ- ಈ ಮೂರು ಗುಣಗಳಿಂದ ಎಂದೂ ಜಾರುವುದಿಲ್ಲ
ಸತ್ಕುಲಜರಿಗೆ, ಮೃದುಹಾಸ, ಕೊಡುಗೈ, ಇನಿವಾತು ಪರನಿಂದೆ ಇಲ್ಲದ ಸ್ವಭಾವ- ಈ ನಾಲ್ಕು ಗುಣಗಳು ಆವಶ್ಯವೆಂದು ಬಲ್ಲವರು ಹೇಳುವರು.
ಕೋಟಿಗಟ್ಟಲೆ ಐಶ್ವರ್ಯ ಪಡೆಯುವ ಅವಕಶವಿದ್ದರೂ, ಸತ್ಕುಲ ಸಂಭೂತರೂ ತಮ್ಮ ಕಾಲಕ್ಕೆ ಕುಂದು ತರುವ ಕೆಲಸಗಳನ್ನು ಮಾಡೂವುದಿಲ್ಲ.
ಸತ್ಕುಲಜರು, ಉದಾರವಾಗಿ ದಾನ ಮಾಡೂವುದರಿಂದ ತಾವು ಬರಿಗೈಯವರಾದರೂ, ಪರಂಪರಾಗತವಾಗಿ ಬಂದ ಕುಲಮರ್ಯಾದೆಯು ಗುಣಗಳಿಂದ ವಿಮುಖರಾಗುವುದಿಲ್ಲ.
ಕಳಂಕರಹಿತವಾದ ಕುಲ ಮರ್ಯಾದೆತೊಡನೆ ಬಾಳಬೇಕೆಂದು ಒಯಸುವವರು ವಂಚನೆಯಿಂದ ಯೋಗ್ಯವಲ್ಲದ್ದನ್ನು ಮಾಡುವುದಿಲ್ಲ.
ಶ್ರೇಷ್ಠವಾದ ಕುಲದಲ್ಲಿ ಜನಿಸಿದವರಲ್ಲಿ, ನಿಚ್ಚಳವಾಗಿ ಕಾಣುವ ದೋಷವು, ಆಕಾಶದಲ್ಲಿ ಬೆಳಗುವ ಚಂದ್ರನಲ್ಲಿರುವ ಕಳಂಕದಂತೆ ಸ್ಪಷ್ಟವಾಗಿ ತೋರುವುದು.
(ಒಬ್ಬನಲ್ಲಿರುವ) ಒಳ್ಳೆಯ ಗುಣಗಳ ನಡುವೆ, ನಿರ್ದಯ ಪ್ರವೃತ್ತಿ ತೋರಿ ಬಂದರೆ ಅವನ ಕುಲದ ಹಿರಿಮೆಯ ಬಗ್ಗೆ ಸಂದೇಹಪಡಬೇಕಾಗುವುದು.
ಒಳ್ಳೆಯ ನೆಲದ ಗುಣವನ್ನು ಮೊಳಕೆಯಲ್ಲಿ ಕಾಣುವಂತೆ ಉತ್ತಮ ಕುಲ ಸಂಭೂತರ ಗುಣಗಳನ್ನು ಅವರ ಮಾತಿನಲ್ಲಿ ಕಾಣಬಹುದು.
ಒಬ್ಬನಿಗೆ ಒಳ್ಲೆಯದಾಗಬೇಕೆಂದಿದ್ದರೆ ವಿನಯಶೀಲನಾಗಿರಬೇಕು; ಒಳ್ಳೆಯ ಕುಲಜನೆನಿಸಿಕೊಳ್ಳಬೇಕೆಂದಿದ್ದರೆ ಎಲ್ಲರಿಗೂ ತಗ್ಗ ನಡೆಯಬೇಕು.
ಪ್ರಾಣವೆ ಕೋಗುವಂಥ ಅನಿವಾರ್ಯವಾದ ಕಾರಣಗಳಿದ್ದರೂ ಕುಲ ಗೌರವವನ್ನು ಕೀಳುಮಾಡುವಂಥ ಕಾರ್ಯಗಳನ್ನು ಕೈಬಿಡಬೇಕು.
ಕೀರ್ತಿಯೊಡನೆ ಮನಧನವನ್ನು ಬಯಸುವವರು ತಮ್ಮ ಕೀರ್ತಿ ಬಯಸುವ ಸಂದರ್ಭ ಬಂದರೂ ತಮ್ಮ ಕುಲದ ಹಿರಿಮೆ ಕೆಡುವಂಥ ಕಾರ್ಯಗಳನ್ನು ಮಾಡ ಬಯಸುವುದಿಲ್ಲ.
ಸಿರಿಯು ಏರುತ್ತಿರುವ ಕಾಲದಲ್ಲಿ ತಗ್ಗಿ ನಡೆಯಬೇಕು; ಸಿರಿಯು ಕರಗಿ ಕುಗ್ಗುತ್ತಿರುವ ಕಾಲದಲ್ಲಿ ತಲೆಯೆತ್ತಿ ನಡೆಯಬೇಕು.
ಮನುಷ್ಯರು ಉನ್ನತವಾದ ಸ್ಥಿತಿಯಲ್ಲಿದ್ದು ಆ ನೆಲೆಯಿಂದ ಕೆಳಗಿಳಿದಾಗ, ತಲೆಯಿಂದ ಉದುರಿ ಬಿದ್ದ ಕೂದಲಿನಂತಾಗುತ್ತಾರೆ. (ಅಂದರೆ- ಉದುರಿ ಹೋದ ಕೂದಲಿನಂತೆ ಜನರ ನಿರ್ಲಕ್ಷ್ಯಕ್ಕೀಡಾಗುತ್ತಾರೆ)
ಬೆಟ್ಟದಂತೆ ಎತ್ತರವಾಗಿ ನಿಂತ ನೆಲೆಯಲ್ಲಿ ಉಳ್ಳವರೂ ಗುಲುಗುಂಜಿಯಷ್ಟು ಅಲ್ಪ ಕಾರ್ಯವನ್ನು ಮಾಡೀದರೆ ಕೀಳಾಗಿ ಬಿಡುವರು.
ಮನವನ್ನು ಬಿಟ್ಟು ತಮ್ಮನ್ನು ತೆಗಳುವವರನ್ನು ಹಿಂಬಾಲಿಸುವ ಗುಣವಿದ್ದರೆ ಕೀರ್ತಿಯೂ ಲಭಿಸದು, ದೇವಲೋಕದಲ್ಲಿಯೂ ಪ್ರವೇಶ ದೊರೆಯುದು; ಅಂದಮೇಲೆ ಅದರಿಂದ ಲಾಭವೇನು?
ಗೌರವ ನೀಡದೆ ಅಲಕ್ಷಿಸುವವರ ಹೀಂದ (ಯಾಚಕರಾಗಿ) ಸೇರಿ, ಬಾಳುವೆ ಮಾಡುವುದಕ್ಕಿಂತ, ತನ್ನ ಪೂರ್ವ ಸ್ಥಿತಿಯಲ್ಲಿಯೇ ಕೆಟ್ಟು ನಾಶವಾದನು ಎಂದು ಜನರಿಂದ ಅನ್ನಿಸಿಕೊಳ್ಳುವುದು ಒಳ್ಳೆಯದು.
ಒಬ್ಬನು ಉನ್ನತಿಕೆಯು ಅಳಿತು ಮಾನ ಕಳೆದುಕೊಳ್ಳುವ ಸ್ಥಿತಿ ಬಂದಾಗ, ಸಾಯದೆ, ಶರೀರವನ್ನು ಹೊತ್ತುಕೊಂಡು ಬಾಳುವುದರಿಂದ ಶಾಂತಿ ಸಿಗಬಲ್ಲುದೆ?
ತಮ್ಮ ಮಾನವು ಅಳಿಯುವ ಕಾಲದಲ್ಲಿ ಸಾವನ್ನು ಅಪ್ಪುವವರು ತನ್ನ ಅಹರೀರದಿಂದ ಕೂದಲು ಕಳೆದುಕೊಂಡೊಡನೆಯೇ ಸಾವನ್ನು ಅಪ್ಪುವ ಜಿಂಕೆಗೆ ಹೋಲುವರು.
ತಮಗೆ ಅವಮಾನವಾಗುವ ಸಂದರ್ಭದಲ್ಲಿ ಬಾಳು ನೀಗುವ ಅಭಿಮಾನನಧರ ಕೀರ್ತಿಯನ್ನು ಲೋಕದ ಜನರು ಪೂಜಿಸಿ ಗೌರವಿಸುವರು.
ಒಬ್ಬನ ಬಾಳಿನಲ್ಲಿ ಬೆಳಕೆಂದರೆ ಅವನಲ್ಲಿರುವ ಶಕ್ತಿಯೇ; ಒಬನ ಬಾಳಿನಲ್ಲಿ ಕತ್ತಲೆಂದರೆ, ಅದು ಇಲ್ಲದೆಯೇ ಬಾಳಬಹುದು ಎಂಬ ಅವನ ಎಣಿಕೆ.
ಎಲ್ಲಾ ಜೀವಿಗಳಿಗೂ ಹುಟ್ಟು ಒಂದೇ ರೀತಿಯದು; ಆದರೆ, ಅವರವರು ಮಾಡುವ ಕೆಲಸಗಳು ಬೇರೆಬೇರೆಯಾಗಿರುವುದರಿಂದ, ಕೀರ್ತಿ ಪ್ರತಿಷ್ಠೆಗಳು ಭಿನ್ನವಾಗಿರುತ್ತದೆ.
ಮೇಲಾದ ಸ್ಥಿತಿಯಲ್ಲಿದ್ದರೂ ಕೂಡ, ಮೇಲಾದ ಗುಣವಿಲ್ಲದವರು ಮೇಲು ವರ್ಗದವರೆನಿಸಿಕೊಳ್ಳಲಾರರು; ಅದೇ ರೀತಿ, ಕೀಳು ಸ್ಥಿತಿಯಲ್ಲಿದ್ದರೂ ಕೂಡ ಕೀಳಾದ ಗುಣ ಹೊಂದದವರು ಕೀಳು ವರ್ಗದವರೆಂದು ಎನಿಸಿಕೊಳ್ಳಲಾರರು.
ಏಕ ನಿಷ್ಠೆಯುಳ್ಳ ಹೆಂಗಸರಂತೆಯೇ ಹಿರಿಮೆಯೂ ಕೂಡ, ತನ್ನನ್ನು ತಾನು ಕಾಪಾಡಿಕೊಂಡು ನಡೆದುಕೊಂಡರೆ ಮಾತ್ರ ಉಂಟು.
ಹಿರಿಮೆಯು ಗುಣವುಳ್ಳವರು, ಕಷ್ಟ ಕಾಲದಲ್ಲಿಯೂ ಮಾಡೂವುದಕ್ಕೆ ಅಸಾಧ್ಯವಾದ ಕೆಲಸಗಳನ್ನು, ತಕ್ಕ ರೀತಿಯಲ್ಲಿ ಮಾಡಿ ಮುಗಿಸಬಲ್ಲವರಾಗುತ್ತಾರೆ.
ಹಿರಿಯರ ಹಾದಿಯಲ್ಲಿ ನಡೆದು, ಅವರ ಗುಣಗಳನ್ನು ನಾವೂ ಪಡೆದುಕೊಳ್ಳಬೇಕು ಎನ್ನುವ ದೃಷ್ಟಿ ಅಲ್ಪರ ಮನಸ್ಸಿನಲ್ಲಿ ಬರುವುದಿಲ್ಲ.
ಕುಲ, ಸಂಪದ, ಶಿಕ್ಷಣ ಮೊದಲಾದ ಹಿರಿಮೆಯು ಕೀಳಾದವರ ಕೈಯಲ್ಲಿ ಸಿಕ್ಕಿಕೊಂಡರೆ, ದುರಹಂಕಾರವನ್ನು ವೃದ್ಧಿಪಡಿಸುತ್ತದೆ.
ಯಾವಾಗಲೂ ತಗ್ಗಿ ನಡೆಯುವುದೇ ಹಿರಿಯ ಗುಣ; ತಮ್ಮ ಪ್ರತಿಷ್ಠೆಯನ್ನು ಮರೆಸಿ ಕೊಂಡಾಡುವುದು ಕೀಳುಗುಣ.
ಹಿರಿಮೆಯ ಗುಣವೆಂದರೆ ಅಹಂಕಾರವಿಲ್ಲದೆ ಬಾಳುವುದು; ಕೀಳ್ತನವೆಂದರೆ ಅಹಂಕಾರವು ಬೇರೂರಿ ನಿಲ್ಲುವುದು.
ಹಿರಿಮೆಯ ಗುಣವು ಇತರರ ಗುಣದೋಷಗಳನ್ನು ಮರೆಯುವುದು; ಕೀಳುತನವಾದರೋ ಇತರರ ಗುಣದೋಷಗಳನ್ನೇ ಎತ್ತಿ ಆಡುವುದು.
ಕರ್ತವ್ಯವೇನೆಂಬುದನ್ನು ಅರಿತು ಸದ್ಭಾವವನ್ನು ಪಡೆದಿರುವವರಿಗೆ ಒಳ್ಳೆಯದೆಲ್ಲವೂ ಸಹಜವಾದ ಕ್ರಿಯೆಯಾಗಿರುವುದೆಂದು ಹೇಳುವರು.
ಸಜ್ಜನರ ಸುಖ ಬಾಳುವೆಯೆನ್ನುವುದು ಅವರ ಗುಣದ ಒಳಿತಿಂದಲೇ ಉಂಟಾಗುವುದು; ಮಿಕ್ಕ ಇಂದ್ರಿಯಗಳಿಂದ ಬರುವ ಸುಖ, ಬರಿಯು ಹೆಸರಿಗೆ ಮಾತ್ರ.
ಪ್ರೀತಿ, ವಿನಯಶೀಲತೆ, ಉಪಕಾರ, ಪ್ರಸನ್ನತೆ, ಸತ್ಯಶೀಲತೆಯೂ ಸೇರಿದ ಐದು ಗುಣಗಳು, ಸದ್ಭಾವನೆ ಎಂಬ ಕಟ್ಟಡವನ್ನು ಆಧರಿಸಿ ನಿಂತಿರುವ ಆಧಾರಸ್ತಂಭಗಳು.
ಇತರ ಪ್ರಾಣಿಗಳನ್ನು ಕೊಲ್ಲದಿರುವ ಒಳ್ಳೆಯ ಗುಣವೇ ತಪಸ್ಸು; ಇತರರ ಕೆಡುಕನ್ನು ಎತ್ತಿ ಆಡದಿರುವ ಒಳ್ಳೆಯ ಗುಣವೇ ಸದ್ಭಾವನೆ.
ಬಲಶಾಲಿಗಳ ಸಾಮರ್ಥ್ಯವಿರುವುದು ಅವರು ತಗ್ಗಿ ನಡೆಯುವುದರಲ್ಲಿ; ಅದು ಸಜ್ಜನರು ತಮ್ಮ ಹಗೆಗಳನ್ನು ಪರಿವರ್ತಿಸುವ ಸಾಧನವೂ ಹೌದು.
ತಮಗೆ ಸಮಾನರಲ್ಲದವರಲ್ಲಿಯೂ ಸೋಲನ್ನು ಸ್ವೀಕರಿಸುವುದು, ಸದ್ಭಾವನೆಯೆಂಬ ಹೊನ್ನಿನ ಗುಣವನ್ನು ಅರಿಯುವ ಒರೆಗಲ್ಲು.
ತಮಗೆ ಅಹಿತವಾಗಿ ನಡೆದುಕೊಂಡವರಲ್ಲಿಯೂ ಹಿತವನ್ನೇ ಬಯಸದೆ ಹೋದರೆ ಅಂಥ ಸದ್ಭಾವನೆಯಿಂದ ಏನು ಸಾರ್ಥಕತೆ ಇದೆ?
ಒಬ್ಬನಿಗೆ ಸದ್ಭಾವನೆಯೆನ್ನುವ ಬಲವು ಬಂದಾಗ, ದಾರಿದ್ರ್ಯವು ಕೂಡ ಅವಮಾನಕರವೆನಿಸುವುದಿಲ್ಲ.
ಸದ್ಭಾವನೆಗಳ ಕಡಲು ಎಂದೆನಿಸಿಕೊಳ್ಳುವವರು, ಪ್ರಳಯ ಕಾಲ ಬಂದರೂ ತಾವು ಅಚಲರಾಗಿ ಉಳಿಯುವರು.
ಸಜ್ಜನರ ಸದ್ಭಾವನೆಯು ಕುಂದಿದರೆ, ವಿಸ್ತಾರವಾದ ಭೂಮಿಯು ಕೂಡ ತನ್ನ ಭಾರವನ್ನು ತಾಳಿಕೊಳ್ಳಲಾರದು.
ಒಬ್ಬನು ಎಲ್ಲರಲ್ಲಿಯೂ ಸುಲಭವಾಗಿ ಸೇರುವವನಾದರೆ, ಅವನಿಗೆ ಸದ್ಗುಣಗಳನ್ನು ಪಡೆಯುವುದೂ ಸುಲಭ ಎಂದು ಜ್ಞಾನಿಗಳು ಹೇಳುವರು.
ಪ್ರೀತಿಯುಳ್ಳವರಾಗಿರುವುದು, ಹೆಸರಾದ ಕುಲದಲ್ಲಿ ಹುಟ್ಟಿದ ಕೀರ್ತಿ ಇರುವದು, ಇವೆರಡೂ ಗುಣವುಳ್ಳವರಾಗಿ ಬಾಳುವ ಸನ್ಮಾರ್ಗಗಳೆನಿಸುವುವು.
ಮನುಷ್ಯರು ತಮ್ಮ ದೇಹದ ಅಂಗಾಂಗಗಳಲ್ಲಿ ಪರಸ್ಪರ ಹೋಲುವುದು ಹೋಲಿಕೆಯಲ್ಲ; ಹೊಂದಿಕೊಳ್ಳುವ ಗುಣಗಳಿಂದ ಹೋಲುವುದೇ ನಿಜವಾದ ಹೋಲಿಕಯೆನಿಸುವುದು.
ಒಳ್ಳೆಯ ನಡತೆ, ಉಪ್ಕಾರ ಬುದ್ಧಿ, ಇವುಗಳಿಂದ ಇತರರಿಗೆ ಪ್ರಯೋಜನವಾಗುವಂತೆ ಬಾಳುವ, ಸಾರ್ಥಕ ಜೀವಿಗಳ ಗುಣಗಳನ್ನು ಇಡೀ ಲೋಕವೇ ಕೊಂಡಾಡುತ್ತದೆ.
ವಿನೋದದಲ್ಲಿ ಕೂಡ ನಿಂದನೆಯು ದುಃಖವನ್ನು ತರುತ್ತದೆ; ಇತರರ ಸ್ವಭಾವವರಿತು ನಡೆಯುವ ಸದ್ಗುಣಿಗಳ ಹಗೆತನದಲ್ಲಿ ಕೂಡ ಕರುಣೆ ತುಂಬಿರುತ್ತದೆ.
ಸದ್ಗುಣವುಳ್ಳವರನ್ನೇ ಆಧರಿಸಿಕೊಂಡು ಲೋಕದ ನಡೆ ನಿಂತಿದೆ. ಅದಿಲ್ಲವಾದರೆ, ಮಣ್ಣಿನಲ್ಲಿ ಸೇರಿ ಅದು ನಾಶವಾಗಿ ಹೋಗುವುದು ನಿಶ್ಚಯ.
ಮಾನವೀಯ ಗುಣವನ್ನು ಹೊಂದಿರದೆ ಇರುವವರು, ಅರವನ್ನು ಹೋಲುವ ಹರಿತವಾದ ಬುದ್ಧಿಯುಳ್ಳವರಾದರೂ ಚಲನೆಯಿಲ್ಲದ ಮರವನ್ನೇ ಹೋಲುತ್ತಾರೆ.
ಸ್ನೇಹವಿಲ್ಲದವರಾಗಿ ಕೆಟ್ಟದ್ದನ್ನೇ ಮಾಡುವವರಿಗೆ ಕೂಡ ಒಳ್ಳೆಯ ಗುಣಗಳನ್ನು ಪ್ರದರ್ಶಿಸದಿರುವುದು ಕೀಳ್ತರವೆನಿಸುವುದು.
ನಗಬಲ್ಲ ಗುಣವಿಲ್ಲದವರಿಗೆ ವಿಶಾಲವಾದ ಈ ಲೋಕದಲ್ಲಿ ಹಗಲಿನಲ್ಲೂ ಕತ್ತಲೆಯೇ ಕಾಣುವುದು.
ಗುಣವಿಲ್ಲದವನ ಕೈಲಿರುವ ಅತುಳವಾದ ಐಶ್ವರ್ಯವು ಕೊಳಕು ಪಾತ್ರಯಲ್ಲಿಟ್ಟು ಒಳ್ಲೆಯ ಹಾಲಿನಂತೆ ಶೀಘ್ರವೇ ಕೆಟ್ಟು ಹೋಗುತ್ತದೆ.